TVS: ಇತ್ತೀಚೆಗೆ ಬಿಡುಗಡೆಯಾದ ಹೊಸ 2025 ಟಿವಿಎಸ್ ರೋನಿನ್ ವಿಶೇಷತೆಗಳು!

2025 ರ ಹೊಸ ಟಿವಿಎಸ್ ರೋನಿನ್ ಅನ್ನು ಗ್ಲೇಸಿಯರ್ ಸಿಲ್ವರ್ ಮತ್ತು ಚಾರ್ಕೋಲ್ ಎಂಬರ್ ಎಂಬ ಎರಡು ಹೆಚ್ಚುವರಿ ಗಮನಾರ್ಹ ಬಣ್ಣಗಳೊಂದಿಗೆ ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಈ ಬಣ್ಣಗಳ ಸೇರ್ಪಡೆಯು ಬೈಕ್‌ನ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುವುದರ ಜೊತೆಗೆ ಅದಕ್ಕೆ ತೀಕ್ಷ್ಣವಾದ, ಆಧುನಿಕ ಆಕರ್ಷಣೆಯನ್ನು ನೀಡಿದೆ. ಈ ರಿಫ್ರೆಶ್ ಮಾದರಿಯನ್ನು ನಮ್ಮ ಗ್ರಾಹಕರಿಗೆ ಪರಿಚಯಿಸಲು ಉತ್ಸುಕರಾಗಿದ್ದೇವೆ. ಟಿವಿಎಸ್ ರೋನಿನ್ ‌ಪ್ರಯಾಣದ ಮುಂದಿನ ಅಧ್ಯಾಯವನ್ನು ಅನುಭವಿಸಲು ಗ್ರಾಹಕರ ಉತ್ಸಾಹಭರಿತ ಪ್ರತಿಕ್ರಿಯೆಯನ್ನು ಎದುರು ನೋಡುತ್ತಿದ್ದೇವೆ ಎಂದು ಕಂಪನಿಯ ಪ್ರೀಮಿಯಂ ವ್ಯವಹಾರದ ಮುಖ್ಯಸ್ಥ ವಿಮಲ್ ಸಂಬ್ಲಿ ಹೇಳಿದರು.

ಪ್ರಮುಖ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ (TVS Motor), ಹೊಚ್ಚ ಹೊಸ ಟಿವಿಎಸ್ ರೋನಿನ್ (TVS Ronin) 2025 ಆವೃತ್ತಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. 2025 ರ ಟಿವಿಎಸ್ ರೋನಿನ್ ಭಾರತದಾದ್ಯಂತ ಅಧಿಕೃತ ಟಿವಿಎಸ್ ಡೀಲರ್‌ಶಿಪ್‌ಗಳಲ್ಲಿ ಲಭ್ಯವಿದ್ದು, ಇದರ ಆರಂಭಿಕ ಬೆಲೆಯು ರೂ. 1.35 ಲಕ್ಷ (ಎಕ್ಸ್-ಶೋರೂಂ.) ದಿಂದ ಪ್ರಾರಂಭವಾಗುತ್ತದೆ.

all-new-2025-tvs-ronin-top-things-you-must-know

2025 ರ ಹೊಸ ಟಿವಿಎಸ್ ರೋನಿನ್ ಆಕರ್ಷಕ ಹೊಸ ಬಣ್ಣಗಳ ಜೊತೆಗೆ, 2025 ಆವೃತ್ತಿಯು ಈಗ ಅದರ ಮಧ್ಯದ ವೇರಿಯೆಂಟ್‌ನಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸಹ ಹೊಂದಿದೆ, ಇದರ ಬೆಲೆಯು ರೂ 1.59 ಲಕ್ಷದಿಂದ (ಎಕ್ಸ್‌ ಶೋರೂಂ) ಪ್ರಾರಂಭವಾಗುತ್ತದೆ. ಆಸಕ್ತರು ಹೆಚ್ಚಿನ ವಿವರಗಳಿಗಾಗಿ ಸ್ಥಳೀಯ ಡೀಲರ್‌ಗಳನ್ನು ಸಂಪರ್ಕಿಸಬಹುದು.

ಇದೀಗ 2025 ರ ಟಿವಿಎಸ್ ರೋನಿನ್ ರೋಮಾಂಚಕ ಬಣ್ಣಗಳು, ಹೊಸ ಡಿಸೈನ್ ಮತ್ತು ವರ್ಧಿತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಿದೆ. ಇದು ಆಧುನಿಕ - ರೆಟ್ರೊ ಮೋಟಾರ್‌ಸೈಕಲ್ ವರ್ಗದ ದಿಟ್ಟ ಹೊಸ ಆವೃತ್ತಿಯಾಗಿದೆ. ಪ್ರಾರಂಭದಿಂದಲೂ, ಟಿವಿಎಸ್ ರೋನಿನ್ ರೆಟ್ರೊ ಡಿಸೈನ್‌ನೊಂದಿಗೆ ಆಕರ್ಷಕ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಮಿಶ್ರಣವನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.

all-new-2025-tvs-ronin-top-things-you-must-know

ಅಲ್ಲದೇ ಡಿಸೈನ್ ಮತ್ತು ಕ್ರಿಯಾತ್ಮಕತೆಯ ನಡುವೆ ಬಲವಾದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಈ ಅಪ್‌ಗ್ರೇಡ್ ಎಲ್ಲಾ ಮೂರು ರೋನಿನ್ ವೇರಿಯೆಂಟ್‌ಗಳನ್ನು ಪ್ರತ್ಯೇಕಿಸಲು ಸಹಾಯ ಮಾಡುತ್ತದೆ. ಟಿವಿಎಸ್ ರೋನಿನ್‌ನ ಆಧುನಿಕ-ರೆಟ್ರೊ ಸೌಂದರ್ಯಶಾಸ್ತ್ರಕ್ಕೆ ಪೂರಕವಾಗಿ ಪ್ರಬಲವಾದ 225.9 ಸಿಸಿ ಎಂಜಿನ್ ಹೊಂದಿದೆ.

ಈ ಎಂಜಿನ್ 20.4 PS ಪವರ್ ಮತ್ತು 19.93 Nm ಟಾರ್ಕ್ ಹೊರಹಾಕುತ್ತದೆ. ಕಡಿಮೆ-ವೇಗದ ಸವಾರಿಗಾಗಿ ಗ್ಲೈಡ್ ಥ್ರೂ ಟೆಕ್ನಾಲಜಿ (GTT), ಶ್ರಮವಿಲ್ಲದ ಗೇರ್‌ಶಿಫ್ಟ್‌ಗಳಿಗಾಗಿ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಮತ್ತು ಉತ್ತಮ ನಿರ್ವಹಣೆಗಾಗಿ ಯುಎಸ್‌ಡಿ ಮುಂಭಾಗದ ಫೋರ್ಕ್ ಒಳಗೊಂಡಿದೆ.

all-new-2025-tvs-ronin-top-things-you-must-know

"ಟಿವಿಎಸ್ ರೋನಿನ್ ದೇಶದಲ್ಲಿ ಆಧುನಿಕ - ರೆಟ್ರೊ ಮೋಟಾರ್‌ಸೈಕ್ಲಿಂಗ್ ಅನ್ನು ಮರು ವ್ಯಾಖ್ಯಾನಿಸಿದೆ. ಸವಾರರು ಆತ್ಮವಿಶ್ವಾಸ ಮತ್ತು ಶೈಲಿಯೊಂದಿಗೆ ಗುರುತಿಸದ ಮಾರ್ಗಗಳನ್ನು ಅನ್ವೇಷಿಸಲು ಸಬಲೀಕರಣಗೊಳಿಸುತ್ತಿದೆ. 2025 ರ ಆವೃತ್ತಿಯೊಂದಿಗೆ, ನಾವು ನವೀಕರಿಸಿದ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಗಮನಾರ್ಹ ಬಣ್ಣಗಳ ಹೊಸ ಪ್ಯಾಲೆಟ್ ಅನ್ನು ತರುತ್ತೇವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, February 24, 2025, 8:44 [IST]
English summary
All new 2025 tvs ronin top things you must know
Read more on tvs motor india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+