ಕಡಿಮೆ ಬೆಲೆಯ ಸುರಕ್ಷಿತ ಬೈಕ್‌ಗಳು: ಸೇಫ್ಟಿ ಮುಖ್ಯ, ಖರೀದಿಸುವ ಮುನ್ನ ಒಮ್ಮೆ ಪರಿಶೀಲಿಸಿ!

ಎಬಿಎಸ್ ಎಂಬ ಸುರಕ್ಷಿತ ಬ್ರೇಕಿಂಗ್ ಸಿಸ್ಟಮ್ ಇತ್ತೀಚಿನ ಪರಿಸ್ಥಿತಿಗಳಿಗೆ ಬಹಳ ಅವಶ್ಯಕ ಸೇಫ್ಟಿ ಫೀಚರ್ ಆಗಿದೆ. ಇಂದಿನ ರಸ್ತೆ ಪರಿಸ್ಥಿತಿಗಳಿಗೆ ಎಬಿಎಸ್ ಹೊಂದಿರುವ ಬೈಕ್‌ಗಳ ಅವಶ್ಯಕತೆ ತುಂಬಾ ಇದೆ. ಪ್ರಸ್ತುತ ಭಾರತದಲ್ಲಿ ಅಗ್ಗದ ಬೆಲೆಗೆ ಎಬಿಎಸ್ ವೈಶಿಷ್ಟ್ಯದೊಂದಿಗೆ ಸುರಕ್ಷಿತ ಬೈಕ್‌ಗಳನ್ನು ಹಲವು ಕಂಪನಿಗಳು ಮಾರಾಟ ಮಾಡುತ್ತಿವೆ. ಇವೆಲ್ಲವು ಡ್ಯುಯಲ್ ಚಾನಲ್ ಎಬಿಎಸ್‌ನೊಂದಿಗೆ ಸವಾರಿಯನ್ನು ಇನ್ನಷ್ಟು ಸುರಕ್ಷಿತಗೊಳಿಸುತ್ತವೆ. ನೀವು ಕೂಡ ಅಗ್ಗದ ಸುರಕ್ಷಿತ ಮೋಟಾರ್‌ಸೈಕಲ್ ಖರೀದಿಸುವ ಯೋಜನೆಯಿದ್ದರೇ ಡ್ಯುಯಲ್-ಚಾನೆಲ್ ಎಬಿಎಸ್ ಜೊತೆಗೆ ಬರುವ ಟಾಪ್-5 ಮೋಟಾರ್ ಸೈಕಲ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಭಾರತದಂತಹ ದೇಶದಲ್ಲಿ ಸಾಮಾನ್ಯ ಜನರಿಗೆ ದ್ವಿಚಕ್ರ ವಾಹನಗಳೇ ಮೂಲಾಧಾರವಾಗಿದ್ದು, ಬೈಕ್ - ಸ್ಕೂಟರ್‌ಗಳನ್ನು ನಂಬಿಕೊಂಡು ಜೀವನ ನಡೆಸುವ ಹಲವು ಕುಟುಂಬಗಳಿವೆ. ಹಾಗಾಗಿ ದ್ವಿಚಕ್ರ ವಾಹನಗಳಲ್ಲಿನ ABS (Anti-lock braking system) ವೈಶಿಷ್ಟ್ಯವಿರುವ ವಾಹನಗಳನ್ನು ಖರೀದಿಸುವುದು ಉತ್ತಮ. ತುರ್ತು ಬ್ರೇಕಿಂಗ್ ಸಂದರ್ಭದಲ್ಲಿ ಚಕ್ರಗಳನ್ನು ಸಂಪೂರ್ಣವಾಗಿ ಲಾಕ್ ಮಾಡುವುದನ್ನು ತಡೆದು, ವಾಹನ ನಿಯಂತ್ರಣವನ್ನು ಸ್ಥಿರವಾಗಿರಿಸುವ ಬೈಕ್‌ಗಳು ಇಲ್ಲಿವೆ.

affordable-bikes-with-dual-channel-abs-pulsar-apache-ns200

ಬಜಾಜ್ ಪಲ್ಸರ್ NS160: ಬಜಾಜ್ ಪಲ್ಸರ್ NS160 ಬೈಕ್ ಭಾರತದಲ್ಲಿ ಪ್ರಸ್ತುತ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿರುವ ಅತ್ಯಂತ ಕೈಗೆಟುಕುವ ಬೈಕ್ ಆಗಿದೆ. ಇದರ ಬೆಲೆಯು ರೂ.1.37 (ಎಕ್ಸ್‌ ಶೂರೂಂ) ಲಕ್ಷಗಳಾಗಿದೆ. 160 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, ಬೈಕ್ 5-ಸ್ಪೀಡ್ ಗೇರ್‌ಬಾಕ್ಸ್‌ ಜೊತೆಗೆ ಬರುತ್ತದೆ.

ಟಿವಿಎಸ್ ಅಪಾಚೆ RTR 200 4v: ಡ್ಯುಯಲ್ ಚಾನೆಲ್ ಎಬಿಎಸ್ ವೇರಿಯೆಂಟ್ ಅನ್ನು ಹೊಂದಿರುವ ಟಿವಿಎಸ್ ಅಪಾಚೆ RTR 200 4v ಬೈಕ್ ಬೆಲೆಯು ರೂ.1.49 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಈ ಬೈಕ್ 197.75 ಸಿಸಿ ಸಿಂಗಲ್ ಸಿಲಿಂಡರ್, 4 ವಾಲ್ವ್, ಆಯಿಲ್ ಕೂಲ್ಡ್ ಎಂಜಿನ್ ಹೊಂದಿದೆ. ಈ ಎಂಜಿನ್ 20.2 ಬಿಹೆಚ್ ಪವರ್ ಮತ್ತು 16.8 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

affordable-bikes-with-dual-channel-abs-pulsar-apache-ns200

ಬಜಾಜ್ ಪಲ್ಸರ್ N160: ಬಜಾಜ್ ಪಲ್ಸರ್ N160 ಬೆಲೆಯು ರೂ.1.32 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಇದು ಕೂಡ ಡ್ಯುಯಲ್ ಚಾನೆಲ್ ಎಬಿಎಸ್ ಹೊಂದಿದ್ದು, ಇದು 164.82 ಸಿಸಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 15.7 ಬಿಹೆಚ್ ಪವರ್ ಮತ್ತು 14.65 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಬಜಾಜ್ ಪಲ್ಸರ್ NS200: ಬಜಾಜ್ ಪಲ್ಸರ್ NS200 ತನ್ನ ವಿಭಾಗದಲ್ಲಿ ಅತ್ಯುತ್ತಮ ಬೈಕ್ ಆಗಿದ್ದು, ಡ್ಯುಯಲ್ ಚಾನಲ್‌ ಎಬಿಎಸ್ ಜೊತೆಗೆ ಬರುತ್ತದೆ. ಈ ಬೈಕಿನಲ್ಲಿ 199 ಸಿಸಿ ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ನೀಡಲಾಗಿದೆ. ಬೆಲೆಯು ರೂ.150 (ಎಕ್ಸ್ ಶೋರೂಂ) ಲಕ್ಷಗಳಾಗಿದೆ.

affordable-bikes-with-dual-channel-abs-pulsar-apache-ns200

ಸದ್ಯ ಭಾರತದಲ್ಲಿ ಅತ್ಯಂತ ಕೈಗೆಟುಕುವ ಬೆಲೆಯ ಬೆಸ್ಟ್ ಸುರಕ್ಷಿತ ಮೋಟಾರ್‌ಸೈಕಲ್‌ಗಳಾಗಿ ಮೇಲೆ ತಿಳಿಸಿರುವ ಬೈಕ್‌ಗಳು ಮುಂದುವರಿಯುತ್ತಿವೆ. ಇಂದಿನ ರಸ್ತೆ ಪರಿಸ್ಥಿತಿಗಳಿಗೆ ಎಬಿಎಸ್ ಹೊಂದಿರುವ ಬೈಕ್‌ಗಳ ಅವಶ್ಯಕತೆ ತುಂಬಾ ಇದೆ ಎಂಬುದನ್ನು ಸಾಭೀತು ಪಡಿಸಿವೆ. ಸಂಭವನೀಯ ಅಪಘಾತಗಳನ್ನು ತಪ್ಪಿಸಿರುವ ಹಲವು ಉದಾಹರಣೆಗಳು ಕೂಡ ಇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, January 13, 2025, 22:31 [IST]
English summary
Affordable bikes with dual channel abs pulsar apache ns200
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+