ಪೆಟ್ರೋಲ್, ಎಲೆಕ್ಟ್ರಿಕ್ ಆಯ್ತು ಇನ್ನೂ ಎಥೆನಾಲ್-ಚಾಲಿತ ಬೈಕ್‌ಗಳ ಹವಾ: ಖರ್ಚು ಕಡಿಮೆನಾ?

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಬಜಾಜ್ ಆಟೋ 2025ರ ಆಟೋ ಎಕ್ಸ್‌ಪೋದಲ್ಲಿ ಎಲೆಕ್ಟ್ರಿಕ್ ಮತ್ತು ಎಥೆನಾಲ್ ಚಾಲಿತ ವಾಹನಗಳ ಮೇಲೆ ಕೇಂದ್ರೀಕರಿಸಿದೆ. 2025ರ ಹೊಸ ವರ್ಷದ ಬಜಾಜ್ ಕಂಪನಿಯು ಉದ್ಯಮದಲ್ಲಿ ಆವೇಗವನ್ನು ಕಾಪಾಡಿಕೊಳ್ಳಲು ಯೋಜಿಸಿದೆ. ಎಕ್ಸ್‌ಪೋದಲ್ಲಿ, ಬಜಾಜ್ ತನ್ನ ಕೆಲವು ಇತ್ತೀಚಿನ ಆವಿಷ್ಕಾರಗಳನ್ನು ಪರಿಚಯಿಸಲಿದೆ. ಇನ್ನು ಬಜಾಜ್ (Bajaj) ಕಂಪನಿಯು 2025ರ ಆಟೋ ಎಕ್ಸ್‌ಪೋದಲ್ಲಿ ಪರಿಚಯಿಸುವ ದ್ವಿಚಕ್ರ ವಾಹನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಚೇತಕ್ 35 ಸೀರಿಸ್: ಬಜಾಜ್ ಚೇತಕ್ 35 ಸೀರಿಸ್ ಮಾದರಿಯು ಇಲ್ಲಿಯವರೆಗಿನ ಬಜಾಜ್‌ನ ಅತ್ಯಂತ ಪ್ರಾಯೋಗಿಕ ಇ-ಸ್ಕೂಟರ್ ಆಗಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ಅನಾವರಣಗೊಂಡ, ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ 3.5 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು ಬಜೆಟ್ ಗ್ರಾಹಕರಿಗೆ ಅದರ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಎಕ್ಸ್‌ಪೋದಲ್ಲಿ ಪಾಲ್ಗೊಳ್ಳುವವರು ಈ ಇ-ಸ್ಕೂಟರ್‌ನ ಎಲ್ಲಾ ಟ್ರಿಮ್‌ಗಳಲ್ಲಿ ಬರಲಿದೆ.

Bajaj

ಹೊಚ್ಚ ಹೊಸ ಚೇತಕ್ 35 ಸೀರೀಸ್ ಇ-ಸ್ಕೂಟರ್‌ನ 3501 & 3502 ಮಾಡೆಲ್‌ಗಳು, ಒಂದೇ ರೀತಿಯ ಶಕ್ತಿಯುತವಾದ 3.5 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಬ್ಯಾಟರಿ ಆಯ್ಕೆಯನ್ನು ಹೊಂದಿವೆ. ಸಂಪೂರ್ಣ ಚಾರ್ಜ್‌ನಲ್ಲಿ 150 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡಲಿವೆ. 73 ಟಾಪ್ ಸ್ಪೀಡ್‌ನ್ನು ಪಡೆದಿವೆ. ಇವುಗಳಲ್ಲಿ ಬಳಕೆ ಮಾಡಿರುವ ಬ್ಯಾಟರಿಯು ಕೇವಲ 3 ಗಂಟೆಗಳಲ್ಲಿ 0-80% ಚಾರ್ಜ್ ಆಗುತ್ತದೆ.

ಬಜಾಜ್ ಪಲ್ಸರ್ RS200: ಬಜಾಜ್ ಆಟೋ, ತನ್ನ ಹೊಚ್ಚ ಹೊಸ ಪಲ್ಸರ್ RS200 ಅನ್ನು ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಲಿದೆ. ಈ ಬೈಕ್ ಅನ್ನು ಮೊದಲಿಗೆ 2015 ರಲ್ಲಿ ಬಿಡುಗಡೆ ಮಾಡಲಾಗಿತ್ತು, ಪಲ್ಸರ್ ಸಿರೀಸ್‌ನಲ್ಲಿ ತನಗೆಂದೇ ಪ್ರತ್ಯೇಕ ಅಭಿಮಾನಿಗಳನ್ನು ಪಡೆದ ಈ ಬೈಕ್ ಇದೀಗ ಆಕರ್ಷಕ ಲುಕ್‌ ಹಾಗೂ ಹೊಸ ಅಪ್‌ಡೇಟ್‌ಗಳನ್ನು ಪಡೆದು ಬಿಡುಗಡೆಯಾಗಿದೆ. ಹೊಸ ಪಲ್ಸರ್ RS200 ಮೋಟಾರ್‌ಸೈಕಲ್ ಈಗ ಮತ್ತಷ್ಟು ಸ್ಪೋರ್ಟಿಯಾಗಿರುವುದರಿಂದ ಬೆಲೆ ಕೂಡ ತುಸು ಹೆಚ್ಚಾಗಿದೆ.

ಹೊಸ ಬಜಾಜ್ ಪಲ್ಸರ್ RS200 ಮೋಟಾರ್‌ಸೈಕಲ್ ಫ್ಯೂಯಲ್-ಇಂಜೆಕ್ಟೆಡ್, ಸಿಂಗಲ್-ಸ್ಪಾರ್ಕ್, 4-ವಾಲ್ವ್ 199.5cc BSVI ಎಂಜಿನ್‌ ಹೊಂದಿದೆ. ಪ್ರಭಾವಶಾಲಿ 24.5 PS ಪವರ್ ಮತ್ತು 18.7 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದಲ್ಲದೆ, ಸುಧಾರಿತ ಲಿಕ್ವಿಡ್ ಕೂಲಿಂಗ್ ಸಿಸ್ಟಮ್ ತೀವ್ರ ಪರಿಸ್ಥಿತಿಗಳಲ್ಲಿಯೂ ಸಹ ಸ್ಥಿರವಾದ ಪರ್ಫಾಮೆನ್ಸ್ ಖಚಿತಪಡಿಸುತ್ತದೆ ಎಂದು ಬಜಾಜ್ ಹೇಳಿದೆ.

ಎಥೆನಾಲ್ ಚಾಲಿತ ಬೈಕುಗಳು: 2025ರ ಆಟೋ ಎಕ್ಸ್‌ಪೋದಲ್ಲಿ ಎಥೆನಾಲ್ ಚಾಲಿತ ಬೈಕುಗಳು ಬಜಾಜ್‌ನ ಪ್ರದರ್ಶನದ ಮತ್ತೊಂದು ಪ್ರಮುಖ ಅಂಶವಾಗಿದೆ. ಹಿಂದಿನ ಆಟೋ ಎಕ್ಸ್‌ಪೋದಲ್ಲಿ ಬಜಾಜ್ E60-E85 ಎಥೆನಾಲ್ ಮಿಶ್ರಣಗಳೊಂದಿಗೆ ಪಲ್ಸರ್ NS160 ಬೈಕ್ ಪ್ರದರ್ಶಿಸಿತು. ಈ ವರ್ಷ ಇದೇ ರೀತಿಯ ತಂತ್ರಜ್ಞಾನವನ್ನು ಹೊಂದಿರುವ ಹೆಚ್ಚಿನ ಮಾದರಿಗಳನ್ನು ನಿರೀಕ್ಷಿಸಬಹುದು. ಹೆಚ್ಚುವರಿಯಾಗಿ, ಈವೆಂಟ್‌ನಲ್ಲಿ ಪರಿಚಯಿಸಲಾದ ಫ್ರೀಡಮ್ 125 CNG ಬೈಕಿನ ಹೊಸ ರೂಪಾಂತರವಿರಬಹುದು.

ಇನ್ನು ಬಜಾಜ್ ಆಟೋ ಕಂಪನಿಯು ಭಾರತದಲ್ಲಿ ಹೊಸ ಮಾದರಿಗಳೊಂದಿಗೆ ಪ್ರತಿಸ್ಪರ್ಧಿ ಕಂಪನಿಗಳಿಗೆ ನಡುಕ ಹುಟ್ಟಿಸುತ್ತಿದೆ. ಏಕೆಂದರೆ ಅಗ್ಗದ ಬೆಲೆಯಲ್ಲಿ ಈಗಾಗಲೇ ಸಿಎನ್‌ಜಿ ಬೈಕ್ ಪರಿಚಯಿಸಿದ್ದು, ಇದು ಒಂದು ಕೆ.ಜಿ ಸಿಎನ್‌ಜಿಗೆ 100 ಕಿ.ಮೀ ಮೈಲೇಜ್ ನೀಡುತ್ತದೆ. ಪೆಟ್ರೋಲ್ ಬಂಕ್‌ಗಳಂತೆ ಸಿಎನ್‌ಜಿ ಬಂಕ್‌ಗಳು ಲಭ್ಯವಾದಲ್ಲಿ ಹೊಸ ಫ್ರೀಡಂ ಸಿಎನ್‌ಜಿ ಬೈಕ್ ಮಾರಟವು ಗಗನಕ್ಕೇರಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, January 16, 2025, 18:07 [IST]
English summary
Auto expo 2025 bajaj electric ethanol vehicles details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+