ಇನ್ನೂ ಬಿಡುಗಡೆಯೇ ಆಗಿಲ್ಲ.. ಸದ್ದಿಲ್ಲದೇ ಡೀಲರ್‌ಶಿಪ್‌ಗೆ ಬಂತು Bajaj Platina 110 ಬೈಕ್, ಅತಿ ಕಡಿಮೆ ಬೆಲೆಗೆ ಮಾರಾಟಕ್ಕೆ?

ಬಜಾಜ್ ಪ್ಲಾಟಿನಾ 110 (Bajaj Platina 110) ಜನಪ್ರಿಯ ಬೈಕ್ ಆಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಕೈಗೆಟುಕುವ ಬೆಲೆಯಲ್ಲಿ ಸಿಗಲಿದ್ದು, ಮಧ್ಯಮ ವರ್ಗದ ಜನರ ನೆಚ್ಚಿನ ಮೋಟಾರ್‌ಸೈಕಲ್ ಎಂದೇ ಹೆಸರುವಾಸಿಯಾಗಿದೆ. ಬಜಾಜ್ ಆಟೋ, ಈ ವರ್ಷಾರಂಭದಲ್ಲಿ ದೇಶೀಯ ಮಾರುಕಟ್ಟೆಯಿಂದ ಪ್ಲಾಟಿನಾ 110 ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಮಾಡೆಲ್‌ನ ಮಾರಾಟವನ್ನು ಹಂತ-ಹಂತವಾಗಿ ಸ್ಥಗಿತಗೊಳಿತ್ತು. ಅದರ ಹೊರತಾಗಿ 'ಎಬಿಎಸ್' ವೈಶಿಷ್ಟ್ಯವಿಲ್ಲದ ಮಾಡೆಲ್‌ನ ಮಾರಾಟವನ್ನು ಹಾಗೆಯೇ ಮುಂದುವರಿಸಿಕೊಂಡು ಬಂದಿದೆ.

ಇದೀಗ 2025ರ 'ಬಜಾಜ್ ಪ್ಲಾಟಿನಾ 110' ಬೈಕ್ ಮಾಡೆಲ್‌ನ್ನು ಪರಿಚಯಿಸಲು ಕಂಪನಿಯು ಕೂಡ ಭರದಿಂದ ಸಿದ್ಧತೆಯನ್ನು ನಡೆಸುತ್ತಿದೆ. ಸದ್ದಿಲ್ಲದೇ, ದೇಶಾದ್ಯಂತ ಬಿಡುಗಡೆಗೂ ಮುನ್ನವೇ ಈ ನೂತನ ಮೋಟಾರ್‌ಸೈಕಲ್‌ನ ಮಾಡೆಲ್‌ಗಳನ್ನು ವಿವಿಧ ಡೀಲರ್‌ಶಿಪ್‌ಗೂ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅದಕ್ಕೆ ಸಂಬಂಧಿಸಿದ ವಿಡಿಯೋ ಹಾಗೂ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

2025 New Bajaj Platina 110 Bike Reaches Dealerships Soon Launch Details

ಈ ಫೋಟೋಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ 2025ರ ಬಜಾಜ್ ಪ್ಲಾಟಿನಾ 110 ಮಾಡೆಲ್‌ನ ವಿನ್ಯಾಸದಲ್ಲಿ ಅಷ್ಟಾಗಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಇದು ಹ್ಯಾಲೊಜೆನ್ ಹೆಡ್‌ಲೈಟ್‌ಗಳು ಮತ್ತು ಎಲ್ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಿದೆ. ಜೊತೆಗೆ ಬ್ಲ್ಯಾಕ್ & ಗ್ರೀನ್ ಎಂಬ ಡುಯಲ್-ಟೋನ್ ಕಲರ್ ಥೀಮ್ ಆಯ್ಕೆಯಲ್ಲಿಯೂ ಸಿಗುತ್ತದೆ. ಇದರ ಅಲಾಯ್ ವೀಲ್‌ಗಳು ಗ್ರೀನ್ ಪಿನ್‌ಸ್ಟ್ರಿಪಿಂಗ್ ಅನ್ನು ಹೊಂದಿದೆ.

ನೂತನ ಬಜಾಜ್ ಪ್ಲಾಟಿನಾ 110 ಬೈಕ್ ಮಾಡೆಲ್‌ನ್ನು ಒಬಿಡಿ-2ಬಿ (OBD-2B) ಮಾನದಂಡಗಳ ಅನ್ವಯ ನವೀಕರಿಸಿಯೂ ಮಾರಾಟಕ್ಕೆ ತರುವ ನೀರಿಕ್ಷೆಯಿದೆ. ಇದು ಇಂಗಾಲವನ್ನು ಹೊರಸೂಸುವಿಕೆ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳನ್ನು ಕಂಡುಬಂದರೆ, ಸವಾರರನ್ನು ಎಚ್ಚರಿಸುತ್ತದೆ. ಅದು ಬಿಟ್ಟರೆ, ಈ ಬೈಕ್‌ನ ಕಾರ್ಯಕ್ಷಮತೆಯಲ್ಲಿಯೂ ಅಂತಹ ಪ್ರಮುಖ ಮಾರ್ಪಾಡನ್ನು ಮಾಡಲಾಗಿಲ್ಲ.

2025 New Bajaj Platina 110 Bike Reaches Dealerships Soon Launch Details

ಹೊಸ ಬಜಾಜ್ ಪ್ಲಾಟಿನಾ 110 ಮೋಟಾರ್‌ಸೈಕಲ್‌, ಈಗಿರುವ ಮಾಡೆಲ್‌ನಂತೆಯೇ 115.45 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿರಲಿದೆ. 8.5 ಬಿ‌ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 9.8 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕಲಿದೆ ಎನ್ನಲಾಗಿದ್ದು, 4-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ಒಳಗೊಂಡಿರಲಿದೆ. 70 ಕೆಎಂಪಿಎಲ್‌ವರೆಗೆ ಮೈಲೇಜ್ ಕೂಡ ನೀಡಬಹುದು ಎಂದು ಅಂದಾಜಿಸಲಾಗಿದೆ.

ಈ ಬಜಾಜ್ ಪ್ಲಾಟಿನಾ 110 ಬೈಕ್ ಹಲವು ಆಕರ್ಷಕ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಬಹುಮುಖ್ಯವಾಗಿ ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವುದಕ್ಕೆ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು ಅನಲಾಗ್ ಇನ್ಸ್ಟ್ರುಮೆಂಟ್ ಕನ್ಸೋಲ್‌ನ್ನು ಹೊಂದಿದೆ. ನೂತನ ಮೋಟಾರ್‌ಸೈಕಲ್‌ ತೂಕದಲ್ಲೂ ಯಾವುದೇ ವ್ಯತ್ಯಾಸವಿಲ್ಲ. ಇದು 119 ಕೆಜಿ ತೂಕವಿದೆ. ಸುರಕ್ಷತೆಗಾಗಿ ಪ್ರಸ್ತುತವಿರುವ ಮಾಡೆಲ್‌ನ ರೀತಿಯಲ್ಲಿಯೇ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

2025 New Bajaj Platina 110 Bike Reaches Dealerships Soon Launch Details

ಈಗಿರುವ ಬಜಾಜ್ ಪ್ಲಾಟಿನಾ 110 ಬೈಕ್ ರೂ.71,610 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 2025ರ ಮಾಡೆಲ್‌ನ್ನು ಹೆಚ್ಚು-ಕಮ್ಮಿ ಇದೇ ದರಕ್ಕೆ ಬಿಡುಗಡೆಗೊಳಿಸುವ ನಿರೀಕ್ಷೆಯೂ ಇದೆ. ಈ ಮೋಟಾರ್‌ಸೈಕಲ್‌ ಮಾರಾಟಕ್ಕೆ ಬಂದ ಮೇಲೆ ಟಿವಿಎಸ್ ರೇಡಿಯನ್, ಹೋಂಡಾ ಲಿವೋ ಮತ್ತು ಹೀರೋ ಪ್ಯಾಶನ್ ಬೈಕ್‌ಗಳ ಪ್ರಬಲವಾದ ಪ್ರತಿಸ್ಪರ್ಧಿಯನ್ನು ಎದುರಿಸಬೇಕಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, April 14, 2025, 11:12 [IST]
English summary
2025 new bajaj platina 110 bike reaches dealerships soon launch details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+