Honda Activa: ಬೆಚ್ಚಿಬಿದ್ದ ಟಾಪ್ ಬ್ರ್ಯಾಂಡ್‌ಗಳು.. ಅಗ್ಗದ ಹೋಂಡಾ ಆಕ್ಟಿವಾಗೆ ಮನಸೋತ ಜನ.. ಸೇಲ್ಸ್ ಬಲುಜೋರು!

ದೇಶದ ಜನರಿಗೆ ನಿಮಿಷ್ಟದ ಸ್ಕೂಟರ್ ಯಾವುದೆಂದು ಕೇಳಿದರೆ, ತಕ್ಷಣ ಬರುವ ಉತ್ತರವೇ ಹೋಂಡಾ ಆಕ್ಟಿವಾ (Honda Activa) ಎಂದು. ಅಷ್ಟರ ಮಟ್ಟಿಗೆ ಈ ಸ್ಕೂಟರ್ ಜನಪ್ರಿಯತೆ ಗಳಿಸಿದೆ. ಇದೇ ನವೆಂಬರ್‌ನಲ್ಲೂ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ನಂಬರ್ 1 ಸ್ಥಾನದಲ್ಲಿ ಮುಂದುವರಿದಿದೆ. ಒಟ್ಟು 2,62,689 ಯುನಿಟ್‌ಗಳನ್ನು ಗ್ರಾಹಕರಿಗೆ ಯಶಸ್ವಿಯಾಗಿ ವಿತರಿಸಲಾಗಿದೆ. 2024 ನವೆಂಬರ್‌ ತಿಂಗಳಲ್ಲಿ 2,06,844 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 27% ಪ್ರಗತಿಯಾಗಿದೆ.

ಇದೇ ನವೆಂಬರ್‌ನಲ್ಲಿ 'ಹೋಂಡಾ ಆಕ್ಟಿವಾ' ಮಾರಾಟವು ಅಧಿಕಗೊಳ್ಳಲು ನಾನಾ ಕಾರಣಗಳಿವೆ. ಸೆಪ್ಟೆಂಬರ್ 22 ರಿಂದ ಜಿಎಸ್‌ಟಿ ಪರಿಷ್ಕರಣೆಗೊಂಡಿದ್ದು, ಈ ಸ್ಕೂಟರ್ ಬೆಲೆಯೂ ಕಡಿಮೆಯಾಗಿದೆ. ಜೊತೆಗೆ ನಿರ್ವಹಣಾ ವೆಚ್ಚವು ಅಗ್ಗವಾಗಿದೆ. ಇದನ್ನು 10 ರಿಂದ 15 ವರ್ಷಗಳು ಬೇಕಾದರೂ ಸುಲಭವಾಗಿ ಉಪಯೋಗಿಸಬಹುದು. ಹೀಗಾಗಿ, ಮಾರಾಟ ಪ್ರಮಾಣವು ಹೆಚ್ಚಳಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ.

Honda Activa November 2025 Sales Details

ನೂತನ 'ಹೋಂಡಾ ಆಕ್ಟಿವಾ' ಎರಡು ರೂಪದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ಅವುಗಳೆಂದರೆ ಆಕ್ಟಿವಾ 125 ಮತ್ತು ಆಕ್ಟಿವಾ 110. ಇವುಗಳು ತುಂಬಾ ಅಚ್ಚುಕಟ್ಟಾದ ವಿನ್ಯಾಸ ಹೊಂದಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿವೆ. ಅದಕ್ಕೆ ತಕ್ಕಂತೆ ಬಜೆಟ್ ಬೆಲೆಯಲ್ಲಿಯೂ ಸಿಗುತ್ತವೆ.

ಹೋಂಡಾ ಆಕ್ಟಿವಾ 125 (Honda Activa 125):

ಈ ಸ್ಕೂಟರ್ ಕನಿಷ್ಠ ರೂ.92,562 ಹಾಗೂ ಗರಿಷ್ಠ ರೂ.96,307 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಪರ್ಲ್ ಡೀಪ್ ಗ್ರೌಂಡ್ ಗ್ರೇ, ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಪರ್ಲ್ ಪ್ರೆಷಿಯಸ್ ವೈಟ್, ಪರ್ಲ್ ಸೈರನ್ ಬ್ಲೂ & ರೆಬೆಲ್ ರೆಡ್ ಮೆಟಾಲಿಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 210 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,590 ಮಿ.ಮೀ ವೀಲ್‌ಬೇಸ್‌ನ್ನು ಒಳಗೊಂಡಿದೆ.

Honda Activa November 2025 Sales Details

ಇದು ಬೆಲೆಗೆ ಅನುಗುಣವಾಗಿ ಶಕ್ತಿಶಾಲಿಯಾದ ಪವರ್‌ಟ್ರೇನ್‌ನ್ನು ಹೊಂದಿದೆ. 123.92-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. 8.4 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಹಾಗೂ 10.5 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಒಳಗೊಂಡಿದೆ. 47 ಕಿಲೋಮೀಟರ್‌ವರೆಗೆ ಮೈಲೇಜ್ ಕೊಡುತ್ತದೆ. 5.3 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‍ನ್ನು ತನ್ನದಾಗಿಸಿಕೊಂಡಿದ್ದು, ಸರಿ ಸುಮಾರು 107 ಕೆಜಿ ತೂಕವಿದೆ.

ನೂತನ 'ಆಕ್ಟಿವಾ 125' ಸ್ಕೂಟರ್ 90 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಪಡೆದಿದೆ. ದೊಡ್ಡದಾಗಿರುವ ಟಿಎಫ್‌ಟಿ ಕನ್ಸೋಲ್, ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್‌ನಂತಹ ನಾನಾ ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡಿಸ್ಕ್ ಹಾಗೂ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೋಂಡಾ ಆಕ್ಟಿವಾ 110 (Honda Activa 110):

ಈ ಸ್ಕೂಟರ್ ರೂ.75,182 ರಿಂದ ರೂ.88,507 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಡಿಸೆಂಟ್ ಬ್ಲೂ ಮೆಟಾಲಿಕ್, ರೆಬೆಲ್ ರೆಡ್ ಮೆಟಾಲಿಕ್ ಹಾಗೂ ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 162 ಮಿ.ಮೀ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,260 ಮಿ.ಮೀ ವೀಲ್‌ಬೇಸ್‌ನ್ನು ಪಡೆದಿದೆ.

ಹೊಸ 'ಆಕ್ಟಿವಾ 110' ಸ್ಕೂಟರ್ 109.51-ಸಿಸಿ ಪೆಟ್ರೋಲ್ ಎಂಜಿನ್‌ನ್ನು ಒಳಗೊಂಡಿದೆ. 59 ಕಿಲೋಮೀಟರ್‌ವರೆಗೆ ನೀಡುತ್ತದೆ. 85 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. 4.2-ಇಂಚಿನ ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕನ್ಸೋಲ್‌ ಮತ್ತು ಸ್ಮಾರ್ಟ್‌ಫೋನ್‌ ಕನೆಕ್ಟಿವಿಟಿ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಇನ್ನು, 'ಹೋಂಡಾ ಆಕ್ಟಿವಾ' ನಂತರ ಎರಡನೇ ಸ್ಥಾನವನ್ನು ಟಿವಿಎಸ್ ಜೂಪಿಟರ್ (1,24,782) ತನ್ನದಾಗಿಸಿಕೊಂಡಿದೆ. ಹಾಗೆಯೇ ಮೂರನೇ ಸ್ಥಾನದಲ್ಲಿ ಸುಜುಕಿ ಆಕ್ಸೆಸ್ (67,477 ಯುನಿಟ್), ನಾಲ್ಕನೇ ಸ್ಥಾನದಲ್ಲಿ ಟಿವಿಎಸ್ ಐಕ್ಯೂಬ್ (38,191 ಯುನಿಟ್) ಹಾಗೂ ಐದನೇ ಸ್ಥಾನದಲ್ಲಿ ಬಜಾಜ್ ಚೇತಕ್ (38,022 ಯುನಿಟ್) ಇದೆ.

More from DriveSpark

Article Published On: Friday, December 26, 2025, 10:43 [IST]
English summary
Honda activa november 2025 sales details
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+