ಇತ್ತೀಚೆಗೆ ಬಿಡುಗಡೆಯಾದ ಡುಕಾಟಿ ಡೆಸರ್ಟ್‌ಎಕ್ಸ್ ಡಿಸ್ಕವರಿ ಅಡ್ವೆಂಚರ್ ಟೂರಿಂಗ್ ವಿಶೇಷತೆಗಳು!
ಪ್ರಮುಖ ಮೋಟಾರ್‌ಸೈಕಲ್ ತಯಾರಕ ಕಂಪನಿಯಾಗಿರುವ ಡುಕಾಟಿ ಇತ್ತೀಚೆಗೆ ಭಾರತದಲ್ಲಿ ಡೆಸರ್ಟ್‌ಎಕ್ಸ್ ಡಿಸ್ಕವರಿ ಮೋಟಾರ್‌ಸೈಕಲ್ (Ducati DesertX Discovery) ಅನ್ನು ಬಿಡುಗಡೆ ಮಾಡಿದೆ. ಈ ಡೆಸರ್ಟ್‌ಎಕ್ಸ್ ಡಿಸ್ಕವರಿ ಮೋಟಾರ್‌ಸೈಕಲ್ ಎಕ್ಸ್ - ಶೋರೂಮ್ ಬೆಲೆ ರೂ. 21,78,200 ಗೆ ಎಲ್ಲಾ ಡುಕಾಟಿ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ವಿಶ್ವಾದ್ಯಂತ ಭಾರೀ ಜನಪ್ರಿಯತೆ ಹೊಂದಿರುವ ಡುಕಟಿ ಮೋಟಾರ್‌ಸೈಕಲ್‌ಗಳು ಇದೀಗ ಭಾರತದಲ್ಲಿ ಸದ್ದು ಮಾಡಲು ಸಜ್ಜಾಗಿದ್ದು, ಡುಕಾಟಿಯ ಈ ಪ್ರಮುಖ ಡೆಸರ್ಟ್‌ಎಕ್ಸ್ ಡಿಸ್ಕವರಿಯ ಪ್ರಮುಖಾಂಶಗಳು ಇಲ್ಲಿವೆ.
ಹೊಸ ಥ್ರಿಲ್ಲಿಂಗ್ ಬ್ಲ್ಯಾಕ್/ಡುಕಾಟಿ ರೆಡ್ ಲಿವರಿಯು ಬೈಕ್‌ನ್ನು ಅನನ್ಯ ಮತ್ತು ದಿಟ್ಟವಾಗಿಸುತ್ತದೆ. ರಸ್ತೆ ಕೊನೆಗೊಂಡರೂ ಸಹ ಪ್ರತಿಯೊಂದು ಸನ್ನಿವೇಶದಲ್ಲೂ ತನ್ನ ರಗಡ್ ಲುಕ್‌ನೊಂದಿಗೆ ಎದ್ದು ಕಾಣುತ್ತದೆ. ಯಾವುದೇ ಅಡ್ವೆಂಚರ್ ಮಾಡಲು ಸಿದ್ಧವಾಗಿರುವ ಡೆಸರ್ಟ್‌ಎಕ್ಸ್, 21 ಇಂಚಿನ ಮುಂಭಾಗದ ವೀಲ್‌ನೊಂದಿಗೆ ಸಮೃದ್ಧವಾದ ಪರಿಕರಗಳನ್ನು ಹೊಂದಿದೆ ಎಂದು ಕಂಪನಿಯು ತನ್ನ ಹೊಸ ಬೈಕ್ ಬಗ್ಗೆ ವಿವರಿಸಿದೆ.

ಮೊದಲೇ ಹೇಳಿದಂತೆ ದಿಟ್ಟ ಹೊಸ ಥ್ರಿಲ್ಲಿಂಗ್ ಬ್ಲ್ಯಾಕ್ / ಡುಕಾಟಿ ರೆಡ್ ಲಿವರಿಯಿಂದಾಗಿ ಸೌಕರ್ಯ, ರಕ್ಷಣೆ ಮತ್ತು ಆಕರ್ಷಕ ಡಿಸೈನ್‌ನೊಂದಿಗೆ ಆಫ್‌ರೋಡ್ ಪ್ರಿಯರಿಗೆ ಹೇಳಿಮಾಡಿಸಿದಂತಿರುತ್ತದೆ. ಇದು ರಸ್ತೆ ಅಥವಾ ಆಫ್‌ರೋಡ್ ಯಾವುದೇ ಭೂಪ್ರದೇಶವಾಗಿರಲಿ ಅಡ್ವೆಂಚರ್‌ಗಳನ್ನು ಮಾಡಲು ವಿನ್ಯಾಸಗೊಳಿಸಲಾದ ಮೋಟಾರ್‌ಸೈಕಲ್ ಆಗಿದೆ. ಈ "ಪೂರ್ಣ ಐಚ್ಛಿಕ" (full optional) ಮಾದರಿಯು ಗಮ್ಯಸ್ಥಾನ ಯಾವುದೇ ಇರಲಿ ಅನ್ವೇಷಿಸಲು ಸಜ್ಜುಗೊಂಡಿದೆ.
ಈ ಮೋಟಾರ್ ಸೈಕಲ್ ತನ್ನ ಆಕರ್ಷಕ ವಿನ್ಯಾಸ ಹಾಗೂ ಆಫ್‌ರೋಡ್ ಸಾಮರ್ಥ್ಯಗಳೊಂದಿಗೆ ಉತ್ತಮ ಸವಾರಿ ಅನುಭವ ನೀಡುವುದರ ಜೊತೆಗೆ, ಬಿಗಿಯಾದ ಹಿಡಿತಗಳು (Tight grips) ಮತ್ತು ದೊಡ್ಡ ವಿಂಡ್‌ಶೀಲ್ಡ್ ತಂಪಾದ ಹವಾಮಾನದಲ್ಲಿ ಸಾಕಷ್ಟು ಸೌಕರ್ಯವನ್ನು ನೀಡುತ್ತದೆ. ಜೊತೆಗೆ ಲಗೇಜ್ ಪ್ರವೇಶ ಮತ್ತು ನಿರ್ವಹಣೆಯನ್ನು ಸುಗಮಗೊಳಿಸುವುದರ ಜೊತೆಗೆ ಇದರ ಸೆಂಟರ್ ಸ್ಟ್ಯಾಂಡ್ ಸ್ಥಿರತೆಯನ್ನು ಒದಗಿಸುತ್ತದೆ.

ಇದು ಬಲವರ್ಧಿತ ಹ್ಯಾಂಡ್ ಗಾರ್ಡ್‌ಗಳು, ವಾಟರ್ ಪಂಪ್ ರಕ್ಷಣೆಯೊಂದಿಗೆ ಎಂಜಿನ್ ಗಾರ್ಡ್, ರೇಡಿಯೇಟರ್ ಗ್ರಿಲ್ ಮತ್ತು ಬಲವರ್ಧಿತ ಸಂಪ್ ಗಾರ್ಡ್ ನಂತಹ ಪ್ರಮಾಣಿತ ಸಾಧನಗಳನ್ನು ಒಳಗೊಂಡಿದೆ. ಒಟ್ಟಾರೆ ಡೆಸರ್ಟ್‌ಎಕ್ಸ್ ಡಿಸ್ಕವರಿ (Ducati DesertX Discovery) ಮೋಟಾರ್ ಸೈಕಲ್ ಅನ್ನು ತಡೆಯಲಾಗದಂತೆ ನಿರ್ಮಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಡೆಸರ್ಟ್ ಎಕ್ಸ್ ಡಿಸ್ಕವರಿ (DesertX Discovery) ಬಿಡುಗಡೆಯ ಕುರಿತು ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಬಿಪುಲ್ ಚಂದ್ರ ಮಾತನಾಡಿ, ಈ ಮೋಟಾರ್‌ಸೈಕಲ್ ಭಾರತದಾದ್ಯಂತ ಅಡ್ವೆಂಚರ್ ಪ್ರಿಯರ ಹೃದಯಗಳನ್ನು ಸೆರೆಹಿಡಿಯುತ್ತದೆ ಎಂಬ ವಿಶ್ವಾಸ ನಮಗಿದೆ. ಇಲ್ಲಿನ ಅಡ್ವೆಂಚರ್ ವಿಭಾಗದ ಅಗಾಧ ಸಾಮರ್ಥ್ಯವನ್ನು ನಾವು ಗುರುತಿಸಿದ್ದೇವೆ.

ಡೆಸರ್ಟ್ ಎಕ್ಸ್ ಡಿಸ್ಕವರಿ ಭಾರತೀಯ ಮಾರುಕಟ್ಟೆಯಲ್ಲಿ ಡುಕಾಟಿಯ ಬೆಳವಣಿಗೆಯಲ್ಲಿ ಮಹತ್ವದ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ. ಪ್ರತಿಯೊಬ್ಬ ವಿವೇಚನಾಶೀಲ ಭಾರತೀಯ ಗ್ರಾಹಕರು ತಮ್ಮ ವೈಯಕ್ತಿಕ ಸವಾರಿ ಶೈಲಿ ಮತ್ತು ಅಗತ್ಯಗಳಿಗೆ ಸರಿಹೊಂದುವ ಪರಿಪೂರ್ಣ ಡುಕಾಟಿಯನ್ನು ಕಂಡುಕೊಳ್ಳಬಹುದು ಎಂದು ಖಚಿತಪಡಿಸಿಕೊಳ್ಳಲು ನಾವು ವೈವಿಧ್ಯಮಯ ಅಡ್ವೆಂಚರ್ ಮೋಟಾರ್‌ಸೈಕಲ್‌ಗಳನ್ನು ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿದರು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








