ಬಡವರ ಬಂಡಿ.. ಹೊಸ Hero VIDA VX2 ಇ-ಸ್ಕೂಟರ್ ಕುರಿತ ಪ್ರಮುಖಾಂಶಗಳಿವು, ಯಾರು ಹೇಳಲ್ಲ!

ಈಚೆಗೆ ಹೊಚ್ಚ ಹೊಸ ಹೀರೋ ವಿಡಾ ವಿಎಕ್ಸ್2 (Hero Vida Vx2) ಇ-ಸ್ಕೂಟರ್ ಬಿಡುಗಡೆಗೊಂಡಿದೆ. ಇದು ಅತ್ಯುತ್ತಮವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ ಸ್ಟ್ಯಾಂಡರ್ಡ್ ಹಾಗೂ ಬ್ಯಾಟರಿ-ಆಸ್-ಎ-ಸರ್ವಿಸ್ (ಬಾಸ್-BaaS) ಪ್ಲ್ಯಾನ್‌ನಡಿ ಗ್ರಾಹಕರ ಖರೀದಿಗೆ ಲಭ್ಯವಿದೆ. ನಾವಿಲ್ಲಿ ನೂತನ 'ವಿಡಾ ವಿಎಕ್ಸ್2' ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

ಬೆಲೆ & ರೂಪಾಂತರಗಳು (Price & Variants):

ಈ ಹೀರೋ ವಿಡಾ ವಿಎಕ್ಸ್2 ಇ-ಸ್ಕೂಟರ್, ವಿಎಕ್ಸ್2 ಗೋ & ವಿಎಕ್ಸ್2 ಪ್ಲಸ್ ಎಂಬ 2 ರೂಪಾಂತರಗಳೊಂದಿಗೂ ದೊರೆಯುತ್ತದೆ. ಸ್ಟ್ಯಾಂಡರ್ಡ್ ಆಗಿ ವಿಡಾ ವಿಎಕ್ಸ್2 ಗೋ ರೂಪಾಂತರ ರೂ.99,000 ಹಾಗೂ ವಿಡಾ ವಿಎಕ್ಸ್2 ಪ್ಲಸ್ ರೂ.1.10 ಲಕ್ಷ ದರವನ್ನು ಪಡೆದಿದೆ. ಹಾಗೆಯೇ ಬಾಸ್ ಪ್ಲ್ಯಾನ್‌ನಡಿ ವಿಡಾ ವಿಎಕ್ಸ್2 ಗೋ ರೂ.59,000 ಮತ್ತು ವಿಡಾ ವಿಎಕ್ಸ್2 ಪ್ಲಸ್ ರೂ.64,000 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದ್ದು, ಪ್ರತಿ ಕಿ.ಮೀಗೆ ರೂ.0.96 ಶುಲ್ಕ ಪಾವತಿಸಬೇಕು.

Hero VIDA VX2 Electric scooter Top Things

ಕಾರ್ಯಕ್ಷಮತೆ (Performance):

ನೂತನ ವಿಡಾ ವಿಎಕ್ಸ್2 ಗೋ ಎಲೆಕ್ಟ್ರಿಕ್ ಸ್ಕೂಟರ್ 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ ಆಯ್ಕೆಯನ್ನು ಒಳಗೊಂಡಿದೆ. ಭರ್ತಿ ಚಾರ್ಜ್‌ನಲ್ಲಿ 92 ಕಿ.ಮೀ ವರೆಗೆ ಕ್ರಮಿಸುತ್ತದೆ. ವಿಡಾ ವಿಎಕ್ಸ್2 ಪ್ಲಸ್ ಇ-ಸ್ಕೂಟರ್ 3.4 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದ್ದು, ಪೂರ್ತಿ ಚಾರ್ಜ್‌ನಲ್ಲಿ 142 ಕಿ.ಮೀ ಓಡುತ್ತದೆ.

ಚಾರ್ಜಿಂಗ್ ಸಮಯ (Charging Timing):

ಈ ಹೀರೋ ವಿಡಾ ವಿಎಕ್ಸ್2 ಇ-ಸ್ಕೂಟರ್‌ನ ಬ್ಯಾಟರಿ ಪ್ಯಾಕ್, ಫಾಸ್ಟ್ ಚಾರ್ಜರ್ ಉಪಯೋಗ ಮಾಡಿದಾಗ ಶೇಕಡ 0 ರಿಂದ 80% ಚಾರ್ಜ್ ಆಗುವುದಕ್ಕೆ ಕೇವಲ 1 ಗಂಟೆಯಷ್ಟೇ ತೆಗೆದುಕೊಳ್ಳುತ್ತದೆ. ಅದೇ ರೀತಿಯಲ್ಲಿ ನಾರ್ಮಲ್ ಚಾರ್ಜರ್ ಬಳಕೆಯಲ್ಲಿ ಅಷ್ಟೇ ಪ್ರಮಾಣ ಚಾರ್ಜ್ ಆಗುವುದಕ್ಕೆ ಸರಿ ಸುಮಾರು 6 ಗಂಟೆ ಹಿಡಿಯುತ್ತದೆ.

ವಿನ್ಯಾಸ & ಬಣ್ಣಗಳು (Design & Colors):

ಹೊಸ ವಿಡಾ ವಿಎಕ್ಸ್2 ಎಲೆಕ್ಟ್ರಿಕ್ ಸ್ಕೂಟರ್‌ ಹೆಚ್ಚು ಅತ್ಯುಧುನಿಕವಾದ ವಿನ್ಯಾಸವನ್ನು ಹೊಂದಿದೆ. ಇದು ನೋಡುಗರನ್ನು ಸೆಳೆಯಲಿದ್ದು, ತುಂಬಾ ಚೆನ್ನಾಗಿರುವ ಹೆಡ್‌ಲೈಟ್ ಮತ್ತು ಡಿಆರ್‌ಎಲ್‌ಗಳನ್ನು ಪಡೆದಿದೆ. ಜೊತೆಗೆ ಗ್ರೇ, ಬ್ಲೂ, ರೆಡ್ ಯೆಲ್ಲೋ ಮತ್ತು ಬ್ಲ್ಯಾಕ್ ಸೇರಿದಂತೆ 7 ಬಣ್ಣಗಳೊಂದಿಗೂ ದೊರೆಯುತ್ತದೆ.

ವೈಶಿಷ್ಟ್ಯಗಳು & ಬ್ರೇಕಿಂಗ್ ಸಿಸ್ಟಮ್ (Features & Braking System):

ಈ ಎಲೆಕ್ಟ್ರಿಕ್ ಸ್ಕೂಟರ್ ಎಲ್‌ಸಿಡಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಜಿಪಿಎಸ್ ಟ್ರ್ಯಾಕಿಂಗ್, ರಿಮೋಟ್ ಇಮೊಬಿಲೈಸೇಶನ್, ಕ್ಲೌಡ್ ಕನೆಕ್ಟಿವಿಟಿ, ಅಂಡರ್ ಸೀಟ್ ಸ್ಟೋರೇಜ್, ರೇರ್ ಪಿಲಿಯನ್ ಬ್ಯಾಕ್‌ರೆಸ್ಟ್ ಹಾಗೂ ಡೈಮಂಡ್ - ಕಟ್ ಫಿನಿಶ್ ಅಲಾಯ್ ವೀಲ್‌ಗಳು ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೀರೋ ವಿಡಾ ವಿ2 ಇ-ಸ್ಕೂಟರ್ ಕೂಡ ಖರೀದಿ ಲಭ್ಯ:

ಇದು ಅತಿ ಕಡಿಮೆ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ದೊರೆಯುತ್ತದೆ. ರೂ.96,000 ರಿಂದ ರೂ.1.35 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 2.2 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್), 3.44 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಮತ್ತು 3.94 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಒಳಗೊಂಡಿದೆ. ಸಂಪೂರ್ಣ ಚಾರ್ಜ್‌ನಲ್ಲಿ 94 ರಿಂದ 165 ಕಿ.ಮೀ ವರೆಗೆ ರೇಂಜ್ (ಮೈಲೇಜ್) ನೀಡುತ್ತದೆ.

ಒಟ್ಟಾರೆಯಾಗಿ ನೂತನ ಹೀರೋ ವಿಡಾ ವಿಎಕ್ಸ್2 ಇ-ಸ್ಕೂಟರ್ ಬಿಡುಗಡೆಯಾಗಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಖುಷಿ ನೀಡಿದೆ. ಇದು ಹೆಚ್ಚು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಮುಂಬರುವ ದಿನಗಳಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ಗೆ ಖರೀದಿದಾರರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Saturday, July 5, 2025, 8:48 [IST]
English summary
Hero vida vx2 electric scooter top things
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+