Jawa Yezdi: ಗತವೈಭವ ಮರಳಿ ಪಡೆಯಲು ಬಿಡುಗಡೆಯಾಗಿದೆ ಹೊಸ ಜಾವಾ ಯೆಜ್ಡಿ ರೋಡ್‌ಸ್ಟರ್

ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ (Jawa Yezdi Motorcycles), ಕ್ಲಾಸಿಕ್ ವಿಭಾಗದಲ್ಲಿ ಯೆಜ್ಡಿ ರೋಡ್‌ಸ್ಟರ್ 2025 (2025 Yezdi Roadster) ಅನ್ನು ಬಿಡುಗಡೆ ಮಾಡಿದೆ. ಇದರ ಬೆಲೆಯು ರೂ. 2.09 ಲಕ್ಷ (ಎಕ್ಸ್‌ ಶೋರೂಂ) ದಿಂದ ಪ್ರಾರಂಭವಾಗುತ್ತದೆ. ಭವ್ಯವಾದ ಹೊಸ ವಿನ್ಯಾಸ, ಆಕರ್ಷಕ ಫ್ಯೂಲ್ ಟ್ಯಾಂಕ್ ಮತ್ತು ಅಗಲವಾದ ಹಿಂಭಾಗದ ಟೈರ್‌ಗಳನ್ನು ಹೊಂದಿದೆ. ಐಕಾನಿಕ್ ಟ್ವಿನ್ - ಬ್ಯಾರೆಲ್ ಎಕ್ಸಾಸ್ಟ್‌ಗಳೊಂದಿಗೆ ಕತ್ತರಿಸಿದ ಹಿಂಭಾಗದ ಫೆಂಡರ್ ಮತ್ತು ದಿಟ್ಟ '69' ಡೆಕಲ್‌ಗಳು ಬ್ರ್ಯಾಂಡ್‌ನ ಶುದ್ಧ ಮೋಟಾರ್‌ಸೈಕ್ಲಿಂಗ್‌ನ ಶ್ರೀಮಂತ ಪರಂಪರೆಯನ್ನು ಎತ್ತಿತೋರುವಂತಹ ಡಿಸೈನ್‌ ಪಡೆದುಕೊಂಡಿದೆ ಎಂದು ಯೆಜ್ಡಿ ಹೇಳಿದೆ.

ಹೊಸ ರೋಡ್‌ಸ್ಟರ್ ಬೈಕ್, 6 ಕ್ಕೂ ಹೆಚ್ಚು ಫ್ಯಾಕ್ಟರಿ ಕಸ್ಟಮ್ ಸಂಯೋಜನೆಗಳು ಮತ್ತು 20 ಕ್ಕೂ ಹೆಚ್ಚು ಪ್ಲಗ್-ಅಂಡ್-ಪ್ಲೇ ಅಕ್ಸೆಸೊರಿಗಳೊಂದಿಗೆ ಬರುತ್ತದೆ. ಇದರಲ್ಲಿ ಮಾಡ್ಯುಲರ್ ಆಸನ ಆಯ್ಕೆಗಳಿಂದ ಹಿಡಿದು ಕಸ್ಟಮೈಸ್ ಮಾಡಬಹುದಾದ ಹ್ಯಾಂಡಲ್‌ಬಾರ್‌ಗಳು, ವೈಸರ್‌ಗಳು ಮತ್ತು ಕ್ರ್ಯಾಶ್ ಗಾರ್ಡ್‌ಗಳವರೆಗೆ ರೋಡ್‌ಸ್ಟರ್ ಅನ್ನು ಸವಾರರು ತಮ್ಮ ಶೈಲಿಗೆ ತಕ್ಕಂತೆ ವಾಹನಗಳನ್ನು ಕಸ್ಟಮೈಸ್ ಮಾಡಲು ಅನುವು ಮಾಡಿಕೊಡುತ್ತದೆ.

2025-yezdi-roadster-launched-in-india-at-2-9-lakh

ರೋಡ್‌ಸ್ಟರ್‌ನ ಎಂಜಿನ್ ಬಗ್ಗೆ ಹೇಳುವುದಾದ್ರೆ, ಹೊಸ 350 ಆಲ್ಫಾ2 ಲಿಕ್ವಿಡ್ - ಕೂಲ್ಡ್ ಎಂಜಿನ್ ನೀಡಲಾಗಿದ್ದು, ಇದು 29PS ಪವರ್ ಮತ್ತು 30Nm ಟಾರ್ಕ್ ಹೊರಹಾಕುತ್ತದೆ. ಈ ವಿಭಾಗದಲ್ಲಿ 6-ಸ್ಪೀಡ್ ಗೇರ್‌ಬಾಕ್ಸ್ ಮತ್ತು ಅಸಿಸ್ಟ್ & ಸ್ಲಿಪ್ಪರ್ ಕ್ಲಚ್ ನೀಡಲಾದ ಮೊದಲನೆಯ ಮೋಟಾರ್‌ಸೈಕಲ್ ಇದಾಗಿದೆ ಎಂದು ಕಂಪನಿ ಹೇಳಿದೆ.

ಲಾಂಗ್‌ ರೈಡ್‌ಗಾಗಿ ವಿನ್ಯಾಸಗೊಳಿಸಲಾದ ರೋಡ್‌ಸ್ಟರ್, 12.5 ಲೀಟರ್ ಇಂಧನ ಟ್ಯಾಂಕ್ ಹೊಂದಿದ್ದು, ಫುಲ್‌ ಟ್ಯಾಂಕ್‌ನಲ್ಲಿ 350 ಕಿ.ಮೀ.ಗಿಂತ ಹೆಚ್ಚಿನ ಮೈಲೇಜ್ ನೀಡುತ್ತದೆ. ಮಧ್ಯ-ಮುಂಭಾಗದ ಫುಟ್‌ಪೆಗ್‌ಗಳು ವಿಶ್ರಾಂತಿ ಸವಾರಿಗಾಗಿ ಡಿಸೈನ ಮಾಡಲಾಗಿದೆ. ಇದು ಸ್ಪೋರ್ಟಿ ಹ್ಯಾಂಡ್ಲಿಂಗ್‌ನಲ್ಲಿ ರಾಜಿ ಮಾಡಿಕೊಳ್ಳದೆ, ಸ್ಯಾಡಲ್‌ನಲ್ಲಿ ದೀರ್ಘ ಗಂಟೆಗಳ ಕಾಲ ಪ್ರಯಾಣ ಮಾಡಲು ಸೂಕ್ತವಾಗಿರುತ್ತದೆ.

2025-yezdi-roadster-launched-in-india-at-2-9-lakh

ಅತ್ಯುತ್ತಮವಾದ ಡ್ಯುಯಲ್-ಚಾನೆಲ್ ABS ನೊಂದಿಗೆ ಸಜ್ಜುಗೊಂಡಿರುವ ಈ ಬೈಕ್, 320mm ಫ್ರಂಟ್ ಡಿಸ್ಕ್ ಬ್ರೇಕ್‌ಗಳು ಮತ್ತು 240mm ರಿಯರ್ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ. ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್ ಮತ್ತು ಡ್ಯುಯಲ್ ರಿಯರ್ ಶಾಕ್‌ಗಳನ್ನು ನೀಡಲಾಗಿದೆ. 795mm ಸೀಟ್ ಎತ್ತರ ಮತ್ತು ಅತ್ಯುತ್ತಮವಾದ ಗ್ರೌಂಡ್ ಕ್ಲಿಯರೆನ್ಸ್ ಕಮಾಂಡಿಂಗ್ ರಸ್ತೆ ಉಪಸ್ಥಿತಿಯನ್ನು ನೀಡುತ್ತದೆ.

2025 ಯೆಜ್ಡಿ ರೋಡ್‌ಸ್ಟರ್, ಜಾವಾ ಯೆಜ್ಡಿ ಬಿಎಸ್‌ಎ ಮಾಲೀಕತ್ವ ಭರವಸೆ ನೀಡುತ್ತದೆ, ಈ ಕಾರ್ಯಕ್ರಮದಡಿ ಪ್ರಮಾಣಿತ 4 - ವರ್ಷ/50,000 - ಕಿ.ಮೀ ವಾರಂಟಿ, ಆರು ವರ್ಷಗಳವರೆಗೆ ಐಚ್ಛಿಕ ವ್ಯಾಪ್ತಿ, ಒಂದು ವರ್ಷದ ರಸ್ತೆಬದಿಯ ನೆರವು ಮತ್ತು ಭಾರತದಾದ್ಯಂತ ಸುಮಾರು 450 ಸೇವಾ ಕೇಂದ್ರಗಳಲ್ಲಿ ಲಭ್ಯವಿರುವ ಇತರ ಮಾಲೀಕತ್ವ ಪ್ರಯೋಜನಗಳನ್ನು ಒಳಗೊಂಡಿದೆ ಎಂದು ಯೆಜ್ಡಿ ತಿಳಿಸಿದೆ.

2025-yezdi-roadster-launched-in-india-at-2-9-lakh

2025 ಯೆಜ್ಡಿ ರೋಡ್‌ಸ್ಟರ್ ಸ್ಟ್ಯಾಂಡರ್ಡ್ ಹಾಗೂ ಪ್ರೀಮಿಯಂ ಎಂಬ ಎರಡು ವಿಭಿನ್ನ ವೇರಿಯೆಂಟ್‌ಗಳಲ್ಲಿ ಲಭ್ಯವಿದೆ. ಇದರಲ್ಲಿ ಸ್ಟ್ಯಾಂಡರ್ಡ್ ರೂಪಾಂತರವು ನಾಲ್ಕು ಗಮನಾರ್ಹ ಬಣ್ಣಗಳಲ್ಲಿ ಲಭ್ಯವಿದ್ದು, ಶಾರ್ಕ್‌ಸ್ಕಿನ್ ಬ್ಲೂ ಬಣ್ಣವು ರೂ. 2,09,969, ಸ್ಮೋಕ್ ಗ್ರೇ ಬಣ್ಣವು ರೂ. 2,12,969, ಬ್ಲಡ್‌ರಶ್ ಮರೂನ್ ಬಣ್ಣವು ರೂ. 2,16,969, ಸ್ಯಾವೇಜ್ ಗ್ರೀನ್ ಬಣ್ಣವು ರೂ. 2,21,969 ಬೆಲೆಯಿದೆ. ಎಲ್ಲವೂ ಎಕ್ಸ್‌ ಶೋರೂಂ ಬೆಲೆಗಳು.

ಇನ್ನು ಪ್ರೀಮಿಯಂ ರೂಪಾಂತರದ ವಿಷಯಕ್ಕೆ ಬಂದರೆ, ಶ್ಯಾಡೋ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದ್ದು, ರೂ. 2,25,969 (ಎಕ್ಸ್‌ ಶೋರೂಂ) ಬೆಲೆಯಲ್ಲಿ ಲಭ್ಯವಿದೆ. ಇದು ಮ್ಯಾಟ್ ಬ್ಲಾಕ್ ಬಣ್ಣದಲ್ಲಿ ವಿಶೇಷ ಬ್ಲಾಕ್ - ಔಟ್ ಟ್ರಿಮ್‌ಗಳು, ಟೈಲ್ - ಲೈಟ್‌ನಂತೆ ದ್ವಿಗುಣಗೊಳ್ಳುವ ಬಹು - ಕ್ರಿಯಾತ್ಮಕ ಬ್ಲಿಂಕರ್‌ಗಳೊಂದಿಗೆ ಬರುತ್ತದೆ.

ಕಸ್ಟಮೈಸೇಶನ್ ಭಾಗವಾಗಿ ಹ್ಯಾಂಡಲ್‌ ಬಾರ್‌ಗಳು, ವೈಸರ್‌ಗಳು ಮತ್ತು ಕೌಲ್‌ಗಳು, ಕ್ರ್ಯಾಶ್ ಗಾರ್ಡ್‌ಗಳು, ಟೂರಿಂಗ್ ಪರಿಕರಗಳು, ಸೋಲೋ ರೈಡರ್ ಮತ್ತು ಪಿಲಿಯನ್ ಬ್ಯಾಕ್‌ರೆಸ್ಟ್‌ಗಳು, ಹಿಂಭಾಗದ ರ‍್ಯಾಕ್‌ಗಳು ಮತ್ತು ಬಹು - ಕ್ರಿಯಾತ್ಮಕ ಬ್ಲಿಂಕರ್‌ಗಳು ಲಾಂಗ್ ರೈಡ್ ಅನುಕೂಲತೆಯನ್ನು ಹೆಚ್ಚಿಸಲು ಲಭ್ಯವಿದೆ ಎಂದು ಯೆಜ್ಡಿ ತಿಳಿಸಿದೆ.

More from DriveSpark

Article Published On: Tuesday, August 12, 2025, 18:06 [IST]
English summary
2025 yezdi roadster launched in india at 2 9 lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+