ಇತ್ತೀಚೆಗೆ ಬಿಡುಗಡೆಯಾದ ನವೀಕೃತ 2025 ಅಪಾಚೆ RTR 310 ವಿಶೇಷತೆಗಳು

ಟಿವಿಎಸ್ ಮೋಟಾರ್ ಭಾರತದಲ್ಲಿ 2025 ಅಪಾಚೆ RTR 310 ಅನ್ನು ಅನಾವರಣಗೊಳಿಸಿದ್ದು, ಅದರ ಕೋರ್ ಎಂಜಿನ್ ಪ್ಲಾಟ್‌ಫಾರ್ಮ್ ಅನ್ನು ಉಳಿಸಿಕೊಂಡು ಹಲವಾರು ನವೀಕರಣಗಳನ್ನು ಪರಿಚಯಿಸಿದೆ. ಈ ನವೀಕರಣಗಳೊಂದಿಗೆ, 2025 ಟಿವಿಎಸ್ ಅಪಾಚೆ RTR 310 ಪ್ರೀಮಿಯಂ ವಿಭಾಗದಲ್ಲಿ ತಾಂತ್ರಿಕವಾಗಿ ಮುಂದುವರಿದ, ವೈಶಿಷ್ಟ್ಯ - ಸಮೃದ್ಧ ನೇಕೆಡ್ ಸ್ಪೋರ್ಟ್ ಮೋಟಾರ್‌ಸೈಕಲ್ ಆಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. OBD2B - ಕಂಪ್ಲೈಂಟ್ 2025 ಟಿವಿಎಸ್ ಅಪಾಚೆ ಆರ್‌ಟಿಆರ್ 310, ಈ ಬಾರಿ ಸ್ಮಾರ್ಟ್ ಪರ್ಫಾಮೆನ್ಸ್ ನೀಡಲಿದೆ.

ಪ್ರಮುಖ ವೈಶಿಷ್ಟ್ಯಗಳು ಮತ್ತು ನವೀಕರಣಗಳು

2025 ಅಪಾಚೆ RTR 310 ಮೋಟಾರ್‌ಸೈಕಲ್ 35.6 ಎಚ್‌ಪಿ ಪವರ್ ಮತ್ತು 28.7 ಎನ್‌ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ 312.12 ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ ಹೊಂದಿದೆ. ಹೆಚ್ಚಿನ ವೇಗವರ್ಧನೆಗಾಗಿ ಥ್ರೊಟಲ್ ಪ್ರತಿಕ್ರಿಯೆಯನ್ನು ಮರುಮಾಪನ ಮಾಡಲಾಗಿದೆ. ಸುಧಾರಿತ ಸವಾರಿ ಅನುಭವಕ್ಕಾಗಿ ಹಿಂಭಾಗದ ಸ್ಪ್ರಾಕೆಟ್ ಅನ್ನು ಪರಿಷ್ಕರಿಸಲಾಗಿದೆ.

2025-tvs-apache-rtr-310-motorcycle-top-things

ಸುಗಮ, ವೇಗವಾದ ಗೇರ್ ಶಿಫ್ಟ್‌ಗಳಿಗಾಗಿ 6 - ಸ್ಪೀಡ್ ಗೇರ್‌ಬಾಕ್ಸ್ ಮತ್ತು ಬೈ - ಡೈರೆಕ್ಷನಲ್ ಕ್ವಿಕ್‌ಶಿಫ್ಟರ್‌ನೊಂದಿಗೆ ಸಜ್ಜುಗೊಂಡಿದೆ. ಸುಧಾರಿತ ಬಳಕೆದಾರ ಇಂಟರ್ಫೇಸ್ ಮತ್ತು ಬಹು ಭಾಷಾ ಬೆಂಬಲದೊಂದಿಗೆ ಹೊಸ 5 - ಇಂಚಿನ ಎರಡನೇ ತಲೆಮಾರಿನ ಟಿಎಫ್‌ಟಿ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಹಾಗೂ ಹೆಚ್ಚುವರಿ ಅನುಕೂಲಕ್ಕಾಗಿ ಕೀಲೆಸ್ ರೈಡ್ ಸಿಸ್ಟಮ್ ಕೂಡ ನೀಡಲಾಗಿದೆ.

ಲಾಂಚ್ ಕಂಟ್ರೋಲ್ ಮತ್ತು ಡ್ರ್ಯಾಗ್ - ಟಾರ್ಕ್ ಕಂಟ್ರೋಲ್ (ವೇರಿಯಂಟ್ ಅನ್ನು ಅವಲಂಬಿಸಿ ಆಪ್ಷನಲ್ ಕಾರ್ನರಿಂಗ್ ಕಾರ್ಯದೊಂದಿಗೆ), ಕಾರ್ನರಿಂಗ್ ಟಾರ್ಕ್ ಕಂಟ್ರೋಲ್ ಮತ್ತು ಕ್ರೂಸ್ ಕಂಟ್ರೋಲ್ ಸೆಗ್ಮೆಂಟ್ - ಫಸ್ಟ್ ತಂತ್ರಜ್ಞಾನವನ್ನು ನೀಡುತ್ತವೆ. ವಿಭಿನ್ನ ಕಾರ್ಯಕ್ಷಮತೆ ಸೆಟ್ಟಿಂಗ್‌ಗಳಿಗಾಗಿ ಐದು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಇದರ ಡಿಸೈನ್ ಬಗ್ಗೆ ಹೇಳುವುದಾದ್ರೆ ಸ್ಟ್ರೀಟ್‌ಫೈಟರ್ ನಿಲುವನ್ನು ಉಳಿಸಿಕೊಂಡಿದ್ದು, ಹೊಸದಾಗಿ ಟ್ರಾನ್ಸ್ಪರೆಮಟ್ ಕ್ಲಚ್ ಕವರ್ ಅನ್ನು ನೀಡಲಾಗಿದೆ. ವರ್ಧಿತ ಗೋಚರತೆ ಮತ್ತು ರಕ್ಷಣೆಗಾಗಿ ಸ್ಟ್ಯಾಂಡರ್ಡ್ ನಕಲ್ ಗಾರ್ಡ್‌ಗಳು ಮತ್ತು ಅನುಕ್ರಮ ಇಂಡಿಕೇಟರ್‌ಗಳನ್ನು ನೀಡಲಾಗಿದೆ. ಫೈರಿ ರೆಡ್, ಫ್ಯೂರಿ ಯೆಲ್ಲೋ, ಆರ್ಸೆನಲ್ ಬ್ಲಾಕ್ ಮತ್ತು ಸೆಪಾಂಗ್ ಬ್ಲೂ ಎಂಬ ನಾಲ್ಕು ಬಣ್ಣ ಆಯ್ಕೆಗಳಿವೆ.

ಪ್ರಯಾಣಿಕರಿಗಾಗಿ ಸುರಕ್ಷತೆ ಮತ್ತು ಅನುಕೂಲತೆಗಾಗಿ ಪ್ರಮಾಣಿತವಾಗಿ ಡಬಲ್ ಡಿಸ್ಕ್ ಬ್ರೇಕ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಕ್ರೂಸ್ ಕಂಟ್ರೋಲ್ ಮತ್ತು ಇತರ ರೈಡಿಂಗ್ ಏಡ್‌ಗಳು ಅದರ ವಿಭಾಗಕ್ಕೆ ವರ್ಗದಲ್ಲಿ ಅತ್ಯುತ್ತಮವಾದ ಫೀಚರ್ಸ್ ಆಗಿವೆ. ಬೆಲೆಗಳ ವಿಷಯಕ್ಕೆ ಬಂದರೆ ಬೇಸ್ ಮಾಡಲ್ ರೂ.2.40 ಲಕ್ಷ, ಟಾಪ್ ಮಾಡಲ್ ರೂ.2.57 ಲಕ್ಷ ಮತ್ತು ಡೈನಾಮಿಕ್ ಕಿಟ್ ರೂ .2.75 ಲಕ್ಷವಿದೆ (ಎಕ್ಸ್‌ ಶೊರೂಂ ಬೆಲೆಗಳು).

ಬಿಲ್ಡ್ ಟು ಆರ್ಡರ್ (Build-To-Order) ಆಯ್ಕೆ: 2025 TVS ಅಪಾಚೆ RTR 310 ಬೈಕ್, TVS ಬಿಲ್ಟ್- ಟು - ಆರ್ಡರ್ (BTO) ಪ್ಲಾಟ್‌ಫಾರ್ಮ್ ಮೂಲಕ ಕಾರ್ಖಾನೆ ಗ್ರಾಹಕೀಕರಣ (customization) ಆಯ್ಕೆಯೊಂದಿಗೆ ಬರುತ್ತದೆ. ಇದರಡಿ ಡೈನಾಮಿಕ್ ಪ್ರೊ ಕಿಟ್ ಅನ್ನು ಕೂಡ ಒಳಗೊಂಡಿದ್ದು, ಈ ಕೆಳಗಿನ ಫೀಚರ್ಸ್ ಅನ್ನು ಒಳಗೊಂಡಿದೆ.

ಕೀಲೆಸ್ ರೈಡ್ ಸಿಸ್ಟಮ್, RT-DSC ನಲ್ಲಿ ಕಾರ್ನರಿಂಗ್ ಡ್ರ್ಯಾಗ್ ಟಾರ್ಕ್ ಕಂಟ್ರೋಲ್ ಫೀಚರ್, RT-DSC ನಲ್ಲಿ ಲಾಂಚ್ ಕಂಟ್ರೋಲ್ ಫೀಚರ್ ಅನ್ನು ಹೊಂದಿದೆ. ಜೊತೆಗೆ ಸೆಗ್ಮೆಂಟ್ ಫಸ್ಟ್ ವೈಶಿಷ್ಟ್ಯಗಳಾದ ಟ್ರಾನ್ಸ್ಪರೆಂಟ್ ಕ್ಲಚ್ ಕವರ್, ಕೀ ಲೆಸ್ ರೈಡ್, ಡ್ರ್ಯಾಗ್ ಟಾರ್ಕ್ ಕಂಟ್ರೋಲ್ ಕಾರ್ನರಿಂಗ್, ಡ್ರ್ಯಾಗ್ ಟಾರ್ಕ್ ಕಂಟ್ರೋಲ್ (BTO) ಅನ್ನು ನೀಡಲಾಗಿದೆ.

More from DriveSpark

Article Published On: Saturday, July 19, 2025, 10:03 [IST]
English summary
2025 tvs apache rtr 310 motorcycle top things
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+