ಬೆಂಗಳೂರಿನಲ್ಲಿ ನಾಲ್ಕನೇ 'ಹೀರೋ ಪ್ರೀಮಿಯಾ' ಡೀಲರ್‌ಶಿಪ್ ಉದ್ಘಾಟನೆ: ಎಲ್ಲಿ?
ಅತಿದೊಡ್ಡ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ತಯಾರಕ ಕಂಪನಿಯಾದ ಹೀರೋ ಮೋಟೋಕಾರ್ಪ್, ಗ್ರಾಹಕರಿಗೆ ತನ್ನ ಪ್ರೀಮಿಯಂ ಉತ್ಪನ್ನಗಳನ್ನು ಸುಲಭವಾಗಿ ಒದಗಿಸಲು ಬೆಂಗಳೂರಿನ ಬಾಣಸವಾಡಿಯ ಹೊರಮಾವು ಸಿಗ್ನಲ್ ಬಳಿ ಹೀರೋ ಪ್ರೀಮಿಯಾ ಡೀಲರ್ ಶಿಪ್ ಅನ್ನು ಉದ್ಘಾಟನೆ ಮಾಡಿದೆ. ಈ ಮೂಲಕ ಕಂಪನಿಯು ಕರ್ನಾಟಕದ ಬೆಂಗಳೂರಿನಲ್ಲಿ ತನ್ನ ನಾಲ್ಕನೇ ಹೀರೋ ಪ್ರೀಮಿಯಾ ಡೀಲರ್ ಶಿಪ್ ಅನ್ನು ಉದ್ಘಾಟಿಸಿದೆ. ಅಲ್ಲದೇ ಈ ಹೊಸ ಡೀಲರ್‌ಶಿಪ್ ಉದ್ಘಾಟನೆಗೊಳ್ಳುವ ಮೂಲಕ ಹೀರೋ ಮೋಟೋಕಾರ್ಪ್ ನ ಪ್ರೀಮಿಯಾ ಡೀಲರ್‌ಶಿಪ್ ಮಳಿಗೆಗಳ ಸಂಖ್ಯೆ 83ಕ್ಕೆ ಏರಿದೆ ಎಂದು ಕಂಪನಿ ಹೇಳಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಈ ಶೋರೂಂ ಅನ್ನು ಉದ್ಘಾಟಿಸಿದರು. ಈ ಅತ್ಯಾಧುನಿಕ ಶೋರೂಂನಲ್ಲಿ ಹೀರೋ, ವಿಡಾ ಮತ್ತು ಹಾರ್ಲೆ-ಡೇವಿಡ್ ಸನ್ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಾಡಲಾಗುವುದು. ಈ ಡೀಲರ್ ಶಿಪ್ ಉದ್ಘಾಟನೆಗೊಳ್ಳುವ ಮೂಲಕ ಕರ್ನಾಟಕದಲ್ಲಿ ಈಗ ಬೆಂಗಳೂರು, ದಾವಣಗೆರೆ, ಮೈಸೂರು ಮತ್ತು ಚಿತ್ರದುರ್ಗದಾದ್ಯಂತ ಒಟ್ಟು ಏಳು ಹೀರೋ ಪ್ರೀಮಿಯಾ ಡೀಲರ್ ಶಿಪ್ ಇವೆ.

ಹೀರೋ ಪ್ರೀಮಿಯಾ ಶೋರೂಂ ಆಧುನಿಕ ಶೈಲಿಯ ಡಿಸೈನ್, ಆಕರ್ಷಕ ವಿನ್ಯಾಸ ಮತ್ತು ಹೊಸ ಕಾಲದ ಡಿಜಿಟಲ್ ತಂತ್ರಜ್ಞಾನಗಳನ್ನು ಒಳಗೊಂಡಿದ್ದು, ಎಲ್ಲಾ ಗ್ರಾಹಕರಿಗೆ ಅತ್ಯುತ್ತಮ ಆಟೋಮೋಟಿವ್ ಅನುಭವ ಒದಗಿಸಲಿದೆ. ಶೋರೂಂನಲ್ಲಿ ಅತ್ಯುತ್ತಮ ಅನುಭವವನ್ನು ಒದಗಿಸಲು ವೃತ್ತಿಪರವಾಗಿ ತರಬೇತಿ ಪಡೆದ ಮಾರಾಟ ಮತ್ತು ಸೇವಾ ಸಲಹೆಗಾರರ ತಂಡ ಲಭ್ಯವಿದ್ದು, ಗ್ರಾಹಕರ ಸಾರಿಗೆ ವ್ಯವಸ್ಥೆಯ ಅಗತ್ಯಗಳಿಗೆ ತಕ್ಕಂತೆ ವೈಯಕ್ತಿಕ ಸಲಹೆಯನ್ನು ನೀಡುತ್ತದೆ.
ಹೀರೋ ಪ್ರೀಮಿಯಾ ಡೀಲರ್‌ಶಿಪ್ ನಲ್ಲಿ ಮಾವ್‌ರಿಕ್ 440, ಎಕ್ಸ್ ಟ್ರೀಮ್ 250ಆರ್, ಎಕ್ಸ್ ಟ್ರೀಮ್ 160 ಶ್ರೇಣಿ, ಎಕ್ಸ್ ಪಲ್ಸ್ 210, ಎಕ್ಸ್ ಪಲ್ಸ್ 200 ಶ್ರೇಣಿ, ಕರಿಝ್ಮಾ ಎಕ್ಸ್ಎಂಆರ್, ಹಾರ್ಲೆ-ಡೇವಿಡ್‌ಸನ್ ಎಕ್ಸ್440 ಮತ್ತು ವಿಡಾ ವಿ2 ಶ್ರೇಣಿಯನ್ನು ಒಳಗೊಂಡಂತೆ ಪ್ರೀಮಿಯಂ ಉತ್ಪನ್ನಗಳು ದೊರೆಯಲಿದೆ. ಜೊತೆಗೆ ವಿಶೇಷ ದಿರಿಸುಗಳು ಮತ್ತು ಪರಿಕರಗಳ ಶ್ರೇಣಿಯನ್ನು ಸಹ ಒದಗಿಸುತ್ತದೆ.
ಈ ಹೊಸ ಡೀಲರ್‌ಶಿಪ್ ಉದ್ಘಾಟನೆಗೊಳ್ಳುವ ಮೂಲಕ ಹೀರೋ ಮೋಟೋಕಾರ್ಪ್ ನ ಪ್ರೀಮಿಯಾ ಡೀಲರ್ ಶಿಪ್ ಮಳಿಗೆಗಳ ಸಂಖ್ಯೆ 83ಕ್ಕೆ ಏರಿರುವುದು ಖುಷಿ ತಂದಿದೆ. ಬೆಂಗಳೂರಿನಲ್ಲಿ ತನ್ನ ನಾಲ್ಕನೇ ಹೀರೋ ಪ್ರೀಮಿಯಾ ಡೀಲರ್ ಶಿಪ್ ಆಗಿದ್ದು, ಗ್ರಾಹಕರಿಗೆ ಅತ್ಯುತ್ತಮ ಆಟೋಮೋಟಿವ್ ಅನುಭವ ಒದಗಿಸಲಿದೆ.
ನಮ್ಮ ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಗ್ರಾಹಕರಿಗೆ ಖರೀದಿಸಲು ಇನ್ನೂ ಸುಲಭಗೊಳಿಸಲು ನಮ್ಮ ಈ ಪ್ರಯತ್ನಗಳಾಗಿವೆ. ಪ್ರಮುಖ ನಗರಗಳಲ್ಲಿ ಹೊಸ ಡಿಸೈನ್, ಡಿಜಿಟಲ್ ತಂತ್ರಜ್ಞಾನದೊಂದಿಗಿನ ಡೀಲರ್‌ಶಿಪ್‌ಗಳನ್ನು ಸಂದರ್ಶಿಸಲು ಗ್ರಾಹಕರು ಕೂಡ ಉತ್ಸಾಹ ತೋರುತ್ತಾರೆ. ಹಾಗೆಯೇ ನಮ್ಮ ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಖರೀದಿಸುವ ಭಾವನೆ ಇನ್ನೂ ಹೆಚ್ಚಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಒಟ್ಟಾರೆ ಹೀರೋ ಕರ್ನಾಟಕದಲ್ಲಿ ತನ್ನ ಪ್ರೀಮಿಯಾ ಡೀಲರ್‌ಗಳನ್ನು ವಿಸ್ತರಿಸುತ್ತಿರುವುದು ಕಂಪನಿಗೂ ತನಗಿರುವ ಬೇಡಿಕೆಯನ್ನು ಎತ್ತಿತೋರಿಸಿದೆ. ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಇನ್ನೂ ಹೆಚ್ಚಿನ ಹೀರೋ ಪ್ರೀಮಿಯಾ ಡೀಲರ್ ಶಿಪ್‌ಗಳನ್ನು ತೆರಯುವ ಮೂಲಕ ಹೀರೋ ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡುವ ಗುರಿಯಿದೆ ಎಂದು ಕಂಪನಿ ಹೇಳಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








