Ampere Nexus: ಅಗ್ಗದ ಸ್ಕೂಟರ್ ಮೇಲೆ 5 ವರ್ಷ ವಾರೆಂಟಿ: ಖರ್ಚಿಲ್ಲದೆ 100 ಕಿ.ಮೀ ಓಡಿಸಬಹುದು!
ಗ್ರೀವ್ಸ್ ಎಲೆಕ್ಟ್ರಿಕ್ ಮೊಬಿಲಿಟಿ ಅಡಿಯಲ್ಲಿ ಬರುವ ದ್ವಿಚಕ್ರ ವಾಹನ ತಯಾರಕ ಕಂಪನಿ ಆಂಪಿಯರ್ ಬ್ರಾಂಡ್, ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ - ಆಂಪಿಯರ್ ನೆಕ್ಸಸ್ (Ampere Nexus) ಗೆ ಪ್ರಮುಖ ಅಪ್‌ಡೇಟ್ ಪ್ರಕಟಿಸಿದೆ. ಹಾಗೆಯೇ ಈ ಸ್ಕೂಟರ್ ಭಾರತದ ಮೊದಲ ಹೈ - ಪರ್ಫಾಮೆನ್ಸ್ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಎಂದು ಪ್ರಶಂಸಿಸಲ್ಪಟ್ಟಿದೆ. ಇಂಡಿಯಾ ಡಿಸೈನ್ ಮಾರ್ಕ್ ಮತ್ತು ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಪ್ರಶಸ್ತಿ ಸೇರಿದಂತೆ ಉನ್ನತ ಗೌರವಗಳನ್ನು ಗಳಿಸಿದೆ ಎಂದು ಕಂಪನಿ ತಿಳಿಸಿದೆ.
ಅತ್ಯಂತ ಸುರಕ್ಷಿತವಾದ ಲಿಥಿಯಂ ಫೆರೋ ಫಾಸ್ಫೇಟ್ (LFP) ಬ್ಯಾಟರಿಯೊಂದಿಗೆ ಸಜ್ಜುಗೊಂಡಿರುವ ನೆಕ್ಸಸ್ ಎಲೆಕ್ಟ್ರಿಕ್ ಸ್ಕೂಟರ್, ಒಮ್ಮೆ ಚಾರ್ಜ್ ಮಾಡಿದರೆ 100 ರಿಂದ 110 ಕಿ.ಮೀ ರಿಯಲ್ ವರ್ಲ್ಡ್ ರೇಂಜ್ ನೀಡುತ್ತದೆ. ಇತರ ಸಾಮಾನ್ಯ ಎಲೆಕ್ಟ್ರಿಕ್ ಸ್ಕೂಟರ್‌ಗಳಂತೆ ಅಲ್ಲದೆ ಗಂಟೆಗೆ ಬರೋಬ್ಬರಿ 93 ಕಿ.ಮೀ ಗರಿಷ್ಠ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಅತ್ಯುತ್ತಮ - ದರ್ಜೆಯ ಸಸ್ಪೆನ್ಷನ್, ಉತ್ತಮ ಏರೋಡೈನಮಿಕ್ ಡಿಸೈನ್ ಮತ್ತು ಕೇವಲ 3 ಗಂಟೆ 22 ನಿಮಿಷಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಆಗುವ ವೇಗದ ಚಾರ್ಜಿಂಗ್ ಆಯ್ಕೆಯನ್ನು ಹೊಂದಿದೆ. ಇದು ಕಾಶ್ಮೀರದಿಂದ ಕನ್ಯಾಕುಮಾರಿಗೆ 10,000 ಕ್ಕೂ ಹೆಚ್ಚು ಕಿ.ಮೀ ಸವಾರಿಯನ್ನು ಪೂರ್ಣಗೊಳಿಸಿದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ನಾಲ್ಕು ರಾಷ್ಟ್ರೀಯ ದಾಖಲೆಗಳನ್ನು ಮುರಿದು ಇತಿಹಾಸ ನಿರ್ಮಿಸಿದೆ ಎಂದು ಕಂಪನಿ ಹೇಳಿದೆ.
ಗ್ರಾಹಕರ ನಂಬಿಕೆಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನದ ಭಾಗವಾಗಿ ಆಂಪಿಯರ್ ಕಂಪನಿಯು ಈಗ ನೆಕ್ಸಸ್ ಸ್ಕೂಟರ್‌ನ ಎಲ್ಲಾ ವೇರಿಯೆಂಟ್‌ಗಳ ಮೇಲೆ 5 ವರ್ಷ ಅಥವಾ 75,000 ಕಿ.ಮೀ ಬ್ಯಾಟರಿ ವಾರೆಂಟಿಯನ್ನು (ಯಾವುದು ಮೊದಲೋ ಅದು) ನೀಡುತ್ತಿದೆ. ಇದು ಉದ್ಯಮದ ಪ್ರಮುಖ ಭರವಸೆಯಾಗಿದೆ ಎಂದು ಆಂಪಿಯರ್ ಹೇಳಿಕೊಂಡಿದೆ.

ಇದರ ಜೊತೆಗೆ, ಆಂಪಿಯರ್ ಕೇವಲ 6.99% ರಿಂದ ಪ್ರಾರಂಭವಾಗುವ ಕಡಿಮೆ ಡೌನ್ ಪೇಮೆಂಟ್ ಮತ್ತು ಬಡ್ಡಿದರಗಳೊಂದಿಗೆ ಕೈಗೆಟುಕುವ ಹಣಕಾಸು ಯೋಜನೆಯನ್ನು ಸಹ ತಂದಿದೆ. ಆಂಪಿಯರ್ ನೆಕ್ಸಸ್ ಎಲೆಕ್ಟ್ರಿಕ್ ಸ್ಕೂಟರ್ ಈಗ ಎಲ್ಲರಿಗೂ ಕೈಗೆಟುಕುವ ಬೆಲೆ ರೂ. 1,14,900 ಎಕ್ಸ್ - ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ.
ಆಂಪಿಯರ್ ನೆಕ್ಸಸ್ ಸ್ಕೂಟರ್ ವಿಶೇಷತೆಗಳು
ಹೊಸ ಆಂಪಿಯರ್ ನೆಕ್ಸಸ್ ಎಲೆಕ್ಟ್ರಿಕ್ ಸ್ಕೂಟರ್, ಏರ್-ಕೂಲ್ ಆರ್ಕಿಟೆಕ್ಚರ್, ಲೋಡ್-ಸ್ಟ್ರಾಟಿಫೈಡ್ ವಿನ್ಯಾಸ, ಹೆಚ್ಚಿನ ಸಾಮರ್ಥ್ಯದ ಚಾಸಿಸ್(4ಪಟ್ಟು ಹೆಚ್ಚು), ನಟ್‌ಗಳು ಮತ್ತು ಬೋಲ್ಟ್‌ಗಳು ಗೋಚರಿಸಿದ ಮೊದಲ ಪ್ರೀಮಿಯಂ ವಿನ್ಯಾಸ, 7 ಇಂಚಿನ ಸ್ಮಾರ್ಟ್‌ಸೆನ್ಸ್ ತಂತ್ರಜ್ಞಾನದ TFT ಟಚ್‌ಸ್ಕ್ರೀನ್, 3 ಗಂಟೆ 22 ನಿಮಿಷಗಳ ಫಾಸ್ಟ್ ಚಾರ್ಜಿಂಗ್ ಸಿಸ್ಟಂ ಹೊಂದಿದೆ.

ಡೈಮಂಡ್ ಕಟ್ ಹೆಡ್‌ಲ್ಯಾಂಪ್‌ಗಳು ಮತ್ತು ಹಗುರವಾದ ಅಲ್ಯೂಮಿನಿಯಂ ಗ್ರಾಬ್ ಹ್ಯಾಂಡಲ್, ಆರ್ಕ್ಟಿಕ್ ಟರ್ನ್-ಪ್ರೇರಿತ ಟೈಲ್ ಲ್ಯಾಂಪ್‌ಗಳು, ದೊಡ್ಡ ಸೀಟ್, ಐದು ರೈಡಿಂಗ್ ಮೋಡ್‌ಗಳೊಂದಿಗೆ ಗಂಟೆಗೆ 93 ಕಿ.ಮೀ ಟಾಪ್ ಸ್ಪೀಡ್ ಮತ್ತು ಸಿಂಗಲ್ ಚಾರ್ಜ್‌ಗೆ ಸ್ಟ್ರಾಂಡರ್ಡ್ 110 ಕಿ.ಮೀ ರೇಂಜ್, ಫ್ರಂಟ್ ಡಿಸ್ಕ್ ಬ್ರೇಕ್‌ಗಳು ಮತ್ತು IP67 ರೇಟಿಂಗ್ ಅನ್ನು ಪಡೆದುಕೊಂಡಿದೆ.
ಒಟ್ಟಾರೆ ಹೊಸ ಆಂಪಿಯರ್ ನೆಕ್ಸಸ್ ಇವಿ ಸ್ಕೂಟರ್ ಸಾಟಿಯಿಲ್ಲದ ಮೌಲ್ಯ, ಉತ್ತಮ ಪರ್ಫಾಮೆನ್ಸ್ ಮತ್ತು ಆಕರ್ಷಕ ಫೀಚರ್ಸ್ ಒಳಗೊಂಡಿದೆ. ಇದು ಇಂದು EV ವಿಭಾಗದಲ್ಲಿ ಅತ್ಯಂತ ಆಕರ್ಷಕ ಆಯ್ಕೆಯಾಗಿದೆ. ವಿಕಸಿತ ಭಾರತೀಯ ಗ್ರಾಹಕರಿಗೆ ಸಂಪೂರ್ಣ EV ಅನುಭವವನ್ನು ನೀಡುತ್ತದೆ ಎಂದು ಕಂಪನಿ ಭರವಸೆ ನೀಡಿದೆ.


Click it and Unblock the Notifications








