Bajaj: ಬಜಾಜ್‌ನಿಂದ ಹೊಸ ಸ್ಟೈಲಿಷ್ ಮೋಟಾರ್ ಸೈಕಲ್ ಕಡಿಮೆ ಬೆಲೆಯಲ್ಲಿ ಬಿಡುಗಡೆಗೆ ಸಜ್ಜು!
ಬಜಾಜ್ (Bajaj) ಕಂಪನಿಯು ತನ್ನ ಬಹುನಿರೀಕ್ಷಿತ ಹೊಸ ಮೋಟಾರ್‌ಸೈಕಲ್ ಅನ್ನು ಪರಿಚಯಿಸಲು ಸಜ್ಜಾಗುತ್ತಿದೆ. ಇದು ತನ್ನ ಜನಪ್ರಿಯ RS ಶ್ರೇಣಿಯ ಮೋಟಾರ್‌ಸೈಕಲ್ ಆಗಿರುವ ಸಾಧ್ಯತೆಯಿದೆ. ಇತ್ತೀಚೆಗೆ ಕಂಪನಿಯು ಇದರ ಹೊಸ ಮಸುಕಿನ ಟೀಸರ್‌ನ ಜಲಕ್ ನೀಡಿದ್ದು, ಇದರಲ್ಲಿ "ಅಭಿನಂದನೆಗಳು ಮ್ಯಾನಿಯಾಕ್ಸ್! ನಾವು ಬಹುತೇಕ ತಲುಪಿದ್ದೇವೆ! 0X-01-2025!" ಎಂಬ ಶೀರ್ಷಿಕೆಯನ್ನು ಕೊಟ್ಟಿದೆ. ಈ ಮೂಲಕ ಮೋಟಾರ್‌ಸೈಕಲ್ ಈ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಜನವರಿ 6 ರಿಂದ 9 ರ ನಡುವೆ ಬರುವ ಈ ದೊಡ್ಡ ಟೀಸರ್ ಬರುವ ಸಾಧ್ಯತೆಯಿದೆ.
ಬಜಾಜ್ ಕಂಪನಿಯು ಈ ಮೋಟಾರ್‌ಸೈಕಲ್ ಹೆಸರನ್ನು ಸ್ಪಷ್ಟವಾಗಿ ಬಹಿರಂಗಪಡಿಸದಿದ್ದರೂ, ಇದು ಪಲ್ಸರ್ RS 160 ಆಗಿರಬಹುದು ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿವೆ. ಆದರೆ ಮತ್ತೊಂದೆಡೆ ಕಂಪನಿ RS 200 ಅನ್ನು ಅಪ್‌ಡೇಟ್ ಮಾಡಿ ಬಿಡುಗಡೆ ಮಾಡುವ ಸಾಧ್ಯತೆ ಕೂಡ ಇದೆ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ. ಇದಕ್ಕೆಲ್ಲ ಉತ್ತರವು ಜನವರಿ 6 ರಿಂದ 9 ರ ನಡುವೆ ಸಿಗಲಿದೆ.

ವೈರಲ್ ಆಗಿರುವ ಚಿತ್ರಗಳ ಪ್ರಕಾರ ಸಣ್ಣ ಹಿಂಭಾಗದ ಟೈರ್ ಅನ್ನು ನೋಡಿದ್ರೆ, ಇದು RS 160 ಆಗಿರಬಹುದು ಎಂದು ಸೂಚಿಸುತ್ತಿದೆ. ಇದು ದೃಢಪಟ್ಟರೆ ಕಡಿಮೆ ಬೆಲೆಗೆ ಆಕರ್ಷಕ RS160 ಸ್ಪೋರ್ಟಿ ಬೈಕ್ ಅನ್ನು ಪಡೆಯುವ ಅವಕಾಶ ಗ್ರಾಹಕರಿಗೆ ಸಿಗಬಹುದು. ಜೊತೆಗೆ ಬಜಾಜ್‌ನ RS ಸಿರೀಸ್‌ಗೆ ಬೇಡಿಕೆ ಹೆಚ್ಚಾಗುವ ಜೊತೆಗೆ ಉತ್ತಮ ಮಾರಾಟ ಕಾಣುವ ಸಾಧ್ಯತೆಯೂ ಇದೆ.
ನಮ್ಮ ಪ್ರಕಾರ ಇದು ನಿಜವಾಗಿಯೂ ಪಲ್ಸರ್ RS160 ಆಗಿದ್ದರೆ, 164.82 ಸಿಸಿ ಎಂಜಿನ್ ಜೊತೆಗೆ 16 ಬಿಹೆಚ್ ಪವರ್ ಮತ್ತು 14.65 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಬಹುದು. ಮುಂಬರುವ RS ಬೈಕ್ ಪ್ರೊಜೆಕ್ಟರ್ ಹೆಡ್ ಲೈಟ್ ಮತ್ತು ಎಲ್‌ಇಡಿ ಡಿಆರ್‌ಎಲ್‌ಗಳನ್ನು ಒಳಗೊಂಡಂತೆ ಆರ್‌ಎಸ್ 200 ನ ಮುಂಭಾಗದ ಸ್ಟೈಲಿಂಗ್ ಇರಬಹುದು.

ಹಾಗೆಯೇ ಇದು 160 ಸಿಸಿ ಸೆಗ್ಮೆಂಟಿನಲ್ಲಿ ಬಂದರೆ ಬಜಾಜ್‌ನ ಜನಪ್ರಿಯ ಮಾದರಿ ಪಲ್ಸರ್ N160 ಬೈಕ್‌ನಿಂದಲು ಹಲವಾರು ವಿನ್ಯಾಸ ಅಂಶಗಳನ್ನು ಇದರಲ್ಲಿ ಬಳಸಿಕೊಳ್ಳುವ ಸಾಧ್ಯತೆ ಕೂಡ ಇದೆ. ಏಕೆಂದರೆ ಇದು ವೆಚ್ಚ-ಪರಿಣಾಮಕಾರಿತ್ವವನ್ನು ಖಚಿತಪಡಿಸುವುದರ ಜೊತೆಗೆ ಪ್ರಮುಖ ಹಂಚಿಕೆಯ ಅಂಶಗಳನ್ನು ಹೊಸದಾಗಿ ತಯಾರಿಸುವ ಅವಶ್ಯಕತೆ ಇರುವುದಿಲ್ಲ.
ಬಜಾಜ್ ಕಂಪನಿಯು RS160 ಬೈಕಿನಲ್ಲಿ ಡಿಜಿಟಲ್ ಕನ್ಸೋಲ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ ಬ್ಲೂಟೂತ್ ನ್ಯಾವಿಗೇಷನ್, ಸಂಪರ್ಕಿತ ಸವಾರರಿಗೆ ಕಾಲ್ ಮತ್ತು ಮೆಸೇಜ್ ವಾರ್ನಿಂಗ್, ಸವಾರಿ ದಕ್ಷತೆಯನ್ನು ಉತ್ತಮಗೊಳಿಸಲು ಫ್ಯೂಯಲ್ ಇಂಡಿಕೇಷನ್ ಸೇರಿದಂತೆ ಹೆಚ್ಚುವರಿ ಅನುಕೂಲಕ್ಕಾಗಿ ಸ್ಮಾರ್ಟ್‌ಫೋನ್ ನೆಟ್ವರ್ಕ್ ಶ್ರೇಣಿಯ ಡಿಸ್ಪ್ಲೇ ಕೂಡ ನೀಡಬಹುದು.
ಈ ಮೇಲೆ ತಿಳಿಸಿದ ಫೀಚರ್‌ಗಳನ್ನು RS160 ಬೈಕಿನಲ್ಲಿ ನೀಡಿದಂತಾದರೆ 160 ಸಿಸಿ ಸೆಗ್ಮೆಂಟಿನಲ್ಲಿ ಈ ಬೈಕ್ ಬೆಸ್ಟ್ ಆಯ್ಕೆಯಾಗಲಿದೆ. ಅಲ್ಲದೇ ಬಿಡುಗಡೆಯಾದ ನಂತರ, ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಪ್ರಬಲ ಯಮಹಾ ಆರ್15 ಗೆ ಪೈಪೋಟಿ ನೀಡಲಿದೆ. ಈ ಹೊಸ ಬೈಕ್ ಯಾವುದು ಎಂಬ ಕುತೂಹಲ ನಿಮಗೂ ಇದ್ದರೇ ಅದರ ಬಗ್ಗೆ ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








