Honda Activa e: ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ ನಂ.1 ಆಗುವ ಕಾಲ ಸನಿಹಕ್ಕೆ.. ಶೀಘ್ರ ಗುಡ್‌ನ್ಯೂಸ್‌!

ಹೋಂಡಾ ಆಕ್ಟಿವಾ ಇ (Honda Activa e) ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಜನವರಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲಿ ಈ ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗಿತ್ತು. ಇದು ಸ್ಟ್ಯಾಂಡರ್ಡ್ & ರೋಡ್‌ಸಿಂಕ್ ಎಂಬ ರೂಪಾಂತರಗಳೊಂದಿಗೆ (ವೇರಿಯೆಂಟ್) ಲಭ್ಯವಿದ್ದು, ಕ್ರಮವಾಗಿ ರೂ.1.17 ಲಕ್ಷದಿಂದ ರೂ.1.52 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್ (Swappable Battery Pack) ಆಯ್ಕೆಯನ್ನು ಹೊಂದಿದ್ದು, ಬ್ಯಾಟರಿ-ಆಸ್-ಎ-ಸರ್ವಿಸ್ (ಬಾಸ್ - BaaS) ಪ್ಲ್ಯಾನ್‌ನಡಿ ಬೆಂಗಳೂರು, ದೆಹಲಿ ಹಾಗೂ ಮುಂಬೈ ಮಹಾನಗರಗಳಲ್ಲಿ ಮಾತ್ರ ಮಾರಾಟಗೊಳಿಸಲಾಗುತ್ತಿದೆ.

ಬಾಸ್ ಪ್ಲ್ಯಾನ್‌ನಡಿ 'ಹೋಂಡಾ ಆಕ್ಟಿವಾ ಇ' ಮಾಲೀಕರು, ಖಾಲಿಯಾಗಿರುವ ಬ್ಯಾಟರಿಯನ್ನು ತಮ್ಮ ಸಮೀಪದ ಇ:ಸ್ವಾಪ್ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಗೊತ್ತುಪಡಿಸಿದ ಸ್ಥಳದಲ್ಲಿ ಇಡಬೇಕು. ಆ ಬಳಿಕ ಮೊದಲೇ ಸಂಪೂರ್ಣವಾಗಿ ಭರ್ತಿಯಾದ ಬ್ಯಾಟರಿಯನ್ನು ತೆಗೆದುಕೊಳ್ಳುವುದಾಗಿದೆ. ಇದಕ್ಕಾಗಿ ಮಾಸಿಕ ರೂ.678 ಶುಲ್ಕ ವಿಧಿಸಲಾಗುತ್ತದೆ. ಸದ್ಯ ಹೋಂಡಾ ಬೆಂಗಳೂರಿನಲ್ಲಿ 83 ಹಾಗೂ ನವದೆಹಲಿಯಲ್ಲಿ 10 ಇ:ಸ್ವಾಪ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹೊಂದಿದೆ. ಮುಂಬೈನಲ್ಲಿ ಯಾವುದೇ ಇ:ಸ್ವಾಪ್ ಚಾರ್ಜಿಂಗ್ ಸ್ಟೇಷನ್‌ ಇಲ್ಲ.

Honda Activa e Soon Get Home Charging Dock Details

ಇದರಿಂದಾಗಿ, ಆಕ್ಟಿವಾ ಇ ಸ್ಕೂಟರ್‌ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅತಿ ಶೀಘ್ರದಲ್ಲೇ ಈ ಸಮಸ್ಯೆಯನ್ನು ಹೋಂಡಾ ಕಂಪನಿಯು ಬಗೆಹರಿಸುವ ಎಲ್ಲ ಎಲ್ಲ ಲಕ್ಷಣಗಳು ಗೋಚರಿಸುತ್ತವೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗುವ 'ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ 'ಚಾರ್ಜಿಂಗ್ ಡಾಕ್'ನ್ನು ಪರಿಚಯಿಸಲು ಹೋಂಡಾ ಹಣಿಯಾಗುತ್ತಿದೆ. ಈ ಬಗ್ಗೆ ವಿವಿಧ ಮಾಧ್ಯಮಗಳು ಕೂಡ ವರದಿ ಮಾಡಿವೆ.

ಚಾರ್ಜಿಂಗ್ ಡಾಕ್ ಬಳಕೆ ಮಾಡಿ, 'ಆಕ್ಟಿವಾ ಇ' ಸ್ಕೂಟರ್‌ನ ಬ್ಯಾಟರಿ ಪ್ಯಾಕ್‌ನ್ನು ಸುಲಭವಾಗಿ ಮನೆಯಲ್ಲಿಯೇ ಚಾರ್ಜ್ ಮಾಡಲು ಸಾಧ್ಯವಾಗಲಿದೆ. ಅಂದರೆ, ಸ್ಕೂಟರ್‌ನಲ್ಲಿ ಬಳಕೆ ಮಾಡಿದ ಬ್ಯಾಟರಿಯನ್ನು ಈ ಸಾಧನದ ನೆರೆವಿನೊಂದಿಗೆ ಚಾರ್ಜಿಂಗ್ ಮಾಡುವುದಾಗಿದೆ. ಯುರೋಪ್‌ನಲ್ಲಿ ಮಾರಾಟವಾಗುವ ಹೋಂಡಾದ ಸಿಯುವಿ ಇ (CUV e) ಸ್ಕೂಟರ್‌ಗಳು ಇದೇ ವ್ಯವಸ್ಥೆಯನ್ನು ಹೊಂದಿವೆ. ವಿಶೇಷವಾಗಿ ಆಕ್ಟಿವಾ ಇ ಎಲೆಕ್ಟ್ರಿಕ್ ಸ್ಕೂಟರ್, ಇದೇ 'ಸಿಯುವಿ ಇ'ಯನ್ನು ಆಧರಿಸಿದೆ.

Honda Activa e Soon Get Home Charging Dock Details

ಹೋಂಡಾ ಸಿಯುವಿ ಇ ಸ್ಕೂಟರ್‌ 270ಡಬ್ಲ್ಯೂ 'ಚಾರ್ಜಿಂಗ್ ಡಾಕ್' ಉಪಯೋಗ ಮಾಡಿದಾಗ, ಸರಿ ಸುಮಾರು 6 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗಿ ಬಿಡುತ್ತದೆ. ಅದೇ ರೀತಿಯಲ್ಲಿ 25 ರಿಂದ 75% ಚಾರ್ಜ್ ಆಗುವುದಕ್ಕೆ ಕೇವಲ 3 ಗಂಟೆ ತೆಗೆದುಕೊಳ್ಳುತ್ತದೆ.

ಹೋಂಡಾ ಆಕ್ಟಿವಾ ಇ ವಿಶೇಷತೆಗಳೇನು:

ಈ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಹೊಂದಿದೆ. ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಡಿಆರ್‌ಎಲ್‌ಗಳು, ಎಲ್ಇಡಿ ಟೈಲ್-ಲ್ಯಾಂಪ್‌ಗಳು ಹಾಗೂ ಡೈಮಂಡ್ ಕಟ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಪರ್ಲ್ ಶಾಲೋ ಬ್ಲೂ, ಪರ್ಲ್ ಮಿಸ್ಟಿ ವೈಟ್ & ಪರ್ಲ್ ಸೆರಿನಿಟಿ ಬ್ಲೂ ಸೇರಿದಂತೆ ವಿವಿಧ ಬಣ್ಣಗಳೊಂದಿಗೂ ದೊರೆಯುತ್ತದೆ. 1.5 ಕಿಲೋ ವಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಎರಡು ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 102 ಕಿ.ಮೀ ಓಡುತ್ತದೆ.

Honda Activa e Soon Get Home Charging Dock Details

ಇದು 7.0-ಇಂಚಿರುವ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇಕಾನ್, ಸ್ಟ್ಯಾಂಡರ್ಡ್ & ಸ್ಪೋರ್ಟ್ ಎಂಬ ರೈಡಿಂಗ್ ಮೋಡ್‌ಗಳನ್ನು ಒಳಗೊಂಡಿದೆ. ಸವಾರರ ಸುರಕ್ಷತೆಗಾಗಿ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ಸ್ ಹಾಗೂ ಹಿಂಭಾಗ (ರೇರ್) ಡುಯಲ್ ಸ್ಪ್ರಿಂಗ್‌ ಸಸ್ಪೆನ್ಷನ್ ಸೆಟಪ್ ಒಳಗೊಂಡಿದೆ. ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಒಟ್ಟಾರೆಯಾಗಿ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್‌ನ್ನು ಮನೆಯಲ್ಲಿ ಚಾರ್ಜ್ ಮಾಡಲು ಸಾಧ್ಯವಾಗುವಂತೆ, ಕಂಪನಿಯು 'ಚಾರ್ಜಿಂಗ್ ಡಾಕ್'ನ್ನು ನೀಡಲಿದೆ ಎನ್ನಲಾಗುತ್ತಿರುವುದು ಉತ್ತಮವಾದ ಬೆಳವಣಿಗೆಯಾಗಿದೆ. ಆಗೊಮ್ಮೆ ಈ ಸಾಧನವನ್ನು ಒದಗಿಸಿದರೆ, ಸಾವಿರಾರು ಜನರಿಗೆ ಪ್ರಯೋಜನವು ಆಗಲಿದೆ. ಆ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಜನರು 'ಆಕ್ಟಿವಾ ಇ' ಖರೀದಿಯತ್ತ ಮುಖ ಮಾಡಬಹುದು. ಇದರಿಂದ ಮಾರಾಟ ಪ್ರಮಾಣವು ಸುಧಾರಿಸುವ ನಿರೀಕ್ಷೆಯಿದೆ.

Article Published On: Tuesday, July 22, 2025, 8:30 [IST]
English summary
Honda activa e soon get home charging dock details
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+