ಮನೆಗೆ ತನ್ನಿ ಈ ಪಾಕೆಟ್ ರಾಕೆಟ್: ಹೊಸ ಕವಾಸಕಿ ನಿಂಜಾ 500 ಬೈಕ್ ಬಿಡುಗಡೆ
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಕವಾಸಕಿ (Kawasaki) ತನ್ನ 2025ರ ಕವಾಸಕಿ ನಿಂಜಾ 500 (Kawasaki Ninja 500) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಕವಾಸಕಿ ನಿಂಜಾ 500 ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.5.29 ಲಕ್ಷವಾಗಿದ್ದು, ಇದು 2024ರ ಮಾದರಿಗೆ ಹೋಲಿಸಿದರೆ ರೂ.5,000 ಬೆಲೆ ಏರಿಕೆಯಾಗಿದೆ. 2025ರ ಕವಾಸಕಿ ನಿಂಜಾ 500 ಬೈಕ್ ಪಡೆಯುವ ಏಕೈಕ ಬದಲಾವಣೆಯೆಂದರೆ ಹೊಸ ಬಣ್ಣದ ಆಯ್ಕೆಯಾಗಿದೆ. ಈಗ ಮೆಟಾಲಿಕ್ ಕಾರ್ಬನ್ ಗ್ರೇ ಬಣ್ಣದಲ್ಲಿ ಮಾತ್ರ ಲಭ್ಯವಿರುತ್ತದೆ.
ಕವಾಸಕಿ ನಿಂಜಾ 500 ಬೈಕಿನಲ್ಲಿ ಹೊಸ ಲಿಕ್ವಿಡ್ ಕೂಲ್ಡ್, 451cc, ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 9,000rpm ನಲ್ಲಿ 45 bhp ಮತ್ತು 6,000rpm ನಲ್ಲಿ 42.6 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್‌ನೊಂದಿಗೆ ಜೋಡಿಸಲಾಗಿದೆ.

ಈ ಎಂಜಿನ್ ಪರಿಚಿತ ಪವರ್‌ಟ್ರೇನ್ ಆಗಿದೆ ಮತ್ತು ಇದನ್ನು ಎಲಿಮಿನೇಟರ್ 500 ಕ್ರೂಸರ್ ಮತ್ತು ನವೀನ ನಿಂಜಾ 7 ಹೈಬ್ರಿಡ್ ಬೈಕಿನಲ್ಲೂ ಬಳಸಲಾಗುತ್ತದೆ. ಕವಾಸಕಿ ನಿಂಜಾ 500 ಮಾದರಿಯು 171 ಕೆಜಿ ತೂಕವನ್ನು ಹೊಂದಿದ್ದು, ಇದು ನಿಂಜಾ 400 ಬೈಕ್ ಗಿಂತ ತೂಕ ಹೆಚ್ಚಾಗಿದೆ. ನಿಂಜಾ 500 ಬೈಕಿನ ತೂಕವು ಇದರ ಪ್ರತಿಸ್ಪರ್ಧಿಗಳಾದ ಎಪ್ರಿಲಿಯಾ RS 457 ಮತ್ತು KTM RC 390 ಗಿಂತ ಕಡಿಮೆಯಾಗಿದೆ.
ಈ ಬೈಕ್ ಡ್ಯುಯಲ್-ಚಾನೆಲ್ ABS ಅನ್ನು ಸಹ ಹೊಂದಿದೆ ಮತ್ತು ಸೀಟ್ ಎತ್ತರವು ಆರಾಮದಾಯಕ 785 mm ಆಗಿದೆ. ಕವಾಸಕಿ ನಿಂಜಾ 500 ಬೈಕ್ ಮಾದರಿಯು ZX-6R ಮತ್ತು Ninja 7 ಹೈಬ್ರಿಡ್ ಸೇರಿದಂತೆ ಇತ್ತೀಚಿನ ಕವಾಸಕಿ ಸ್ಪೋರ್ಟ್ ಬೈಕ್‌ಗಳೊಂದಿಗೆ ಹೊಂದಿಕೆಯಾಗುವ ಮುಖವನ್ನು ನಿಂಜಾ 500 ಹೊಂದಿದೆ.

ಈ ಕವಾಸಕಿ ನಿಂಜಾ 500 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಯಮಹಾ R3, ಎಪ್ರಿಲಿಯಾ RS 457, ಮತ್ತು KTM RC 390 ಬೈಕ್ ಗಳಲ್ಲಿ ಪೈಪೋಟಿ ನೀಡುತ್ತದೆ. ಭಾರತದಲ್ಲಿ ಬಿಡುಗಡೆ ಮಾಡಲಾದ ಈ ಬೈಕ್ ಸ್ಟ್ಯಾಂಡರ್ಡ್ ಮಾದರಿಯಾಗಿದ್ದು, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ LCD ಡ್ಯಾಶ್ ಮತ್ತು ಸಂಪೂರ್ಣ ಕಪ್ಪು ಬಣ್ಣವನ್ನು ಹೊಂದಿದೆ.
ಇದರೊಂದಿಗೆ ಕೀಲೆಸ್ ಇಗ್ನಿಷನ್ ಅನ್ನು ಒಳಗೊಂಡಿಲ್ಲ, ಇದು ಅಪ್-ಸ್ಪೆಕ್ SE ರೂಪಾಂತರಕ್ಕಾಗಿ ಕಾಯ್ದಿರಿಸಲಾಗಿದೆ. ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಹೊಸ ಕವಾಸಕಿ ನಿಂಜಾ 500 ಬೈಕಿನಲ್ಲಿ ಮುಂಭಾಗದಲ್ಲಿ 310 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ. ಇನ್ನು ಇದರ ಮುಂಭಾಗದ ಡಿಸ್ಕ್ ಬ್ರೇಕ್ ನಿಂಜಾ 400 ಮಾದರಿಗಿಂತ ದೊಡ್ಡದಾಗಿದೆ.

ಈ ಕವಾಸಕಿ ನಿಂಜಾ 500 ಬೈಕ್ ಬಾಡಿವರ್ಕ್ ಅಡಿಯಲ್ಲಿ ಟ್ರೆಲ್ಲಿಸ್ ಫ್ರೇಮ್ ಇರುತ್ತದೆ . ಇದರ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ನೀಡಲಾಗಿದೆ. ಈ ಬೈಕಿನಲ್ಲಿ 17-ಇಂಚಿನ ವ್ಹೀಲ್ ಗಳನ್ನು ಹೊಂದಿವೆ. ಇನ್ನು ಹೊಸ ಕವಾಸಕಿ ನಿಂಜಾ 500 ಬೈಕ್ ವಿತರಣೆಗಳು ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಪ್ರಾರಂಭವಾಗುಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಿರಿ.


Click it and Unblock the Notifications








