Honda: ಹೊಸ ಹೋಂಡಾ ಆಕ್ಟಿವಾ 110, ಆಕ್ಟಿವಾ 125 & ಎಸ್‌ಪಿ125 ಆನಿವರ್ಸರಿ ಎಡಿಷನ್ ಬಿಡುಗಡೆ.. ಬೆಲೆ ಎಷ್ಟು, ವಿಶೇಷತೆಗಳೇನು?

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (Honda Motorcycle & Scooter India), 25 ವರ್ಷದ ವಾರ್ಷಿಕೋತ್ಸವ ಸಂಭ್ರಮದಲ್ಲಿದೆ. ಆ ಖುಷಿಯನ್ನು ಮತ್ತಷ್ಟು ಹಿಮ್ಮಡಿಗೊಳಿಸಲು ಆಕ್ಟಿವಾ 110, ಆಕ್ಟಿವಾ 125 ಮತ್ತು ಎಸ್‌ಪಿ125 ಮಾಡೆಲ್‌ಗಳ 'ಆನಿವರ್ಸರಿ ಎಡಿಷನ್'ನ್ನು ಬಿಡುಗಡೆಗೊಳಿಸಿದೆ. 2001ರಲ್ಲಿ ಮೊದಲ ಬಾರಿಗೆ 'ಆಕ್ಟಿವಾ' ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಯಿತು. ಇದು ಅಂದಿನಿಂದ ಇಂದಿನವರೆಗೆ ಮನೆ ಮಾತಾಗಿದೆ. ಎಸ್‌ಪಿ125 ವಿಶ್ವಾಸಾರ್ಹ ಮೋಟಾರ್‌ಸೈಕಲ್‌ ಎಂದೇ ಹೆಸರುವಾಸಿಯಾಗಿದೆ. ಈ ನೂತನ ಸ್ಕೂಟರ್‌ & ಬೈಕ್‍ಗಾಗಿ ಬುಕ್ಕಿಂಗ್‌ನ್ನು ತೆರೆದಿದ್ದು, ಆಸಕ್ತ ಗ್ರಾಹಕರು ಆರ್ಡರ್ ಮಾಡಬಹುದು. ಆಗಸ್ಟ್ ಮಾಸಾಂತ್ಯದೊಳಗೆ ವಿವರಣೆಗಳು ಪ್ರಾರಂಭವಾಗುವ ನಿರೀಕ್ಷೆಯಿದೆ.

ಹೋಂಡಾ ಆಕ್ಟಿವಾ ಆನಿವರ್ಸರಿ ಎಡಿಷನ್ (Honda Activa Anniversary Edition):

ಹೋಂಡಾ ಆಕ್ಟಿವಾ 110 ಮತ್ತು ಆಕ್ಟಿವಾ 125 ಆನಿವರ್ಸರಿ ಎಡಿಷನ್ ಸ್ಕೂಟರ್‌ಗಳು, ಬಾಡಿ ಪ್ಯಾನೆಲ್‌ನಲ್ಲಿ ವಿಶಿಷ್ಟವಾದ ಗ್ರಾಫಿಕ್ಸ್, 25ನೇ ಆನಿವರ್ಸರಿ ಲೋಗೋ & ಪೈರೈಟ್ ಬ್ರೌನ್ ಮೆಟಾಲಿಕ್ ಬಣ್ಣದ ಅಲಾಯ್ ವೀಲ್‌ಗಳನ್ನು ಹೊಂದಿವೆ. ಪರ್ಲ್ ಸೈರನ್ ಬ್ಲೂ ಹಾಗೂ ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿವೆ. ಆಕ್ಟಿವಾ 110 ರೂ.92,565 ಹಾಗೂ ಆಕ್ಟಿವಾ 125 ರೂ.97,270 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿವೆ.

Honda Activa 110 Activa 125 SP125 Anniversary Edition Launched In India Details

ಇವೆರೆಡು 'ಆನಿವರ್ಸರಿ ಎಡಿಷನ್' ಸ್ಕೂಟರ್‌ಗಳ ಕಾರ್ಯಕ್ಷಮತೆಯಲ್ಲೂ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಹೋಂಡಾ ಆಕ್ಟಿವಾ 110 ಮಾಡೆಲ್ 109.51 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದ್ದು, 7.9 ಪಿಎಸ್ (ಅಶ್ವ ಶಕ್ತಿ) ಹಾಗೂ 9.05 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 55 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 10 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ಹೋಂಡಾ ಆಕ್ಟಿವಾ 125 ಮಾಡೆಲ್, 123.92 ಸಿಸಿ ಪೆಟ್ರೋಲ್ ಎಂಜಿನ್‌ನ್ನು ಹೊಂದಿದೆ. 8.4 ಪಿಎಸ್ (ಅಶ್ವ ಶಕ್ತಿ) ಮತ್ತು 10.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 47 ಕಿ.ಮೀವರೆಗೆ ಮೈಲೇಜ್ ನೀಡುತ್ತದೆ. 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. 8 ರಿಂದ 10 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗವನ್ನು ಹೊಂದಿದಲಿದೆ.

Honda Activa 110 Activa 125 SP125 Anniversary Edition Launched In India Details

ಈ 'ಆನಿವರ್ಸರಿ ಎಡಿಷನ್' ಸ್ಕೂಟರ್‌ಗಳ ವೈಶಿಷ್ಟ್ಯದಲ್ಲೂ ಪ್ರಮುಖ ಮಾರ್ಪಾಡುಗಳಾಗಿಲ್ಲ. ಆಕ್ಟಿವಾ 110 ಮಾಡೆಲ್ 4.2-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್‌, ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಗಾಗಿ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. 106 ಕೆಜಿ ತೂಕವಿದ್ದು, 5.3 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್‍ನ್ನು ತನ್ನದಾಗಿಸಿಕೊಂಡಿದೆ.

ಆಕ್ಟಿವಾ 125 ಮಾಡೆಲ್ ಟಿಎಫ್‌ಟಿ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಹಾಗೂ ಐಡಲ್ ಸ್ಟಾರ್ಟ್/ ಸ್ಟಾಪ್ ಸಿಸ್ಟಮ್‌ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಪಡೆದಿದೆ. ಇದು ಬರೋಬ್ಬರಿ 107 ಕೆಜಿ ತೂಕವಿದ್ದು, 5.3 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ಒಳಗೊಂಡಿದೆ.

Honda Activa 110 Activa 125 SP125 Anniversary Edition Launched In India Details

ಹೋಂಡಾ ಎಸ್‌ಪಿ125 ಆನಿವರ್ಸರಿ ಎಡಿಷನ್ (Honda SP125 Anniversary Edition):

ಇದು ಬಾಡಿ ಪ್ಯಾನೆಲ್‌ನಲ್ಲಿ ನವೀನ ಶೈಲಿಯ ಗ್ರಾಫಿಕ್ಸ್ ವಿನ್ಯಾಸವನ್ನು ಹೊಂದಿದ್ದು, ಅದಕ್ಕೆ ತಕ್ಕಂತೆ ಅಲಾಯ್ ವೀಲ್‌ಗಳನ್ನು ಪಡೆದಿದೆ. ಫ್ಯುಯೆಲ್ ಟ್ಯಾಂಕ್‍ ಮೇಲೆ 25ನೇ ಆನಿವರ್ಸರಿ ಲೋಗೋವನ್ನು ಒಳಗೊಂಡಿದೆ. ರೂ.1.02 ಲಕ್ಷ (ಎಕ್ಸ್-ಶೋರೂಂ) ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ.

ಈ ಬೈಕ್ 123.94 ಸಿಸಿ ಸಿಂಗಲ್-ಸಿಲಿಂಡರ್, ಏರ್-ಕೋಲ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿದೆ. 10.87 ಪಿಎಸ್ ಪಿಎಸ್ (ಅಶ್ವ ಶಕ್ತಿ) ಮತ್ತು 10.9 ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. 5-ಸ್ಪೀಡ್ ಮ್ಯೂನುವಲ್ ಗೇರ್‌ಬಾಕ್ಸ್‌ನ್ನು ಒಳಗೊಡಿದೆ. 63 ಕಿ.ಮೀ ವರೆಗೆ ಮೈಲೇಜ್ ಕೊಡುತ್ತದೆ.

ನೂತನ ಹೋಂಡಾ ಎಸ್‌ಪಿ125 ಮೋಟಾರ್‌ಸೈಕಲ್‌ ಫುಲ್ ಕಲರ್ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್ ಹಾಗೂ ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಸಿಬಿಎಸ್ (ಕಂಬೈನ್ಡ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ. 116 ಕೆಜಿ ತೂಕವಿದ್ದು, 11.2 ಲೀಟರ್ ಫ್ಯುಯೆಲ್ ಟ್ಯಾಂಕ್‍ನ್ನು ಪಡೆದಿದೆ.

Article Published On: Wednesday, August 13, 2025, 8:30 [IST]
English summary
Honda activa 110 activa 125 sp125 anniversary edition launched in india details
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+