EMotorad: ಬೈಕ್-ಸೈಕಲ್ ಮಿಶ್ರಣದಲ್ಲಿ ಹೊಸ ವಾಹನ ಬಿಡುಗಡೆ: ಅಗ್ಗದ ಬೆಲೆ, 5 ವರ್ಷ ವಾರೆಂಟಿ!

ಭಾರತದ ಪ್ರಮುಖ ಎಲೆಕ್ಟ್ರಿಕ್ ಸೈಕಲ್ ತಯಾರಕರಾದ ಇಮೋಟೊರಾಡ್ (EMotorad), ಅಡ್ವೆಂಚರ್ ರೇಂಜರ್ ಇ - ಸೈಕಲ್ ಅನ್ನು ಬಿಡುಗಡೆ ಮಾಡಿದೆ. ಇಮೋಟೊರಾಡ್‌ನ ಮೊದಲ ಮೋಟೋ - ಶೈಲಿಯ ಎಲೆಕ್ಟ್ರಿಕ್ ಸೈಕಲ್ ಇದಾಗಿದ್ದು, ರೂ. 55,999 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ರೇಂಜರ್ ಈಗ ಇಮೋಟೊರಾಡ್‌ನ ಮಾರಾಟ ಮಳಿಗೆ ಸೇರಿದಂತೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ. ಭಾಗಶಃ ಸೈಕಲ್, ಭಾಗಶಃ ಮೋಟೋ ಡಿಸೈನ್‌ನೊಂದಿಗೆ ಸಂಪೂರ್ಣ ವಿಶಿಷ್ಟವಾದ ಬೈಕ್ ಅನ್ನು ಹುಡುಕುತ್ತಿರುವವರಿಗಾಗಿ ರೇಂಜರ್ ಬೆಸ್ಟ್ ಆಯ್ಕೆಯಾಗಿದೆ ಎಂದು ಕಂಪನಿ ಪ್ರತಿಕಾ ಪ್ರಕಟಣೆಯಲ್ಲಿ ಹೇಳಿದೆ.

ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದಂತೆ, ಬೈಕ್ ಮತ್ತು ಇ - ಸೈಕಲ್ ಎರಡರ ಮಿಶ್ರಣದೊಂದಿಗೆ ಆಕ್ರಮಣಕಾರಿ ನಿಲುವು, ದಪ್ಪ ಟೈರ್‌ಗಳು ಮತ್ತು ಥ್ರೊಟಲ್ ಅನ್ನು ಒಳಗೊಂಡಿದ್ದು, ಇದು ಹಲವು ಪ್ರಯೋಜನಗಳನ್ನು ನೀಡುತ್ತದೆ. ಪರವಾನಗಿ ಅಗತ್ಯವಿಲ್ಲ, ಇಂಧನ ತುಂಬುವುದು ಅಥವಾ ನೋಂದಣಿ ಮಾಡಿಸುವ ತೊಂದರೆಗಳಿಲ್ಲದೆ ಮೋಟಾರ್‌ ಸೈಕಲ್‌ನ ಉತ್ಸಾಹವನ್ನು ನೀಡುತ್ತದೆ.

emotorad-launched-new-adventure-ranger-e-cycle

ಅಡ್ವೆಂಚರ್ ರೇಂಜರ್ ಇ - ಸೈಕಲ್ ವಿಶೇಷತೆಗಳು

ಮೋಟೋ - ಶೈಲಿಯ ನಿರ್ಮಾಣದೊಂದಿಗೆ ದೃಢವಾದ ಹೈ - ಟೆನ್ಸೈಲ್ ಸ್ಟೀಲ್ ಫ್ರೇಮ್ ಹೊಂದಿರುವ ರೇಂಜರ್ ಇ - ಸೈಕಲ್, 7 - ಸ್ಪೀಡ್ ಶಿಮಾನೋ ಗೇರ್‌ಗಳನ್ನು ಹೊಂದಿದೆ. 48V 12.75Ah ತೆಗೆಯಬಹುದಾದ ಬ್ಯಾಟರಿಯೊಂದಿಗೆ ಸಿಂಗಲ್ ಚಾರ್ಜ್‌ನಲ್ಲಿ 75 ಕಿ.ಮೀ ಓಡಿಸಬಹುದು. ಹಾಗೆಯೇ ಥ್ರೊಟಲ್ ಮೂಲಕ 60 ಕಿ.ಮೀ ವರೆಗೆ ವೇಗವನ್ನು ತಲುಪಬಹುದು.

ಕ್ಲಸ್ಟರ್ C6+ ಡಿಸ್ಪ್ಲೇ ಹೊಂದಿದ್ದು, ಒಂದು ನೋಟದಲ್ಲಿ ಅಗತ್ಯ ಸವಾರಿ ಮಾಹಿತಿಯನ್ನು ಒದಗಿಸುತ್ತದೆ. ಹಾಗೆಯೇ ಡಬಲ್ ಕ್ರೌನ್ ಸಸ್ಪೆನ್ಷನ್ (120mm ಟ್ರಾವೆಲ್) ಹೊಂದಿದ್ದು, ಉಬ್ಬುಗಳು ಮತ್ತು ಆಫ್ - ರೋಡ್ ಹಾದಿಗಳಲ್ಲಿ ಮುನ್ನುಗ್ಗುವ ಸಾಮರ್ಥ್ಯವನ್ನು ಹೊಂದಿದೆ. 110 ಕೆ.ಜಿ ವರೆಗೆ ತೂಕವನ್ನು ಹೊರುವ ಸಾಮರ್ಥ್ಯವಿದ್ದು, 5.4 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಸವಾರರಿಗೆ ಹೊಂದಿಕೊಳ್ಳುತ್ತದೆ.

emotorad-launched-new-adventure-ranger-e-cycle

ಇಮೋಟೋರಾಡ್ ಕಂಪನಿಯು ಗುಣಮಟ್ಟದ ಭರವಸೆ ಕೂಡ ನೀಡುತ್ತಿದ್ದು, 5 - ವರ್ಷಗಳ ಫ್ರೇಮ್ ವಾರೆಂಟಿ ಒದಗಿಸಲಾಗಿದೆ. ರೇಂಜರ್ ಈಗ ರೂ. 55,999 ಬೆಲೆಯಲ್ಲಿ EMotorad ನ ರಾಷ್ಟ್ರವ್ಯಾಪಿ ಡೀಲರ್‌ಶಿಪ್ ನೆಟ್‌ವರ್ಕ್ ಮತ್ತು ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್ ಸೇರಿದಂತೆ ಪ್ರಮುಖ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಖರೀದಿಸಬಹುದು.

ಭಾರತದಲ್ಲಿ ತಯಾರಿಸಲ್ಪಟ್ಟ ರೇಂಜರ್, ವಿಕಸನಗೊಳ್ಳುತ್ತಿರುವ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ನಿರ್ಮಾಣಗೊಂಡಿದೆ. ಸ್ಕೂಟರ್‌ಗಳು ಮತ್ತು ಇಂಧನ ಚಾಲಿತ ದ್ವಿಚಕ್ರ ವಾಹನಗಳಿಗೆ ಪರ್ಯಾಯ ಆಯ್ಕೆಯಾಗಿ ಸ್ಮಾರ್ಟ್, ಸ್ಟೈಲಿಶ್, ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಇ - ಸೈಕಲ್‌ಗಳಿಗಿಂತ ಉತ್ತಮವಾಗಿದೆ ಎಂದು ಕಂಪನಿ ಹೇಳಿದೆ.

emotorad-launched-new-adventure-ranger-e-cycle

ಉತ್ತಮ ಗ್ರಿಪ್‌ಗಾಗಿ ದಪ್ಪವಾದ 20 ಇಂಚಿನ ಟೈರ್‌ಗಳು ಮತ್ತು ಸುಗಮ ಸವಾರಿಗಾಗಿ ಡಬಲ್ ಕ್ರೌನ್ ಸಸ್ಪೆನ್ಷನ್‌ನೊಂದಿಗೆ, ಇದು ನಗರದ ಬೀದಿಗಳು ಮತ್ತು ಒರಟಾದ ಹಾದಿಗಳಲ್ಲಿ ಸುಲಭವಾಗಿ ಒಡಬಲ್ಲದು. ಸೌಕರ್ಯ ಮತ್ತು ಸ್ವಚ್ಛ ಪರಿಸರಕ್ಕಾಗಿ ವಿನ್ಯಾಸಗೊಳಿಸಲಾದ ರೇಂಜರ್, ಇ - ಸೈಕಲ್ ಹೊಸ ಯುಗದ ಯುವಕರ ಆಕರ್ಷಕ ಆಯ್ಕೆಯಾಗಿದೆ.

"ಇದು ಮೋಜು ಮತ್ತು ಪರ್ಫಾಮೆನ್ಸ್ ನಡುವೆ ರಾಜಿ ಮಾಡಿಕೊಳ್ಳಲು ಇಷ್ಟಪಡದವರಿಗಾಗಿ ವಿನ್ಯಾಸಗೊಳಿಸಲಾದ ವಾಹನವಾಗಿದೆ. ರೇಂಜರ್ ಮೋಟಾರ್‌ಬೈಕ್‌ನಂತೆ ಕಾಣುತ್ತದೆ, ಇ - ಸೈಕಲ್‌ನಂತೆ ಸವಾರಿ ಮಾಡುತ್ತದೆ. ರೋಮಾಂಚಕಾರಿಯ ಅನುಭವದ ಜೊತೆಗೆ ಎಲೆಕ್ಟ್ರಿಕ್ ಆಗಿರಬೇಕು ಎಂಬ ನಮ್ಮ ನಂಬಿಕೆಗೆ ತಕ್ಕಂತೆ ಜೀವಿಸುತ್ತದೆ" ಎಂದು ಇಮೋಟೊರಾಡ್‌ನ ಸಿಇಒ ಕುನಾಲ್ ಗುಪ್ತಾ ಹೇಳಿದರು.

More from DriveSpark

Article Published On: Wednesday, July 16, 2025, 18:50 [IST]
English summary
Emotorad launched new adventure ranger e cycle
Read more on electric vehicles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+