ಕಾಲೇಜು ವಿದ್ಯಾರ್ಥಿಗಳೇ ಇವು ನಿಮಗಾಗಿ: ಖರ್ಚಿಲ್ಲದೆ ನಿತ್ಯ ಓಡಾಡಿ... ಬೆಸ್ಟ್ ಸ್ಕೂಟರ್‌ಗಳು!

ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು (Electric vehicles) ಭಾರೀ ಜನಪ್ರಿಯತೆ ಪಡೆಯುತ್ತಿವೆ. ಮುಖ್ಯವಾಗಿ ಓಲಾ, ಎಥರ್, ಟಿವಿಎಸ್, ಬಜಾಜ್‌ನಂತಹ ಪ್ರಮುಖ ಬ್ರಾಂಡ್‌ಗಳು ಉತ್ತಮ ಬೇಡಿಕೆ ಪಡೆದಿವೆ. ಇಂಧನ ವೆಚ್ಚವಿಲ್ಲದೆ ನಿತ್ಯ ನಗರಗಳಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವುದರಿಂದ ವಿದ್ಯಾರ್ಥಿಗಳು ಹೆಚ್ಚಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸುತ್ತಿದ್ದಾರೆ. ಅನೇಕ ವಿದ್ಯಾರ್ಥಿಗಳು ಶೀಘ್ರದಲ್ಲೇ ಕಾಲೇಜಿಗೆ ಪ್ರವೇಶಿಸುತ್ತಿರುವುದರಿಂದ, ಪರಿಗಣಿಸಬೇಕಾದ ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಇಲ್ಲಿವೆ. ನಮ್ಮ ಪಟ್ಟಿಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕೈಗೆಟುಕವ ಬೆಲೆಯನ್ನು ಹೊಂದಿವೆ. ಇವು ಬೆಲೆ ಮತ್ತು ವಿಶ್ವಾಸಾರ್ಹತೆಯ ನಡುವೆ ಉತ್ತಮ ಸಮತೋಲನವನ್ನು ಹೊಂದಿವೆ.

ಓಲಾ ಎಸ್1 ಎಕ್ಸ್ (Ola S1X): ಇದು ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ಮೂರು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಸಂಪೂರ್ಣ ಚಾರ್ಜ್‌ನಲ್ಲಿ 108 ಕಿಲೋಮೀಟರ್ ಓಡುತ್ತದೆ. 101 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಇದರ 2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿರುವ ಮಾಡೆಲ್, ರೂ.79,999 (ಎಕ್ಸ್ ಶೋರೂಂ) ಬೆಲೆಯನ್ನು ಒಳಗೊಂಡಿದೆ.

affordable-electric-scooters-in-india-for-students

3 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಒಳಗೊಂಡಿರುವ ಮಾಡೆಲ್, ಫುಲ್ ಚಾರ್ಜ್‌ನಲ್ಲಿ 176 ಕಿಲೋಮೀಟರ್ (ಐಡಿಸಿ) ರೇಂಜ್ (ಮೈಲೇಜ್) ನೀಡುತ್ತದೆ. ರೂ.89,999 ದರವನ್ನು ಪಡೆದಿದೆ. 113 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. 4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಪಡೆದಿರುವ ಮಾಡೆಲ್, ರೂ.99,999 ಬೆಲೆಯನ್ನು ಹೊಂದಿದೆ.

ಪೂರ್ತಿ ಚಾರ್ಜ್‌ನಲ್ಲಿ 242 ಕಿಲೋಮೀಟರ್ ಓಡುತ್ತದೆ. 123 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಮಾಡೆಲ್‌ಗಳು, ಸ್ಟ್ಯಾಂಡರ್ಡ್ ಆಗಿ ಮುಂಭಾಗ (ಫ್ರಂಟ್) ಡಿಸ್ಕ್ ಬ್ರೇಕ್ ಹಾಗೂ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಹೊಂದಿವೆ. ಇದರೊಟ್ಟಿಗೆ ವೈಟ್, ಬ್ಲ್ಯೂ, ರೆಡ್, ಸಿಲ್ವರ್ ಮತ್ತು ಬ್ಲ್ಯಾಕ್ ಎಂಬ 5 ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಗ್ರಾಹಕರ ಖರೀದಿಗೆ ಸಿಗಲಿವೆ.

affordable-electric-scooters-in-india-for-students

ಹೀರೋ ವಿಡಾ ವಿ2: ಹೊಚ್ಚ ಹೊಸ 'ಹೀರೋ ವಿಡಾ ವಿ2' ಎಲೆಕ್ಟ್ರಿಕ್ ಸ್ಕೂಟರ್ ವಿ2 ಲೈಟ್, ವಿ2 ಪ್ಲಸ್ ಹಾಗೂ ವಿ2 ಪ್ರೊ ಎಂಬ ಮೂರು ಆಕರ್ಷಕ ರೂಪಾಂತರಗಳ ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂ.74,000 ಎಕ್ಸ್-ಶೋರೂಂ ಆರಂಭಿಕ ದರವನ್ನು ಹೊಂದಿದೆ. ವಿಡಾ ವಿ2 ಪ್ಲಸ್ ಮಾಡೆಲ್ ಬೆಲೆ ರೂ.82,800 ಎಕ್ಸ್-ಶೋರೂಂ ಇದೆ.

ಇನ್ನೊಂದು ವಿಡಾ ವಿ2 ಪ್ರೊ ಮಾಡೆಲ್ ಮಾತ್ರ ದುಬಾರಿ ರೂ.1,20,300 ಎಕ್ಸ್-ಶೋರೂಂ ಬೆಲೆಯನ್ನು ಒಳಗೊಂಡಿದೆ. ನೂತನ ಹೀರೋ ವಿಡಾ ವಿ2 ಲೈಟ್ ಎಂಟ್ರಿ-ಲೆವೆಲ್ ಮಾಡೆಲ್ ಆಗಿದೆ. ಇದು 2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ ಆಯ್ಕೆಯನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 94 ಕಿಲೋಮೀಟರ್‌ವರೆಗೂ ರೇಂಜ್ (ಮೈಲೇಜ್) ಕೊಡುತ್ತದೆ. 69 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

affordable-electric-scooters-in-india-for-students

ಹೀರೋ ವಿಡಾ ವಿ2 ಪ್ಲಸ್ ಮಿಡ್-ಲೆವೆಲ್ ಮಾಡೆಲ್ 3.44 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಫುಲ್ ಚಾರ್ಜ್‌ನಲ್ಲಿ 143 ಕಿಲೋಮೀಟರ್‌ವರೆಗೂ ಕ್ರಮಿಸಲಿದ್ದು, 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಹೊಸ ಹೀರೋ ವಿಡಾ ವಿ2 ಪ್ರೊ ಟಾಪ್-ಎಂಡ್ ಮಾಡೆಲ್, 3.94 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಪೂರ್ತಿ ಚಾರ್ಜ್‌ನಲ್ಲಿ 165 ಕಿಲೋಮೀಟರ್‌ವರೆಗೂ ಓಡುತ್ತದೆ. 90 ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ.

ಹೀರೋ ವಿಡಾ ವಿ2 ಸ್ಕೂಟರ್‌ನ ಎಲ್ಲ ಮಾಡೆಲ್‌ಗಳು ಬಹುತೇಕ ಒಂದೇ ರೀತಿಯ ವೈಶಿಷ್ಟ್ಯಗಳನ್ನು ಹೊಂದಿವೆ. ಬಹುಮುಖ್ಯವಾಗಿ ಟಿಎಫ್‌ಟಿ ಟಚ್‌ಸ್ಕ್ರೀನ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ (7-ಇಂಚು), ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ರೀ-ಜೆನ್ ಬ್ರೇಕಿಂಗ್, ಕೀಲೆಸ್ ಎಂಟ್ರಿ ಮತ್ತು ಕ್ರೂಸ್ ಕಂಟ್ರೋಲ್‌ನ್ನು ಒಳಗೊಂಡಿವೆ. ಇದರೊಟ್ಟಿಗೆ ಮ್ಯಾಟ್ ನೆಕ್ಸಸ್ ಬ್ಲೂ-ಗ್ರೇ & ಗ್ಲೋಸಿ ಸ್ಪೋರ್ಟ್ಸ್ ರೆಡ್ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ಲಭ್ಯವಿವೆ.

ಹೋಂಡಾ ಕ್ಯೂಸಿ1: ಹೊಸ ಹೋಂಡಾ ಕ್ಯೂಸಿ1 ಇ-ಸ್ಕೂಟರ್ ರೂ.90,000 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಪೂರ್ತಿ ಚಾರ್ಜ್‌ನಲ್ಲಿ 80 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಇದರ ಬ್ಯಾಟರಿಯು 330ಡಬ್ಲ್ಯೂ ಆಫ್-ಬೋರ್ಡ್ ಚಾರ್ಜರ್ ಬಳಕೆಯಲ್ಲಿ ಚಾರ್ಜ್ ಆಗುತ್ತದೆ.

ಈ ಸ್ಕೂಟರ್‌ನಲ್ಲಿ ಹಬ್-ಮೌಂಟೆಡ್ ಬ್ರಷ್‌ಲೆಸ್ ಡಿಸಿ ಮೋಟಾರ್‌ ಉಪಯೋಗ ಮಾಡಲಾಗಿದೆ. ಇದು 1.8 ಕೆಡಬ್ಲ್ಯೂ (2.4 ಬಿಹೆಚ್‌ಪಿ) ಅಶ್ವ ಶಕ್ತಿ ಹಾಗೂ 77 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್ ಹೊಂದಿದ್ದು, ಕೆಲವೇ 9.1 ಸೆಕೆಂಡುಗಳಲ್ಲಿ 0-40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಟಿವಿಎಸ್ ಐಕ್ಯೂಬ್: ಇದು ಸ್ಟ್ಯಾಂಡರ್ಡ್ ಮತ್ತು ಎಸ್‌ಟಿ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ದೊರೆಯುತ್ತದೆ. ಇದರ ಸ್ಟ್ಯಾಂಡರ್ಡ್ ಐಕ್ಯೂಬ್ ಮಾಡೆಲ್, ರೂ.1.07 ಲಕ್ಷದಿಂದ ರೂ.1.37 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.2 ಕೆಡಬ್ಲ್ಯೂಹೆಚ್ ಹಾಗೂ 3.4 ಕೆಡಬ್ಲ್ಯೂಹೆಚ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದೆ.

ಈ ಸ್ಟ್ಯಾಂಡರ್ಡ್ ಐಕ್ಯೂಬ್ ಮಾಡೆಲ್, ಸಂಪೂರ್ಣ ಚಾರ್ಜ್‌ನಲ್ಲಿ 75 ರಿಂದ 100 ಕಿಲೋಮೀಟರ್‌ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ. ಟಿಎಫ್‌ಟಿ ಸ್ಕ್ರೀನ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವೆಹಿಕಲ್ ಕ್ರ್ಯಾಶ್-ಟೌ ಅಲರ್ಟ್ ಮತ್ತು 30 ಲೀ. ಸೀಟ್ ಬೂಟ್ ಸ್ಪೇಸ್‌ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಟಿವಿಎಸ್ ಐಕ್ಯೂಬ್ ಎಸ್‌ಟಿ ಮಾಡೆಲ್, ರೂ.1.56 ಲಕ್ಷದಿಂದ ರೂ.1.85 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. 3.4 ಕೆಡಬ್ಲ್ಯೂಹೆಚ್ ಹಾಗೂ 5.1 ಕೆಡಬ್ಲ್ಯೂಹೆಚ್ ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಭರ್ತಿ ಚಾರ್ಜ್‌ನಲ್ಲಿ 100 ರಿಂದ 150 ಕಿಲೋಮೀಟರ್ ಓಡುತ್ತದೆ. ಸ್ಟಾರ್‌ಲೈಟ್ ಬ್ಲೂ ಗ್ಲೋಸ್ಸಿ ಹಾಗೂ ಟೈಟಾನಿಯಂ ಗ್ರೇ ಮ್ಯಾಟ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

ಬಜಾಜ್ ಚೇತಕ್ 3503: ಬಜಾಜ್ ಚೇತಕ್ 3503 ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಸಿಗಲಿದ್ದು, ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಖರೀದಿ ಮಾಡಲು ಸಾಧ್ಯವಾಗಲಿದೆ. ರೂ.1.10 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಇದು 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದ್ದು, ಭರ್ತಿ ಚಾರ್ಜ್‌ನಲ್ಲಿ 150 ಕಿಲೋಮೀಟರ್ ರೇಂಜ್ (ಮೈಲೇಜ್) ಕೊಡುತ್ತದೆ.

ಈ ಬಜಾಜ್ ಚೇತಕ್ 3503 ಇ-ಸ್ಕೂಟರ್ 63 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಇದರ ಬ್ಯಾಟರಿ ಪ್ಯಾಕ್ ಮನೆಯ ವಿದ್ಯುತ್ ಬಳಕೆಯಲ್ಲಿ 0 ರಿಂದ 80% ಚಾರ್ಜ್ ಆಗಲು 3 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ. ಜೊತೆಗೆ ಇಕೋ (Eco) ಮತ್ತು ಸ್ಪೋರ್ಟ್ಸ್ (Sports) ಎಂಬ ಎರಡು ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, May 1, 2025, 10:00 [IST]
English summary
Affordable electric scooters in india for students
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+