Hero: ಬಡವರು ತೆಗೆದುಕೊಳ್ಳಬಹುದು.. ರೂ.44,990 ಆರಂಭಿಕ ಬೆಲೆ.. ಹೀರೋ ಇ-ಸ್ಕೂಟರ್‌ಗಳು ದಾಖಲೆ ಸಂಖ್ಯೆಯಲ್ಲಿ ಮಾರಾಟ!

ಹೀರೋ ಮೋಟೊಕಾರ್ಪ್ (Hero MotoCorp), 'ವಿಡಾ' ಬ್ರ್ಯಾಂಡ್‍ನಡಿ ವಿ2 (V2) ಹಾಗೂ ವಿಎಕ್ಸ್2 (Vx2) ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವು ಹಲವು ರೂಪಾಂತರಗಳ (ವೇರಿಯೆಂಟ್) ಆಯ್ಕೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದ್ದು, ಅವರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, ಈ ಜುಲೈ ತಿಂಗಳು ಇದೇ 'ಹೀರೋ ವಿಡಾ' ಇ-ಸ್ಕೂಟರ್‌ಗಳು ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೀರೋ ಮೋಟೋಕಾರ್ಪ್‌ ಜುಲೈನಲ್ಲಿ (2025) ಬರೋಬ್ಬರಿ 11,226 ಯುನಿಟ್‌ 'ವಿಡಾ' ಸ್ಕೂಟರ್‌ಗಳನ್ನು ಮಾರಾಟಗೊಳಿಸಿದೆ. ಇದರಲ್ಲಿ 10,489 ಯುನಿಟ್‌ಗಳು 'ವಾಹನ್ ಪೋರ್ಟಲ್‌'ನಲ್ಲಿ ನೋಂದಣಿಯಾಗಿವೆ. ಈ ಮೂಲಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ಮಾರುಕಟ್ಟೆಯಲ್ಲಿ ಶೇಕಡ 10.2% ಪಾಲನ್ನು ಹೊಂದಿದೆ.

Hero Vida Electric Scooter July 2025 Sales Report

ಹೀರೋ ವಿಡಾ ವಿ2 (Hero Vida V2) ವಿಶೇಷತೆಗಳೇನು:

ಇದು ವಿ2 ಲೈಟ್, ವಿ2 ಪ್ಲಸ್ ಮತ್ತು ವಿ2 ಪ್ರೊ ಎಂಬ 3 ರೂಪಾಂತರಗಳೊಂದಿಗೆ ದೊರೆಯುತ್ತದೆ. 'ವಿಡಾ ವಿ2 ಲೈಟ್' ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ ಲೆವೆಲ್ ವೇರಿಯೆಂಟ್) ಆಗಿದ್ದು, ರೂ.74,000 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 94 ಕಿ.ಮೀ ಓಡುತ್ತದೆ. 69 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ.

'ವಿಡಾ ವಿ2 ಪ್ಲಸ್' ಮಧ್ಯಮ ಶ್ರೇಣಿ ರೂಪಾಂತರ (ಮಿಡ್ ಲೆವೆಲ್ ವೇರಿಯೆಂಟ್) ಎಂದೇ ಹೆಸರುವಾಸಿಯಾಗಿದೆ. ರೂ.92,800 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 3.44 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 143 ಕಿ.ಮೀ ಕ್ರಮಿಸುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ.

Hero Vida Electric Scooter July 2025 Sales Report

'ವಿಡಾ ವಿ2 ಪ್ರೊ' ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್) ಆಗಿದ್ದು, ರೂ.1,20 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. 3.94 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 165 ಕಿ.ಮೀ ಓಡುತ್ತದೆ. 90 ಟಾಪ್ ಸ್ಪೀಡ್‌ನ್ನು ಹೊಂದಿದೆ.

ಹೀರೋ ವಿಡಾ ವಿಎಕ್ಸ್2 (Hero Vida Vx2): ವಿಶೇಷತೆಗಳೇನು:

'ವಿಡಾ ವಿಎಕ್ಸ್2 ಗೋ' ಆರಂಭಿಕ ಶ್ರೇಣಿ ರೂಪಾಂತರ (ಎಂಟ್ರಿ ಲೆವೆಲ್ ವೇರಿಯೆಂಟ್) ಎಂದೇ ಖ್ಯಾತಿ ಗಳಿಸಿದೆ. ಬ್ಯಾಟರಿ-ಆಸ್-ಎ-ಸರ್ವಿಸ್ (ಬಾಸ್) ಪ್ಲ್ಯಾನ್‌ನಡಿ, ರೂ.44,990 & ಸ್ಟ್ಯಾಂಡರ್ಡ್ ಆಗಿ ರೂ.73,840 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 92 ಕಿ.ಮೀ ಕ್ರಮಿಸುತ್ತದೆ.

'ವಿಡಾ ವಿಎಕ್ಸ್2 ಪ್ಲಸ್' ಗರಿಷ್ಠ ಶ್ರೇಣಿ ರೂಪಾಂತರ (ಟಾಪ್ ಎಂಡ್ ವೇರಿಯೆಂಟ್) ಆಗಿದ್ದು, ಬ್ಯಾಟರಿ-ಆಸ್-ಎ-ಸರ್ವಿಸ್ (ಬಾಸ್) ಪ್ಲ್ಯಾನ್‌ನಡಿ, ರೂ.57,990 ಹಾಗೂ ಸ್ಟ್ಯಾಂಡರ್ಡ್ ಆಗಿ ರೂ.82,790 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. 3.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 142 ಕಿ.ಮೀ ಓಡುತ್ತದೆ.

ಒಟ್ಟಾರೆ ಹೀರೋ ಮೋಟೊಕಾರ್ಪ್ ಮಾರಾಟ ಅಂಕಿ ಸಂಖ್ಯೆ ಹೇಗಿದೆ:

ಈ ಜುಲೈ ತಿಂಗಳು ಹೀರೋ ಕಂಪನಿಯು ಒಟ್ಟು 449,755 ಯುನಿಟ್ ದ್ವಿಚಕ್ರ ವಾಹನಗಳನ್ನು (ಬೈಕ್ & ಸ್ಕೂಟರ್) ಮಾರಾಟ ಮಾಡಿದೆ. 2024ರ ಇದೇ ಅವಧಿಯಲ್ಲಿ 370,274 ಯುನಿಟ್‌ಗಳನ್ನು ಮಾರಲಾಗಿದೆ. ಈ ಮೂಲಕ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 21% ಪ್ರಗತಿಯಾಗಿದೆ. ಇದು ಸ್ಪ್ಲೆಂಡರ್, ಹೆಚ್ಎಫ್ ಡಿಲಕ್ಸ್ ಬೈಕ್‌ಗಳು ಹಾಗೂ ಡೆಸ್ಟಿನಿ 125, ಜೂಮ್ 125 ಸ್ಕೂಟರ್‌ಗಳ ಬಲವಾದ ಮಾರಾಟದಿಂದ ಸಾಧ್ಯವಾಗಿದೆ.

More from DriveSpark

Article Published On: Sunday, August 3, 2025, 9:26 [IST]
English summary
Hero vida electric scooter july 2025 sales report
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+