Honda: 11 ವರ್ಷಗಳಿಂದ ಬಡವರ ಬಂಡಿ: ಈಗ ಯಾರೂ ಖರೀದಿಸುತ್ತಿಲ್ಲ: ಪಯಣ ಮುಕ್ತಾಯ... ಮಾರಾಟ ಸ್ಥಗಿತ!
ಹೋಂಡಾ ಕಂಪನಿಯು ತನ್ನ ಅತ್ಯಂತ ಕೈಗೆಟುಕುವ ಎಂಟ್ರಿ ಲೆವೆಲ್ ಮೋಟಾರ್ ಸೈಕಲ್‌ಗಳಲ್ಲಿ ಒಂದಾದ ಸಿಡಿ 110 ಡ್ರೀಮ್ ಮಾರಾಟವನ್ನು ಅಧಿಕೃತವಾಗಿ ಸ್ಥಗಿತಗೊಳಿಸಿದೆ. ಈ ಬೈಕ್ ಕಳೆದ ಹನ್ನೊಂದು ವರ್ಷಗಳಿಂದ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಗಳಿಸಿದೆ. ಬಜೆಟ್ ಸ್ನೇಹಿ ಬೆಲೆ ಮತ್ತು ಉತ್ತಮ ಫೀಚರ್ಸ್ ಹೊರತಾಗಿಯೂ, ಸಿಡಿ 110 ಡ್ರೀಮ್ ಇತ್ತೀಚಿನ ವರ್ಷಗಳಲ್ಲಿ ಖರೀದಿದಾರರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ. ಇದು ಹೋಂಡಾ ಕಂಪನಿಯಿಂದ ಖರೀದಿಗೆ ಲಭ್ಯವಿರುವ ಅತ್ಯಂತ ಕೈಗೆಟುಕುವ ವಾಹನಗಳಲ್ಲಿ ಒಂದಾಗಿದ್ದರೂ ಸರಿಯಾದ ಮಾರಾಟವಿಲ್ಲದಿರುವುದರಿಂದ ಬೈಕ್ ಅನ್ನು ಸ್ಥಗಿತಗೊಳಿಸಿರುವುದಾಗಿ ತಿಳಿದುಬಂದಿದೆ.
ಹೋಂಡಾ ಸಿಡಿ 110 ಡ್ರೀಮ್ ಬೈಕ್ ಅನ್ನು 2014 ರಲ್ಲಿ ಬಿಡುಗಡೆ ಮಾಡಲಾಯಿತು. ಅಂದಿನಿಂದ ಸಾಮೂಹಿಕ ಮಾರುಕಟ್ಟೆ ವಿಭಾಗದಲ್ಲಿ ಜನಪ್ರಿಯ ಮೋಟಾರ್ ಸೈಕಲ್ ಆಗಿತ್ತು. ಸಿಡಿ 110 ಡ್ರೀಮ್ ವಿಶ್ವಾಸಾರ್ಹ ಪೆಟ್ರೋಲ್ ಎಂಜಿನ್, ಆರಾಮದಾಯಕ ಆಸನ, ಹೆಚ್ಚಿನ ಮೈಲೇಜ್‌ನೊಂದಿಗೆ ಗ್ರಾಹಕರಿಗೆ ವಿಶ್ವಾಸಾರ್ಹತೆಯನ್ನು ಒದಗಿಸಿತ್ತು.

ಮಾರಾಟದಲ್ಲಿ ಕುಸಿತ: ಸಿಡಿ 110 ಡ್ರೀಮ್‌ನ ಮಾರಾಟವು ಅಕ್ಟೋಬರ್ 2024 ರಿಂದ ಕುಸಿಯುತ್ತಾ ಬಂದಿದೆ. ಮಾರ್ಚ್ 2025 ರಲ್ಲಿ ಕೇವಲ 33 ವಾಹಗಳು ಮಾರಾಟವಾಗಿವೆ. 2014ರಲ್ಲಿ ಹೋಂಡಾ ಸಿಡಿ 110 ಡ್ರೀಮ್ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.41,100ಗಳಾಗಿತ್ತು. ಹೋಂಡಾ ಸಿಡಿ 110 ಡ್ರೀಮ್ ಬೈಕ್ ಸ್ಥಗಿತಗೊಳ್ಳುವ ಮುನ್ನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.76,401ಗಳಾಗಿತ್ತು.
ಕಂಪನಿಯ ಪ್ರಕಾರ ಈ ಬೈಕ್ 65 ಕಿ.ಮೀ ಮೈಲೇಜ್ ನೀಡುತ್ತದೆ. ಈ ಬೈಕಿನಲ್ಲಿ ಟೂ-ವೇ ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್ ಮತ್ತು ಕಾಂಬಿ-ಬ್ರೇಕ್ ಸಿಸ್ಟಮ್ (ಸಿಬಿಎಸ್) ಅಳವಡಿಸಲಾಗಿದೆ. ಇದು ಸಿಲ್ವರ್ ಬಣ್ಣದ 5-ಸ್ಪೋಕ್ ಅಲಾಯ್ ವೀಲ್‌ಗಳನ್ನು ಹೊಂದಿದೆ. ಈ ಬೈಕಿನಲ್ಲಿ ಡೈಮಂಡ್ ಮಾದರಿಯ ಫ್ರೇಮ್, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಹಿಂಭಾಗದಲ್ಲಿ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳು ಮತ್ತು ಎರಡೂ ವೀಲ್‌ಗಳಲ್ಲಿ ಡ್ರಮ್ ಬ್ರೇಕ್ ಅಳವಡಿಸಲಾಗಿದೆ.

ಈ ಬೈಕ್ 109.51 ಸಿಸಿ ಏರ್ ಕೂಲ್ಡ್ ಎಂಜಿನ್ ಸಹಾಯದಿಂದ 7,500 ಆರ್ ಪಿಎಂನಲ್ಲಿ 8.6 ಬಿಹೆಚ್ ಪವರ್ ಮತ್ತು 5,500 ಆರ್‌ಪಿಎಂನಲ್ಲಿ 9.3 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 4-ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದ್ದು, ಒಬಿಡಿ-2 ಎಮಿಷನ್ ಸ್ಟ್ಯಾಂಡರ್ಡ್ ಮತ್ತು ಇ-20 ಫ್ಯೂಯಲ್ ಅವಶ್ಯಕತೆಗಳಿಗೆ ಅನುಸಾರವಾಗಿ ಎಂಜಿನ್ ಅಪ್‌ಡೇಟ್ ಮಾಡಲಾಗಿತ್ತು.
ಸಿಡಿ 110 ಡ್ರೀಮ್ ಸ್ಥಾನದಲ್ಲಿ ಹೋಂಡಾ ಶೈನ್: ಹೋಂಡಾ ಕಂಪನಿಯು ಹೆಚ್ಚು ಕೈಗೆಟುಕುವ ಬೆಲೆಯ ಶೈನ್ 100 ಬೈಕ್ ಅನ್ನು ಬಿಡುಗಡೆಗೊಳಿಸುವ ಮೂಲಕ ಸಿಡಿ 110 ಡ್ರೀಮ್ ಬೈಕ್‌ಗೆ ಬೇಡಿಕೆ ಕುಸಿಯಿತು. ಗ್ರಾಹಕರು ಶೈನ್ 100 ಅನ್ನು ಆರಿಸಿಕೊಂಡರು, ಏಕೆಂದರೆ ಸಿಡಿ 110 ಡ್ರೀಮ್‌ಗಿಂತ ಸುಮಾರು 10,000 ರೂ.ಗಳಷ್ಟು ಅಗ್ಗದ ಬೆಲೆಗೆ ಶೈನ್ ಸಿಗುತ್ತಿದೆ. ಕಂಪನಿಯ ಪ್ರಕಾರ ಶೈನ್ 55 ಕಿ.ಮೀ ಮೈಲೇಜ್ ನೀಡುತ್ತದೆ.

ಶೈನ್ 100 ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.61,915ಗಳಾಗಿದೆ. ಶೈನ್ 100 ಬೈಕ್ 98.98 ಸಿಸಿ ಎಂಜಿನ್ ಸಹಾಯದಿಂದ 7,500 ಆರ್‌ಪಿಎಂನಲ್ಲಿ 5.3 ಬಿಹೆಚ್ ಪವರ್ ಮತ್ತು 5,000 ಆರ್‌ಪಿಎಂನಲ್ಲಿ 8.05 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಶೈನ್ 100 ಬೈಕ್ 17 ಇಂಚಿನ ಅಲಾಯ್ ವೀಲ್‌ಗಳನ್ನು ಹೊಂದಿದ್ದು, ಮುಂಭಾಗದಲ್ಲಿ 130 ಎಂಎಂ ಡ್ರಮ್ ಬ್ರೇಕ್ ಮತ್ತು ಹಿಂಭಾಗದಲ್ಲಿ 110 ಎಂಎಂ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications