ಇತ್ತೀಚೆಗೆ ಹೋಂಡಾದ ಎರಡು ಪವರ್‌ಫುಲ್ ಬೈಕ್‌ಗಳು ಬಿಡುಗಡೆ: ವಿಶೇಷತೆಗಳೇನು?

ಭಾರತದಲ್ಲಿ ಇತ್ತೀಚೆಗೆ ಹೋಂಡಾ (Honda) ಕಂಪನಿಯು ತನ್ನ ಅಂತರಾಷ್ಟ್ರೀಯ ಪ್ರೀಮಿಯಂ ಮೋಟಾರ್‌ಸೈಕಲ್‌ಗಳಾದ CB750 ಹಾರ್ನೆಟ್ ಮತ್ತು CB1000 ಹಾರ್ನೆಟ್ SP ಗಳನ್ನು ಬಿಡುಗಡೆ ಮಾಡಿದೆ. CB1000 ಹಾರ್ನೆಟ್ SP ಭಾರತದಲ್ಲಿನ ಬಿಗ್‌ವಿಂಗ್ ಟಾಪ್‌ಲೈನ್ ಡೀಲರ್‌ಶಿಪ್‌ಗಳ ಮೂಲಕ ಪ್ರತ್ಯೇಕವಾಗಿ ಮಾರಾಟವಾಗುತ್ತದೆ. ಹಾಗೆಯೇ CB750 ಹಾರ್ನೆಟ್ ಎಲ್ಲಾ ಬಿಗ್‌ವಿಂಗ್ ಟಾಪ್‌ಲೈನ್ ಮತ್ತು ಬಿಗ್‌ವಿಂಗ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಎರಡೂ ಮೋಟಾರ್‌ಸೈಕಲ್‌ಗಳ ಬುಕಿಂಗ್‌ಗಳನ್ನು ಪ್ರಾರಂಭವಾಗಿದ್ದು, ವಿತರಣೆಗಳು ಜೂನ್ 2025 ರಿಂದ ಪ್ರಾರಂಭವಾಗಲಿವೆ ಎಂದು ಹೋಂಡಾ ಹೇಳಿದೆ.

ಪವರ್‌ಫುಲ್‌ ಎಂಜಿನ್‌ಗಳು: ಹೋಂಡಾ CB750 ಹಾರ್ನೆಟ್ ಸ್ಪೋರ್ಟ್, ಸ್ಟ್ಯಾಂಡರ್ಡ್, ರೈನ್ ಮತ್ತು ಯೂಸರ್ ಎಂಬ ನಾಲ್ಕು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಇದು 9,500 RPM ನಲ್ಲಿ 67.5 kW ಪವರ್ ಮತ್ತು 7,250 RPM ನಲ್ಲಿ 75 Nm ಪೀಕ್ ಟಾರ್ಕ್ ಅನ್ನು ಹೊರಹಾಕುವ ಇನ್‌ಲೈನ್ 2-ಸಿಲಿಂಡರ್, 755cc, 4 ಸ್ಟ್ರೋಕ್, 8 ವಾಲ್ವ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ.

honda-cb750-hornet-and-cb1000-hornet-sp-top-things

ಹೋಂಡಾ CB1000 ಹಾರ್ನೆಟ್ SP ಮೋಟಾರ್‌ಸೈಕಲ್, 11,000 RPM ನಲ್ಲಿ 115.6 kW ಪವರ್ ಮತ್ತು 9,000 RPM ನಲ್ಲಿ 107 Nm ಟಾರ್ಕ್ ಹೊರಹಾಕುವ 999cc, ಲಿಕ್ವಿಡ್ ಕೂಲ್ಡ್, 4 ಸ್ಟ್ರೋಕ್, 16 ವಾಲ್ವ್, ಇನ್‌ಲೈನ್ ಫೋರ್ DOHC ಎಂಜಿನ್‌ ಹೊಂದಿದೆ. ಎರಡೂ ಬೈಕ್‌ಗಳು 6-ಸ್ಪೀಡ್ ಗೇರ್‌ಬಾಕ್ಸ್‌ ಜೊತೆಗೆ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಹೊಂದಿವೆ.

ಪ್ರಮುಖ ನೇಕೆಡ್ ಸ್ಟ್ರೀಟ್‌ಫೈಟರ್ ಆಗಿರುವ CB1000 ಹಾರ್ನೆಟ್ SP, ಕೇವಲ ಒಂದೇ ಮ್ಯಾಟ್ ಬ್ಯಾಲಿಸ್ಟಿಕ್ ಬ್ಲ್ಯಾಕ್ ಮೆಟಾಲಿಕ್ ಬಣ್ಣದಲ್ಲಿ ಲಭ್ಯವಿದೆ. ಹೋಂಡಾ CB750 ಹಾರ್ನೆಟ್ ಮ್ಯಾಟ್ ಪರ್ಲ್ ಗ್ಲೇರ್ ವೈಟ್ ಮತ್ತು ಮ್ಯಾಟ್ ಬ್ಯಾಲಿಸ್ಟಿಕ್ ಬ್ಲ್ಯಾಕ್ ಮೆಟಾಲಿಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. 'ಆಕ್ರಮಣಕಾರಿ X ಪ್ಯೂರ್' ಡಿಸೈನ್‌ನೊಂದಿಗೆ CB750 ಹಾರ್ನೆಟ್ ಮತ್ತು CB1000 ಹಾರ್ನೆಟ್ SP ಎರಡೂ ಮಸ್ಕುಲರ್ ಸ್ಟ್ರೀಟ್‌ಫೈಟರ್ ವಿನ್ಯಾಸವನ್ನು ಹೊಂದಿವೆ.

ಹೊಚ್ಚ ಹೊಸ ಹೋಂಡಾ CB750 ಹಾರ್ನೆಟ್ ಬೆಲೆ ರೂ. 8,59,500 ಮತ್ತು CB1000 ಹಾರ್ನೆಟ್ SP ಬೆಲೆ ರೂ. 12,35,900 ಆಗಿದೆ (ಎರಡೂ ಎಕ್ಸ್-ಶೋರೂಂ ಬೆಲೆಗಳು). ಈ ನೇಕೆಡ್ ಸ್ಟ್ರೀಟ್‌ಫೈಟರ್‌ಗಳು ಹೋಂಡಾದ ರೋಡ್‌ಸಿಂಕ್ ಅಪ್ಲಿಕೇಶನ್ ಸಂಪರ್ಕದೊಂದಿಗೆ 5.0-ಇಂಚಿನ ಫುಲ್ಲಿ-ಕಲರ್ TFT ಡಿಸ್ಪ್ಲೇ ಹೊಂದಿವೆ. ನ್ಯಾವಿಗೇಷನ್, ಕರೆ ಎಚ್ಚರಿಕೆಗಳು ಮತ್ತು ಬ್ಲೂಟೂತ್ ಮೂಲಕ ಸಂಗೀತ ನಿಯಂತ್ರಣಕ್ಕಾಗಿ ಸ್ಮಾರ್ಟ್‌ಫೋನ್ ಸಂಪರ್ಕವನ್ನು ಅನುಮತಿಸುತ್ತದೆ.

ಹೈಟೆಕ್ ಫೀಚರ್ಸ್: ಹೈ ಪರ್ಫಾಮೆನ್ಸ್‌ಗಾಗಿ ವಿನ್ಯಾಸಗೊಳಿಸಲಾದ ಈ ಎರಡೂ ಸ್ಟ್ರೀಟ್ ನೇಕೆಡ್ ಮೋಟಾರ್‌ಸೈಕಲ್‌ಗಳು, CB1000 ಹಾರ್ನೆಟ್ ಮುಂಭಾಗದಲ್ಲಿ SHOWA SFF-BP ತಲೆಕೆಳಗಾದ ಫೋರ್ಕ್ ಮತ್ತು ಹಿಂಭಾಗದಲ್ಲಿ ಹೊಸ ÖHLINS TTX36 ಅನ್ನು ಒಳಗೊಂಡಿದೆ. CB750 ಹಾರ್ನೆಟ್ ಮುಂಭಾಗದಲ್ಲಿ SHOWA SFF-BPTM ತಲೆಕೆಳಗಾದ ಫೋರ್ಕ್ ಮತ್ತು ಹಿಂಭಾಗದಲ್ಲಿ ಪ್ರೊ-ಲಿಂಕ್ ಸ್ವಿಂಗಾರ್ಮ್‌ನೊಂದಿಗೆ ಮೊನೊಶಾಕ್ ಡ್ಯಾಂಪರ್ ಅನ್ನು ಹೊಂದಿದೆ.

CB750 ಹಾರ್ನೆಟ್ 296mm ಡ್ಯುಯಲ್ ಫ್ರಂಟ್ ಡಿಸ್ಕ್ ಬ್ರೇಕ್‌ಗಳು ಮತ್ತು ಹಿಂಭಾಗದಲ್ಲಿ 240mm ಡಿಸ್ಕ್ ಅನ್ನು ಹೊಂದಿದೆ. CB1000 ಹಾರ್ನೆಟ್ SP ಗಾಗಿ 310mm ಬ್ರೆಂಬೊ ರೇಡಿಯಲ್-ಮೌಂಟ್ ಕ್ಯಾಲಿಪರ್‌ಗಳೊಂದಿಗೆ ಡ್ಯುಯಲ್ ಫ್ರಂಟ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ. ಹಿಂಭಾಗದಲ್ಲಿ ಇದು 240mm ಡಿಸ್ಕ್ ಅನ್ನು ಪಡೆಯುತ್ತದೆ. ಹೆಚ್ಚುವರಿ ಸುರಕ್ಷತೆಗಾಗಿ ಎರಡೂ ಮಾದರಿಗಳು ಡ್ಯುಯಲ್-ಚಾನೆಲ್ ABS ಅನ್ನು ಹೊಂದಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, May 31, 2025, 10:30 [IST]
English summary
Honda cb750 hornet and cb1000 hornet sp price features design
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+