ಬಡವರ ಬಂಡಿ.. 65 ಕಿ.ಮೀ ಮೈಲೇಜ್, ಬೆಲೆಯೂ ಅಗ್ಗ.. ಈ ಬೈಕ್ ಪ್ಯಾಟೆಗೂ ಸೈ.. ಹಳ್ಳಿಗೂ ಜೈ!
ಹಳ್ಳಿಯೇ ಆಗಿರಲಿ.. ನಗರವೇ ಆಗಿರಲಿ ದಿನಬಳಕೆಗೆ ಬೈಕ್‌ಗಳು ತೀರಾ ಅನಿವಾರ್ಯವಾಗಿದ್ದು, ಹಲವು ಕೆಲಸಗಳನ್ನು ಸುಲಭಗೊಳಿಸುತ್ತವೆ. ನೀವು ಹೊಸದೊಂದು ಮೋಟಾರ್‌ಸೈಕಲ್‌ನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಹೆಚ್ಚು ಶಕ್ತಿಶಾಲಿಯಾದ ಹೋಂಡಾ ಶೈನ್ 100 ಡಿಎಕ್ಸ್ (Honda Shine 100 DX) ಬೈಕ್ ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ ಈ ಮೋಟಾರ್‌ಸೈಕಲ್‌ನ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.
ಬೆಲೆ (Price):
ಹೊಚ್ಚ ಹೊಸ 'ಹೋಂಡಾ ಶೈನ್ 100 ಡಿಎಕ್ಸ್' ಬೈಕ್ ಅಗ್ಗದ ದರದಲ್ಲೂ ಲಭ್ಯವಿದೆ. ಸದ್ಯ ರೂ.75,950 (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಒಳಗೊಂಡಿದೆ. ಕೇಂದ್ರ ಸರ್ಕಾರ ದ್ವಿಚಕ್ರ ವಾಹನಗಳ ಖರೀದಿ ಮೇಲಿನ ಜಿಎಸ್‌ಟಿ ಪ್ರಮಾಣವನ್ನು 28% ರಿಂದ 18%ಗೆ ಕಡಿತಗೊಳಿಸಿದೆ. ಪರಿಷ್ಕೃತ ತೆರಿಗೆ ದರಗಳು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ. ಆ ಬಳಿಕ 'ಶೈನ್ 100 ಡಿಎಕ್ಸ್' ಬೆಲೆಯೂ ಮತ್ತಷ್ಟು ಕಡಿಮೆಯಾಗಲಿದೆ.

ವಿನ್ಯಾಸ & ಬಣ್ಣಗಳು (Design & Colors):
ಈ ಮೋಟಾರ್‌ಸೈಕಲ್‌ನ್ನು ಹೋಂಡಾ ಕಂಪನಿಯು ಯುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಆಧುನಿಕವಾಗಿ ವಿನ್ಯಾಸಗೊಳಿಸಿದೆ. ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್‌ಗಳು, ಹೋಂಡಾ ಬ್ರ್ಯಾಂಡಿಂಗ್ ಹೊಂದಿರುವ ಫ್ಯುಯೆಲ್ ಟ್ಯಾಂಕ್ ಹಾಗೂ ಎಲ್ಇಡಿ ಟೈಲ್ ಲೈಟ್‌ನ್ನು ಪಡೆದಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್, ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಮತ್ತು ಜೆನಿ ಗ್ರೇ ಮೆಟಾಲಿಕ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ.
ಸುತ್ತಳತೆ (Dimensions):
ಇದು ಸ್ವಲ್ಪ ಮಟ್ಟಿಗೆ ವಿಶಾಲ ಗಾತ್ರದಲ್ಲಿದೆ. 1,955 ಎಂಎಂ ಉದ್ದ, 754 ಎಂಎಂ ಅಗಲ ಮತ್ತು 1,050 ಎಂಎಂ ಎತ್ತರ ಕೂಡ. ಜೊತೆಗಿದು 168 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,245 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. ಸರಿ ಸುಮಾರು 103 ಕೆಜಿ ತೂಕವಿದೆ.
ಕಾರ್ಯಕ್ಷಮತೆ (Performance):
ನೂತನ ಶೈನ್ 100 ಡಿಎಕ್ಸ್ ಬೈಕ್ ಬಲಿಷ್ಠವಾದ ಪವರ್‌ಟ್ರೇನ್‌ನ್ನು ತನ್ನದಾಗಿಸಿಕೊಂಡಿದೆ. 98.98 ಸಿಸಿ ಸಿಂಗಲ್-ಸಿಲಿಂಡರ್, ಫ್ಯುಯೆಲ್-ಇಂಜೆಕ್ಟೆಡ್ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 7,500 ಆರ್‌ಪಿಎಂನಲ್ಲಿ 7.28 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 5,000 ಆರ್‌ಪಿಎಂನಲ್ಲಿ 8.04 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದೆ.
ಈ ಮೋಟಾರ್‌ಸೈಕಲ್‌ನ ಇಂಧನ ದಕ್ಷತೆಯು ಉತ್ತಮವಾಗಿದೆ. 65 ಕಿ.ಮೀ ವರೆಗೆ ಮೈಲೇಜ್ ನೀಡುತ್ತದೆ. 10 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಕೇವಲ 7 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಲಿದೆ.
ವೈಶಿಷ್ಟ್ಯಗಳು (Features):
ಇದು ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್ ಆಫ್, ಕಿಕ್ ಸ್ಟಾರ್ಟ್, ಸೈಲೆಂಟ್ ಎಲೆಕ್ಟ್ರಿಕ್ ಸ್ಟಾರ್ಟರ್ ಹಾಗೂ ಸರ್ವಿಸ್ ಡ್ಯೂ ಇಂಡಿಕೇಟರ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. 17 ಇಂಚಿನ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಸೀಟ್ ಎತ್ತರವು 786 ಎಂಎಂ ಇದೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System):
ನೂತನ ಹೋಂಡಾ ಶೈನ್ 100 ಡಿಎಕ್ಸ್ ಬೈಕ್ ಸವಾರರಿಗೆ ಗರಿಷ್ಠ ರಕ್ಷಣೆ ಒದಗಿಸುತ್ತದೆ. ಅದಕ್ಕಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫ್ರಂಟ್ ಪೋರ್ಕ್ಸ್ ಮತ್ತು ಹಿಂಭಾಗ (ರೇರ್) 5-ಸ್ಟೆಪ್ ಅಡ್ಜಸ್ಟೇಬಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸಿಬಿಎಸ್ (ಕಂಬೈನ್ಡ್ ಬ್ರೇಕ್ ಸಿಸ್ಟಮ್) ಹಾಗೂ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.
ಸ್ಟ್ಯಾಂಡರ್ಡ್ ಹೋಂಡಾ ಶೈನ್ 100 ಕೂಡ ಖರೀದಿ ಲಭ್ಯ:
ಈ ಮೋಟಾರ್‌ಸೈಕಲ್ ರೂ.70,562 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 98.98 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ. 65 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. ಟ್ವಿನ್ ಪಾಡ್ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್ ಸ್ಟ್ಯಾಂಡ್ ಸೆನ್ಸರ್ ಮತ್ತು ಸಿಂಗಲ್ ಪೀಸ್ ಸೀಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ.


Click it and Unblock the Notifications