Hero Xpulse: ಹೀರೋ ಎಕ್ಸ್‌ಪಲ್ಸ್ 210 ವಿಡಿಯೋ ರಿವ್ಯೂ.. ಹೇಗಿದೆ ಗೊತ್ತಾ?

ಹೀರೋ ಎಕ್ಸ್‌ಪಲ್ಸ್ 210 (Hero Xpulse 210) ಜನಪ್ರಿಯ ಮೋಟಾರ್‌ಸೈಕಲ್‌ ಆಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದ್ದು, ರೂ.1.76 ಲಕ್ಷದಿಂದ ರೂ.1.86 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಇತ್ತೀಚೆಗೆ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡದ ಪ್ರತಿನಿಧಿಗೆ ಈ ಬೈಕ್‌ನ್ನು ಟೆಸ್ಟ್ ರೈಡ್ ಮಾಡಲು ಕಂಪನಿಯು ಆಹ್ವಾನಿಸಿತ್ತು. ನಿಮಗಾಗಿ ನೂತನ 'ಹೀರೋ ಎಕ್ಸ್‌ಪಲ್ಸ್ 210' ಮೋಟಾರ್‌ಸೈಕಲ್‌ನ ವಿಡಿಯೋ ರಿವ್ಯೂ..

ಹೊಸ ಹೀರೋ ಎಕ್ಸ್‌ಪಲ್ಸ್ 210 ಬೈಕ್ ಆಕರ್ಷಕವಾದ ವಿನ್ಯಾಸವನ್ನು ಹೊಂದಿದೆ. ಬಹುಮುಖ್ಯವಾಗಿ ಎತ್ತರವಿರುವ ವಿಂಡ್‌ಸ್ಕ್ರೀನ್‌, ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಡಿಆರ್‌ಎಲ್‌ಗಳು, ಮುಸ್ಕ್ಯುಲರ್ ಫ್ಯುಯೆಲ್ ಟ್ಯಾಂಕ್, ಸಿಂಗಲ್-ಪೀಸ್ ಸೀಟ್, ಟ್ಯೂಬ್ಯುಲರ್ ಹ್ಯಾಂಡಲ್‌ಬಾರ್‌, ಹಿಂಭಾಗ (ರೇರ್) ಗ್ರಾಬ್ ಹ್ಯಾಂಡಲ್‌ಗಳನ್ನು ಒಳಗೊಂಡಿದೆ.

ನೂತನ ಮೋಟಾರ್‌ಸೈಕಲ್‌ 210 ಸಿಸಿ ಲಿಕ್ವಿಡ್-ಕೂಲ್ಡ್, 4-ವಾಲ್ವ್, ಡಿಒಹೆಚ್‌ಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 24.2 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 20.7 ಎನ್ಎಂ (ನ್ಯೂಟನ್ ಮೀಟರ್) ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ. 6-ಸ್ಪೀಡ್ ಗೇರ್‌ಬಾಕ್ಸ್‌ ಆಯ್ಕೆಯನ್ನು ತನ್ನದಾಗಿಸಿಕೊಂಡಿದೆ. ಜೊತೆಗೆ 40 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ ಎಂದು ಅಂದಾಜಿಸಲಾಗಿದೆ.

ಈ ಹೀರೋ ಎಕ್ಸ್‌ಪಲ್ಸ್ 210 ಬೈಕ್ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. 4.2-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ, ನಕಲ್ ಗಾರ್ಡ್‌ಗಳು, ಡುಯಲ್-ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ರೋಡ್, ಟ್ರಯಲ್ & ಆಫ್-ರೋಡ್ ಎಂಬ 3 ರೈಡಿಂಗ್ ಮೋಡ್‌ಗಳನ್ನು ಹೊಂದಿದೆ.

Hero Xpulse 210 Bike Video Review

ಹೊಸ ಎಕ್ಸ್‌ಪಲ್ಸ್ 210 ಮೋಟಾರ್‌ಸೈಕಲ್‌ ಮುಂಭಾಗ (ಟೆಲಿಸ್ಕೋಪಿಕ್ ಫೋರ್ಕ್‌), ಹಿಂಭಾಗ (ರೇರ್) 10-ಸ್ಟೆಪ್ ಅಡ್ಜಸ್ಟಬಲ್ ಗ್ಯಾಸ್-ಚಾರ್ಜ್ಡ್ ಮಾನೋಶಾಕ್ ಸಸ್ಪೆನ್ಷನ್ ಸೆಟಪ್ ಆಯ್ಕೆಯನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ವೈರ್-ಸ್ಪೋಕ್ಡ್ ವೀಲ್‌ಗಳು ಮತ್ತು ಅತ್ಯುತ್ತಮ ಟೈರ್‌ಗಳನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, March 22, 2025, 15:18 [IST]
English summary
Hero xpulse 210 bike video review
Read more on hero motocorp india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+