Hero: ಈ ಹೀರೋ ಬೈಕ್‌ಗೆ ಬೇಡಿಕೆ ಹೆಚ್ಚಾಯಿತು.. 100% ಪ್ರಗತಿ, ಬೆಲೆ ಎಷ್ಟು.. ವೈಶಿಷ್ಟ್ಯಗಳೇನು?

ಹೀರೋ ಪ್ಯಾಶನ್ ಪ್ಲಸ್ (Hero Passion Plus) ವಿಶ್ವಾಸಾರ್ಹ ಪ್ರಯಾಣಿಕ ಮೋಟಾರ್‌ಸೈಕಲ್ ಆಗಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಕಳೆದ ತಿಂಗಳು (ಜೂನ್ - 2025) ಬರೋಬ್ಬರಿ 26,249 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ. 2024ರ ಇದೇ ಅವಧಿಯಲ್ಲಿ 13,100 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 100.37% ಪ್ರಗತಿಯಾಗಿದೆ.

ಹೀರೋ ಪ್ಯಾಶನ್ ಪ್ಲಸ್ ಬೈಕ್ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕಗೊಳ್ಳಲು ಹಲವು ಕಾರಣಗಳಿವೆ. ಬಹುಮುಖ್ಯವಾಗಿ ಈ ಮೋಟಾರ್‌ಸೈಕಲ್ ತುಂಬಾ ಚೆನ್ನಾಗಿರುವ ವಿನ್ಯಾಸ ಹೊಂದಿದ್ದು, ನಾನಾ ಬಗೆಯ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಗರಿಷ್ಠ ಮೈಲೇಜ್ ನೀಡಬಲ್ಲದು. ಹೀಗಾಗಿ, ಮಾರಾಟ ಪ್ರಮಾಣವು ಹೆಚ್ಚಳವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

Hero Passion Plus Bike June 2025 Sales Report

ಹೀರೋ ಪ್ಯಾಶನ್ ಪ್ಲಸ್ ವಿಶೇಷತೆಗಳೇನು:

ಈ ಬೈಕ್‌ ಅಗ್ಗದ ದರದಲ್ಲಿ ಲಭ್ಯವಿದ್ದು, ರೂ.82,000 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಮಧ್ಯಮ ವರ್ಗದ ಗ್ರಾಹಕರು ಸಹ ಸುಲಭವಾಗಿ ಕೊಂಡುಕೊಳ್ಳಬಹುದು. ದಿನಬಳಕೆಗೂ ಹೆಚ್ಚು ಸೂಕ್ತವಾಗಿದ್ದು, ಬೆಂಗಳೂರಿನಂತಹ ಸಂಚಾರ ದಟ್ಟಣೆಯಿರುವ ನಗರಗಳಲ್ಲಿ ಕಚೇರಿಗೆ ತೆರಳಲು ಉಪಯೋಗ ಮಾಡಬಹುದು.

ಇದು ಪ್ರೀಮಿಯಂ ವಿನ್ಯಾಸವನ್ನು ಹೊಂದಿದ್ದು, ನೋಡುಗರನ್ನು ಸೆಳೆಯುವಂತಿದೆ. ಉತ್ತಮವಾದ ಹ್ಯಾಲೊಜೆನ್ ಹೆಡ್‌ಲೈಟ್, ಟೈಲ್‌ಲ್ಯಾಂಪ್, ಗ್ರಾಬ್ ರೈಲ್ ಹಾಗೂ ಅಲಾಯ್ ವೀಲ್‌ಗಳನ್ನು ಪಡೆದುಕೊಂಡಿದೆ. ಬ್ಲ್ಯಾಕ್ ಹೆವಿ ಗ್ರೇ, ಬ್ಲ್ಯಾಕ್ ಗ್ರೇ ಸ್ಟ್ರೈಪ್, ಸ್ಪೋರ್ಟ್ ರೆಡ್ ಮತ್ತು ಬ್ಲ್ಯಾಕ್ ನೆಕ್ಸಸ್ ಬ್ಲೂ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

Hero Passion Plus Bike June 2025 Sales Report

ನೂತನ ಹೀರೋ ಪ್ಯಾಶನ್ ಪ್ಲಸ್ ಬೈಕ್ 1,982 ಎಂಎಂ ಉದ್ದ, 770 ಎಂಎಂ ಅಗಲ ಹಾಗೂ 1,087 ಎಂಎಂ ಎತ್ತರವು ಇದೆ. ಜೊತೆಗೆ 168 ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1,235 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ. 115 ಕೆಜಿ ತೂಕವಿದ್ದು, 11 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‌ನ್ನು ತನ್ನದಾಗಿಸಿಕೊಂಡಿದೆ.

ಈ ಮೋಟಾರ್‌ಸೈಕಲ್ ಶಕ್ತಿಯುತವಾದ 97.2-ಸಿಸಿ ಸಿಂಗಲ್ ಸಿಲಿಂಡರ್, ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 8000 ಆರ್‌ಪಿಎಂನಲ್ಲಿ 7.91 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) & 6000 ಆರ್‌ಪಿಎಂನಲ್ಲಿ 8.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಹಾಗೆಯೇ 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದ್ದು, 70 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.

Hero Passion Plus Bike June 2025 Sales Report

ಹೊಸ ಪ್ಯಾಶನ್ ಪ್ಲಸ್ ಬೈಕ್ 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಕೇವಲ 9 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ. ಡಿಜಿಟಲ್ - ಅನಲಾಗ್ ಕ್ಲಸ್ಟರ್, ಇಂಟಿಗ್ರೇಟೆಡ್ ಬ್ರೇಕಿಂಗ್ ಸಿಸ್ಟಮ್, ಮೊಬೈಲ್ ಚಾರ್ಜಿಂಗ್ ಪೋರ್ಟ್ ಹಾಗೂ ಯುಟಿಲಿಟಿ ಬಾಕ್ಸ್‌ನಂತಹ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಇದು ಸವಾರರಿಗೆ ಗರಿಷ್ಠ ಮಟ್ಟದ ರಕ್ಷಣೆ ಒದಗಿಸುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಟ್ವಿನ್ ಟ್ಯೂಬ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಪಡೆದಿದೆ. 130 ಎಂಎಂ ಅಳತೆಯ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. ಟ್ಯೂಬ್ - ಲೆಸ್ ಟೈಯರ್‌ಗಳನ್ನು ಒಳಗೊಂಡಿದೆ.

ಈ ಬೈಕ್‌ಗೆ ಹೋಂಡಾ ಶೈನ್, ಟಿವಿಎಸ್ ರೇಡಿಯನ್, ಬಜಾಜ್ ಪ್ಲಾಟಿನಾ ಹಾಗೂ ಹೋಂಡಾ ಲಿವೋದಂತಹ ಮೋಟಾರ್‌ಸೈಕಲ್‌ಗಳು ಪ್ರಬಲವಾದ ಎದುರಾಳಿಯಾಗಿವೆ. ಆದರೂ ಪ್ಯಾಶನ್ ಪ್ಲಸ್ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಇದೇ ಜುಲೈನಲ್ಲೂ ಗ್ರಾಹಕರು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡಿರುವ ನಿರೀಕ್ಷೆಯಿದೆ.

More from DriveSpark

Article Published On: Tuesday, July 29, 2025, 15:48 [IST]
English summary
Hero passion plus bike june 2025 sales report
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+