ಆಕರ್ಷಕ ಎಲೆಕ್ಟ್ರಿಕ್ ಬೈ-ಸೈಕಲ್! ಕೇವಲ 56 ಸಾವಿರ ರೂ. ಬೆಲೆ... ಖರ್ಚಿಲ್ಲದೆ 75 ಕಿ.ಮೀ ಓಡಿಸಿ!

ಭಾರತದ ಪ್ರಮುಖ ಎಲೆಕ್ಟ್ರಿಕ್ ಸೈಕಲ್ ತಯಾರಕರಾದ ಇಮೋಟೊರಾಡ್ (EMotorad), ಇ - ಸೈಕಲ್‌ನ ಅನುಕೂಲತೆ ಮತ್ತು ಮೋಟಾರ್‌ಸೈಕಲ್ ಮಿಶ್ರಣದೊಂದಿಗೆ ಹೊಸ ಮೋಟೋ-ಶೈಲಿಯ ಅಡ್ವೆಂಚರ್ 'ರೇಂಜರ್ ಇ - ಸೈಕಲ್' ಅನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿದೆ. ಒರಟಾದ ಹೈ-ಟೆನ್ಸೈಲ್ ಸ್ಟೀಲ್ ಫ್ರೇಮ್‌ನೊಂದಿಗೆ ವಿಶಿಷ್ಟ ಮೋಟಾರ್‌ಸೈಕಲ್ ಆಗಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಭಾಗಶಃ ಮೋಟೋ ಡಿಸೈನ್‌ನೊಂದಿಗೆ ಸಂಪೂರ್ಣ ವಿಶಿಷ್ಟವಾದ ಬೈಕ್ ಅನ್ನು ಹುಡುಕುತ್ತಿರುವವರಿಗಾಗಿ ರೇಂಜರ್ ಬೆಸ್ಟ್ ಆಯ್ಕೆಯಾಗಿದೆ ಎಂದು ಕಂಪನಿ ಪ್ರತಿಕಾ ಪ್ರಕಟಣೆಯಲ್ಲಿ ಹೇಳಿದೆ.

ನಗರ ರಸ್ತೆಗಳು ಮತ್ತು ಆಫ್ - ರೋಡ್ ಹಾದಿಗಳಲ್ಲಿ ಸುಧಾರಿತ ಹಿಡಿತ ಮತ್ತು ಸ್ಥಿರತೆಗಾಗಿ ಫ್ಯಾಟ್ 20 - ಇಂಚಿನ ಟೈರ್‌ಗಳನ್ನು ಈ ಸೈಕಲ್‌ನಲ್ಲಿ ಅಳವಡಿಸಲಾಗಿದೆ. ಆಘಾತಗಳನ್ನು ತಪ್ಪಿಸಲು ಮತ್ತು ಒರಟಾದ ಭೂಪ್ರದೇಶದಲ್ಲಿ ಆರಾಮದಾಯಕ ಸವಾರಿಗಳನ್ನು ಒದಗಿಸಲು 120mm ಪ್ರಯಾಣದೊಂದಿಗೆ ಡಬಲ್ ಕ್ರೌನ್ ಸಸ್ಪೆನ್ಷನ್ ನೀಡಲಾಗಿದೆ.

emotorad-new-adventure-ranger-e-cycle-top-things

ಈ ಎಲೆಕ್ಟ್ರಿಕ್ ಸೈಕಲ್ 110 ಕೆ.ಜಿ ಇರುವ ವ್ಯಕ್ತಿಗಳನ್ನು ಹೊರಬಲ್ಲದು, ಗರಿಷ್ಠ ರೈಡರ್ ಸಾಮರ್ಥ್ಯದೊಂದಿಗೆ 5.4 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಎತ್ತರವಿರುವ ಸವಾರರಿಗೆ ಸೂಕ್ತವಾಗಿರುತ್ತದೆ. 250W ಮೋಟಾರ್‌ನಿಂದ ಚಾಲಿತವಾಗಿದ್ದು, 48V, 12.75Ah ತೆಗೆಯಬಹುದಾದ ಲಿಥಿಯಂ - ಐಯಾನ್ ಬ್ಯಾಟರಿಯೊಂದಿಗೆ ಸಜ್ಜುಗೊಂಡಿದೆ. ಪೆಡಲ್ ಅಸಿಸ್ಟ್ ಮೋಡ್‌ನಲ್ಲಿ 75 ಕಿ.ಮೀ ರೇಂಜ್ ಮತ್ತು ಥ್ರೊಟಲ್ ಮೋಡ್‌ನಲ್ಲಿ 60 ಕಿ.ಮೀ ಓಡಿಸಬಹುದು.

ಗರಿಷ್ಠ ವೇಗ ಗಂಟೆಗೆ 25 ಕಿ.ಮೀ ಇದ್ದು, ವಿವಿಧ ಮೇಲ್ಮೈಗಳಲ್ಲಿ ಬಹುಮುಖ ಬದಲಾವಣೆಗಾಗಿ 7 - ಸ್ಪೀಡ್ ಶಿಮಾನೋ ಗೇರ್‌ಗಳನ್ನು ಒಳಗೊಂಡಿದೆ. ಪೆಡಲಿಂಗ್ ಇಲ್ಲದೆ ಸುಲಭ ವೇಗವರ್ಧನೆಗಾಗಿ ಥ್ರೊಟಲ್ - ಶಕ್ತಗೊಂಡ ಮೋಟಾರ್ ಒಳಗೊಂಡಿರುವುದು ಇದರ ವಿಶೇಷತೆಯಾಗಿದೆ. ವೇಗ, ಬ್ಯಾಟರಿ ಮಟ್ಟ ಮತ್ತು ಇತರ ಅಗತ್ಯ ಸವಾರಿ ಮೆಟ್ರಿಕ್‌ಗಳನ್ನು ತೋರಿಸುವ ಕ್ಲಸ್ಟರ್ C6+ ಡಿಜಿಟಲ್ ಡಿಸ್ಪ್ಲೇಯನ್ನು ನೀಡಲಾಗಿದೆ.

emotorad-new-adventure-ranger-e-cycle-top-things

ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಓಡಿಸಲು ಯಾವುದೇ ಪರವಾನಗಿ ಅಥವಾ ನೋಂದಣಿ ಅಗತ್ಯವಿಲ್ಲ. ಇದನ್ನು ಕೊನೆಯ ಮೈಲಿ ಅಥವಾ ನಗರ ಪ್ರಯಾಣಿಕ ವಾಹನವಾಗಿ ಒಡಿಸಬಹುದು. 5 ವರ್ಷಗಳ ಫ್ರೇಮ್ ವಾರೆಂಟಿಯೊಂದಿಗೆ ಬರುತ್ತದೆ. ಇಮೊಟೊರಾಡ್‌ನ ಡೀಲರ್‌ಶಿಪ್ ನೆಟ್‌ವರ್ಕ್, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಇದು ಖರೀದಿಗೆ ಲಭ್ಯವಿದೆ.

ಒಟ್ಟಾರೆ ಇಮೊಟೊರಾಡ್ ರೇಂಜರ್ ಮೋಟಾರ್‌ಸೈಕಲ್ ಡಿಸೈನ್ ಮತ್ತು ಎಲೆಕ್ಟ್ರಿಕ್ ಸೈಕಲ್‌ನ ಉಪಯುಕ್ತತೆಯನ್ನು ನೀಡುತ್ತದೆ. ಮೋಟಾರ್‌ಬೈಕ್ ಪರವಾನಗಿ ಅಥವಾ ನೋಂದಣಿಯ ಸಂಕೀರ್ಣತೆ ಇಲ್ಲದೆ ಪರಿಸರ ಸ್ನೇಹಿ ವಾಹನವನ್ನು ಹುಡುಕುತ್ತಿರುವ ನಗರ ಮತ್ತು ಟ್ರಯಲ್ ಸವಾರರಿಗೆ ಇದನ್ನು ಕೈಗೆಟುಕುವ ಮತ್ತು ಅತ್ಯಾಕರ್ಷಕ ಪರ್ಯಾಯವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

emotorad-new-adventure-ranger-e-cycle-top-things

ಇಮೋಟೋರಾಡ್ ರೇಂಜರ್ ಸೈಕಲ್ ರೂ. 55,999 ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸ್ಕೂಟರ್‌ಗಳು ಮತ್ತು ಇಂಧನ ಚಾಲಿತ ದ್ವಿಚಕ್ರ ವಾಹನಗಳಿಗೆ ಪರ್ಯಾಯ ಆಯ್ಕೆಯಾಗಿ ಸ್ಮಾರ್ಟ್, ಸ್ಟೈಲಿಶ್, ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ಇ - ಸೈಕಲ್‌ಗಳಿಗಿಂತ ಉತ್ತಮವಾಗಿದೆ ಎಂದು ಕಂಪನಿ ಹೇಳಿದೆ.

"ಇದು ಮೋಜು ಮತ್ತು ಪರ್ಫಾಮೆನ್ಸ್ ನಡುವೆ ರಾಜಿ ಮಾಡಿಕೊಳ್ಳಲು ಇಷ್ಟಪಡದವರಿಗಾಗಿ ವಿನ್ಯಾಸಗೊಳಿಸಲಾದ ವಾಹನವಾಗಿದೆ. ರೇಂಜರ್ ಮೋಟಾರ್‌ಬೈಕ್‌ನಂತೆ ಕಾಣುತ್ತದೆ, ಇ - ಸೈಕಲ್‌ನಂತೆ ಸವಾರಿ ಮಾಡುತ್ತದೆ. ರೋಮಾಂಚಕಾರಿಯ ಅನುಭವದ ಜೊತೆಗೆ ಎಲೆಕ್ಟ್ರಿಕ್ ಆಗಿರಬೇಕು ಎಂಬ ನಮ್ಮ ನಂಬಿಕೆಗೆ ತಕ್ಕಂತೆ ಜೀವಿಸುತ್ತದೆ" ಎಂದು ಇಮೋಟೊರಾಡ್‌ನ ಸಿಇಒ ಕುನಾಲ್ ಗುಪ್ತಾ ಹೇಳಿದ್ದಾರೆ.

Article Published On: Friday, July 18, 2025, 18:30 [IST]
English summary
Emotorad new adventure ranger e cycle top things
Read more on electric vehicles india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+