90 ಕಿಮೀ ಮೈಲೇಜ್! 70,000 ರೂಪಾಯಿ.. ಬಡವರ ಬಂಡಿ, Bajaj Platina 100ಗೆ ಬದಲಿ ಆಯ್ಕೆಯಾಬಲ್ಲ ಬೈಕ್‌ಗಳಿವು!

ಬಜಾಜ್ ಪ್ಲಾಟಿನಾ 100 (Bajaj Platina 100) ಪ್ರಮುಖ ಬೈಕ್ ಆಗಿದ್ದು, ದಿನಬಳಕೆಗೆ ಹೆಚ್ಚು ಸೂಕ್ತವಾಗಿದೆ. ರೂ.70,611 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 102-ಸಿಸಿ ಸಾಮರ್ಥ್ಯದ ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 75 ರಿಂದ 90 ಕಿ.ಮೀ ವರೆಗೆ ಮೈಲೇಜ್ ನೀಡಬಲ್ಲದು. ಬ್ಲ್ಯಾಕ್ & ಬ್ಲೂ, ಬ್ಲ್ಯಾಕ್ & ಗೋಲ್ಡ್, ಬ್ಲ್ಯಾಕ್ & ಸಿಲ್ವರ್ ಮತ್ತು ಬ್ಲ್ಯಾಕ್ & ರೆಡ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯಲಿದೆ. ಅನಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಎಲೆಕ್ಟ್ರಿಕ್ ಸ್ಟಾರ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. ನೀವು ಇದೇ 'ಪ್ಲಾಟಿನಾ 100'ಗೆ ಪರ್ಯಾಯವಾಗಿ ಈ 3 ಮೋಟಾರ್‌ಸೈಕಲ್‌ಗಳನ್ನು ಖರೀದಿ ಮಾಡಬಹುದು. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಹೋಂಡಾ ಶೈನ್ 100 ಡಿಎಕ್ಸ್ (Honda Shine 100 DX):

ಇದು ಜನಪ್ರಿಯ ಬೈಕ್ ಆಗಿದ್ದು, ವಿಶೇಷವಾಗಿ ಯುವಕರನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಬಜಾಜ್ ಪ್ಲಾಟಿನಾ 100ಗೆ ಅತ್ಯುತ್ತಮವಾದ ಬದಲಿ ಆಯ್ಕೆಯಾಗಲಿದೆ. ರೂ.74,959 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್ ಹಾಗೂ ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ.

Best 3 Alternative bike for Bajaj Platina 100 Honda Shine 100 DX Hero Splendor Plus Tvs Radeon

ಈ ಮೋಟಾರ್‌ಸೈಕಲ್‌ 98.98 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಮತ್ತು 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 65 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 168 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,245 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಬರೋಬ್ಬರಿ 103 ಕೆಜಿ ತೂಕವಿದೆ.

ನೂತನ 'ಶೈನ್ 100 ಡಿಎಕ್ಸ್' ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ & ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫ್ರಂಟ್ ಪೋರ್ಕ್ಸ್ ಮತ್ತು ಹಿಂಭಾಗ (ರೇರ್) 5-ಸ್ಟೆಪ್ ಅಡ್ಜಸ್ಟೇಬಲ್ ಶಾಕ್ ಅಬ್ಸಾರ್ಬರ್‌ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಜೊತೆಗೆ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

Best 3 Alternative bike for Bajaj Platina 100 Honda Shine 100 DX Hero Splendor Plus Tvs Radeon

ಹೀರೋ ಸ್ಪ್ಲೆಂಡರ್ ಪ್ಲಸ್ (Hero Splendor Plus):

ಇದೊಂದು ವಿಶ್ವಾಸಾರ್ಹ ಬೈಕ್ ಎಂದೇ ಹೆಸರುವಾಸಿಯಾಗಿದೆ. ದೇಶೀಯ ಗ್ರಾಹಕರ ಮನದಲ್ಲಿ ತನಗಾಗಿ ಜಾಗವೊಂದನ್ನು ಮಾಡಿಕೊಂಡಿದ್ದು, ಬಜಾಜ್ ಪ್ಲಾಟಿನಾ 100ಗೆ ಪರ್ಯಾಯವಾಗಲಿದೆ. ರೂ.79,000 ರಿಂದ ರೂ.85,000 (ಎಕ್ಸ್-ಶೋರೂಂ) ಬೆಲೆಯನ್ನು ಪಡೆದಿದೆ. ಬ್ಲ್ಯಾಕ್ ರೆಡ್ ಪರ್ಪಲ್, ಸ್ಪೋರ್ಟ್ಸ್ ರೆಡ್ ಬ್ಲ್ಯಾಕ್ ಮತ್ತು ಫೋರ್ಸ್ ಸಿಲ್ವರ್ ಸೇರಿದಂತೆ ವಿವಿಧ ಬಣ್ಣಗಳನ್ನು ಒಳಗೊಂಡಿದೆ.

ಈ ಮೋಟಾರ್‌ಸೈಕಲ್‌ 97-ಸಿಸಿ ಪೆಟ್ರೋಲ್ ಎಂಜಿನ್‌ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 70 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ & ಹಿಂಭಾಗ (ರೇರ್) ಟ್ವಿನ್-ಪ್ರಿಲೋಡ್ ಅಡ್ಜಸ್ಟಬಲ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ತನ್ನದಾಗಿಸಿಕೊಂಡಿದೆ. ಡಿಸ್ಕ್ ಹಾಗೂ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

Best 3 Alternative bike for Bajaj Platina 100 Honda Shine 100 DX Hero Splendor Plus Tvs Radeon

ಟಿವಿಎಸ್ ರೇಡಿಯನ್ (Tvs Radeon):

ಇದು ನೋಡಲು ತುಂಬಾ ಚೆನ್ನಾಗಿದ್ದು, ಆರಾಮದಾಯಕವಾದ ಪ್ರಯಾಣವನ್ನು ಒದಗಿಸಲಿದೆ. ಬಜಾಜ್ ಪ್ಲಾಟಿನಾ 100ಗೆ ಬದಲಿ ಆಯ್ಕೆಯಾಗಲಿದೆ. ರೂ.73,518 ರಿಂದ ರೂ. 86,845 (ಎಕ್ಸ್-ಶೋರೂಂ) ದರವನ್ನು ಹೊಂದಿದೆ. ಮೆಟಲ್ ಬ್ಲ್ಯಾಕ್, ಆಲ್ ಬ್ಲ್ಯಾಕ್, ಟೈಟಾನಿಯಂ ಗ್ರೇ, ರಾಯಲ್ ಪರ್ಪಲ್ ಮತ್ತು ಸ್ಟಾರ್‌ಲೈಟ್ ಬ್ಲ್ಯೂ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.

Best 3 Alternative bike for Bajaj Platina 100 Honda Shine 100 DX Hero Splendor Plus Tvs Radeon

ಹೊಸ ರೇಡಿಯನ್ 109.7 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹಾಗೂ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 73 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಎಲೆಕ್ಟ್ರಿಕ್ ಸೆಲ್ಫ್-ಸ್ಟಾರ್ಟ್ ಮತ್ತು ಸೈಡ್ ಸ್ಟ್ಯಾಂಡ್ ಇಂಡಿಕೇಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

Article Published On: Wednesday, September 3, 2025, 8:22 [IST]
English summary
Best 3 alternative bike for bajaj platina 100 honda shine 100 dx hero splendor plus tvs radeon
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+