ಬ್ರೋ.. 70 ಕಿ.ಮೀ ಮೈಲೇಜ್, ರೂ.59,000 ಬೆಲೆ.. ನೂತನ 'TVS Sport ES Plus' ಬೈಕ್ ಕುರಿತ ಪ್ರಮುಖಾಂಶಗಳಿವು!
ಟಿವಿಎಸ್ ಸ್ಪೋರ್ಟ್ ಇಎಸ್ ಪ್ಲಸ್ (TVS Sport ES Plus) ಜನಪ್ರಿಯ ಪ್ರಯಾಣಿಕ ಮೋಟಾರ್‌ಸೈಕಲ್ ಎಂದೇ ಹೆಸರುವಾಸಿಯಾಗಿದೆ. ಇತ್ತೀಚೆಗೆ ಒಂದಷ್ಟು ನವೀಕರಣದೊಂದಿಗೆ ಈ ಬೈಕ್‌ನ 2025ರ ಹೊಚ್ಚ ಹೊಸ ಮಾಡೆಲ್‌ನ್ನು ಕೂಡ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಇದು ಅಗ್ಗದ ದರದಲ್ಲಿ ಖರೀದಿಗೆ ಲಭ್ಯವಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಸುಲಭವಾಗಿ ಖರೀದಿ ಮಾಡಬಹುದು. ನಾವಿಲ್ಲಿ ಈ ನೂತನ ಮೋಟಾರ್‌ಸೈಕಲ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಾದ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.
ಬೆಲೆ & ರೂಪಾಂತರಗಳು (Price & Variants): 2025ರ ನೂತನ ಟಿವಿಎಸ್ ಸ್ಪೋರ್ಟ್ ಇಎಸ್ ಪ್ಲಸ್ ಬೈಕ್, ಅತಿ ಕಡಿಮೆ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಈ ಬೈಕ್ ಕನಿಷ್ಠ ರೂ.59,000 ಮತ್ತು ಗರಿಷ್ಠ ರೂ.71,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಸೆಲ್ಫ್ ಸ್ಟಾರ್ಟ್ ಇಎಸ್, ಸೆಲ್ಫ್ ಸ್ಟಾರ್ಟ್ ಇಎಸ್ ಪ್ಲಸ್ & ಸೆಲ್ಫ್ ಸ್ಟಾರ್ಟ್ ಇಎಲ್ಎಸ್ ಎಂಬ 3 ಅತ್ಯಾಧುನಿಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ವಿನ್ಯಾಸ & ಬಣ್ಣಗಳು (Design & Colors): ಈ ಮೋಟಾರ್‌ಸೈಕಲ್‌ನ ವಿನ್ಯಾಸದಲ್ಲಿ ಯಾವುದೇ ಬಹುಮುಖ್ಯವಾದ ಮಾರ್ಪಾಡನ್ನು ಮಾಡಲಾಗಿಲ್ಲ. ಇದು ಸಾಮಾನ್ಯ 'ಸ್ಪೋರ್ಟ್' ಬೈಕ್‌ನಂತೆಯೇ ಇದೆ. ಆದರೆ, ಹೊಸದಾಗಿರುವ 'ಗ್ರಾಫಿಕ್ಸ್'ನ್ನು ಒಳಗೊಂಡಿದೆ. ಗ್ರೇ ರೆಡ್ ಮತ್ತು ಬ್ಲ್ಯಾಕ್ ನಿಯಾನ್ ಎಂಬ 2 ಅತ್ಯಾಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯಲಿದ್ದು, ನೋಡುಗರನ್ನು ಸಹ ಸೆಳೆಯಬಲ್ಲದು.
ಕಾರ್ಯಕ್ಷಮತೆ (Performance): ನೂತನ ಬೈಕ್, ಸಾಕಷ್ಟು ಬಲಶಾಲಿಯಾದ ಪವರ್‌ಟ್ರೇನ್ ಆಯ್ಕೆಯನ್ನು ಒಳಗೊಂಡಿದೆ. ಇದು 109.7 ಸಿಸಿ ಸಾಮರ್ಥ್ಯದ ಒಬಿಡಿ-2ಬಿ ಎಂಜಿನ್‌ನ್ನು ಪಡೆದಿದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 1 ಲೀಟರ್ ಪೆಟ್ರೋಲ್ ಹಾಕಿಸಿದರೆ ಸಾಕು, ಈ ಮೋಟಾರ್‌ಸೈಕಲ್ ಬರೋಬ್ಬರಿ 70 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡಬಲ್ಲದು.

ವೈಶಿಷ್ಟ್ಯಗಳು (Features): ಹೊಸ ಟಿವಿಎಸ್ ಸ್ಪೋರ್ಟ್ ಇಎಸ್ ಪ್ಲಸ್ ಬೈಕ್, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ವಿಶೇಷವಾಗಿ ಅನಲಾಗ್ ಇನ್ಸ್ಟ್ರುಮೆಂಟ್ ಪ್ಯಾನೆಲ್‌ನ್ನು ಪಡೆದಿದೆ. ಇದು ಸ್ಪೀಡ್ ಮತ್ತು ಫ್ಯುಯೆಲ್ ಗೇಜ್ ಸೇರಿದಂತೆ ಇನ್ನಿತರೇ ಮಾಹಿತಿಯನ್ನು ಒದಗಿಸುತ್ತದೆ. ಈ ಮೋಟಾರ್‌ಸೈಕಲ್ ಸರಿ ಸುಮಾರು 112 ಕೆಜಿ ತೂಕವಿದ್ದು, 10 ಲೀ.ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಹೊಂದಿದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ಈ ಬೈಕ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಟ್ವಿನ್-ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡ್ರಮ್ ಬ್ರೆಕ್‌ಗಳನ್ನು ಪಡೆದಿದೆ. ಹಾಗೆಯೇ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಒಳಗೊಂಡಿದೆ.
ಇನ್ನು, ನೂತನ 'ಟಿವಿಎಸ್ ಸ್ಪೋರ್ಟ್ ಇಎಸ್ ಪ್ಲಸ್' ಮೋಟಾರ್‌ಸೈಕಲ್ ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಹೆಚ್ಚು ಅತ್ಯಾಧುನಿಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಮುಂಬರುವ ದಿನಗಳಲ್ಲಿ ಈ ಬೈಕ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








