ಜನವರಿ 1 ರಿಂದ ವಾಹನಗಳ ಬೆಲೆ ಏರಿಕೆ ಘೋಷಿಸಿದ ಬಿಎಂಡಬ್ಲ್ಯು

ಬಿಎಂಡಬ್ಲ್ಯು ಮೋಟರ್‌ರಾಡ್ (BMW Motorrad) ಇಂಡಿಯಾ ಜನವರಿ 1, 2026 ರಿಂದ ಜಾರಿಗೆ ಬರುವಂತೆ ಎಲ್ಲಾ ಮಾಡಲ್‌ಗಳ ಮೇಲೆ ಶೇ. 6 ರಷ್ಟು ಬೆಲೆ ಏರಿಕೆಯನ್ನು ಘೋಷಿಸಿದೆ. ಇತ್ತೀಚಿನ ತಿಂಗಳುಗಳಲ್ಲಿ ಅಮೆರಿಕನ್ ಡಾಲರ್ ಮತ್ತು ಯುರೋ ವಿರುದ್ಧ ಭಾರತೀಯ ರೂಪಾಯಿ ತೀವ್ರವಾಗಿ ಕುಸಿದಿರುವುದರಿಂದ ವಿದೇಶಿ ವಿನಿಮಯ ದರಗಳ ಮೇಲಿನ ನಿರಂತರ ಒತ್ತಡದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಚ್ಚಾ ವಸ್ತುಗಳು ಮತ್ತು ಲಾಜಿಸ್ಟಿಕ್ಸ್‌ಗಾಗಿ ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಲಾಭದಾಯಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರಿವೆ, ಹಾಗಾಗಿ ಬೆಲೆ ಏರಿಕೆ ಘೋಷಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಬಿಎಂಡಬ್ಲ್ಯು ಗ್ರೂಪ್ ಇಂಡಿಯಾದ ಅಧ್ಯಕ್ಷ ಹರ್ದೀಪ್ ಸಿಂಗ್ ಬ್ರಾರ್ ಮಾತನಾಡಿ, "ಯುಎಸ್ ಡಾಲರ್ ಮತ್ತು ಯುರೋ ವಿರುದ್ಧ ಭಾರತೀಯ ರೂಪಾಯಿ ತೀವ್ರ ಕುಸಿದಿರುವುದರಿಂದಾಗಿ ವಿದೇಶೀ ವಿನಿಮಯದಿಂದ ಒತ್ತಡವು ಹಲವಾರು ತಿಂಗಳುಗಳಿಂದ ಕಡಿಮೆಯಾಗಿಲ್ಲ. ಯೋಜಿತ ಬೆಲೆ ಏರಿಕೆ ಕ್ರಮವು ಕಂಪನಿಗೆ ಹಾಗೂ ನಮ್ಮ ಡೀಲರ್ ಪಾಲುದಾರರಿಗೆ ಅಗತ್ಯವಾದ ಲಾಭದಾಯಕತೆ ಮತ್ತು ನಿರಂತರ ಮೌಲ್ಯ ಉತ್ಪಾದನೆಯನ್ನು ಖಚಿತಪಡಿಸುತ್ತದೆ" ಎಂದು ಹೇಳಿದರು.

bmw-announces-vehicle-price-hike-from-january-1

ಪರಿಣಾಮ ಬೀರುವ ಮಾಡಲ್‌ಗಳು: ಬಿಎಂಡಬ್ಲ್ಯು ಮೋಟಾರಾಡ್ ಮೋಟಾರ್‌ಸೈಕಲ್‌ಗಳ ಶ್ರೇಣಿಯಲ್ಲಿ 'ಭಾರತದಲ್ಲಿ ತಯಾರಿಸಲಾದ' ಬಿಎಂಡಬ್ಲ್ಯು G 310 RR ಮತ್ತು ಬಿಎಂಡಬ್ಲ್ಯು CE 02 ಸೇರಿವೆ. CBU ಆಗಿ ಲಭ್ಯವಿರುವ ಇತರ ಪ್ರೀಮಿಯಂ ಬೈಕ್‌ಗಳಲ್ಲಿ ಬಿಎಂಡಬ್ಲ್ಯು ಎಫ್ 900 ಜಿಎಸ್, ಬಿಎಂಡಬ್ಲ್ಯು ಎಫ್ 900 ಜಿಎಸ್‌ಎ, ಬಿಎಂಡಬ್ಲ್ಯು ಆರ್ 1300 ಜಿಎಸ್, ಬಿಎಂಡಬ್ಲ್ಯು ಆರ್ 1300 ಜಿಎಸ್‌ಎ, ಬಿಎಂಡಬ್ಲ್ಯು ಎಂ 1000 ಆರ್‌ಆರ್‌ ಇವೆ.

ಹಾಗೆಯೇ ಬಿಎಂಡಬ್ಲ್ಯು ಎಂ 1000 ಆರ್, ಬಿಎಂಡಬ್ಲ್ಯು ಎಸ್‌ 1000 ಆರ್‌ಆರ್‌, ಬಿಎಂಡಬ್ಲ್ಯು ಎಸ್ 1000 ಆರ್, ಬಿಎಂಡಬ್ಲ್ಯು ಆರ್ 18 ಟ್ರಾನ್ಸ್‌ಕಾಂಟಿನೆಂಟಲ್, ಬಿಎಂಡಬ್ಲ್ಯು ಆರ್ 12, ಬಿಎಂಡಬ್ಲ್ಯು ಆರ್ 12 ನೈನ್ ಟಿ, ಬಿಎಂಡಬ್ಲ್ಯು ಆರ್ 1250 ಆರ್‌ಟಿ, ಬಿಎಂಡಬ್ಲ್ಯು ಕೆ 1600 ಬಿ, ಬಿಎಂಡಬ್ಲ್ಯು ಕೆ 1600 ಜಿಟಿಎಲ್, ಬಿಎಂಡಬ್ಲ್ಯು ಕೆ 1600 ಜಿಎ, ಬಿಎಂಡಬ್ಲ್ಯು ಸಿ 400 ಜಿಟಿ ಮತ್ತು ಬಿಎಂಡಬ್ಲ್ಯು ಸಿಇ 04 ಸೇರಿವೆ.

bmw-announces-vehicle-price-hike-from-january-1

ಈ ಪರಿವರ್ತನೆಯ ಸಮಯದಲ್ಲಿ ಗ್ರಾಹಕರನ್ನು ಬೆಂಬಲಿಸಲು, BMW ಇಂಡಿಯಾ ಫೈನಾನ್ಷಿಯಲ್ ಸರ್ವೀಸಸ್ ಕಸ್ಟಮೈಸ್ ಮಾಡಿದ ಹಣಕಾಸು ಯೋಜನೆಗಳನ್ನು ನೀಡುವುದನ್ನು ಮುಂದುವರೆಸಿದೆ. ಆಕರ್ಷಕ ಮಾಸಿಕ ಕಂತು ಆಯ್ಕೆಗಳು, ಆಯ್ದ ಮಾದರಿಗಳಿಗೆ ಕಡಿಮೆ ಬಡ್ಡಿದರಗಳನ್ನು ನೀಡುವುದಾಗಿ ತಿಳಿಸಿದೆ. ಬೆಲೆ ಏರಿಕೆಯು ಭಾರತದಲ್ಲಿ ವಾಹನ ತಯಾರಕರು ಎದುರಿಸುತ್ತಿರುವ ವಿಶಾಲ ಮಾರುಕಟ್ಟೆ ಸವಾಲುಗಳನ್ನು ಪ್ರತಿಬಿಂಬಿಸುತ್ತದೆ.

ಎಂಜಿ ಮೋಟಾರ್ ಬೆಲೆ ಏರಿಕೆ ಘೋಷಣೆ: ಜೆಎಸ್‌ಡಬ್ಲ್ಯೂ ಎಂಜಿ ಮೋಟಾರ್ ಇಂಡಿಯಾ (JSW MG Motor India) ಕೂಡ ತನ್ನ ಎಲ್ಲಾ ಕಾರುಗಳ ಮೇಲೆ ಶೇ. 2 ರಷ್ಟು ಬೆಲೆ ಏರಿಕೆಯನ್ನು ಘೋಷಿಸಿದೆ. ಬೆಲೆ ಏರಿಕೆಯು ಜನವರಿ 1, 2026 ರಿಂದ ಜಾರಿಗೆ ಬರಲಿದ್ದು, ಮಾಡಲ್ ಮತ್ತು ವೇರಿಯೆಂಟ್ ಅನ್ನು ಅವಲಂಬಿಸಿ ಬದಲಾಗುತ್ತದೆ.

bmw-announces-vehicle-price-hike-from-january-1

ಈ ಹೆಚ್ಚಳವು MG ಹೆಕ್ಟರ್, ZS EV, ಕಾಮೆಟ್ ಇವಿ, ವಿಂಡ್ಸರ್ ಇವಿ ಹಾಗೂ ಗ್ಲೋಸ್ಟರ್, ಆಸ್ಟರ್ ಸೇರಿದಂತೆ ಎಲ್ಲಾ ಮಾಡಲ್‌ಗಳಿಗೆ ಅನ್ವಯಿಸುತ್ತದೆ. ಯೂರೋ ವಿರುದ್ಧ ರೂಪಾಯಿ ಮೌಲ್ಯ ಕುಸಿತದಿಂದಾಗಿ BMW ಮತ್ತು ಮರ್ಸಿಡಿಸ್-ಬೆನ್ಜ್‌ನಂತಹ ಐಷಾರಾಮಿ ಬ್ರ್ಯಾಂಡ್‌ಗಳು ಸಹ ಬೆಲೆಗಳನ್ನು ಹೆಚ್ಚಿಸುತ್ತಿವೆ ಎಂದು ತಿಳಿದುಬಂದಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ಕರೆನ್ಸಿ ಏರಿಳಿತಗಳು ಮತ್ತು ವಿಶಾಲ ಆರ್ಥಿಕ ಅಂಶಗಳಿಂದಾಗಿ ಈ ಹೊಂದಾಣಿಕೆ ಉಂಟಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Friday, December 19, 2025, 19:40 [IST]
English summary
Bmw announces vehicle price hike from january 1
Read more on bmw motorrad india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+