65 ಕಿ.ಮೀವರೆಗೆ ಮೈಲೇಜ್.. ರೂ.89,999, ನಿನ್ನೆ ಬಿಡುಗಡೆ.. ಹೊಸ Hero Glamour X 125ಗೆ 3 ಬದಲಿ ಬೈಕ್‌ಗಳಿವು!
ಹೊಚ್ಚ ಹೊಸ ಹೀರೋ ಗ್ಲಾಮರ್ ಎಕ್ಸ್ 125 (Hero Glamour X 125) ಬೈಕ್‌ನ್ನು ಮಂಗಳವಾರ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ಇದು ಡ್ರಮ್ ಹಾಗೂ ಡಿಸ್ಕ್ ಎಂಬ ಎರಡು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಸಿಗಲಿದ್ದು,ರೂ.89,999 ರಿಂದ ರೂ.99,999 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 124.7 ಸಿಸಿ ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 65 ಕಿ.ಮೀವರೆಗೆ ಮೈಲೇಜ್ ನೀಡಬಲ್ಲದು ಎಂದು ಅಂದಾಜಿಸಲಾಗಿದೆ. ಕಲರ್ ಟಿಎಫ್‌ಟಿ ಕ್ಲಸ್ಟರ್ ಹಾಗೂ ಕ್ರೂಸ್ ಕಂಟ್ರೋಲ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಇದೇ 'ಗ್ಲಾಮರ್ ಎಕ್ಸ್ 125'ಗೆ ಈ ಮೂರು ಮೋಟಾರ್‌ಸೈಕಲ್‌ಗಳು ಪರ್ಯಾಯ ಆಯ್ಕೆಯಾಗಲಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಟಿವಿಎಸ್ ರೈಡರ್ 125 (TVS Raider 125):
ಇದು ಹೀರೋ ಗ್ಲಾಮರ್ ಎಕ್ಸ್ 125ಗೆ ಅತ್ಯುತ್ತಮವಾದ ಬದಲಿ ಆಯ್ಕೆಯಾಗಲಿದೆ. ರೂ.87,375 ರಿಂದ ರೂ.1.03 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ವಿಕೆಡ್ ಬ್ಲ್ಯಾಕ್, ಸ್ಟ್ರೈಕಿಂಗ್ ರೆಡ್, ಫಿಯರಿ ಯೆಲ್ಲೋ, ಬ್ಲೇಜಿಂಗ್ ಬ್ಲೂ ಹಾಗೂ ಬ್ಲ್ಯಾಕ್ ಪ್ಯಾಂಥರ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.

ಈ ಬೈಕ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ಪಡೆದಿದೆ. 124.8 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 11.12 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 11.2 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 67 ಕಿ.ಮೀವರೆಗೆ ಮೈಲೇಜ್ ಕೊಡಬಲ್ಲವು. 10 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ.
ನೂತನ ರೈಡರ್ ಎಲ್ಇಡಿ ಲೈಟಿಂಗ್ ಮತ್ತು ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) 5-ಸ್ಟೆಪ್ ಪ್ರಿಲೋಡ್ ಅಡ್ಜಸ್ಟೆಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಬಜಾಜ್ ಪಲ್ಸರ್ 125 (Bajaj Pulsar 125):
ಈ ಮೋಟಾರ್‌ಸೈಕಲ್‌ನ್ನು ಕೂಡ ಹೀರೋ ಗ್ಲಾಮರ್ ಎಕ್ಸ್ 125ಗೆ ಪರ್ಯಾಯವಾಗಿ ಕೊಂಡುಕೊಳ್ಳಬಹುದು. ರೂ.85178 ರಿಂದ ರೂ.94451 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಉತ್ತಮವಾದ ವಿನ್ಯಾಸವನ್ನು ಹೊಂದಿದೆ. ಬ್ಲ್ಯಾಕ್ ಸಿಲ್ವರ್, ಬ್ಲ್ಯಾಕ್ ರೆಡ್, ರೆಡ್, ಬ್ಲ್ಯಾಕ್ ಬ್ಲೂ, ಬ್ಲೂ ಹಾಗೂ ಬ್ಲ್ಯಾಕ್ ಗ್ರೀನ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಹೊಸ ಪಲ್ಸರ್ 124.4 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಮತ್ತು 5-ಸ್ವೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 51 ಕಿ.ಮೀವರೆಗೆ ಮೈಲೇಜ್ ನೀಡಬಲ್ಲದು. 11.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಪಡೆದಿದೆ. ಫುಲ್ ಡಿಜಿಟಲ್ ಕನ್ಸೋಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. ಸುರಕ್ಷತೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.

ಹೋಂಡಾ ಶೈನ್ 125 (Honda Shine 125):
ಇದನ್ನು ಸಹ ಹೀರೋ ಗ್ಲಾಮರ್ ಎಕ್ಸ್ 125ಗೆ ಬದಲಾಗಿ ಮನೆಗೆ ತರಬಹುದಾಗಿದ್ದು, ರೂ.89,008 ರಿಂದ ರೂ.1.02 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಅತ್ಯಾಧುನಿಕವಾದ ವಿನ್ಯಾಸವನ್ನು ಪಡೆದಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಜೆನಿ ಗ್ರೇ ಮೆಟಾಲಿಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ರೆಬೆಲ್ ರೆಡ್ ಮೆಟಾಲಿಕ್, ಹಾಗೂ ಪರ್ಲ್ ಸೈರನ್ ಬ್ಲೂ ಒಳಗೊಂಡಂತೆ ಹಲವು ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.
ಈ ಬೈಕ್ ಶಕ್ತಿಯುತವಾದ ಪವರ್‌ಟ್ರೇನ್‌ನ್ನು ಒಳಗೊಂಡಿದೆ. 123.94 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 10.63 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 11 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುತ್ತದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ. 55 ಕಿ.ಮೀವರೆಗೆ ಮೈಲೇಜ್ ಕೊಡಬಲ್ಲದು.

ನೂತನ ಶೈನ್ ಮೋಟಾರ್‌ಸೈಕಲ್ ಫುಲ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಡುಯಲ್ ರೇರ್ ಸ್ಪ್ರಿಂಗ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್/ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.


Click it and Unblock the Notifications