Bajaj Pulsar N160: ಬಜಾಜ್ ಪಲ್ಸರ್ ಎನ್160 ಬೈಕ್‌ನ ಹೊಸ ವೇರಿಯೆಂಟ್ ಬಿಡುಗಡೆ.. ಬೆಲೆ ಇಷ್ಟೇನಾ, ವಿಶೇಷತೆಗಳೇನು?

ಬಜಾಜ್ ಪಲ್ಸರ್ (Bajaj Pulsar) ಯುವಕರ ನೆಚ್ಚಿನ ಬೈಕ್ ಆಗಿದ್ದು, ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತದೆ. ಸದ್ಯ ಬಜಾಜ್ ಕಂಪನಿಯು 'ಪಲ್ಸರ್ ಎನ್160' ಲೈನ್ಅಪ್‌ನ್ನು ವಿಸ್ತರಿಸಿದ್ದು, ಹೊಚ್ಚ ಹೊಸ ರೂಪಾಂತರವನ್ನು (ವೇರಿಯೆಂಟ್) ಬಿಡುಗಡೆಗೊಳಿಸಲಾಗಿದೆ. ಇದು ಬಜೆಟ್ ಬೆಲೆಯಲ್ಲಿಯೂ ಮಾರಾಟಕ್ಕೆ ಬಂದಿದ್ದು, ಸುರಕ್ಷತೆಗೂ ಹೆಸರುವಾಸಿಯಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಬಜಾಜ್ ಪಲ್ಸರ್ ಎನ್160 ಮೋಟಾರ್‌ಸೈಕಲ್‌ನ ನೂತನ ಸಿಂಗಲ್ ಸೀಟ್ - ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ರೂಪಾಂತರವನ್ನು ಪರಿಚಯಿಸಲಾಗಿದೆ. ಇದು ಅತಿ ಕಡಿಮೆ ಬೆಲೆಯನ್ನು ಹೊಂದಿದ್ದು, ಸಾಮಾನ್ಯ ಹಾಗೂ ಮಧ್ಯಮ ವರ್ಗದ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ಅದಕ್ಕೆ ತಕ್ಕಂತೆ ರೂ.1,25,722 (ಎಕ್ಸ್-ಶೋರೂಂ - ದೆಹಲಿ) ದರವನ್ನು ಪಡೆದಿದೆ. ಇದರೊಂದಿಗೆ ಸ್ಪ್ಲಿಟ್ ಸೀಟ್ & ಇನ್ವೆರ್ಟೆಡ್ ಫೋರ್ಕ್ ಎಂಬ ರೂಪಾಂತರಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.

Bajaj Pulsar N160 Single Seat Dual Channel ABS Variant Launched Rs 1 25 Lakh Price Details

ಬಜಾಜ್ ಪಲ್ಸರ್ ಎನ್160 ಮೋಟಾರ್‌ಸೈಕಲ್‌ನ ಹೊಸ ರೂಪಾಂತರದ ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿಲ್ಲ. ಅದು ಸ್ಟ್ಯಾಂಡರ್ಡ್ 'ಪಲ್ಸರ್ ಎನ್160'ನಂತೆಯೇ ಇದೆ. ಆದರೂ ಸಿಂಗಲ್-ಸೀಟ್ ಹೊಂದಿದ್ದು, ಸವಾರರು ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣಿಸಬಹುದು. ಜೊತೆಗೆ ಸ್ಪ್ಲಿಟ್ ರೇರ್ ಗ್ರಾಬ್ ರೈಲ್‌ಗಳ ಬದಲಾಗಿ ಸಿಂಗಲ್-ಪೀಸ್ ಗ್ರಾಬ್ ರೈಲ್‌ನ್ನು ಹೊಂದಿದ್ದು, ಆಕರ್ಷಕವಾದ ಬಣ್ಣಗಳೊಂದಿಗೂ ಲಭ್ಯವಿದೆ.

ಈ ಬೈಕ್‌ನ ಪವರ್‌ಟ್ರೇನ್‌ನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. 164.82 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್‌ ಪಡೆದಿದ್ದು, 8,750 ಆರ್‌ಪಿಎಂನಲ್ಲಿ 16 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6,750 ಆರ್‌ಪಿಎಂನಲ್ಲಿ 14.65 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 59 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ.

ಬಜಾಜ್ ಪಲ್ಸರ್ ಎನ್160 ಮೋಟಾರ್‌ಸೈಕಲ್‌ನ ಹೊಸ ಸಿಂಗಲ್ ಸೀಟ್ - ಡುಯಲ್ ಚಾನೆಲ್ ಎಬಿಎಸ್ ರೂಪಾಂತರವು ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಯುಎಸ್‌‍ಬಿ ಚಾರ್ಜಿಂಗ್ ಪೋರ್ಟ್‌ನ್ನು ಒಳಗೊಂಡಿದೆ. ಇದು 154 ಕೆಜಿ ತೂಕವಿದ್ದು, 14-ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ.

ನೂತನ ರೂಪಾಂತರವು 37 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿದೆ. ಇದರೊಂದಿಗೆ ಮುಂಭಾಗ (ಫ್ರಂಟ್) 300 ಎಂಎಂ ಹಾಗೂ ಹಿಂಭಾಗ (ರೇರ್) 280 ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. 17-ಇಂಚಿನ ಅಲಾಯ್ ವೀಲ್‌ಗಳು ಹಾಗೂ ಟ್ಯೂಬ್‌ಲೆಸ್ ಟೈರ್‌ಗಳನ್ನು ಪಡೆದಿದೆ.

ಎಬಿಎಸ್‌ನ ಉಪಯೋಗಗಳೇನು:

ಇದು ಮೋಟಾರ್‌ಸೈಕಲ್‌ಗಳಲ್ಲಿ ಬಳಕೆ ಮಾಡುವ ಪ್ರಮುಖವಾದ ಸುರಕ್ಷತಾ ವೈಶಿಷ್ಟ್ಯವಾಗಿದೆ. ಬೈಕ್ ಓಡಿಸುವಾಗ ಇದ್ದಕ್ಕಿಂದಂತೆ ಬ್ರೇಕ್ ಹಾಕಿದಾಗ ವೀಲ್ ಲಾಕ್ ಆಗುವುದನ್ನು ತಪ್ಪಿಸುತ್ತದೆ. ಜೊತೆಗೆ ಮೋಟಾರ್‌ಸೈಕಲ್‌ ಮೇಲೆ ಸಂಪೂರ್ಣವಾದ ಹಿಡಿತ ಸಾಧಿಸಲು ನೆರವಾಗಲಿದೆ. ಸ್ಕಿಡ್ ಆಗುವುದನ್ನು ತಪ್ಪಿಸಿತ್ತದೆ. ಇದರೊಂದಿಗೆ ಅಪಘಾತದ ಸಾಧ್ಯತೆಯನ್ನು 35 ರಿಂದ 45% ಕಡಿಮೆ ಮಾಡಲಿದೆ.

ಇನ್ನು, ಬಜಾಜ್ ಪಲ್ಸರ್ ಎನ್160 ಮೋಟಾರ್‌ಸೈಕಲ್‌ನ ನೂತನ ರೂಪಾಂತರ ಮಾರಾಟಕ್ಕೆ ಬಂದಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದಕ್ಕೆ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ, ಹೀರೋ ಎಕ್ಸ್‌ಟ್ರೀಮ್ 160ಆರ್ 4ವಿ, ಸುಜುಕಿ ಗಿಕ್ಸರ್ 155, ಯಮಹಾ ಎಫ್‌ಜಡ್-ಎಸ್ ಎಫ್ಐ ವಿ4 ಬೈಕ್‌ಗಳು ಪ್ರಬಲವಾದ ಪ್ರತಿಸ್ಪರ್ಧಿಯಾಗಿವೆ. ಮುಂಬರುವ ದಿನಗಳಲ್ಲಿ ಹೊಸ ರೂಪಾಂತರಕ್ಕೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Friday, July 11, 2025, 12:49 [IST]
English summary
Bajaj pulsar n160 single seat dual channel abs variant launched rs 1 25 lakh price details
Read more on bajaj auto india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+