Hero: ಬಡವರು ತೆಗೆದುಕೊಳ್ಳಬಹುದು.. ಅಗ್ಗದ ಹೀರೋ ಗ್ಲಾಮರ್ ಬೈಕ್‌ನ ಆನ್-ರೋಡ್ ಬೆಲೆ ಏನು, EMI ಇಷ್ಟೇನಾ?
ಹೀರೋ ಗ್ಲಾಮರ್ (Hero Glamour) ಜನಪ್ರಿಯ ಪ್ರಯಾಣಿಕ ಮೋಟಾರ್‌ಸೈಕಲ್ ಆಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದೆ. ಅದಕ್ಕೆ ತಕ್ಕಂತೆ ಆಕರ್ಷಕ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ನೀವು ಹೊಚ್ಚ ಹೊಸ 'ಗ್ಲಾಮರ್' ಬೈಕ್‌ನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ನಾವಿಲ್ಲಿ ಈ ಮೋಟಾರ್‌ಸೈಕಲ್‌ನ ಆನ್-ರೋಡ್ ಬೆಲೆ (On Road Price) ಹಾಗೂ ಇಎಂಐ (Emi) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.
ಬೆಂಗಳೂರಿನಲ್ಲಿ 'ಹೀರೋ ಗ್ಲಾಮರ್' ಬೈಕ್ ವಿವಿಧ ರೂಪಾಂತರಗಳೊಂದಿಗೆ (ವೇರಿಯೆಂಟ್) ಗ್ರಾಹಕರ ಖರೀದಿ ದೊರೆಯುತ್ತದೆ. ಇದರ ಡಿಸ್ಕ್ (Disc) ರೂಪಾಂತರ ರೂ.1.10 ಲಕ್ಷವರೆಗೆ ಆನ್-ರೋಡ್ ದರವನ್ನು ಪಡೆದಿದೆ. ರೂ.30,000 ಡೌನ್-ಪೇಮೆಂಟ್ ಪಾವತಿಸಿ ತೆಗೆದುಕೊಂಡಿರೆ, ರೂ.80,000 ಸಾಲ ಉಳಿಯುತ್ತದೆ. ಅದಕ್ಕೆ ಶೇಕಡ 9.8% ಬಡ್ಡಿ ದರದಲ್ಲಿ 3 ವರ್ಷದ ಅವಧಿಗೆ ತಿಂಗಳಿಗೆ ರೂ.2,600 ವರೆಗೆ ಇಎಂಐ ಕಟ್ಟಬೇಕು.

ಅದೇ ರೀತಿಯಲ್ಲಿ 'ಗ್ಲಾಮರ್' ಮೋಟಾರ್‌ಸೈಕಲ್‌ನ ಡ್ರಮ್ (Drum) ರೂಪಾಂತರ, ರೂ.1.06 ಲಕ್ಷವರೆಗೆ ಆನ್-ರೋಡ್ ಬೆಲೆಯನ್ನು ಒಳಗೊಂಡಿದೆ. ಇದನ್ನು ರೂ.30,000 ಡೌನ್-ಪೇಮೆಂಟ್ ಕಟ್ಟಿ ಕೊಂಡುಕೊಂಡರೆ, ರೂ.76,000 ವರೆಗೆ ಸಾಲವಿರುತ್ತದೆ. ಶೇಕಡ 9.8% ಬಡ್ಡಿ ದರದಲ್ಲಿ 3 ವರ್ಷಗಳಿಗೆ ಮಾಸಿಕ ರೂ.2,400 ವರೆಗೆ ಇಎಂಐ ಪಾವತಿ ಮಾಡಬೇಕು.
ಈ ಬೈಕ್ ಉತ್ತಮವಾದ ವಿನ್ಯಾಸವನ್ನು ಹೊಂದಿದೆ. ಇದು ಎಲ್ಇಡಿ ಹೆಡ್‌ಲೈಟ್ ಮತ್ತು ಸಿಂಗಲ್ ಪೀಸ್ ಸೀಟ್‌ನ್ನು ಒಳಗೊಂಡಿದೆ. ಕ್ಯಾಂಡಿ ಬ್ಲೇಜಿಂಗ್ ರೆಡ್, ಬ್ಲ್ಯಾಕ್ ಮೆಟಾಲಿಕ್ ಸಿಲ್ವರ್ ಮತ್ತು ಟೆಕ್ನೋ ಬ್ಲೂ ಮ್ಯಾಟ್ ಬ್ಲ್ಯಾಕ್ ಎಂಬ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಿದೆ.

ಇದು ಬಲಿಷ್ಠವಾದ ಪವರ್‌ಟ್ರೇನ್ ಆಯ್ಕೆಯನ್ನು ಪಡೆದಿದೆ. 124 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 10 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 10.4 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. ಜೊತೆಗೆ 63 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡುತ್ತದೆ.
ನೂತನ ಗ್ಲಾಮರ್ ಮೋಟಾರ್‌ಸೈಕಲ್ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮತ್ತು 18-ಇಂಚಿನ ಅಲಾಯ್ ವೀಲ್‌ಗಳನ್ನು ಪಡೆದಿದೆ. ಇದು ಸರಿ ಸುಮಾರು 121 ಕೆಜಿ ತೂಕವಿದೆ. 13.6 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ.

ಈ ಬೈಕ್ ಮುಂದೆ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂದೆ (ರೇರ್) 5 - ಸ್ಟೆಪ್ ಪ್ರಿಲೋಡ್ ಅಡ್ಜಸ್ಟಬಲ್ ಡುಯಲ್ - ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. ಸವಾರರ ರಕ್ಷಣೆಗಾಗಿ ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಹೊಂದಿದೆ.
ಹೊಸ 'ಹೀರೋ ಗ್ಲಾಮರ್'ಗೆ ಹೋಂಡಾ ಎಸ್‍ಪಿ 125 (Honda SP 125) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಇದು ರೂ.94,000 ರಿಂದ ರೂ.1 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 123 ಸಿಸಿ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಪಡೆದಿದ್ದು, 63 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡುತ್ತದೆ. ಡಿಜಿಟಲ್ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕನ್ಸೋಲ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಫಂಕ್ಷನ್ & ಸೈಲೆಂಟ್ ಸ್ಟಾರ್ಟರ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ನಿಮ್ಮ ಗಮನಕ್ಕೆ.. ಈ ಹೀರೋ ಗ್ಲಾಮರ್ ಮೋಟಾರ್‌ಸೈಕಲ್ ಆನ್-ರೋಡ್ ಬೆಲೆ ಹಾಗೂ ಸಾಲದ ಆಯ್ಕೆಗಳು ಬೇರೆ ಬೇರೆಯಾಗಿರಲಿದೆ. ಹೆಚ್ಚಿನ ಮಾಹಿತಿಗೆ ಸಮೀಪದ ಶೋರೂಂಗೆ ಭೇಟಿ ನೀಡಿರಿ.


Click it and Unblock the Notifications








