ನಿನ್ನೆಯಷ್ಟೆ ಬಿಡುಗಡೆ... ಕೇವಲ 1 ಲಕ್ಷ 28 ಸಾವಿರಕ್ಕೆ ಯುವಕರ ಹಾಟ್ ಫೇವರೆಟ್ ಪಲ್ಸರ್ 220F
ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಲಿಮಿಟೆಡ್, ಇಂದು 2026 ಪಲ್ಸರ್ 220F ಅನ್ನು ನಿನ್ನೆಯಷ್ಟೆ ಬಿಡುಗಡೆ ಮಾಡಿದೆ. ಇದು ಭಾರತದ ಅತ್ಯಂತ ಐಕಾನಿಕ್ ಪರ್ಫಾರ್ಮೆನ್ಸ್ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದ್ದು, ತನ್ನ ಪರಂಪರೆಯನ್ನು ಮುಂದುವರೆಸಲು ಹೊಸ ನವೀಕರಣಗಳನ್ನು ಪಡೆದುಕೊಂಡು ಮತ್ತೆ ಬಿಡುಗಡೆಯಾಗಿದೆ. ಕೇವಲ ರೂ. 1.28 ಲಕ್ಷ ಬೆಲೆಯ ಈ ಮೋಟಾರ್‌ಸೈಕಲ್ ಭಾರತದಾದ್ಯಂತ ಬಜಾಜ್ ಆಟೋ ಡೀಲರ್‌ಶಿಪ್‌ಗಳಲ್ಲಿ ಈಗ ಖರೀದಿಗೆ ಲಭ್ಯವಿದೆ. ಏನೆಲ್ಲಾ ಅಪ್‌ಡೇಟ್‌ಗಳನ್ನು ಪಡೆದುಕೊಂಡು ಬಿಡುಗಡೆಯಾಗಿದೆ ಬನ್ನಿ ನೋಡೋಣ.
ತನ್ನ ದಿಟ್ಟ ಮತ್ತು ಸ್ಪೋರ್ಟಿ ಲುಕ್‌ಗೆ ಬದ್ಧವಾಗಿರುವ 2026 ಪಲ್ಸರ್ 220F ರಿಫ್ರೆಶ್ಡ್ ಗ್ರಾಫಿಕ್ಸ್ ಅನ್ನು ಹೊಂದಿದೆ. ಈಗ ನಾಲ್ಕು ಗಮನಾರ್ಹವಾದ ಹೊಸ ಬಣ್ಣ ಆಯ್ಕೆಗಳಾದ ಬ್ಲಾಕ್ ಚೆರ್ರಿ ರೆಡ್, ಬ್ಲಾಕ್ ಇಂಕ್ ಬ್ಲೂ, ಬ್ಲಾಕ್ ಕಾಪರ್ ಬೀಜ್ ಮತ್ತು ಗ್ರೀನ್ ಲೈಟ್ ಕಾಪರ್ ಬಣ್ಣಗಳಲ್ಲಿ ಲಭ್ಯವಿದೆ. ಹಾಗೆಯೇ ಹೊಸ LED ಬ್ಲಿಂಕರ್‌ಗಳು, ನಯವಾದ LED ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದ್ದು, ಇದರ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿವೆ.

ಬಿಡುಗಡೆಯಾದಾಗಿನಿಂದ, ಪಲ್ಸರ್ 220F ದೊಡ್ಡ ಹ್ಯಾಲೊಜೆನ್ ಇಂಡಿಕೇಟರ್ ಗಳನ್ನು ಹೊಂದಿತ್ತು, ಈಗ ಬಜಾಜ್ ಅಂತಿಮವಾಗಿ ಇವುಗಳನ್ನು ಸ್ಲೀಕರ್ - LED ಇಂಡಿಕೇಟರ್ ಗಳೊಂದಿಗೆ ಬದಲಾಯಿಸಿದೆ. ಉಳಿದಂತೆ ಅದೇ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಪ್ರಿಲೋಡ್ ಅಡ್ಜಸ್ಟಬಲ್ ಟ್ವಿನ್ ರಿಯರ್ ಶಾಕ್ ಅಬ್ಸಾರ್ಬರ್‌ಗಳೊಂದಿಗೆ ಜೋಡಿಸಲಾದ ಅದೇ ಸ್ಟೀಲ್ ಟ್ಯೂಬ್ ಫ್ರೇಮ್ ಅನ್ನು ಹೊಂದಿದೆ.
ಆತ್ಮವಿಶ್ವಾಸ ಮತ್ತು ಆಕರ್ಷಕ ಸವಾರಿ ಅನುಭವವನ್ನು ನೀಡಲು ನಿರ್ಮಿಸಲಾದ ಪಲ್ಸರ್ 220F, ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಕನ್ಸೋಲ್, ರೈಡ್ ಕನೆಕ್ಟ್ ಅಪ್ಲಿಕೇಶನ್ ಏಕೀಕರಣ, ಟರ್ನ್- ಬೈ -ಟರ್ನ್ ನ್ಯಾವಿಗೇಷನ್, ಸಿಂಗಲ್ - ಚಾನೆಲ್ ABS ನೊಂದಿಗೆ ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು ಮತ್ತು ಐದು - ಸ್ಪೋಕ್ ಅಲಾಯ್ ವೀಲ್‌ಗಳನ್ನು ಒಳಗೊಂಡಿರುವ ಸಮಗ್ರ ವೈಶಿಷ್ಟ್ಯಗಳ ಪ್ಯಾಕೇಜ್‌ನೊಂದಿಗೆ ಮುಂದುವರಿಯುತ್ತದೆ.

ಇತ್ತೀಚಿನ ನವೀಕರಣದೊಂದಿಗೆ ಬೈಕ್ ಹೊಸ ಬಣ್ಣಗಳ ಜೊತೆಗೆ ಕಾಸ್ಮೆಟಿಕ್ ಮತ್ತು ವೈಶಿಷ್ಟ್ಯದ ನವೀಕರಣಗಳ ಹೊರತಾಗಿ, ಮೋಟಾರ್‌ಸೈಕಲ್ ಯಾಂತ್ರಿಕವಾಗಿ ಯಾವುದೇ ಬದಲಾವಣೆ ಪಡೆಯದೆ ಅದೇ ಎಂಜಿನ್ ಜೊತೆಗೆ ಮುಂದುವರೆದಿದೆ. ಪಲ್ಸರ್ 220F ಸಾಬೀತಾಗಿರುವ ಅದೇ 220cc ಟ್ವಿನ್ ಸ್ಪಾರ್ಕ್ DTS-i, ಫ್ಯೂಲ್ - ಇಂಜೆಕ್ಟೆಡ್, ಆಯಿಲ್ - ಕೂಲ್ಡ್ ಸಿಂಗಲ್ - ಸಿಲಿಂಡರ್ ಎಂಜಿನ್ ಪಡೆದಿದೆ.
ಇದು 8,500 rpm ನಲ್ಲಿ 20.9 PS ಪವರ್ ನೀಡುತ್ತದೆ. ಪರ್ಫಾಮೆನ್ಸ್, ದಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಲವಾದ ಸಮತೋಲನವನ್ನು ನೀಡುತ್ತದೆ, ಇದು ಭಾರತೀಯ ಸವಾರರಲ್ಲಿ ದೀರ್ಘಕಾಲದ ನೆಚ್ಚಿನ ಮೋಟಾರ್‌ಸೈಕಲ್ ಆಗಿ ಜನಪ್ರಿಯತೆ ಪಡೆದಿದೆ. ಈ ಬಾರಿ ಹೊಸ ನವೀಕರಣಗಳೊಂದಿಗೆ ಪಲ್ಸರ್ F250 ಯಾವ ಮಟ್ಟಿಗೆ ಯುವಕರನ್ನು ಸೆಳೆಯಲಿದೆ ಕಾದುನೋಡಬೇಕಿದೆ.

ಪಲ್ಸರ್ 220F ಯಾವಾಗಲೂ ಬಜಾಜ್‌ನ ಬಲವಾದ ಉತ್ಪನ್ನವಾಗಿದ್ದು, ತನ್ನದೇ ಆದ ಅಭಿಮಾನಿಗಳನ್ನು ಹೊಂದಿದೆ. ಬ್ರ್ಯಾಂಡ್ ಅದನ್ನು ಬಜಾಜ್ ಪಲ್ಸರ್ F250 ನೊಂದಿಗೆ ಬದಲಾಯಿಸಲು ಪ್ರಯತ್ನಿಸಿತು, ಆದರೆ ಅಭಿಮಾನಿಗಳು ಐಕಾನಿಕ್ 220F ಅನ್ನು ಇಷ್ಟಪಡುತ್ತಾರೆ ಎಂಬುದನ್ನು ಅರಿತುಕೊಂಡಿದೆ. ಹಾಗಾಗಿಯೇ ಕಂಪನಿಯು ಬೈಕ್ ಅನ್ನು ಸ್ಥಗಿತಗೊಳಿಸಿದ ಕೆಲವೇ ತಿಂಗಳುಗಳಲ್ಲಿ ಮತ್ತೆ ಪರಿಚಯಿಸಿತು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








