Hero: ಬಡವರ ಬಂಡಿ.. ಹೀರೋ ಸ್ಪ್ಲೆಂಡರ್‌ನ್ನು ಖರೀದಿಸಲು ಗ್ರಾಹಕರಿಂದ ಹಿಂದೇಟು, ಇಲ್ಲಿದೆ ಕಾರಣ!
ಹೀರೋ ಸ್ಪ್ಲೆಂಡರ್ (Hero Splendor) ಪ್ರಮುಖ ಮೋಟಾರ್‌ಸೈಕಲ್ ಆಗಿದೆ. ಇದು ಕಡಿಮೆ ಬೆಲೆಯಲ್ಲಿ ಖರೀದಿಗೆ ದೊರೆಯಲಿದ್ದು, ಬಡ ಹಾಗೂ ಮಧ್ಯಮ ವರ್ಗದ ಜನರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ದೇಶೀಯ ಮಾರುಕಟ್ಟೆಯಲ್ಲಿ 'ಸ್ಪ್ಲೆಂಡರ್' ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಳ್ಳುವ ದ್ವಿಚಕ್ರ ವಾಹನಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದೆ. ಅದರ ಹೊರತಾಗಿಯೂ ಈ ಏಪ್ರಿಲ್‌ನಲ್ಲಿಯೂ 'ಸ್ಪ್ಲೆಂಡರ್' ಮಾರಾಟ ಸಂಖ್ಯೆ ಕುಸಿತವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಕಳೆದ ತಿಂಗಳು (ಏಪ್ರಿಲ್-2025) ಹೀರೋ ಮೋಟೊಕಾರ್ಪ್, ಬರೋಬ್ಬರಿ 1,97,893 ಯುನಿಟ್ 'ಸ್ಪ್ಲೆಂಡರ್' ಮೋಟಾರ್‌ಸೈಕಲ್‌ಗಳನ್ನು ಮಾರಾಟಗೊಳಿಸಿದೆ. 2024ರ ಇದೇ ಅವಧಿಯಲ್ಲಿ 3,20,959 ಯುನಿಟ್‌ಗಳನ್ನು ಮಾರಾಟ ಮಾಡಲಾಗಿತ್ತು. ಈ ಅಂಕಿಸಂಖ್ಯೆಗೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ (YoY) ಶೇಕಡ -38.3% ಇಳಿಮುಖವಾಗಿದೆ.

ಈ 'ಹೀರೋ ಸ್ಪ್ಲೆಂಡರ್' ಬೈಕ್ ಮಾರಾಟ ಸಂಖ್ಯೆ ಇಳಿಕೆಯಾಗಲು ನಾನಾ ಕಾರಣಗಳಿವೆ. ಬಹುಮುಖ್ಯವಾಗಿ ಗ್ರಾಹಕರ ಆರ್ಥಿಕ ಪರಿಸ್ಥಿತಿ ಸುಧಾರಿಸಿದ್ದು, ಪ್ರೀಮಿಯಂ ಮೋಟಾರ್‌ಸೈಕಲ್‌ಗಳನ್ನು ಕೊಳ್ಳುವತ್ತ ಮುಖ ಮಾಡುತ್ತಿದ್ದಾರೆ. ಇದರೊಂದಿಗೆ ಏಪ್ರಿಲ್‌ನಲ್ಲಿ ಯಾವುದೇ ಹಬ್ಬಗಳು ಇಲ್ಲದಿರುವುದರಿಂದ 'ಸ್ಪ್ಲೆಂಡರ್' ಮಾರಾಟ ಕುಸಿತವಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಹೀರೋ ಸ್ಪ್ಲೆಂಡರ್ ವಿಶೇಷತೆಗಳೇನು..
ದೇಶೀಯವಾಗಿ 'ಹೀರೋ ಸ್ಪ್ಲೆಂಡರ್' ಮೋಟಾರ್‌ಸೈಕಲ್ ಎರಡು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಅವುಗಳೆಂದರೆ ಸ್ಪ್ಲೆಂಡರ್ ಪ್ಲಸ್ ಹಾಗೂ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್. ವಿಶೇಷವಾಗಿ 'ಸ್ಪ್ಲೆಂಡರ್ ಪ್ಲಸ್' ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಹೊಂದಿದ್ದು, ರೂ.79,000 ರಿಂದ ರೂ.85,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ.

ಈ 'ಸ್ಪ್ಲೆಂಡರ್ ಪ್ಲಸ್' ಬೈಕ್ 97.2 ಸಿಸಿ ಸಾಮರ್ಥ್ಯದ ಒಬಿಡಿ 2ಬಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 70 ಕೆಎಂಪಿಎಲ್‌ವರೆಗೂ ಮೈಲೇಜ್ ನೀಡಬಲ್ಲದು. ಫುಲ್ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ & ಯುಎಸ್‌ಬಿ ಚಾರ್ಜಿಂಗ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಬೈಕ್ ಕುರಿತಂತೆ ಹೇಳುವುದಾದರೆ, ಇದು ರೂ.88,000 ಹಾಗೂ ಗರಿಷ್ಠ ರೂ.92,000 (ಎಕ್ಸ್-ಶೋರೂಂ - ಬೆಂಗಳೂರು) ಬೆಲೆಯನ್ನು ಒಳಗೊಂಡಿದೆ. 124.7 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಹೊಂದಿದ್ದು, 69 ಕೆಎಂಪಿಎಲ್‌ವರೆಗೂ ಮೈಲೇಜ್ ಕೊಡಬಲ್ಲದು. ಮ್ಯಾಟ್ ನೆಕ್ಸಸ್ ಬ್ಲೂ, ಮ್ಯಾಟ್ ಗ್ರೇ, ಬ್ಲಾಕ್ & ಕ್ಯಾಂಡಿ ಬ್ಲೇಜಿಂಗ್ ರೆಡ್ ಎಂಬ ಆಕರ್ಷಕ ಬಣ್ಣಗಳೊಂದಿಗೂ ಸಿಗುತ್ತದೆ.
ನೂತನ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ ಮೋಟಾರ್‌ಸೈಕಲ್ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಡಿಜಿಟಲ್ - ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿಯನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ & ಹಿಂಭಾಗ (ರೇರ್) ಡುಯಲ್ ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್‌ನ್ನು ಒಳಗೊಂಡಿದೆ. ಡ್ರಮ್/ ಡಿಸ್ಕ್ ಬ್ರೇಕ್‌ಗಳನ್ನು ಪಡೆದಿದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋ ಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








