1 ಲಕ್ಷಕ್ಕಿಂತ ಕಡಿಮೆ ಬೆಲೆಯ ಬೆಸ್ಟ್ ಇವಿ ಬೈಕ್‌ಗಳು: ಪೈಸೆ ಖರ್ಚಿಲ್ಲದೆ 100 ಕಿ.ಮೀ ಓಡಿಸಬಹುದು!
ಭಾರತದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯು ವೇಗವಾಗಿ ಬೆಳೆಯುತ್ತಿದೆ, ನಿತ್ಯ ಸಾವಿರಾರು ವಾಹನಗಳು ಮಾರಾಟವಾಗುತ್ತಿವೆ. ಮಧ್ಯಮ ಹಾಗೂ ಬಡ ವರ್ಗದವರು ಬೈಕ್ ಅಥವಾ ಸ್ಕೂಟರ್‌ಗಳ ಮೇಲೆ ಹೆಚ್ಚಾಗಿ ಅವಲಂಭಿತರಾಗಿದ್ದಾರೆ. ಈ ವರ್ಗದವರು ನಿತ್ಯಾವಸರ ಕೆಲಸಗಳಿಗಾಗಿ ಇಂಧನ ಚಾಲಿತ ವಾಹನಗಳನ್ನು ಬಳಸುವ ಬದಲು ಹಣ ಉಳಿಸುವಂತಹ ಇವಿ ಬೈಕ್‌ಗಳನ್ನು ಬಳಸಬಹುದು. ಇಂಧನ ಖರ್ಚಿಲ್ಲದೆ ನಿತ್ಯ ಮೂರು ಗಂಟೆ ಚಾರ್ಜ್ ಮಾಡುವ ಮೂಲಕ ಒಂದು ಪೈಸೆ ಖರ್ಚಿಲ್ಲದೆ 100 ಕಿ.ಮೀ ಓಡಿಸಬಹುದು. ಇಂಥಹ ಟಾಪ್-4 ಬೈಕ್‌ಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.
ಓಲಾ ರೋಡ್ ಸ್ಟರ್ ಎಕ್ಸ್: ದೇಶದ ಜನಪ್ರಿಯ ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾಗಿರುವ ಓಲಾ ಎಲೆಕ್ಟ್ರಿಕ್, ಇದೀಗ ಮೋಟಾರ್‌ಸೈಕಲ್ ವಿಭಾಗಕ್ಕೂ ಎಂಟ್ರಿಕೊಟ್ಟಿದೆ. ಕಂಪನಿ ಇತ್ತೀಚೆಗೆ ಪರಿಚಯಿಸಿರುವ 'ಓಲಾ ರೋಡ್ ಸ್ಟರ್ ಎಕ್ಸ್' 99,999 ರೂ. (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. 2.5 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದು ಒಮ್ಮೆ ಈ ಬೈಕ್ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 140 ಕಿ.ಮೀ ಓಡಿಸಬಹುದು.

ಓಲಾ ರೋಡ್ ಸ್ಟರ್ ಎಕ್ಸ್ ಬೈಕ್ 7 ಕಿಲೋವ್ಯಾಟ್ (9.4 ಬಿಎಚ್ ಪವರ್) ಪವರ್‌ನ ಮೋಟಾರ್ ಹೊಂದಿದೆ. ಈ ಬೈಕ್ ಕೇವಲ 3.4 ಸೆಕೆಂಡುಗಳಲ್ಲಿ 40 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಓಲಾ ಎಲೆಕ್ಟ್ರಿಕ್ ಈ ಹೊಸ ಬೈಕ್ ಬ್ಯಾಟರಿ ಮೇಲೆ 3 ವರ್ಷ ಅಥವಾ 50,000 ಕಿ.ಮೀ ವಾರಂಟಿಯನ್ನು ನೀಡುತ್ತಿದೆ. ಇದು 6.2 ಗಂಟೆಗಳಲ್ಲಿ ಶೇ 80 ರಷ್ಟು ಚಾರ್ಜ್ ಆಗುತ್ತದೆ.
ಒಬೆನ್ ರೋರ್ ಇಝಡ್: ಈ ಮೋಟಾರ್‌ಸೈಕಲ್ 2.6 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 110 ಕಿ.ಮೀ ಓಡಿಸಬಹುದು. 8 ವರ್ಷಗಳು ಅಥವಾ 80,000 ಕಿ.ಮೀ ಬ್ಯಾಟರಿ ವಾರಂಟಿಯನ್ನು ಹೊಂದಿದೆ. ಕೇವಲ 2 ಗಂಟೆಗಳಲ್ಲಿ ಶೇ80 ವರೆಗೆ ಚಾರ್ಜ್ ಆಗುತ್ತದೆ. ಭಾರತದಲ್ಲಿ 90,000 ರೂ. (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.

ರಿವೋಲ್ಟ್ RV1: ರಿವೋಲ್ಟ್ ಮೋಟಾರ್ಸ್ ಕಂಪನಿಯ RV1 ಬೈಕ್ ಕೇವಲ 90,000 ರೂ. (ಎಕ್ಸ್ ಶೋರೂಂ) ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಬೈಕ್ 2.2 ಕಿಲೋವ್ಯಾಟ್ ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿದ್ದು, ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 100 ಕಿ.ಮೀ ಓಡಿಸಬಹುದು. ಕೇವಲ 2 ಗಂಟೆ 15 ನಿಮಿಷಗಳಲ್ಲಿ ಶೇ80 ರಷ್ಟು ಚಾರ್ಜ್ ಆಗುತ್ತದೆ.
ರಿವೋಲ್ಟ್ RV1 ಮೋಟಾರ್‌ಸೈಕಲ್‌ನಲ್ಲಿ ಪವರ್‌ಫುಲ್ 2.8 ಕಿಲೋವ್ಯಾಟ್ ಮೋಟರ್ ಅನ್ನು ಅಳವಡಿಸಲಾಗಿದೆ. ಕಂಪನಿಯು ಈ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಮತ್ತು ಬ್ಯಾಟರಿಯ ಮೇಲೆ 5 ವರ್ಷ ಅಥವಾ 75,000 ಕಿ.ಮೀ ವಾರಂಟಿಯನ್ನು ನೀಡುತ್ತಿದೆ. ಜೊತೆಗೆ ಚಾರ್ಜರ್ ಮೇಲೆ 2 ವರ್ಷಗಳ ವಾರಂಟಿ ಇದೆ.

ಪ್ಯೂರ್ ಇವಿ ಇಕೋ ಡ್ರೈಫ್ಟ್ ಝಡ್: ಪ್ಯೂರ್ ಇವಿ ಕಂಪನಿಯ ಇಕೋ ಡ್ರೈಫ್ಟ್ ಝಡ್ ಬೈಕ್ 3 ಕಿಲೋವ್ಯಾಟ್ ಬ್ಯಾಟರಿ ಹೊಂದಿದ್ದು, ಇದನ್ನು ಸಂಪೂರ್ಣ ಚಾರ್ಜ್ ಮಾಡಿದರೆ 140 ಕಿ.ಮೀ ಓಡಿಸಬಹುದು. ಇದು 3 ಗಂಟೆಗಳಲ್ಲಿ ಶೇ 80 ರಷ್ಟು ಮತ್ತು 6 ಗಂಟೆಗಳಲ್ಲಿ ಶೇ100 ರಷ್ಟು ಚಾರ್ಜ್ ಆಗುತ್ತದೆ. ಬೆಲೆಯು 99,999 ರೂ. (ಎಕ್ಸ್ ಶೋರೂಂ) ಇದೆ. ಡ್ರೈವ್, ಕ್ರಾಸ್ ಓವರ್, ಥ್ರಿಲ್ ಎಂಬ ಮೂರು ರೈಡ್ ಮೋಡ್‌ಗಳನ್ನು ಹೊಂದಿದೆ.
ಅಗ್ಗದ ಬೆಲೆ, ಕಡಿಮೆ ನಿರ್ವಹಣ ವೆಚ್ಚ ಎಲ್ಲದಕ್ಕಿಂತ ಮುಖ್ಯವಾಗಿ ಪೆಟ್ರೋಲ್ ಖರ್ಚು ಇಲ್ಲದಿರುವುದರಿಂದ ಈ ಎಲೆಕ್ಟ್ರಿಕ್ ವಾಹನಗಳು ವೇಗವಾಗಿ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸುತ್ತಿವೆ. ಮಾರುಕಟ್ಟೆಯಲ್ಲಿ ಈ ಎಲ್ಲಾ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳು 1 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಮೋಟಾರ್ ಸೈಕಲ್‌ಗಳಾಗಿರುವುದರಿಂದ ಗ್ರಾಹಕರಿಗೆ ಇವು ಬೆಸ್ಟ್ ಆಯ್ಕೆಯಾಗಿವೆ.


Click it and Unblock the Notifications