ಬಜಾಜ್ ಚೇತಕ್ ಇವಿಗೆ ಶುರುವಾಯ್ತು ನಡುಕ... ಸುಜುಕಿ ಆಕ್ಸಿಸ್ ಇವಿ ಬಿಡುಗಡೆಗೆ ಸಜ್ಜು: ಯಾವುದು ಬೆಸ್ಟ್?
ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಪ್ರಮುಖ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಪೈಪೋಟಿಯೊಂದಿಗೆ ತಮ್ಮ ಇವಿಗಳನ್ನು ಬಿಡುಗಡೆ ಮಾಡುತ್ತಿವೆ. ಬಜಾಜ್ ತನ್ನ ಚೇತಕ್ ಇವಿಯೊಂದಿಗೆ ಭಾರತದಲ್ಲಿ ಸದ್ಯ ಹೆಚ್ಚು ಬೇಡಿಕೆ ಪಡೆದುಕೊಂಡಿದ್ದರೆ, ಸುಜುಕಿ ಕಂಪನಿಯು ತನ್ನ ಆಕ್ಸಿಸ್ ಇವಿ ಬಿಡುಗಡೆಯೊಂದಿಗೆ ಚೇತಕ್ ಇವಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಇ-ಆಕ್ಸಿಸ್ ಬಿಡುಗಡೆಯಾಗದಿದ್ದರು ಅದರ ಪ್ರಮುಖ ವಿಶೇಷತೆಗಳು ಈಗಾಗಲೇ ಬಹಿರಂಗವಾಗಿವೆ. ಸುಜುಕಿ ಇ-ಆಕ್ಸೆಸ್ ಮತ್ತು ಬಜಾಜ್ ಚೇತಕ್ 3001 ಎರಡು ಸ್ಕೂಟರ್ಗಳ ವೈಶಿಷ್ಟ್ಯಗಳು, ಬೆಲೆ ಮತ್ತು ಪರ್ಫಾಮೆನ್ಸ್ ಕುರಿತು ಮಾಹಿತಿ ಇಲ್ಲಿದೆ.
ಸುಜುಕಿ ಇ-ಆಕ್ಸೆಸ್ vs ಬಜಾಜ್ ಚೇತಕ್ 3001: ಯಾವುದು ಉತ್ತಮ?
ಸುಜುಕಿ ಇ-ಆಕ್ಸೆಸ್, 3 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿದ್ದು, 95 ಕಿ.ಮೀ ರೇಂಜ್ ನೀಡುತ್ತದೆ. ಇ ಆಕ್ಸೆಸ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ. ವೇಗದ ಚಾರ್ಜರ್‌ನಲ್ಲಿ 2 ಗಂಟೆ 45 ನಿಮಿಷಗಳಲ್ಲಿ ಪೂರ್ಣ ಚಾರ್ಜ್ ಹಾಗೂ ಪ್ರಮಾಣಿತ ಚಾರ್ಜ್ ಸುಮಾರು 6 ಗಂಟೆ 42 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಟಾಪ್ ಸ್ಪೀಡ್ ವಿಷಯದಲ್ಲಿ ಚೇತಕ್ 3001 ಇವಿಯನ್ನು ಸುಜುಕಿ ಇ-ಆಕ್ಸಿಸ್ ಹಿಂದಿಕ್ಕುತ್ತದೆ.

ಬಜಾಜ್ ಚೇತಕ್ 3001 ಇವಿ, 3 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿದ್ದು, 127 ಕಿ.ಮೀ ರೇಂಜ್ ನೀಡುತ್ತದೆ. 63 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಚೇತಕ್ ಇವಿ, ಸ್ಟ್ಯಾಂಡರ್ಡ್ 750 ವ್ಯಾಟ್ ಚಾರ್ಜರ್ ಅನ್ನು ಬಳಸಿಕೊಂಡು ಸುಮಾರು 3 ಗಂಟೆ 50 ನಿಮಿಷಗಳಲ್ಲಿ ಶೇ 80 ವರೆಗೆ ಚಾರ್ಜ್ ಆಗುತ್ತದೆ. ಹಾಗೆಯೇ ಇದು ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಹೊಂದಿಲ್ಲ.
ಮೋಟಾರ್ ವಿಷಯಕ್ಕೆ ಬಂದರೆ ಸುಜುಕಿ ಇ-ಆಕ್ಸೆಸ್ ಸ್ಕೂಟರ್ 3.07kW ಎಲೆಕ್ಟ್ರಿಕ್ ಮೋಟರ್ನಿಂದ ಚಾಲಿತವಾಗಿದ್ದು, ಬಜಾಜ್ ಚೇತಕ್ 3001, 3kW ಎಲೆಕ್ಟ್ರಿಕ್ ಮೋಟರ್ ಹೊಂದಿದೆ. ಸುಜುಕಿ ಇ-ಆಕ್ಸೆಸ್ ಮತ್ತು ಬಜಾಜ್ ಚೇತಕ್ 3001 ಎರಡೂ ಸ್ಕೂಟರ್ಗಳು ಆಕರ್ಷಕ ವಿನ್ಯಾಸ ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಬೆಲೆಯ ವಿಷಯಕ್ಕೆ ಬಂದರೆ, ಬಜಾಜ್ ಚೇತಕ್ 3001 ಇವಿ ಸ್ಕೂಟರ್ 1 ಲಕ್ಷ ರೂ.ಗಿಂತ ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸುಜುಕಿ ಇ-ಆಕ್ಸೆಸ್ ನ ಅಂತಿಮ ಬೆಲೆಯನ್ನು ಘೋಷಿಸದಿದ್ದರೂ, ಮೂಲಗಳ ಪ್ರಕಾರ ಇದು 1.10 ಲಕ್ಷ ರೂ.ಗಳಿಂದ 1.25 ಲಕ್ಷ ರೂ.ಗಳವರೆಗೆ (ಎಕ್ಸ್ ಶೋರೂಂ) ಇರಬಹುದು ಎಂದು ಅಂದಾಜಿಸಲಾಗಿದೆ.
ಒಂದು ವೇಳೆ ನಾವು ಅಂದಾಜಿಸಿದ ಬೆಲೆಗಿಂತ ಹೆಚ್ಚಿನ ಬೆಲೆಯನ್ನು ಸುಜುಕಿ ಇ-ಆಕ್ಸಿಸ್ ಹೊಂದಿದ್ದರೆ, ಈಗಾಗಲೇ ಬಜಾಜ್‌ನ ಹೆಚ್ಚು ಕೈಗೆಟುಕುವ ಸ್ಕೂಟರ್‌ಗೆ ಆಕರ್ಷಿತರಾಗಿರುವ ಬಜೆಟ್ ಪ್ರಜ್ಞೆಯುಳ್ಳ ಗ್ರಾಹಕರನ್ನು ಆಕರ್ಷಿಸುವುದು ಸುಜುಕಿಗೆ ಕಷ್ಟವಾಗಬಹುದು. ಹಾಗಾಗಿ ಸುಜುಕಿ ಈ ವಿಷಯದಲ್ಲಿ ತುಸು ಯೋಚಿಸಿ ಬೆಲೆಯನ್ನು ನಿರ್ಧರಿಸಬೇಕಾಗುತ್ತದೆ.

ಫೀಚರ್ಸ್: ಸುಜುಕಿ ಇ-ಆಕ್ಸೆಸ್ ಮತ್ತು ಬಜಾಜ್ ಚೇತಕ್ 3001 ಎರಡೂ ಸ್ಕೂಟರ್ಗಳು ಡಿಜಿಟಲ್ ಡಿಸ್ಪ್ಲೇ, ಮೊಬೈಲ್ ಕನೆಕ್ಟಿವಿಟಿ, ಮತ್ತು ಅಲಾಯ್ ವೀಲ್ಗಳಂತಹ ವೈಶಿಷ್ಟ್ಯಗಳನ್ನು ಹೊಂದಿವೆ. ಬಜಾಜ್ ಚೇತಕ್ 3001, ಸುಜುಕಿ ಇ-ಆಕ್ಸೆಸ್ಗಿಂತ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಬಜಾಜ್ ಚೇತಕ್ 3001, ರಿವರ್ಸ್ ಮೋಡ್ ಮತ್ತು ನ್ಯಾವಿಗೇಷನ್‌ನಂತಹ ಹೆಚ್ಚುವರಿ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಒಟ್ಟಾರೆಯಾಗಿ, ಸುಜುಕಿ ಇ-ಆಕ್ಸೆಸ್ ಮತ್ತು ಬಜಾಜ್ ಚೇತಕ್ 3001 ಎರಡೂ ನಗರ ಪ್ರದೇಶಗಳಲ್ಲಿ ಓಡಾಡಲು ಸೂಕ್ತವಾಗಿವೆ. ಬೆಲೆ, ಪರ್ಫಾಮೆನ್ಸ್ ಮತ್ತು ವೈಶಿಷ್ಟ್ಯಗಳ ಆಧಾರದ ಮೇಲೆ ಗ್ರಾಹಕರು ತಮ್ಮ ಆಯ್ಕೆಯನ್ನು ನಿರ್ಧರಿಸಬಹುದು. ಇವಿ ವಿಭಾಗದಲ್ಲಿ ಸ್ಪರ್ಧೆ ಹೆಚ್ಚಾಗುತ್ತಿದ್ದಂತೆ, ಭಾರತೀಯ ಖರೀದಿದಾರರಿಗೆ ಉತ್ತಮ ತಂತ್ರಜ್ಞಾನದೊಂದಿಗೆ ಹೆಚ್ಚಿನ ಆಯ್ಕೆಗಳು ಹೆಚ್ಚುಗುತ್ತಿರುವುದಂತು ಸತ್ಯ.


Click it and Unblock the Notifications