Honda: 23 ವರ್ಷಗಳಿಂದ ನಂ.1 ಸ್ಥಾನ: ಅಗ್ಗದ ಬೆಲೆಯ ಭಾರತೀಯರ ಫೇವರೆಟ್ ಮೈಲೇಜ್ ಸ್ಕೂಟರ್!
ಹೋಂಡಾ ಆಕ್ಟಿವಾ 125 (Honda Activa 125) ಸ್ಕೂಟರ್ ವಿಶ್ವಾಸಾರ್ಹತೆ, ಕಾರ್ಯಕ್ಷಮತೆ ಮತ್ತು ಇಂಧನ ದಕ್ಷತೆಗೆ ಹೆಸರುವಾಸಿಯಾಗಿದ್ದು, ನಗರ ಪ್ರಯಾಣಕ್ಕೆ ಸೂಕ್ತವಾಗಿರುತ್ತದೆ. ಸ್ಟೈಲ್, ಕಂಫರ್ಟ್ ಮತ್ತು ಪ್ರಭಾವಶಾಲಿ ಮೈಲೇಜ್ ಬಯಸುವ ಸವಾರರಿಗೆ ಬೆಸ್ಟ್ ಆಯ್ಕೆಯಾಗಿದೆ. ಇದರ ಸ್ಥಿರ ಕಾರ್ಯಕ್ಷಮತೆ, ಬಳಕೆದಾರ ಸ್ನೇಹಿ ವೈಶಿಷ್ಟ್ಯಗಳು, ದೃಢವಾದ ನಿರ್ಮಾಣ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಸಣ್ಣ ಪ್ರಯಾಣಗಳಿಗೆ ಸೂಕ್ತವಾದ ಸ್ಕೂಟರ್ ಆಗಿ ಮಾರ್ಪಟ್ಟಿದೆ. ಪ್ರಸ್ತುತ 6 ವೆರಿಯೆಂಟ್ ಹಾಗೂ 6 ಬಣ್ಣಗಳಲ್ಲಿ ಲಭ್ಯವಿರುವ ಹೋಂಡಾ ಆಕ್ಟಿವಾ 125 ಸ್ಕೂಟರ್ ಬೆಲೆ, ವಿಶೇಷತಗಳು ಇಲ್ಲಿವೆ.
ಹೋಂಡಾ ಆಕ್ಟಿವಾ 125 ಸ್ಕೂಟರ್ 123.92 ಸಿಸಿ ಬಿಎಸ್-6 ಎಂಜಿನ್ ಸಹಾಯದಿಂದ 8.19 ಬಿಹೆಚ್ ಪವರ್ ಮತ್ತು 10.4 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಫ್ರಂಟ್ ಡಿಸ್ಕ್ ಮತ್ತು ರಿಯರ್ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ. 109 ಕೆ.ಜಿ ತೂಕವನ್ನು ಹೊಂದಿದ್ದು, 5.3 ಲೀಟರ್ ಫ್ಯೂಯಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ.

ಹೋಂಡಾ ಆಕ್ಟಿವಾ 125 ಡ್ರಮ್ ಸ್ಕೂಟರ್ ಆರಂಭಿಕ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1,08,215 ಗಳಾಗಿದೆ. ಇದನ್ನು ಡ್ರಮ್, ಡ್ರಮ್ ಅಲಾಯ್, ಡಿಸ್ಕ್ ಮತ್ತು ಎಚ್-ಸ್ಮಾರ್ಟ್ ಎಂಬ ವೇರಿಯೆಂಟ್‌ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಎಲ್ಲಾ ರೂಪಾಂತರಗಳು ಹಿಂದಿನ ಆವೃತ್ತಿಯ ಸ್ಟೈಲಿಂಗ್ ಅನ್ನು ಹೊಂದಿವೆ. ಸ್ಕೂಟರ್‌ನ ವಿಶಾಲವಾದ ಆಸನವು ಸವಾರಿ ಆರಾಮವನ್ನು ಖಚಿತಪಡಿಸುತ್ತದೆ.
ಡಿಸೈನ್ ವಿಷಯಕ್ಕೆ ಬಂದರೆ ಬಾಡಿ ಕಲರ್ ಕೌಲ್, ಏಪ್ರನ್-ಮೌಂಟೆಡ್ ಫ್ರಂಟ್ ಟರ್ನ್ ಇಂಡಿಕೇಟರ್‌ಗಳು, ಬಾಡಿ-ಕಲರ್ ಫ್ರಂಟ್ ಫೆಂಡರ್ ಮತ್ತು ಬಾಡಿ ಪ್ಯಾನಲ್ ಮತ್ತು ಏಪ್ರನ್‌ನಲ್ಲಿ ಕ್ರೋಮ್‌ನೊಂದಿಗೆ ಸಿಂಗಲ್-ಪಾಡ್ ಹೆಡ್‌ಲೈಟ್ ಹೊಂದಿದೆ. ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್, ಹೆವಿ ಗ್ರೇ ಮೆಟಾಲಿಕ್, ರೆಬೆಲ್ ರೆಡ್ ಮೆಟಾಲಿಕ್, ಪರ್ಲ್ ಪ್ರೆಸಿಯಸ್ ವೈಟ್ ಮತ್ತು ಮಿಡ್ ನೈಟ್ ಬ್ಲೂ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ.

ಫೀಚರ್ಸ್ ವಿಷಯಕ್ಕೆ ಬಂದರೆ, ಎಲ್ಇಡಿ ಪೊಸಿಷನ್ ಲ್ಯಾಂಪ್‌ಗಳು, ಸ್ಮಾರ್ಟ್ ಪವರ್ (ಇಎಸ್‌ಪಿ) ತಂತ್ರಜ್ಞಾನ, ಎಸಿಜಿ ಸ್ಟಾರ್ಟರ್, ಐಡ್ಲಿಂಗ್ ಸ್ಟಾಪ್ ಸಿಸ್ಟಮ್, ಸೈಡ್ ಸ್ಟ್ಯಾಂಡ್ ಎಂಜಿನ್ ಇನ್ಹಿಬಿಟರ್ ಫಂಕ್ಷನ್ ಮತ್ತು ಹಿಂದಿನ ಮಾದರಿಯ ಸಂಯೋಜಿತ ಬ್ರೇಕಿಂಗ್ ಸಿಸ್ಟಂ ಅನ್ನು ಒಳಗೊಂಡಿದೆ. ಇದರ ಪ್ರಕಾಶಮಾನವಾದ ಹೆಡ್‌ಲೈಟ್ ರಾತ್ರಿ ಸವಾರಿಗಳಲ್ಲಿ ಅತ್ಯುತ್ತಮ ಗೋಚರತೆಯನ್ನು ಒದಗಿಸುತ್ತದೆ.
ಆಕ್ಟಿವಾ 125 ಸ್ಕೂಟರ್ ನಲ್ಲಿರುವ ಇನ್ಸ್‌ಟ್ರೂಮೆಂಟ್ ಕ್ಲಸ್ಟರ್ ಸೆಮಿ-ಡಿಜಿಟಲ್ ಮಾಡ್ಯೂಲ್ ಅನ್ನು ಹೊಂದಿದ್ದು, ಇದು ಓಡೋಮೀಟರ್, ಟೈಮ್, ಇಕೋ ಇಂಡಿಕೇಟರ್ ಮತ್ತು ಸರ್ವಿಸ್ ಡ್ಯೂ ಇಂಡಿಕೇಟರ್ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಹಾಗೆಯೇ ಸ್ಕೂಟರ್‌ನ ಡೈನಾಮಿಕ್ ಫ್ಯೂಯಲ್ ಟ್ಯಾಂಕ್ ವಿನ್ಯಾಸವು ಅದರ ಒಟ್ಟಾರೆ ನೋಟಕ್ಕೆ ಆಕರ್ಷಣೆಯನ್ನು ಹೆಚ್ಚಿಸುತ್ತದೆ.

ಎಚ್-ಸ್ಮಾರ್ಟ್ ವೇರಿಯೆಂಟ್‌ನಲ್ಲಿ ಸ್ಮಾರ್ಟ್ ಕೀ ಸಿಸ್ಟಮ್ ಪಡೆದಿದೆ, ಇದು ಸ್ಮಾರ್ಟ್ ಫೈಂಡ್, ರಿಮೋಟ್ ಅನ್ ಲಾಕ್, ಕೀಲೆಸ್ ಇಗ್ನಿಷನ್ ಮತ್ತು ಆಂಟಿ-ಥೆಫ್ಟ್ ಸಿಸ್ಟಮ್ ಅನ್ನು ಹೊಂದಿದೆ. ಎಚ್-ಸ್ಮಾರ್ಟ್ ರೂಪಾಂತರದಲ್ಲಿನ ಸ್ಮಾರ್ಟ್ ಕೀಯನ್ನು ಇಂಧನ ಮುಚ್ಚಳವನ್ನು ತೆರೆಯಲು ಮತ್ತು ಅಂಡರ್-ಸೀಟ್ ಸ್ಟೋರೇಜ್ ಅನ್ನು ಪ್ರವೇಶಿಸಲು ಸಹ ಬಳಸಬಹುದು. ಹೋಂಡಾ ಆಕ್ಟಿವಾ ಸ್ಕೂಟರ್ 45 ರಿಂದ 50 ಕಿ.ಮೀ ಮೈಲೇಜ್ ನೀಡುತ್ತದೆ.
ಡ್ರೈವ್ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








