Hero: ಅಗ್ಗದ ದರದ ಹೀರೋ ಡೆಸ್ಟಿನಿ 125 ಸ್ಕೂಟರ್ ಬಿಡುಗಡೆ.. ಏನಿದರ ವಿಶೇಷತೆ?
ಹೀರೋ ಮೋಟೋಕಾರ್ಪ್ (Hero MotoCorp), ನಂಬರ್ 1 ದ್ವಿಚಕ್ರ ವಾಹನ (Two-Wheeler) ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಬೈಕ್ ಹಾಗೂ ಸ್ಕೂಟರ್‌ಗಳು ಹೆಚ್ಚು ಜನಪ್ರಿಯತೆ ಗಳಿಸಿವೆ. ಸಂಕ್ರಾಂತಿ ಹಬ್ಬದ ದಿನವೇ ಹೀರೋ ಕಂಪನಿಯು ತನ್ನ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 2025ರ ಹೊಚ್ಚ ಹೊಸ ಡೆಸ್ಟಿನಿ 125 (Destini 125) ಸ್ಕೂಟರ್‌ನ್ನು ಮಾರಾಟಕ್ಕೆ ತಂದಿದೆ. ಬನ್ನಿ.. ನೂತನ ಸ್ಕೂಟರ್‌ನ ಬೆಲೆ, ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.
ಬೆಲೆ & ರೂಪಾಂತರಗಳು (Price & Variants): ಹೊಚ್ಚ ಹೊಸ ಹೀರೋ ಡೆಸ್ಟಿನಿ 125 (Hero Destini 125) ಸ್ಕೂಟರ್, ರೂ.80,450 ರಿಂದ ರೂ.90,300 (ಎಕ್ಸ್ ಶೋರೂಂ - ದೆಹಲಿ) ಬೆಲೆಯನ್ನು ಹೊಂದಿದೆ. ವಿಎಕ್ಸ್, ಝಡ್ಎಕ್ಸ್ ಮತ್ತು ಝಡ್ಎಕ್ಸ್ ಪ್ಲಸ್ ಎಂಬ ಮೂರು ಆಕರ್ಷಕ ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿಯೂ ಸಿಗುತ್ತದೆ.

ವಿನ್ಯಾಸ (Design): ನೂತನ ಹೀರೋ ಡೆಸ್ಟಿನಿ 125 ಸ್ಕೂಟರ್, ನೋಡುಗರ ಕಣ್ಣು ಕುಕ್ಕುವಂತಹ ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಇದು ಪ್ರತಿಯೊಬ್ಬರನ್ನು ಸೆಳೆಯುತ್ತದೆ. ಕರ್ವಿ ಬಾಡಿ ವರ್ಕ್ ಹೊಂದಿದ್ದು, ವಿನೂತನವಾದ ಎಲ್ಇಡಿ ಹೆಡ್‌ಲೈಟ್, ಅಚ್ಚುಕಟ್ಟಾಗಿರುವ ಟರ್ನ್- ಇಂಡಿಕೇಟರ್‌ಗಳು, ಸ್ಲೀಕ್ ಟೈಲ್ ಲೈಟ್‌ನ್ನು ಪಡೆದಿದೆ.
ಬಣ್ಣಗಳು (Colars): ಈ ಸ್ಕೂಟರ್‌ನ ವಿಎಕ್ಸ್ (VX) ರೂಪಾಂತರ ಎಟರ್ನಲ್ ವೈಟ್, ರೀಗಲ್ ಬ್ಲ್ಯಾಕ್ & ಗ್ರೂವಿ ರೆಡ್ ಎಂಬ ಅತ್ಯಾಧುನಿಕ ಬಣ್ಣಗಳೊಂದಿಗೆ ಲಭ್ಯವಾಗುತ್ತದೆ. ಝಡ್ಎಕ್ಸ್ (ZX) ರೂಪಾಂತರ ಕಾಸ್ಮಿಕ್ ಬ್ಲೂ & ಮಿಸ್ಟಿಕ್ ಮೆಜೆಂಟಾ ಮತ್ತು ಝಡ್ಎಕ್ಸ್ ಪ್ಲಸ್ (ZX+) ರೂಪಾಂತರ ಎಟರ್ನಲ್ ವೈಟ್ & ರೀಗಲ್ ಬ್ಲ್ಯಾಕ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ.
ಕಾರ್ಯಕ್ಷಮತೆ (Performance): ಹೊಸ ಹೀರೋ ಡೆಸ್ಟಿನಿ 125 ಸ್ಕೂಟರ್ 125 ಸಿಸಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, 9 ಬಿಹೆಚ್‍ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 10.4 ಎನ್ಎಂ (ನ್ಯೂಟನ್ ಮೀಟರ್) ಹೊರಹಾಕುತ್ತದೆ. ಜೊತೆಗೆ ಈ ಸ್ಕೂಟರ್ 45 ಕೆಎಂಪಿಎಲ್‌ವರೆಗೆ ಮೈಲೇಜ್ ಸಹ ಕೊಡುತ್ತದೆ ಎಂದು ಅಂದಾಜಿಸಲಾಗಿದೆ.
ವೈಶಿಷ್ಟ್ಯಗಳು (Features): ನೂತನ ಸ್ಕೂಟರ್ ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ವಿಎಕ್ಸ್ ರೂಪಾಂತರ, ಡಿಜಿಟಲ್ ಅನಲಾಗ್ ಡಿಸ್‌ಪ್ಲೇ ಮತ್ತು ಝಡ್‌ಎಕ್ಸ್ & ಝಡ್‌ಎಕ್ಸ್ ಪ್ಲಸ್ ರೂಪಾಂತರಗಳು ಫುಲ್-ಡಿಜಿಟಲ್ ಡಿಸ್‌ಪ್ಲೇಯನ್ನು ಪಡೆದಿವೆ. ಇದರೊಟ್ಟಿಗೆ ಎಲ್ಲ ಮಾದರಿಗಳು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಬೂಟ್ ಲ್ಯಾಂಪ್ ಹಾಗೂ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿವೆ.
ಸಸ್ಪೆನ್ಷನ್ ಸೆಟಪ್ & ಬ್ರೇಕಿಂಗ್ ಸಿಸ್ಟಮ್ (Suspension Setup & Braking System): ಈ ಹೀರೋ ಡೆಸ್ಟಿನಿ 125 ಸ್ಕೂಟರ್ ಸ್ಕೂಟರ್, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಮಾನೋಶಾಕ್ ಸೆಟಪ್ ಆಯ್ಕೆಯನ್ನು ಪಡೆದಿದೆ. ಪ್ರಯಾಣಿಕರ ರಕ್ಷಣೆಗಾಗಿ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








