Best Electric scooters: ಬಜೆಟ್ ಬೆಲೆಯ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು... ಫುಲ್ ಡಿಮ್ಯಾಂಡ್!

Best Electric scooters: ದೇಶದಲ್ಲಿ ಇಂಧನ ಬೆಲೆಗಳು ಹೆಚ್ಚಾದಾಗಿನಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ಹಗುರವಾದ ಮತ್ತು ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್‌ಗಳು ಭಾರತದಲ್ಲಿ ಜನಪ್ರಿಯತೆಯನ್ನು ಗಳಿಸುತ್ತಿವೆ. ಪ್ರಸ್ತುತ, ಪ್ರತಿ ಅಗತ್ಯ ಮನೆ ಕೆಲಸಗಳಿಗೆ ಬಳಸಿಕೊಳ್ಳಬಹುದಾದ ಬಜೆಟ್ ಬೆಲೆಯ ಒಂದಷ್ಟು ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಇವು ಕೇವಲ ಪುರಷರಷ್ಟೆ ಅಲ್ಲದೇ ಮಹಿಳೆಯರಿಗೂ ಸೂಕ್ತವಾಗಿರುತ್ತವೆ. ಮಹಿಳೆಯರು ಹೆಚ್ಚಾಗಿ ಹಗುರವಾದ ಸ್ಕೂಟರ್ ಗಳನ್ನು ಇಷ್ಟಪಡುತ್ತಾರೆ. ಸದ್ಯ ಮಹಿಳೆಯರಿಗಾಗಿ ಲಭ್ಯವಿರುವ ಕೆಲವು ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಹೊಸ ಇವಿ ಬ್ರಾಂಡ್‌ ಜೀಲಿಯೋ ತನ್ನ ಆಕರ್ಷಕ ಎಂಟ್ರಿ ಲೆವಲ್ ಸ್ಕೂಟರ್ ಅನ್ನು ಕೇವಲ ರೂ.49,500 ಬೆಲೆಯಲ್ಲಿ ಮಾರಾಟ ಮಾಡುತ್ತಿದೆ. ಇದರ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 25 ಕಿ.ಮೀ. ಇದ್ದು, ಈ ಎಲೆಕ್ಟ್ರಿಕ್ ಸ್ಕೂಟರ್ ಓಡಿಸಲು ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲ. ಇದು ತುಂಬಾ ಹಗುರವಾಗಿದ್ದು, ಕೇವಲ 80 ಕೆ.ಜಿ ತೂಕವಿದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ 60 ರಿಂದ 90 ಕಿ.ಮೀ ಓಡುತ್ತದೆ.

best-electric-scooters-in-india-bajaj-ola-ather

ದೇಶದ ಜನಪ್ರಿಯ ಎಲೆಕ್ಟ್ರಿಕ್ ಬ್ರಾಂಡ್ ಓಲಾ ತನ್ನ ಎಂಟ್ರಿ ಲೆವಲ್ ಮಾಡಲ್ ಅನ್ನು ರೂ.59,999 ಕ್ಕೆ ಮಾರಾಟ ಮಾಡುತ್ತಿದೆ. ಈ ಸ್ಕೂಟರ್ 70 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. 110 ಕೆ.ಜಿ ತೂಕವಿರುವ ಈ ಸ್ಕೂಟರ್ 1.5 ಕಿಲೋವ್ಯಾಟ್ ಸಾಮರ್ಥ್ಯದ ಎರಡು ಬ್ಯಾಟರಿಗಳನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ 75 ರಿಂದ 146 ಕಿ.ಮೀ ಓಡಬಲ್ಲದು.

ಟಿವಿಎಸ್ ಐಕ್ಯೂಬ್ ಬೇಸ್ ಮಾದರಿಯು 2.2 ಕಿಲೋವ್ಯಾಟ್ ಬ್ಯಾಟರಿಯನ್ನು ಹೊಂದಿದ್ದು ಈ ಸ್ಕೂಟರ್ ಬೆಲೆಯು ರೂ. 94,434ಗಳಾಗಿದೆ. ಇದರ ಬ್ಯಾಟರಿ ಸುಮಾರು ಮೂರೂವರೆ ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ. 110 ಕೆ.ಜಿ ತೂಕದ ಈ ಸ್ಕೂಟರ್ 75 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಹಾಗೆಯೇ ಒಮ್ಮೆ ಚಾರ್ಜ್ ಮಾಡಿದರೆ 75 ಕಿ.ಮೀ ರೇಂಜ್ ನೀಡುತ್ತದೆ.

best-electric-scooters-in-india-bajaj-ola-ather

ಬೆಂಗಳೂರು ಮೂಲದ ಎಥೆರ್‌ನ ಎಂಟ್ರಿ ಲೆವಲ್ ಸ್ಕೂಟರ್ 108 ಕೆ.ಜಿ. ತೂಕವಿದ್ದು, ಸ್ಕೂಟರ್ ಬೆಲೆಯು ರೂ.1.49 ಲಕ್ಷಗಳಾಗಿದೆ. ಈ ಸ್ಕೂಟರ್ 90 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿದ್ದು, ಇದರ ಬ್ಯಾಟರಿ 3 ಗಂಟೆಗಳಲ್ಲಿ ಚಾರ್ಜ್ ಆಗುತ್ತದೆ. 2.9 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಪೂರ್ಣ ಚಾರ್ಜ್ ನಲ್ಲಿ 126 ಕಿಲೋಮೀಟರ್ ಓಡಿಸಬಹುದು.

ಬಜಾಜ್ ಚೇತಕ್ ಎಂಟ್ರಿ ಲೆವಲ್ ಎಲೆಕ್ಟ್ರಿಕ್ ಸ್ಕೂಟರ್ ತೂಕ 110 ಕೆ.ಜಿ. ಇದ್ದು, ಈ ಸ್ಕೂಟರ್ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.02 ಲಕ್ಷಗಳಾಗಿದೆ. ಸ್ಕೂಟರ್ ನ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲು 4 ಗಂಟೆಗಳು ಬೇಕಾಗುತ್ತದೆ. ಪೂರ್ಣ ಚಾರ್ಜ್ ನಲ್ಲಿ 123 ಕಿಲೋಮೀಟರ್ ಓಡಿಸಬಹುದಾಗಿದ್ದು, 2.88 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದೆ.

best-electric-scooters-in-india-bajaj-ola-ather

ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಜನರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಮೇಲಿನ ಎಲ್ಲಾ ಸ್ಕೂಟರ್‌ಗಳು ದೈನಂದಿನ ಬಳಕೆಗೆ ಉತ್ತಮವೆಂದು ಸಾಬೀತಾಗಿದೆ. ಪದೇ ಪದೇ ಪೆಟ್ರೋಲ್ ತುಂಬಿಸುವ ತೊಂದರೆಯೂ ಮುಗಿದಿದೆ. ಇವುಗಳನ್ನು ಓಡಿಸಲು ಮತ್ತು ನಿರ್ವಹಿಸಲು ತುಂಬಾ ಸುಲಭ. ಇವು ನಿಜವಾಗಿಯೂ ಕೈಗೆಟುಕುವ ಮತ್ತು ಮಹಿಳೆಯರಿಗೆ ಅತ್ಯುತ್ತಮ ರೇಂಜ್ ನೀಡುವ ಸ್ಕೂಟರ್‌ಗಳಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, April 21, 2025, 10:15 [IST]
English summary
Best electric scooters in india bajaj ola ather
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+