ಬಾ ಗುರೂ... ಇವೇ ಬೆಸ್ಟ್ ಮೈಲೇಜ್ ಬೈಕ್‌ಗಳು: ಎಲ್ಲವೂ 60,000 ಕ್ಕಿಂತ ಕಡಿಮೆ ಬೆಲೆ!
ಭಾರತದಲ್ಲಿ ಬಜೆಟ್ ಬೆಲೆಯ ಬೈಕ್‌ಗಳು ಬಡ ಹಾಗೂ ಮಧ್ಯಮ ವರ್ಗದ ಬೆನ್ನೆಲುಬಾಗಿವೆ. ಹೆಚ್ಚಿನ ಖರೀದಿದಾರರು ಮೈಲೇಜ್, ವಿಶ್ವಾಸಾರ್ಹತೆ ಮತ್ತು ಕಡಿಮೆ ಮೇಂಟೇನನ್ಸ್ ಹೊಂದಿರುವ ಮೌಲ್ಯಯುತ ಬೈಕ್ ಅನ್ನು ಹುಡುಕುತ್ತಾರೆ. ವಾಹನ ತಯಾರಕರು ಕೂಡ ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ಅಗ್ಗದ ಬೆಲೆಯಲ್ಲಿ ಉತ್ತಮ ಬೈಕ್‌ಗಳನ್ನು ನೀಡುತ್ತಿದ್ದಾರೆ. ಬಹುತೇಕರಿಗೆ 60,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಉತ್ತಮ ಮೈಲೇಜ್ ಹಾಗೂ ಆಧುನಿಕ ಡಿಸೈನ್ ಜೊತೆಗೆ ಆಕರ್ಷಕ ಫೀಚರ್ಸ್ ಹೊಂದಿರುವ ಬೈಕ್‌ಗಳು ಸಿಗುತ್ತವೆ ಎಂಬುದು ತಿಳಿದೇ ಇಲ್ಲ. ಕೆಳಗೆ ಪಟ್ಟಿ ಮಾಡಲಾದ ಎಂಟ್ರಿ ಲೆವೆಲ್ ಬೈಕ್‌ಗಳು ನಿಮ್ಮ ಅಭಿರುಚಿಗೆ ತಕ್ಕ ವಾಹನಗಳಾಗಿರಬಹುದು.
ಹೀರೋ HF100: ಹೀರೋ HF100 (Hero HF100) ಬೈಕ್ 59,018 ರೂ. (ಎಕ್ಸ್ ಶೋರೂಂ) ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 97.2 ಸಿಸಿ ಏರ್ ಕೂಲ್ಡ್ ಎಂಜಿನ್ 7.9 ಬಿಹೆಚ್ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯ ಪ್ರಕಾರ ಇದು ಪ್ರತಿ ಲೀಟರ್‌ಗೆ ಬರೋಬ್ಬರಿ 70 kmpl ಮೈಲೇಜ್ ಹಿಂದಿರುಗಿಸುತ್ತದೆ.

ಟಿವಿಎಸ್ ರೇಡಿಯಾನ್: ಟಿವಿಎಸ್ ರೇಡಿಯಾನ್ (TVS Radeon) ಬೈಕ್ 59,880 ರೂ. ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 109.7 ಸಿಸಿ ಎಂಜಿನ್ 8.08 ಬಿಹೆಚ್ ಪವರ್ ಮತ್ತು 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯ ಪ್ರಕಾರ ಇದು ಪ್ರತಿ ಲೀಟರ್‌ಗೆ ಬರೋಬ್ಬರಿ 73.68 kmpl ಮೈಲೇಜ್ ಹಿಂದಿರುಗಿಸುತ್ತದೆ.
ಟಿವಿಎಸ್ ಸ್ಪೋರ್ಟ್: ಟಿವಿಎಸ್ ಸ್ಪೋರ್ಟ್ (TVS Sport) ಬೈಕ್ 59,881 ರೂ. ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 109.7 ಸಿಸಿ ಏರ್ ಕೂಲ್ಡ್ ಎಂಜಿನ್ 8.08 ಬಿಹೆಚ್ ಪವರ್ ಮತ್ತು 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಟಿವಿಎಸ್ ಮೋಟಾರ್ ಪ್ರಕಾರ ಇದು ಪ್ರತಿ ಲೀಟರ್‌ಗೆ ಬರೋಬ್ಬರಿ 70 kmpl ಮೈಲೇಜ್ ಹಿಂದಿರುಗಿಸುತ್ತದೆ.

ಹೀರೋ HF ಡೀಲಕ್ಸ್: ಹೀರೋ HF ಡೀಲಕ್ಸ್ (Hero HF Deluxe) ಬೈಕ್ 59,998 ರೂ. ಆರಂಭಿಕ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ 97.2 ಸಿಸಿ ಏರ್ ಕೂಲ್ಡ್ ಎಂಜಿನ್ 7.9 ಬಿಹೆಚ್ ಪವರ್ ಮತ್ತು 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯ ಪ್ರಕಾರ ಇದು ಪ್ರತಿ ಲೀಟರ್‌ಗೆ ಬರೋಬ್ಬರಿ 70 kmpl ಮೈಲೇಜ್ ಹಿಂದಿರುಗಿಸುತ್ತದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ನಿಮ್ಮ ಬಜೆಟ್‌ಗೆ ಸರಿಹೊಂದುವ ಉತ್ತಮ ಬೈಕ್ ಅನ್ನು ಕಂಡುಹಿಡಿಯುವುದು ನಿಜವಾಗಿಯೂ ಕಷ್ಟ. ಆದ್ದರಿಂದ ರೂ. 60,000 ಕ್ಕಿಂತ ಕಡಿಮೆ ಬೆಲೆಯ ಬೈಕ್ ಖರೀದಿಸಲು ನಾವು ಮೇಲೆ ತಿಳಿಸಿರುವ ಕಡಿಮೆ ಬೆಲೆಯ ಅತ್ಯುತ್ತಮ ಬೈಕುಗಳು ನಿಮ್ಮ ಆದ್ಯತೆಗಳಿಗೆ ಅನುಗುಣವಾಗಿದ್ದು, ಇವನ್ನು ನೀವು ಪರಿಶೀಲಿಸಬಹುದು.

ಇವು ಎಕ್ಸ್ ಶೋರೂಂ ಬೆಲೆಗಳು ಎಂಬುದನ್ನು ಗಮನಿಸಿ. ಇವು ಆಯಾ ಪ್ರದೇಶಗಳು ಹಾಗೂ ಡೀಲರ್‌ಶಿಪ್‌ಗಳಿಗೆ ಅನುಗುಣವಾಗಿ ಆನ್‌ರೋಡ್ ಬೆಲೆಗಳು ಬದಲಾಗಬಹದು. ಆದ್ದರಿಂದ ಎಕ್ಸ್ ಶೋರೂಂ ಬೆಲೆಗಳನ್ನು ಇಲ್ಲಿ ನೀಡಲಾಗಿದೆ. ಸದ್ಯ ಈ ಬೈಕ್‌ಗಳು ಭಾರತದಲ್ಲಿ ಅತ್ಯುತ್ತಮ ಮೈಲೇಜ್‌ನೊಂದಿಗೆ ಸಿಗುವ ಅತ್ಯಂತ ಕೈಗೆಟುಕುವ ಬೈಕ್‌ಗಳಾಗಿವೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications