Affordable scooters: ಕಡಿಮೆ ಬೆಲೆಯ ಸ್ಕೂಟರ್ ಹುಡುಕುತ್ತಿದ್ದೀರಾ? ಆಕ್ಟಿವಾ ಸೇರಿದಂತೆ 5 ಆಯ್ಕೆಗಳು...

Affordable scooters: ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹೊಸ ಸ್ಕೂಟರ್‌ಗಳ ಪರಿಚಯದೊಂದಿಗೆ, ಸ್ಕೂಟರ್ ವಿಭಾಗವು ಈಗ ಹಲವು ಆಯ್ಕೆಗಳಿಂದ ಕೂಡಿದೆ. ನಿಮ್ಮ ಬಜೆಟ್ ಕೇವಲ 1,00,000 ರೂ.ಗಿಂತ (ಎಕ್ಸ್ ಶೋರೂಂ) ಕಡಿಮೆ ಇದ್ದರೂ ಚಿಂತೆಯಿಲ್ಲ ಒಂದು ಸ್ಕೂಟರ್ ಖರೀದಿಸಬಹುದು. ವರ್ಧಿತ ವೈಶಿಷ್ಟ್ಯಗಳೊಂದಿಗೆ ಹೊಸ ಸ್ಕೂಟರ್‌ಗಳ ಲಭ್ಯತೆಯಿಂದಾಗಿ ಸ್ಕೂಟರ್ ವಿಭಾಗವು ಬೆಳವಣಿಗೆಯನ್ನು ಮುನ್ನಡೆಸಿದೆ. ನೀವು ಕೂಡ ಬಜೆಟ್ ಸ್ಕೂಟರ್ ಹುಡುಕುತ್ತಿದ್ದರೆ ನೀವು ಪರಿಗಣಿಸಬಹುದಾದ ಐದು ಅತ್ಯುತ್ತಮ ಸ್ಕೂಟರ್‌ಗಳು ಇಲ್ಲಿವೆ. ಬನ್ನಿ ಎಲ್ಲವನ್ನು ಪರಿಶೀಲಿಸೋಣ.

ಹೋಂಡಾ ಆಕ್ಟಿವಾ: ಆಕ್ಟಿವಾ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಹೋಂಡಾ ಇತ್ತೀಚೆಗೆ ಒಬಿಡಿ2ಬಿ-ಕಾಂಪ್ಲೈಂಟ್ ಆಕ್ಟಿವಾ 110 ಮತ್ತು ಆಕ್ಟಿವಾ 125 ಸ್ಕೂಟರ್ ಗಳನ್ನು ಬಿಡುಗಡೆಗೊಳಿಸಿದೆ. ಹೋಂಡಾ ಆಕ್ಟಿವಾ 110 ಒಬಿಡಿ2ಬಿ ಬೆಲೆಗಳನ್ನು ನೋಡುವುದಾದರೆ, ಆಕ್ಟಿವಾ ಎಸ್‌ಟಿಡಿ - 80,977 ರೂ., ಆಕ್ಟಿವಾ ಡಿಎಲ್ಎಕ್ಸ್ - 90,996 ರೂ., ಆಕ್ಟಿವಾ ಸ್ಮಾರ್ಟ್ - 94,998 ರೂ., ಇದೆ. (ಎಕ್ಸ್ ಶೋರೂಂ ಬೆಲೆಗಳು)

affordable-scooters-in-india-activa-jupiter-access

ಟಿವಿಎಸ್ ಜೂಪಿಟರ್: ಜೂಪಿಟರ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಟಿವಿಎಸ್ ಸ್ಕೂಟರ್ ಆಗಿದೆ. ಆಕ್ಟಿವಾದಂತೆ ಇದು ಕೂಡ 110 ಮತ್ತು 125 ಸಿಸಿ ಸ್ಕೂಟರ್‌ಗಳನ್ನು ಹೊಂದಿದೆ. ಟಿವಿಎಸ್ ಜೂಪಿಟರ್ 110 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ, ಡ್ರಮ್ - 79,091 ರೂ., ಡ್ರಮ್ ಅಲಾಯ್ - 84,541 ರೂ., ಡ್ರಮ್ ಎಸ್ಎಕ್ಸ್ಸಿ - 88,091 ರೂ., ಡಿಸ್ಕ್ ಎಸ್ಎಕ್ಸ್ಸಿ - 91,891 ರೂ. ಇದೆ.

ಸುಜುಕಿ ಆಕ್ಸೆಸ್: ಸುಜುಕಿ ಆಕ್ಸೆಸ್ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ 125 ಸಿಸಿ ಸ್ಕೂಟರ್ ಆಗಿದೆ. ಇದರ ಬೆಲೆಗಳು ಎಕ್ಸ್-ಶೋರೂಂ ದರದಂತೆ ಡ್ರಮ್ - 82,900 ರೂ., ಡಿಸ್ಕ್ - 89,400 ರೂ., ಡಿಸ್ಕ್ ಅಲಾಯ್ - 94,500 ರೂ. ಇದೆ. ಇದು ಬಹುಬೇಡಿಕೆಯ ಸ್ಕೂಟರ್ ಆಗಿದ್ದು, ಆಕ್ಟೀವಾಗೆ ನೇರ ಪ್ರತಿಸ್ಪರ್ಧಿಯಾಗಿದೆ.

affordable-scooters-in-india-activa-jupiter-access

ಟಿವಿಎಸ್ ಎನ್ ಟಾರ್ಕ್: ಟಿವಿಎಸ್ ಎನ್‌ಟಾರ್ಕ್ ಮತ್ತೊಂದು ಜನಪ್ರಿಯ 125cc ಸ್ಕೂಟರ್ ಮಾದರಿಯಾಗಿದೆ. ವಿಶೇಷವಾಗಿ ತಮ್ಮ ಪರ್ಫಾಮೆನ್ಸ್ ಸ್ಕೂಟರ್ ಹುಡುಕುತ್ತಿರುವ ಖರೀದಿದಾರರು ಇದನ್ನು ಪರಿಗಣಿಸಬಹುದು. ಇದು 124.8cc ಎಂಜಿನ್ ಅನ್ನು ಹೊಂದಿದ್ದು, 9.4PS ಗರಿಷ್ಠ ಪವರ್ ಮತ್ತು 10.6Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಟಿವಿಎಸ್ ಎನ್ ಟಾರ್ಕ್ ಬೆಲೆಗಳು ಎಕ್ಸ್ ಶೋ ರೂಂ ದರದಂತೆ ಡಿಸ್ಕ್ - 87,042 ರೂ., ರೇಸ್ ಎಡಿಷನ್ - 92,582 ರೂ., ಸೂಪರ್ ಸ್ಕ್ವಾಡ್ ಎಡಿಷನ್ - 97,607 ರೂ., ರೇಸ್ ಎಕ್ಸ್‌ಪಿ - 98,222 ರೂ., ಎಕ್ಸ್ ಟಿ - 1,06,612 ರೂ. ಬೆಲೆಯಿದೆ.

affordable-scooters-in-india-activa-jupiter-access

ಸುಜುಕಿ ಅವೆನಿಸ್: ಆಕ್ಸೆಸ್‌ನಷ್ಟು ಜನಪ್ರಿಯವಲ್ಲದಿದ್ದರೂ, ಅವೆನಿಸ್ ಸುಜುಕಿಯ ಮತ್ತೊಂದು 125 ಸಿಸಿ ಸ್ಕೂಟರ್ ಆಗಿದೆ. ಇದು 124 ಸಿಸಿ ಎಂಜಿನ್‌ನೊಂದಿಗೆ ಬರುತ್ತದೆ, ಇದು 8.7 ಪಿಎಸ್ ಗರಿಷ್ಠ ಶಕ್ತಿ ಮತ್ತು 10 ಎನ್ಎಂ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಇದರ ಬೆಲೆಗಳು ಎಕ್ಸ್-ಶೋರೂಂ ದರದಂತೆ ಸ್ಟ್ಯಾಂಡರ್ಡ್ - 93,200 ರೂ. ಹಾಗೂ ರೇಸ್ ಎಡಿಷನ್ - 94,000 ರೂ. ಇದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, April 22, 2025, 10:20 [IST]
English summary
Affordable scooters in india activa jupiter access
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+