ಎಥರ್ ಫ್ಯಾಮಿಲಿ ಸ್ಕೂಟರ್‌ಗೆ ಫುಲ್ ಡಿಮ್ಯಾಂಡ್: ಕಂಪನಿಗೆ ಭಾರೀ ಲಾಭ... 5 ಲಕ್ಷ ವಾಹನ ಉತ್ಪಾದನೆ
ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಎಥರ್ ಎನರ್ಜಿ ಲಿಮಿಟೆಡ್, ತಮಿಳುನಾಡಿನ ಹೊಸೂರಿನಲ್ಲಿರುವ ತನ್ನ ವಾಹನ ಉತ್ಪಾದನಾ ಘಟಕದಿಂದ 5,00,000 ನೇ ವಾಹನವನ್ನು ಹೊರತರುವ ಮೂಲಕ ಮಹತ್ವದ ಉತ್ಪಾದನಾ ಮೈಲಿಗಲ್ಲನ್ನು ಸಾಧಿಸಿದೆ. ಈ 5,00,000 ನೇ ವಾಹನವನ್ನಾಗಿ ಎಥರ್‌ನ ಪ್ರಮುಖ ಫ್ಯಾಮಿಲಿ ಸ್ಕೂಟರ್ ಆಗಿರುವ 'ರಿಜ್ಟಾ' ವನ್ನು ಹೊರತರಲಾಗಿದೆ. ಈ ರಿಜ್ಟಾ ಇವಿ ಸ್ಕೂಟರ್ ಕಳೆದ ವರ್ಷ ಬಿಡುಗಡೆಯಾದಾಗಿನಿಂದ ಬ್ರ್ಯಾಂಡ್‌ನ ಪ್ರಬಲ ಬೆಳವಣಿಗೆಯ ವಾಹನಗಳಲ್ಲಿ ಒಂದಾಗಿ ವೇಗವಾಗಿ ಹೊರಹೊಮ್ಮಿದೆ ಎಂದು ಎಥರ್ ಹೇಳಿದೆ.
ಇಷ್ಟು ವರ್ಷಗಳಲ್ಲಿ, ಎಥರ್ ಕಂಪನಿಯು' ಪರ್ಫಾಮೆನ್ಸ್ ಮತ್ತು ಫ್ಯಾಮಿಲಿ ಸ್ಕೂಟರ್‌ಗಳ ಬಲವಾದ ಪೋರ್ಟ್‌ಫೋಲಿಯೊವನ್ನು ನಿರ್ಮಿಸಿದೆ. ಇದರಲ್ಲಿ ಬಿಡುಗಡೆಯಾದ ಕೇವಲ ಒಂದು ವರ್ಷದೊಳಗೆ, ರಿಜ್ಟಾ ಎಥರ್‌ನ ಬೆಳವಣಿಗೆಯ ಪ್ರಮುಖ ಆಧಾರಸ್ತಂಭವಾಗಿದೆ. ಒಟ್ಟು ಉತ್ಪಾದನಾ ಪ್ರಮಾಣದಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನ ಪಾಲನ್ನು ರಿಜ್ಟಾ ಹೊಂದಿದ್ದು, ಕಂಪನಿಯ ವಿಸ್ತರಣೆಯನ್ನು ವೇಗಗೊಳಿಸುತ್ತಿದೆ.

ಕಳೆದ ಎರಡು ತಿಂಗಳುಗಳಲ್ಲಿ, ಎಥರ್ ಮಧ್ಯ ಮತ್ತು ಉತ್ತರ ಭಾರತದಲ್ಲಿ ತನ್ನ ಅಸ್ತಿತ್ವವನ್ನು ವೇಗವಾಗಿ ವಿಸ್ತರಿಸಿದೆ, ಮೆಟ್ರೋ ಮಾರುಕಟ್ಟೆಗಳ ಜೊತೆಗೆ ಶ್ರೇಣಿ 2 ಮತ್ತು 3 ನಗರಗಳ ಮೇಲೆ ಕೇಂದ್ರೀಕರಿಸಿದೆ. ಎಥರ್ ಪ್ರಸ್ತುತ ತಮಿಳುನಾಡಿನ ಹೊಸೂರಿನಲ್ಲಿ ಎರಡು ವಾಹನ ಉತ್ಪಾದನಾ ಸೌಲಭ್ಯಗಳನ್ನು ಹೊಂದಿದೆ, ವಾಹನ ಜೋಡಣೆ ಮತ್ತು ಬ್ಯಾಟರಿ ಉತ್ಪಾದನೆಗೆ ತಲಾ ಒಂದನ್ನು ಬಳಸಿಕೊಳ್ಳುತ್ತಿದೆ.
ಹೊಸೂರು ಸೌಲಭ್ಯವು ವರ್ಷಕ್ಕೆ 4,20,000 ಸ್ಕೂಟರ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಎಥರ್ ತನ್ನ ಮೂರನೇ ಉತ್ಪಾದನಾ ಸೌಲಭ್ಯವಾದ ಫ್ಯಾಕ್ಟರಿ 3.0 ಅನ್ನು ಬಿಡ್ಕಿನ್, AURIC, ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಸ್ಥಾಪಿಸುತ್ತಿದೆ. ಈ ಸೌಲಭ್ಯವನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಮತ್ತು ಕೈಗಾರಿಕಾ 4.0 ತತ್ವಗಳ ಮೇಲೆ ನಿರ್ಮಿಸಲಾಗುವುದು, ಉತ್ಪಾದನಾ ಪ್ರಕ್ರಿಯೆಯಲ್ಲಿ ಸುಧಾರಿತ ಡಿಜಿಟಲ್ ತಂತ್ರಜ್ಞಾನಗಳನ್ನು ಸಂಯೋಜಿಸಲಾಗುವುದು ಎಂದು ತಿಳಿಸಿದೆ.

ಎರಡೂ ಹಂತಗಳು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದ ನಂತರ, ಫ್ಯಾಕ್ಟರಿ 3.0 ಎಲ್ಲಾ ಸೌಲಭ್ಯಗಳಲ್ಲಿ ಎಥರ್‌ನ ಒಟ್ಟು ಸ್ಥಾಪಿತ ಸಾಮರ್ಥ್ಯವನ್ನು ವಾರ್ಷಿಕವಾಗಿ 1.42 ಮಿಲಿಯನ್ ಇವಿ ದ್ವಿಚಕ್ರ ವಾಹನಗಳಿಗೆ ಹೆಚ್ಚಿಸಲಿದೆ. ಇದು ಭಾರತದಲ್ಲಿ ಕಂಪನಿಯ ಸಾಮರ್ಥ್ಯವನ್ನು ದ್ವಿಗುಣಗೊಳಿಸುವ ಮುಖ್ಯ ಗುರಿಯನ್ನು ಹೊಂದಿರುವುದಾಗಿ ಎಥರ್ ಎನರ್ಜಿ ಹೇಳಿಕೊಂಡಿದೆ.
ಈ ಮೈಲಿಗಲ್ಲಿನ ಕುರಿತು ಮಾತನಾಡಿದ ಎಥರ್ ಎನರ್ಜಿಯ ಸಹ-ಸಂಸ್ಥಾಪಕ ಮತ್ತು CTO ಸ್ವಪ್ನಿಲ್ ಜೈನ್, "5,00,000 ಸ್ಕೂಟರ್‌ಗಳನ್ನು ದಾಟುವುದು ಎಥರ್‌ಗೆ ಒಂದು ಪ್ರಮುಖ ಮೈಲಿಗಲ್ಲು. ನಮ್ಮ ಮೊದಲದಿನದಿಂದ ಇಂದಿನವರೆಗೆ, ನಮ್ಮ ಪ್ರಯಾಣವು ಕೇವಲ ವಾಹನಗಳನ್ನು ನಿರ್ಮಿಸುವುದರ ಬಗ್ಗೆ ಮಾತ್ರವಲ್ಲ, ವಿಶ್ವಾಸಾರ್ಹ ಮತ್ತು ಸ್ಥಿರವಾದ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಬಗ್ಗೆ ಎಂದರು.

ಈ ಸಾಧನೆಯು ವರ್ಷಗಳ ಕೇಂದ್ರೀಕೃತ ಎಂಜಿನಿಯರಿಂಗ್, ಕಠಿಣ ಪರೀಕ್ಷೆ ಮತ್ತು ಉತ್ಪಾದನೆಯ ಪ್ರತಿಯೊಂದು ಹಂತದಲ್ಲೂ ಗುಣಮಟ್ಟಕ್ಕೆ ನಿಖರವಾದ ಗಮನವನ್ನು ಪ್ರತಿಬಿಂಬಿಸುತ್ತದೆ. ಇದು ಕಂಪನಿಯಾದ್ಯಂತದ ತಂಡಗಳ ಸಮರ್ಪಣೆ ಮತ್ತು ಈ ಪ್ರಯಾಣದ ಉದ್ದಕ್ಕೂ ನಮ್ಮೊಂದಿಗೆ ಇರುವ ನಮ್ಮ ಮಾಲೀಕರ ಸಮುದಾಯದ ನಂಬಿಕೆ ಮತ್ತು ಬೆಂಬಲವನ್ನು ಎತ್ತಿ ತೋರಿಸುತ್ತದೆ" ಎಂದರು.
ಎಥರ್ ಎನರ್ಜಿ ಬಗ್ಗೆ: ಎಥರ್ ಎನರ್ಜಿ ಕಂಪನಿಯನ್ನು 2013 ರಲ್ಲಿ ತರುಣ್ ಮೆಹ್ತಾ ಮತ್ತು ಸ್ವಪ್ನಿಲ್ ಜೈನ್ ಅವರಿಂದ ಸ್ಥಾಪಿಸಲಾಯಿತು. ಕಂಪನಿಯು 2018 ರಲ್ಲಿ ತನ್ನ ಮೊದಲ ಸ್ಕೂಟರ್ ಅನ್ನು ಬಿಡುಗಡೆ ಮಾಡಿತು. ಪ್ರಸ್ತುತ ಎರಡು ವಿಭಿನ್ನ ಇವಿಗಳನ್ನು ಒಳಗೊಂಡಿದೆ. ಪರ್ಫಾಮೆನ್ಸ್-ಆಧಾರಿತ ಎಥರ್ 450 ಸರಣಿ ಮತ್ತು 2024 ರಲ್ಲಿ ಪ್ರಾರಂಭಿಸಲಾದ ಮೊದಲ ಫ್ಯಾಮಿಲಿ ಸ್ಕೂಟರ್ 'ರಿಜ್ಟಾ' ಆಗಿದೆ.
ಒಟ್ಟಾರೆಯಾಗಿ, ಈ ಎರಡೂ ಸ್ಕೂಟರ್‌ಗಳು 8 ವೇರಿಯೆಂಟ್‌ಗಳನ್ನು ಒಳಗೊಂಡಿವೆ. ಎಥರ್ ದೇಶದಲ್ಲಿ ವಿಶಾಲವಾದ 2W ವೇಗದ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ನಿರ್ವಹಿಸುತ್ತದೆ. ಜೂನ್ 30, 2025 ರ ಹೊತ್ತಿಗೆ, ಎಥರ್ ಜಾಗತಿಕವಾಗಿ 4,032 ಫಾಸ್ಟ್ ಮತ್ತು ನೈಬರ್‌ಹುಡ್ ಚಾರ್ಜರ್‌ಗಳನ್ನು ಸ್ಥಾಪಿಸಿದೆ, ಭಾರತದಾದ್ಯಂತ 3,997 ಮತ್ತು ನೇಪಾಳ ಹಾಗೂ ಶ್ರೀಲಂಕಾದಾದ್ಯಂತ 35 ಸ್ಥಾಪಿಸಿರುವುದಾಗಿ ತಿಳಿಸಿದೆ.


Click it and Unblock the Notifications








