ಸದ್ದಿಲ್ಲದೇ ಡೀಲರ್‌ಶಿಪ್‌ಗೆ ಬಂದೇ ಬಿಡ್ತು ಹೊಸ Hero Electric Scooter.. ಶೀಘ್ರ ಬಿಡುಗಡೆ, ಬೆಲೆ ಇಷ್ಟೇನಾ?
ಹೀರೋ ಮೋಟೋಕಾರ್ಪ್ (Hero MotoCorp), ಪ್ರಮುಖ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ 'ವಿಡಾ' ರೇಂಜ್‌ನ ವಿವಿಧ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ವಿಡಾ ಲೈನ್ಅಪ್ ವಿಸ್ತರಿಸಲು ಕಂಪನಿಯು ಮುಂದಾಗಿದ್ದು, ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಅತಿ ಶೀಘ್ರದಲ್ಲೇ ಅದ್ದೂರಿಯಾಗಿಯೂ ಬಿಡುಗಡೆಗೊಳಿಸಲಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ನೂತನ ಹೀರೋ ವಿಡಾ ವಿಎಕ್ಸ್2 (Hero Vida VX2) ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್, ಇದೇ ಜುಲೈ 1 ರಂದು ಮಾರಾಟಕ್ಕೂ ಬರಲಿದೆ. ಬಿಡುಗಡೆಗೂ 1 ತಿಂಗಳ ಮೊದಲೇ ಈ ಹೊಸ ಇ-ಸ್ಕೂಟರ್, ಡೀಲರ್‌ಶಿಪ್‌ನಲ್ಲೂ ಕಾಣಿಸಿಕೊಂಡಿದೆ. ಅದಕ್ಕೆ ಸಂಬಂಧಿಸಿದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿವೆ.

ಈ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಹೊಸ 'ಹೀರೋ ವಿಡಾ ವಿಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಆಕರ್ಷಕವಾದ ವಿನ್ಯಾಸವನ್ನು ಹೊಂದಿರುವುದನ್ನು ಗುರುತಿಸಬಹುದು. ಇದು ಎಲ್ಇಡಿ ಹೆಡ್‌ಲ್ಯಾಂಪ್, ಸಿಗ್ನೇಚರ್ ಎಲ್ಇಡಿ ಟೈಲ್ ಲ್ಯಾಂಪ್, ಶಾರ್ಪ್ ಲುಕಿಂಗ್ ಎಲ್ಇಡಿ ಟರ್ನ್ ಇಂಡಿಕೇಟರ್‌ಗಳು ಹಾಗೂ 12-ಇಂಚಿನ ಟೂ-ಟೋನ್ ಅಲಾಯ್ ವೀಲ್‌ಗಳನ್ನು ಪಡೆದಿದೆ. ಜೊತೆಗೆ ಸಿಂಗಲ್ - ಟೋನ್ ಮ್ಯಾಟ್ ಯೆಲ್ಲೋ ಬಣ್ಣವನ್ನು ಒಳಗೊಂಡಿದೆ.
ನೂತನ 'ಹೀರೋ ವಿಡಾ ವಿಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಸುರಕ್ಷತೆಗೂ ಹೆಸರುವಾಗಿದೆ. ಸವಾರರ ರಕ್ಷಣೆಯಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಟ್ವಿನ್ - ಶಾಕ್ ಅಬ್ಸಾರ್ಬರ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಇದರೊಟ್ಟಿಗೆ ಡಿಸ್ಕ್ ಬ್ರೇಕ್‌ನ್ನು ಪಡೆದಿದೆ.

ಹೊಸ ಹೀರೋ ವಿಡಾ ವಿಎಕ್ಸ್ ಇ-ಸ್ಕೂಟರ್ ಶಕ್ತಿಯುತವಾದ ಪವರ್‌ಟ್ರೇನ್‌ನೊಂದಿಗೆ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ಇದು 2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.4 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿರಲಿದೆ ಎನ್ನಲಾಗಿದೆ. ಭರ್ತಿ ಚಾರ್ಜ್‌ನಲ್ಲಿ 94 ರಿಂದ 100 ಕಿಲೋಮೀಟರ್ ಕ್ರಮಿಸುವ ಸಾಧ್ಯತೆಯಿದೆ.
ಈ ವಿಡಾ ವಿಎಕ್ಸ್2 ಎಲೆಕ್ಟ್ರಿಕ್ ಸ್ಕೂಟರ್ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರಬಹುದು ಎಂದು ಹೇಳಲಾಗಿದೆ. ಬಹುಮುಖ್ಯವಾಗಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ಟರ್ನ್ ಬೈ ಟರ್ನ್ ನ್ಯಾವಿಗೇಷನ್ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿರಬಹುದು ಎನ್ನಲಾಗಿದೆ.
ನೂತನ ಹೀರೋ ವಿಡಾ ವಿಎಕ್ಸ್ ಇ-ಸ್ಕೂಟರ್ ಅತಿ ಕಡಿಮೆ ಬೆಲೆಗೂ ಮಾರಾಟಕ್ಕೆ ಬರುವ ನಿರೀಕ್ಷೆಯಿದೆ. ರೂ.1 ಲಕ್ಷ ಆಸುಪಾಸಿನಲ್ಲಿ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದ್ದು, ಮಧ್ಯಮ ವರ್ಗದ ಗ್ರಾಹಕರು ತಮ್ಮ ದಿನನಿತ್ಯದ ಬಳಕೆಗಾಗಿ ಸುಲಭವಾಗಿ ಖರೀದಿ ಮಾಡಲು ಸಾಧ್ಯವಾಗುತ್ತದೆ.
ಸದ್ಯ 'ಹೀರೋ ವಿಡಾ ವಿ2' ಎಲೆಕ್ಟ್ರಿಕ್ ಸ್ಕೂಟರ್‌ನ್ನು ತೆಗೆದುಕೊಳ್ಳಬಹುದು..
ಇದು ವಿ2 ಲೈಟ್, ವಿ2 ಪ್ಲಸ್ ಮತ್ತು ವಿ2 ಪ್ರೊ ಎಂಬ 3 ರೂಪದಲ್ಲಿ ಖರೀದಿಗೆ ಲಭ್ಯವಿದೆ. ರೂ.85,000 ರಿಂದ ರೂ.1.40 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.2 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್), 3.44 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.94 ಕಿಲೋ ವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್ ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 94 ರಿಂದ 165 ಕಿಲೋಮೀಟರ್ ಓಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Source Link: Carandbike


Click it and Unblock the Notifications








