ಯಮಹಾ ಹೊಸ ಬೈಕ್ ಬಿಡುಗಡೆ: 2025ರ ಮಾಡಲ್‌ಗೆ ಸರಿಯಾದ ನವೀಕರಣ ನೀಡಿದೆ ಕಂಪನಿ!
ಯಮಹಾ ಕಂಪನಿಯು ಭಾರತದಲ್ಲಿ ತನಗೆಂದೆ ವಿಶೇಷ ಅಭಿಮಾನಿಗಳನ್ನು ಹೊಂದಿದೆ. ಬ್ರಾಂಡ್‌ನಿಂದ ಹೊರಬರುವ ಬಹುತೇಕ ವಾಹನಗಳ ಬಗ್ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಕಳೆದ ಹಲವು ವರ್ಷಗಳಿಂದ ಸ್ಟೈಲಿಷ್ 150 ಸಿಸಿ ಮೋಟಾರ್‌ಸೈಕಲ್ ವಿಭಾಗದಲ್ಲಿ ಸಖತ್ ಹೆಸರು ಮಾಡಿರುವ ಯಮಹಾ ಎಫ್‌ಝಡ್-ಎಸ್ ಎಫ್‌ಐ (Yamaha FZ-S FI) ಈಗ ಹೊಸ ಫೀಚರ್ ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿದೆ. ಇದು 2025ರ ಎಫ್‌ಝಡ್-ಎಸ್ ಎಫ್‌ಐ ಮಾಡಲ್ ಆಗಿದ್ದು, ಈ ಹಿಂದೆ ಇದ್ದ ಎಫ್‌ಝಡ್-ಎಸ್ ಎಫ್‌ಐ 4.0 ಮಾಡಲ್ ಅನ್ನು ಕೈಬಿಡಲಾಗಿದೆ ಎಂದು ವರದಿಯಾಗಿದೆ.
ಹೊಸ 2025ರ ಯಮಹಾ ಎಫ್‌ಝಡ್-ಎಸ್ ಎಫ್‌ಐ ಈ ಬಾರಿ ಸ್ವಲ್ಪ ವಿನ್ಯಾಸ ಪರಿಷ್ಕರಣೆ ಮಾಡಲಾಗಿದೆ. ಹಾಗೆಯೇ ಕೆಲವು ಹೊಸ ಬಣ್ಣಗಳನ್ನು ಪರಿಚಯಿಸಲಾಗಿದೆ. ಅವುಗಳೆಂದರೆ ಮ್ಯಾಟ್ ಬ್ಲ್ಯಾಕ್, ಐಸ್ ಫ್ಲೂ-ವರ್ಮಿಲಿಯನ್, ಮೆಟಾಲಿಕ್ ಗ್ರೇ ಮತ್ತು ಸೈಬರ್ ಗ್ರೀನ್ ಎಂಬ ನಾಲ್ಕು ಹೊಸ ಬಣ್ಣಗಳೊಂದಿಗೆ ಅಪ್‌ಡೇಟ್ ಮಾಡಲಾಗಿದೆ.

2025ರ ಯಮಹಾ ಎಫ್‌ಝಡ್-ಎಸ್ ಎಫ್‌ಐ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 1,34,800 ಗಳಾಗಿದೆ. ಈ ಹೊಸ ಬೆಲೆಯು Yamaha FZ-S FI 4.0 ಗಿಂತ ರೂ. 3,600 ಹೆಚ್ಚಾಗಿದೆ. ಜೊತೆಗೆ ಹೊಸ ನವೀಕೃತ ಬೈಕ್ ಎಂಜಿನ್ ಕೂಡ ಅಪ್‌ಡೇಟ್ ಆಗಿದೆ. ಇದು ಇತ್ತೀಚಿನ ಮತ್ತು ಕಟ್ಟುನಿಟ್ಟಾದ ಬಿಎಸ್ 6 ಒಬಿಡಿ 2-ಬಿ ಮಾನದಂಡಗಳಿಗೆ ಅನುಗುಣವಾಗಿ ನವೀಕರಣಗೊಂಡಿದೆ.
ಎಂಜಿನ್ ವಿಷಯಕ್ಕೆ ಬಂದರೆ 2025ರ ಯಮಹಾ ಎಫ್‌ಝಡ್-ಎಸ್ ಎಫ್‌ಐ ಬೈಕ್ 149ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಎಸ್ ಒಹೆಚ್‌ಸಿ 2ವಿ/ಸಿಲ್ ಎಂಜಿನ್ ಸಹಾಯದಿಂದ 12ಬಿಹೆಚ್ ಪವರ್ ಮತ್ತು 13.3ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ತನ್ನ ವಿಭಾಗದಲ್ಲಿ ಇದು ಉತ್ತಮ ಪವರ್‌ನೊಂದಿಗೆ ಸಿಗುವ ಸ್ಟೈಲಿಷ್ ಬೈಕ್ ಎಂದು ಕೂಡ ಜನಪ್ರಿಯವಾಗಿದೆ.

ಹೊಸ ಬಣ್ಣಗಳ ಹೊರತಾಗಿ ಈ ಬೈಕ್ ಕೇವಲ ಒಂದು ವಿನ್ಯಾಸ ಬದಲಾವಣೆಯನ್ನು ಹೊಂದಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಇಂಡಿಕೇಟರ್‌ಗಳ ವಿನ್ಯಾಸ ಬದಲಾಗಿರುವುದನ್ನು ನೋಡಬಹುದು. ಯಮಹಾ ಕಂಪನಿಯು ಫ್ರಂಟ್ ಟರ್ನ್ ಇಂಡಿಕೇಟರ್‌ಗಳನ್ನು ಹೆಡ್ ಲೈಟ್ ಅಸೆಂಬ್ಲಿಯಿಂದ ತನ್ನ ಟ್ಯಾಂಕ್ ಕವರ್‌ಗಳಿಗೆ ಸ್ಥಳಾಂತರಿಸಿದೆ. ಅಲ್ಲದೆ, ಟ್ಯಾಂಕ್ ಕವರ್‌ಗಳ ಸುತ್ತಲಿನ ಕ್ರೋಮ್ ಈಗ ಕಪ್ಪು ಬಣ್ಣದಲ್ಲಿ ನೀಡಲಾಗಿದೆ.
ಹೊಸತೇನಿದೆ?: 2025ರ ಯಮಹಾ ಎಫ್ ಝಡ್-ಎಸ್ ಎಫ್‌ಐ ಬೈಕಿನಲ್ಲಿ ಹೊಸ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಬೇಕೆಂದರೆ ಎಫ್‌ಝಡ್-ಎಸ್ ಎಫ್‌ಐ ಹೈಬ್ರಿಡ್ ಅನ್ನು ನೋಡಬಹುದು. ಇದು ಸ್ಟ್ಯಾಂಡರ್ಡ್ ಮಾಡಲ್‌ಗಿಂತ ತುಸು ಹೆಚ್ಚಿನ ಬೆಲೆಯಿದೆ. ಇದು ಭಾರತದ ಎಕ್ಸ್ ಶೋರೂಂ ದರದಂತೆ ರೂ. 1,44,800 ಗಳಾಗಿದೆ.

2025ರ ಯಮಹಾ ಎಫ್‌ಝಡ್-ಎಸ್ ಎಫ್‌ಐ ಬೈಕ್ 137 ಕೆ.ಜಿ ತೂಕವನ್ನು ಹೊಂದಿದ್ದು, ದಪ್ಪವಾದ 140-ಸೆಕ್ಷನ್ ಹಿಂಭಾಗದ ಟೈರ್, ಸಿಂಗಲ್ - ಚಾನೆಲ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ವೈ - ಕನೆಕ್ಟ್ ನೊಂದಿಗೆ ಸಂಪೂರ್ಣ ಡಿಜಿಟಲ್ ಕ್ಲಸ್ಟರ್, ಎಲ್ಇಡಿ ಹೆಡ್ ಲೈಟ್‌ಗಳು ಮತ್ತು ಹೆಚ್ಚಿನ ಫೀಚರ್‌ಗಳನ್ನು ಹೊಂದಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








