Aprilia Tuno 457: ಸದ್ದಿಲ್ಲದೆ ಬಿಡುಗಡೆಯಾದ ಅಪ್ರಿಲಿಯಾ ಟ್ಯುನೊ 457 ವಿಶೇಷತೆಗಳು!

ಜನಪ್ರಿಯ ಇಟಾಲಿಯನ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಎಪ್ರಿಲಿಯಾ ಇತ್ತೀಚೆಗೆ ತನ್ನ ಹೊಸ ನೇಕೆಡ್ ಬೈಕ್ ಎಪ್ರಿಲಿಯಾ ಟ್ಯುನೊ 457 ನೇಕೆಡ್ ಬೈಕ್ (Aprilia Tuno 457 Naked Bike) ಅನ್ನು ಬಿಡುಗಡೆ ಮಾಡಿದೆ. ಎಪ್ರಿಲಿಯಾ ಟ್ಯೂನೊ 457 ಬೈಕ್‌ನ ಬ್ರಾಂಡ್ ಅಂಬಾಸಿಡರ್, ನಟ ಮತ್ತು ಪೆಟ್ರೋಲ್ ಹೆಡ್ ಜಾನ್ ಅಬ್ರಹಾಂ ಬಿಡುಗಡೆ ಮಾಡಿದರು. ದೇಶೀಯ ಮಾರುಕಟ್ಟೆಯಲ್ಲಿ ಕೆಟಿಎಂ 390 ಡ್ಯೂಕ್ (KTM 390 Duke) ಮತ್ತು ಯಮಹಾ ಎಂಟಿ-03 (Yamaha MT-03) ಬೈಕ್‌ಗಳಿಗೆ ಅಪ್ರಿಲಿಯಾ ಟ್ಯುನೊ 457 ನೇಕೆಡ್ ಬೈಕ್ ಪೈಪೋಟಿ ನೀಡಲಿದೆ.

ಜಾನ್ ಅಬ್ರಹಾಂ ಕೂಡ ಹೊಸ ಟ್ಯುನೊ 457 ಬೈಕಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, "ಇತರ ಅನೇಕ ಬೈಕ್ ಸವಾರರಂತೆ, ನಾನು ಸಹ ಟ್ಯುನೊ 457 ಅನ್ನು ಭಾರತಕ್ಕೆ ಪರಿಚಯಿಸುವ ನಿರೀಕ್ಷೆಯಲ್ಲಿದ್ದೆ. ಎಪ್ರಿಲಿಯಾ ಹೊಸ ಟ್ಯುನೊ 457 ನೇಕೆಡ್ ಸೆಗ್ ಮೆಂಟಿನಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸುತ್ತದೆ ಎಂದು ನನಗೆ ವಿಶ್ವಾಸವಿದೆ ಎಂದರು.

2025-new-aprilia-tuono-457-top-things-you-must-know

ಅಪ್ರಿಲಿಯಾ ಟ್ಯುನೊ 457 ನೇಕೆಡ್ ಬೈಕ್ (Aprilia Tuno 457 Naked Bike) ಭಾರತದ ಎಕ್ಸ್ ಶೋರೂಂ ದರದಂತೆ ರೂ.3.95 ಲಕ್ಷಕ್ಕೆ ಬಿಡುಗಡೆಯಾಗಿದೆ. ಎಪ್ರಿಲಿಯಾ ಟ್ಯೂನೊ ಬೈಕಿನ ಬೆಲೆಯು ಕಂಪನಿಯ ಈ ಹಿಂದಿನ ಮಾದರಿಯಾದ RS 457 ಬೈಕ್‌ಗಿಂತ ರೂ. 25,000 ಕಡಿಮೆ ಬೆಲೆಯನ್ನು ಹೊಂದಿದೆ.

ಟ್ಯುನೊ 457 ಡಿಸೈನ್ ಬಗ್ಗೆ ಹೇಳುವುದಾದರೆ, ಮಸ್ಕುಲರ್ ಇಂಧನ ಟ್ಯಾಂಕ್, ಟ್ಯುನೊ ಸಿಂಗಲ್ ಪೀಸ್ ಹ್ಯಾಂಡಲ್ ಬಾರ್, ಎರಡೂ ಬದಿಗಳಲ್ಲಿ ಎಲ್ಇಡಿ ಡಿಆರ್‌ಎಲ್‌ಗಳಿಂದ ಸುತ್ತುವರೆದಿರುವ ಸೆಂಟ್ರಲ್ ಎಲ್ಇಡಿ ಹೆಡ್ ಲೈಟ್ ಮತ್ತು ಯಾವುದೇ ಫೇರಿಂಗ್ ಇಲ್ಲದ ಬದಿಗಳನ್ನು ಹೊಂದಿದೆ. ಹಿಂಭಾಗದ ಲೈಟಿಂಗ್ ಸೆಟಪ್ ಕೂಡ ಎಲ್ಇಡಿ ಆಗಿದ್ದು, ಬೈಕ್ ಅಂಡರ್‌ ಬಾಡಿ ಎಕ್ಸಾಸ್ಟ್ ಸೆಟಪ್ ಹೊಂದಿದೆ.

2025-new-aprilia-tuono-457-top-things-you-must-know

ಟ್ಯುನೊ 457 ಬೈಕಿನಲ್ಲಿ ಮಲ್ಟಿಪಲ್ ರೈಡಿಂಗ್ ಮೋಡ್‌ಗಳು, ಟ್ರಾಕ್ಷನ್ ಕಂಟ್ರೋಲ್ ಮತ್ತು ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಕಲರ್ ಡಿಸ್‌ಪ್ಲೇಯನ್ನು ಅಳವಡಿಸಲಾಗಿದೆ. ಎಪ್ರಿಲಿಯಾ ಟ್ಯೂನೊ 457 ಬೈಕ್ 46.9 ಬಿಹೆಚ್ ಪವರ್ ಮತ್ತು 43.5 ಎನ್ಎಂ ಟಾರ್ಕ್ ಉತ್ಪಾದಿಸುವ ಲಿಕ್ವಿಡ್ ಕೂಲ್ಡ್ ಪ್ಯಾರಲಲ್ ಟ್ವಿನ್ ಎಂಜಿನ್ ಹೊಂದಿದೆ. ಈ ಎಂಜಿನ್ 6-ಸ್ಪೀಡ್ ಗೇರ್ ಬಾಕ್ಸ್, ಐಚ್ಛಿಕ ಕ್ವಿಕ್ ಶಿಫ್ಟರ್ ಹೊಂದಿದೆ.

ಟ್ಯುನೊ 457 ಬೈಕ್ ಮುಂಭಾಗ ಮತ್ತು ಹಿಂಭಾಗ ಎರಡೂ ಪ್ರಿಲೋಡ್ ಹೊಂದಾಣಿಕೆಯನ್ನು ನೀಡುತ್ತವೆ. ಹಾಗಾಗಿ ಮುಂಭಾಗದಲ್ಲಿ 41 ಎಂಎಂ ಯುಎಸ್ ಡಿ ಫೋರ್ಕ್ (120 ಎಂಎಂ ಟ್ರಾವೆಲ್) ಮತ್ತು ಹಿಂಭಾಗದಲ್ಲಿ ಮೊನೊಶಾಕ್ (130 ಎಂಎಂ ಟ್ರಾವೆಲ್) ಅಲ್ಯೂಮಿನಿಯಂ ಫ್ರೇಮ್ ಅನ್ನು ಹೊಂದಿದೆ.

2025-new-aprilia-tuono-457-top-things-you-must-know

ಈ ಬೈಕಿನ ಮುಂಭಾಗದಲ್ಲಿ ಟ್ವಿನ್ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಲಾಗಿದೆ. ಈ ಡಿಸ್ಕ್ ಗಳನ್ನು ಬೈಬ್ರೆ ಡಿಸ್ಕ್ ಗಳಿಂದ ಬಿಗಿಗೊಳಿಸಲಾಗಿದ್ದು, ಬಾಷ್ ನಿಂದ ಬದಲಾಯಿಸಬಹುದಾದ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದೆ. ಇದು ಸವಾರರಿಗೆ ಹಿಂಭಾಗದ ಎಬಿಎಸ್ ಅನ್ನು ಸ್ವಿಚ್ ಆಫ್ ಮಾಡಲು ಅನುವು ಮಾಡಿಕೊಡುತ್ತದೆ. ಟ್ಯುನೊ 457 ಬೈಕ್ 110/70(ಮುಂಭಾಗ) ಮತ್ತು 150/60(ಹಿಂಭಾಗ) ಟೈರ್‌ಗಳನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, February 22, 2025, 17:01 [IST]
English summary
2025 new aprilia tuono 457 top things you must know
Read more on aprilia india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+