Tvs sport: 70 ಕಿ.ಮೀ ಮೈಲೇಜ್ ನೀಡುವ ಹೊಸ ಟಿವಿಎಸ್ ಸ್ಪೋರ್ಟ್ ಬಿಡುಗಡೆಗೆ ಸಜ್ಜು!
ಟಿವಿಎಸ್ ಮೋಟಾರ್ ಭಾರತ ಮಾತ್ರವಲ್ಲ ವಿಶ್ವದ ಹಲವು ದೇಶಗಳಲ್ಲಿ ತನ್ನ ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ. ಭಾರತದಲ್ಲೂ ಭಾರೀ ಬೇಡಿಕೆ ಪಡೆದುಕೊಂಡಿರುವ ತನ್ನ ದ್ವಿಚಕ್ರ ವಾಹನಗಳಲ್ಲಿ ಟಿವಿಎಸ್ ಸ್ಪೋರ್ಟ್ ಕೂಡ ಒಂದು. ಇತ್ತೀಚೆಗೆ ಕಮ್ಯೂಟರ್ ಮೋಟಾರ್‌ಸೈಕಲ್ ಸೆಗ್ಮೆಂಟಿನಲ್ಲಿ ಪೈಪೋಟಿ ಹೆಚ್ಚಾಗಿರುವ ಕಾರಣ ಟಿವಿಎಸ್ ತನ್ನ ಸ್ಪೋರ್ಟ್ ಮೋಟಾರ್‌ಸೈಕಲ್ ಅನ್ನು ಹೊಸ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆ ಮಾಡಲು ಸಜ್ಜಾಗಿದೆ. ಕಂಪನಿಯು ಇತ್ತೀಚೆಗಷ್ಟೆ ಬೈಕ್ ಕುರಿತ ಹೊಸ ಟೀಸರ್ ಅನ್ನು ಬಿಡುಗಡೆ ಮಾಡಿದ್ದು, ಹೊಸ ಬಣ್ಣ ಆಯ್ಕೆಗಳನ್ನು ಪರಿಚಯಿಸುತ್ತಿರುವುದನ್ನು ಬಹಿರಂಗಪಡಿಸಿದೆ.
ಹೊಸ 2025ರ ಟಿವಿಎಸ್ ಸ್ಪೋರ್ಟ್ ಅನ್ನು ಶೀಘ್ರದಲ್ಲೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಸ್ವಲ್ಪ ಬೆಲೆ ಏರಿಕೆಯೊಂದಿಗೆ ಹೊಸ ಬಣ್ಣ ಆಯ್ಕೆಗಳ ಜೊತೆಗೆ ಹೊಸ ಗ್ರಾಫಿಕ್ ವಿನ್ಯಾಸಗಳನ್ನು ಸಹ ಪರಿಚಯಿಸುವ ನಿರೀಕ್ಷೆಯಿದೆ. ಈ ಬಗ್ಗೆ ಕೆಲವೇ ದಿನಗಳಲ್ಲಿ ಕಂಪನಿ ಮಾಹಿತಿ ಬಹಿರಂಗಪಡಿಸುವ ಸಾಧ್ಯತೆ ಇದೆ.

ಟಿವಿಎಸ್ ಸ್ಪೋರ್ಟ್ ನಲ್ಲಿ ಕಾಸ್ಮೆಟಿಕ್ ಬದಲಾವಣೆಗಳು ಆಗುವ ಸಾಧ್ಯತೆ ಕೂಡ ಇದ್ದು, ಬಣ್ಣಗಳ ಹೊರತಾಗಿ ಗ್ರಾಫಿಕ್ಸ್ ಅನ್ನು ಫ್ಯೂಯಲ್ ಟ್ಯಾಂಕ್, ಸೈಡ್ ಪ್ಯಾನೆಲ್ ಗಳು ಮತ್ತು ಹೆಡ್ ಲೈಟ್ ಕೌಲ್ ನಲ್ಲಿಯೂ ಪ್ರದರ್ಶಿಸಲಾಗುವುದು. ಹಾಗೆಯೇ ಸಣ್ಣ ಸಣ್ಣ ವಿನ್ಯಾಸ ಬದಲಾವಣೆಗಳು ಆಗುವ ಬಗ್ಗೆ ಹೇಳಲಾಗುತ್ತಿದೆ.
ಉಳಿದಂತೆ ಟಿವಿಎಸ್ ಸ್ಪೋರ್ಟ್ ಎಂಜಿನ್‌ನಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. 7,350 ಆರ್‌ಪಿಎಂನಲ್ಲಿ 8.08 ಬಿಹೆಚ್ ಪವರ್ ಮತ್ತು 4,500 ಆರ್‌ಪಿಎಂನಲ್ಲಿ 8.7 ಎನ್ಎಂ ಟಾರ್ಕ್ ಉತ್ಪಾದಿಸುವ ಅದೇ 109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುತ್ತದೆ. ಈ ಎಂಜಿನ್ ನಲ್ಲಿ 4 ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದೆ.

ಟಿವಿಎಸ್ ಸ್ಪೋರ್ಟ್ ಬೆಲೆಯ ಬಗ್ಗೆ ಹೇಳುವುದಾದ್ರೆ ಪ್ರಸ್ತುತ, ಇಎಸ್ ಮತ್ತು ಇಎಲ್ಎಸ್ ಎಂಬ ಎರಡು ವೇರಿಯೆಂಟ್‌ಗಳಿವೆ. ಇವೆರಡರ ನಡುವಿನ ಏಕೈಕ ವ್ಯತ್ಯಾಸವೆಂದರೆ ಗ್ರಾಫಿಕ್ಸ್ ಆಗಿದೆ. ಟಿವಿಎಸ್ ಸ್ಪೋರ್ಟ್ ಬೆಲೆಯು ರೂ. 59,881 ಆರಂಭಿಕ ಬೆಲೆಯಿದ್ದು, ಟಾಪ್ ವೇರಿಯೆಂಟ್ ರೂ.71,785 ಬೆಲೆಯಿದೆ. (ಎರಡೂ ಬೆಲೆಗಳು ಎಕ್ಸ್ ಶೋರೂಂ)
ಟಿವಿಎಸ್ ಸ್ಪೋರ್ಟ್ ಬ್ರೇಕಿಂಗ್ ಮತ್ತು ಸಸ್ಪೆಂಷನ್ ಬಗ್ಗೆ ಹೇಳುವುದಾದ್ರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್ ಗಳನ್ನು ನೀಡಲಾಗಿದೆ. ಇದು ಪ್ರಿಲೋಡ್ ಗೆ 5-ಹಂತದ ಹೊಂದಾಣಿಕೆಯನ್ನು ಪಡೆಯುತ್ತದೆ. ಈ ಬೈಕಿನಲ್ಲಿ ಡಿಸ್ಕ್ ಬ್ರೇಕ್ ಇಲ್ಲ. ಟಿವಿಎಸ್ ಸ್ಪೋರ್ಟ್ ಬೈಕಿನ ಎರಡೂ ತುದಿಗಳಲ್ಲಿ ಡ್ರಮ್ ಬ್ರೇಕ್‌ಗಳನ್ನು ಅಳವಡಿಸಲಾಗಿದೆ.

ಟಿವಿಎಸ್ ಸ್ಪೋರ್ಟ್‌ನ ಮೈಲೇಜ್ ಬಗ್ಗೆ ಹೇಳುವುದಾದ್ರೆ ಲೀಟರ್‌ಗೆ 70 ಕಿ.ಮೀ ನೀಡುವುದಾಗಿ ಕಂಪನಿ ಹೇಳಿದೆ. ಕಂಪನಿಯ ಪ್ರಕಾರ ಸ್ಪೋರ್ಟ್‌ನ ಚಾಲನಾ ವೆಚ್ಚ ಪ್ರತಿ ಕಿಲೋಮೀಟರ್‌ಗೆ 1.43 ರೂ. ಮತ್ತು ಮಾಸಿಕ ಇಂಧನ ವೆಚ್ಚ 2,142 ರೂ. ಇರಲಿದೆ. ನಿತ್ಯ 50 ಕಿಲೋಮೀಟರ್ ಓಟ ಮತ್ತು ಪೆಟ್ರೋಲ್ ಪ್ರತಿ ಲೀಟರ್‌ಗೆ 100 ರೂ. ಎಂದುಕೊಂಡರು ಇದು ನಿತ್ಯ ಓಡಾಡುವವರಿಗೆ ಬೆಸ್ಟ್ ಆಯ್ಕೆಯಾಗಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








