ಅತಿ ಶೀಘ್ರದಲ್ಲೇ ಹೋಂಡಾ ಆಕ್ಟಿವಾ ಇ & ಕ್ಯೂಸಿ1 ಇ-ಸ್ಕೂಟರ್‌ಗಳು ಮಾರಾಟಕ್ಕೆ.. ಎಕ್ಸ್ ಶೋರೂಂ ಬೆಲೆ ಎಷ್ಟಿರಲಿದೆ?

ಭಾರತದ ವಿಶ್ವಾಸಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India) ಗುರುತಿಸಿಕೊಂಡಿದೆ. ಕಳೆದ ನವೆಂಬರ್‌ನಲ್ಲಿ ಮಧ್ಯಮ ವರ್ಗದ ಜನರನ್ನು ಗಮನದಲ್ಲಿಟ್ಟುಕೊಂಡು ಆಕ್ಟಿವಾ ಇ ಮತ್ತು ಕ್ಯೂಸಿ1 ಎಂಬ ಎರಡು ಹೊಸ ಇ-ಸ್ಕೂಟರ್‌ಗಳನ್ನು ಅನಾವರಣಗೊಳಿಸಿತ್ತು. ನಿನ್ನೆಯಿಂದ ದೇಶಾದ್ಯಂತ ಈ ನೂತನ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ರೂ.1,000 ಮುಂಗಡ ಹಣವನ್ನು ಪಾವತಿಸುವ ಮೂಲಕ ಆರ್ಡರ್ ಮಾಡಬಹುದು.

ಹೋಂಡಾ ಆಕ್ಟಿವಾ ಇ (Honda Activa e): ಈ ಎಲೆಕ್ಟ್ರಿಕ್ ಸ್ಕೂಟರ್ ಇದೇ 17ರಂದು ನವದೆಹಲಿಯಲ್ಲಿ ಏರ್ಪಡಿಸುವ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಬಜೆಟ್ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಾಗಲಿದ್ದು, ರೂ.1.20 ಲಕ್ಷದಿಂದ ರೂ.1.30 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ.

Honda Activa E And Qc1 Electric Scooters Expected Ex Showroom Price And Launch Timeline Details

ಈ ಹೊಚ್ಚ ಹೊಸ 'ಹೋಂಡಾ ಆಕ್ಟಿವಾ ಇ' ಎಲೆಕ್ಟ್ರಿಕ್ ಸ್ಕೂಟರ್, 1.5 ಕಿಲೋವ್ಯಾಟ್ (Kwh) ಸಾಮರ್ಥ್ಯವಿರುವ ಎರಡು ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಭರ್ತಿ ಚಾರ್ಜ್‌ನಲ್ಲಿ 102 ಕಿ.ಮೀ ಓಡುತ್ತದೆ. 80 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ಇಕಾನ್, ಸ್ಟ್ಯಾಂಡರ್ಡ್ & ಸ್ಪೋರ್ಟ್ ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ.

ನೂತನ 'ಆಕ್ಟಿವಾ ಇ' ಪರ್ಲ್ ಶಾಲೋ ಬ್ಲೂ, ಪರ್ಲ್ ಮಿಸ್ಟಿ ವೈಟ್ ಹಾಗೂ ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಎಂಬ ಆಕರ್ಷಕ ಬಣ್ಣಗಳ ಆಯ್ಕೆಯಲ್ಲಿಯೂ ಲಭ್ಯವಿದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಹಾಗೂ ಹೆಚ್-ಸ್ಮಾರ್ಟ್ ಕೀ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. ಸವಾರರ ಸುರಕ್ಷತೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

Honda Activa E And Qc1 Electric Scooters Expected Ex Showroom Price And Launch Timeline Details

ಹೋಂಡಾ ಕ್ಯೂಸಿ1 (Honda QC1): ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯಬಹುದು ಎಂದು ಎಂದು ಅಂದಾಜಿಸಲಾಗಿದೆ. ಇದು ರೂ.1 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿರುವ ಸಾಧ್ಯತೆಯಿದೆ. ಈ ವರ್ಷದ ಮಾರ್ಚ್ ತಿಂಗಳಲ್ಲಿ ನೂತನ 'ಕ್ಯೂಸಿ1 ಇ-ಸ್ಕೂಟರ್ ಮಾರಾಟಕ್ಕೆ ಬರಬಹುದು ಎನ್ನಲಾಗಿದೆ.

ಹೊಚ್ಚ ಹೊಸ ಹೋಂಡಾ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್, ಪುಟ್ಟದಾದ 1.5 ಕಿಲೋವ್ಯಾಟ್ (Kwh) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಪೂರ್ತಿ ಚಾರ್ಜ್‌ನಲ್ಲಿ 80 ಕಿ.ಮೀ ರೇಂಜ್ (ಮೈಲೇಜ್) ನೀಡುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್ 1.8 ಕೆಡಬ್ಲ್ಯೂ ಪೀಕ್ ಪವರ್ ಮತ್ತು 77 ಎನ್ಎಂ (ನ್ಯೂಟನ್ ಮೀಟರ್) ಟಾರ್ಕ್ ಹೊರಹಾಕುತ್ತದೆ.

Honda Activa E And Qc1 Electric Scooters Expected Ex Showroom Price And Launch Timeline Details

ಈ ಕ್ಯೂಸಿ1 ಇ-ಸ್ಕೂಟರ್‌ನ ಬ್ಯಾಟರಿ ಪ್ಯಾಕ್ 0 ರಿಂದ 80% ಚಾರ್ಜ್ ಆಗುವುದಕ್ಕೆ 4 ಗಂಟೆ 30 ನಿಮಿಷ ತೆಗೆದುಕೊಳ್ಳುತ್ತದೆ. ಅದೇ ಸಂಪೂರ್ಣವಾಗಿ ಚಾರ್ಜ್ ಆಗಲು 6 ಗಂಟೆ 50 ನಿಮಿಷ ಬೇಕಾಗುತ್ತದೆ. ಇದು ಎಲ್‌ಸಿಡಿ ಡಿಸ್‌ಪ್ಲೇ, ಯುಎಸ್‌‍ಬಿ ಟೈಪ್-ಸಿ ಚಾರ್ಜಿಂಗ್ ಸಾಕೆಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ. ಹೆಚ್ಚಿನ ಲಗೇಜ್ ಸಾಗಿಸಲು ಸಾಧ್ಯವಾಗುವಂತೆ 26-ಲೀಟರ್‌ನ ಅಂಡರ್-ಸೀಟ್ ಸ್ಟೋರೇಜ್ ಕೂಡ ಇದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, January 2, 2025, 12:27 [IST]
English summary
Honda activa e and qc1 electric scooters expected ex showroom price and launch timeline details
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+