ಬದ್ದ ವೈರಿಗಳು ಎಲೆಕ್ಟ್ರಿಕ್ ಅವತಾರದಲ್ಲಿ ಸೆಣಸಾಡಲು ಸಿದ್ಧ: ಆಕ್ಟೀವಾ ಇವಿ Vs ಆಕ್ಸಿಸ್ ಇವಿ ಹೋಲಿಕೆ!
ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗವು ಫುಲ್ ಡಿಮ್ಯಾಂಡ್ ಪಡೆದುಕೊಳ್ಳುತ್ತಿದ್ದು, ಎರಡು ಜನಪ್ರಿಯ ಬ್ರಾಂಡ್‌ಗಳು ಕೊನೆಗೂ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗಕ್ಕೆ ಎಂಟ್ರಿಕೊಟ್ಟಿವೆ. ಹೋಂಡಾ ಈಗಾಗಲೇ ಎಲೆಕ್ಟ್ರಿಕ್ ಆಕ್ಟಿವಾ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಇದೀಗ ಈ ಸ್ಕೂಟರ್‌ಗೆ ನೇರ ಪೈಪೋಟಿ ನೀಡಲು ಸುಜುಕಿ ತನ್ನ ಆಕ್ಸಿಸ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸುಜುಕಿ ಇ-ಆಕ್ಸೆಸ್ ನ ಬೆಲೆಯನ್ನು ಶೀಘ್ರದಲ್ಲೇ ಘೋಷಿಸಲು ತಯಾರಿ ನಡೆಸುತ್ತಿದೆ. ಎರಡೂ ಸ್ಕೂಟರ್‌ಗಳು ಮಾರುಕಟ್ಟೆಯಲ್ಲಿ ಸಾರಿಯಾದ ಪ್ರತಿಸ್ಪರ್ಧಿಗಳಾಗಿದ್ದು, ಇವುಗಳ ಬ್ಯಾಟರಿ, ರೇಂಜ್, ಪವರ್ ಮತ್ತು ಬೆಲೆ ವಿಷಯದಲ್ಲಿ ಹೇಗೆ ಸ್ಪರ್ಧಿಸುತ್ತವೆ ನೋಡೋಣ.
ಬೆಲೆ: ಹೋಂಡಾ ಆಕ್ಟಿವಾ ಇ: ಸ್ಟ್ಯಾಂಡರ್ಡ್ ವೇರಿಯೆಂಟ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.17 ಲಕ್ಷಗಳಿಂದ ಪ್ರಾರಂಭವಾಗುತ್ತದೆ. ಹೆಚ್ಚಿನ ಫೀಚರ್ಸ್ ಹೊಂದಿರುವ ರೋಡ್ ಸಿಂಕ್ ಡ್ಯುಯೊ ವೇರಿಯೆಂಟ್ ಬೆಲೆಯು ರೂ.1.52 (ಎಕ್ಸ್ ಶೋರೂಂ) ಲಕ್ಷಗಳಾಗಿದೆ. ಸುಜುಕಿ ಇ-ಆಕ್ಸೆಸ್ ಬೆಲೆ ಇನ್ನೂ ಘೋಷಿಸಿಲ್ಲವಾದರೂ, ಮೂಲಗಳ ಪ್ರಕಾರ ಎಕ್ಸ್ ಶೋರೂಂ ದರದಂತೆ ರೂ.1.5 ಲಕ್ಷದಿಂದ 1.10 ಲಕ್ಷಕ್ಕೆ ಬಿಡುಗಡೆಯಾಗಬಹುದು.

ಫೀಚರ್ಸ್: ಸುಜುಕಿ ಇ-ಆಕ್ಸೆಸ್ ಸಣ್ಣ 4.3-ಇಂಚಿನ ಟಿಎಫ್‌ಟಿ ಡಿಸ್ ಪ್ಲೇ, ಕೀಲೆಸ್ ಇಗ್ನಿಷನ್, 'ಇಕೋ, ರೈಡ್ ಎ, ರೈಡ್ ಬಿ' ಎಂಬ ಮೂರು ರೈಡಿಂಗ್ ಮೋಡ್‌ಗಳು ಸೇದಂತೆ ರಿವರ್ಸ್ ಮೋಡ್ ಹೊಂದಿದೆ. ಇದು ನ್ಯಾವಿಗೇಷನ್, ಲೈವ್ ಟ್ರಾಫಿಕ್ ಅಪ್ಡೇಟ್‌ಗಳು ಮತ್ತು ಕಾಲ್ / ಎಸ್ಎಂಎಸ್ ಎಚ್ಚರಿಕೆಗಳಿಗಾಗಿ ಸ್ಮಾರ್ಟ್‌ಫೋನ್ ಸಂಪರ್ಕವನ್ನು ನೀಡುವ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಬರುತ್ತದೆ.
ಹೋಂಡಾ ಆಕ್ಟಿವಾ ಇ: ಇಕಾನ್, ಸ್ಟ್ಯಾಂಡರ್ಡ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಸಹ ಒಳಗೊಂಡಿದೆ. ದೊಡ್ಡ 7-ಇಂಚಿನ ಟಿಎಫ್‌ಟಿ ಡಿಸ್ಪ್ಲೆ ಮತ್ತು ಹೋಂಡಾ ರೋಡ್ ಸಿಂಕ್ ಡ್ಯುಯೊ ಅಪ್ಲಿಕೇಶನ್ ಮೂಲಕ ಕನೆಕ್ಟೆಡ್ ಟೆಕ್ನಾಲಜಿ ಹೊಂದಿದೆ. ನ್ಯಾವಿಗೇಷನ್, ಕಾಲ್, ಮ್ಯೂಸಿಕ್ ಕಂಟ್ರೋಲ್, ಲೈವ್ ಟ್ರ್ಯಾಕಿಂಗ್ ಮತ್ತು ನಿರ್ವಹಣಾ ಎಚ್ಚರಿಕೆಗಳಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

ಬ್ಯಾಟರಿ ಮತ್ತು ರೇಂಜ್: ಸುಜುಕಿಯ ಇ-ಆಕ್ಸೆಸ್ 3.07 ಕಿಲೋವ್ಯಾಟ್ ಎಲ್ಎಫ್‌ಪಿ ಬ್ಯಾಟರಿಯು ಸಿಂಗಲ್ ಚಾರ್ಜ್‌ನಲ್ಲಿ 95 ಕಿ.ಮೀ ರೇಂಜ್ ನೀಡುತ್ತದೆ. ಇದರ ಎಲೆಕ್ಟ್ರಿಕ್ ಮೋಟರ್ 4.1 ಕಿಲೋವ್ಯಾಟ್ ಪವರ್ ಮತ್ತು 15 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಪೋರ್ಟಬಲ್ ಚಾರ್ಜರ್ ಮೂಲಕ 6 ಗಂಟೆ 42 ನಿಮಿಷಗಳಲ್ಲಿ ಚಾರ್ಜ್ ಹಾಗೂ ಡಿಸಿ ಫಾಸ್ಟ್ ಚಾರ್ಜರ್ ಮೂಲಕ 2 ಗಂಟೆ 12 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು.
ಹೋಂಡಾ ಆಕ್ಟಿವಾ ಇ: ಎರಡು ಬದಲಾಯಿಸಬಹುದಾದ 1.5 ಕಿಲೋವ್ಯಾಟ್ ಲಿಥಿಯಂ - ಐಯಾನ್ ಬ್ಯಾಟರಿಗಳೊಂದಿಗೆ ಬರುತ್ತದೆ. ಇದರಲ್ಲಿ 6 ಕಿಲೋವ್ಯಾಟ್ ಮೋಟರ್ ಅಳವಡಿಸಲಾಗಿದ್ದು, ಇದು 22 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಒಂದು ಬಾರಿ ಚಾರ್ಜ್ ಮಾಡಿದರೆ 102 ಕಿ.ಮೀ ರೇಂಜ್ ನೀಡುತ್ತದೆ.

ಹೋಂಡಾ ಆಕ್ಟಿವಾ ಇ: ಗಂಟೆಗೆ 80 ಕಿ.ಮೀ ಟಾಪ್ ಸ್ಪೀಡ್ ತಲುಪುತ್ತದೆ. ಹೋಮ್ ಚಾರ್ಜಿಂಗ್ ನೀಡುವ ಬದಲು, ಹೋಂಡಾ ಕಂಪನಿಯು ತನ್ನ ಇ:ಸ್ವಾಪ್ ಕೇಂದ್ರಗಳಿಗೆ ಪ್ರವೇಶವನ್ನು ಒದಗಿಸಿದ್ದು, ಅಲ್ಲಿ ಸವಾರರು ತಮ್ಮ ಖಾಲಿಯಾದ ಬ್ಯಾಟರಿಗಳನ್ನು ಪೂರ್ಣವಾಗಿ ಚಾರ್ಜ್ ಮಾಡಿದ ಬ್ಯಾಟರಿಗಳೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications