Honda: ಹೋಂಡಾದಿಂದ 5 ಲಕ್ಷ ಟೂ-ವೀಲರ್‌ಗಳ ಮಾರಾಟ.. ಹೀರೋನ ಹಿಂದಿಕ್ಕಿ ನಂ.1 ಆಯ್ತು, Activa ಶೋ ಸ್ಟಾಪರ್!

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ನಂಬಿಕಾರ್ಹ ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಯಾಗಿದೆ. ದೇಶೀಯವಾಗಿ ವಿವಿಧ ಸ್ಕೂಟರ್ ಹಾಗೂ ಬೈಕ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅದು ಈ ಜುಲೈ ತಿಂಗಳಲ್ಲೂ ಮುಂದುವರಿದ್ದು, ಒಟ್ಟು 5,15,378 ಯುನಿಟ್‌ಗಳನ್ನು ಮಾರಾಟಗೊಳಿಸಿದೆ. ಇದರೊಂದಿಗೆ ಹೀರೋ ಕಂಪನಿಯನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೂ ಬಂದಿದೆ. ಇದೇ ಅವಧಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದ ಹೀರೋ 449,755 ಯುನಿಟ್‌ಗಳನ್ನು ಮಾರಾಟ ಮಾಡಿದೆ.

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೋಂಡಾ ಕಂಪನಿಯು ಈ ಮಟ್ಟದ ಪ್ರಗತಿ ಸಾಧಿಸಲು ಹಲವು ಕಾರಣಗಳಿವೆ. ಬಹುಮುಖ್ಯವಾಗಿ ಕಂಪನಿಯ ದ್ವಿಚಕ್ರ ವಾಹನಗಳು ದೀರ್ಘಕಾಲ ಬಾಳಿಕೆ ಬರುತ್ತವೆ. ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತವೆ. ಜೊತೆಗೆ ಗರಿಷ್ಠ ಮೈಲೇಜ್ ಕೂಡ ನೀಡಬಲ್ಲವು. ಹೀಗಾಗಿ, ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತದೆ.

Honda Motorcycle India July Sales 2025 No 1 Spot In Two Wheeler Market Overtaking Hero

ಇದು ಮಾತ್ರವಿಲ್ಲದೆ, ವಿಶೇಷವಾಗಿ ಹೋಂಡಾ ಆಕ್ಟಿವಾ (Honda Activa) ದಶಕಗಳಿಂದ ಸ್ಕೂಟರ್ ವಿಭಾಗದಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಪ್ರತಿ ತಿಂಗಳು ಸರಾಸರಿ 2 ಲಕ್ಷ ಯುನಿಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಹಾಗೆಯೇ 'ಹೀರೋ ಸ್ಪ್ಲೆಂಡರ್‌' ಎದುರಾಳಿ ಹೋಂಡಾ ಶೈನ್ (Honda Shine) ಮೋಟಾರ್‌ಸೈಕಲ್‌ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದ್ದು, ಮಾಸಿಕವಾಗಿ ಸರಾಸರಿ 1 ಲಕ್ಷ ಯುನಿಟ್‌ಗಳನ್ನು ಮಾರಲಾಗುತ್ತಿದೆ.

ನಿನ್ನೆಯಷ್ಟೇ ಹೋಂಡಾ ಶೈನ್ 100 ಡಿಎಕ್ಸ್ & ಹೋಂಡಾ ಸಿಬಿ125 ಹಾರ್ನೆಟ್ ಮೋಟಾರ್‌ಸೈಕಲ್‌ಗಳು ಬಿಡುಗಡೆಗೊಂಡಿವೆ:

ಹೋಂಡಾ ಶೈನ್ 100 ಡಿಎಕ್ಸ್: ಇದು ಅಗ್ಗದ ದರದಲ್ಲಿ ಲಭ್ಯವಿದ್ದು, ರೂ.75,000 (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಪರ್ಲ್ ಇಗ್ನಿಯಸ್ ಬ್ಲ್ಯಾಕ್, ಇಂಪೀರಿಯಲ್ ರೆಡ್ ಮೆಟಾಲಿಕ್ ಮತ್ತು ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

Honda Motorcycle India July Sales 2025 No 1 Spot In Two Wheeler Market Overtaking Hero

ಈ 'ಶೈನ್ 100 ಡಿಎಕ್ಸ್' ಬೈಕ್ 98.98 ಸಿಸಿ ಒಬಿಡಿ2ಬಿ ಸಿಂಗಲ್-ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಆಯ್ಕೆಯನ್ನು ಒಳಗೊಂಡಿದೆ. 7.28 ಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 8.04 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. 4-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 70 ಕಿ.ಮೀವರೆಗೂ ಮೈಲೇಜ್ ಕೊಡಬಲ್ಲದು ಎನ್ನಲಾಗಿದೆ.

ನೂತನ ಹೋಂಡಾ ಶೈನ್ 100 ಡಿಎಕ್ಸ್ ಮೋಟಾರ್‌ಸೈಕಲ್‌ ಎಲ್‌ಸಿಡಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಮತ್ತು ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್ ಆಫ್‌ ಒಳಗೊಂಡಂತೆ ಹತ್ತಾರು ವೈಶಿಷ್ಟ್ಯಗಳನ್ನು ತನ್ನದಾಗಿಸಿಕೊಂಡಿದೆ. 17-ಇಂಚಿನ ವೀಲ್‌ಗಳು ಮತ್ತು ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಸಿಬಿಎಸ್ (ಕಂಬೈನ್ಡ್ ಬ್ರೇಕ್ ಸಿಸ್ಟಮ್) ಹಾಗೂ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

ಹೋಂಡಾ ಸಿಬಿ125 ಹಾರ್ನೆಟ್: ಈ ಸ್ಪೋರ್ಟಿ ಬೈಕ್ ಅಗ್ಗದ ದರದಲ್ಲೂ ದೊರೆಯಲಿದ್ದು, ಮಧ್ಯಮ ವರ್ಗದ ಯುವ ಗ್ರಾಹಕರು ಸುಲಭವಾಗಿ ಕೊಂಡುಕೊಳ್ಳಬಹುದು. ರೂ.1.12 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಸ್ಪೋರ್ಟ್ಸ್ ರೆಡ್ ವಿತ್ ಪರ್ಲ್ ಸೈರನ್ ಬ್ಲೂ, ಅಥ್ಲೆಟಿಕ್ ಬ್ಲೂ ಮೆಟಾಲಿಕ್ ವಿತ್ ಪರ್ಲ್ ಸೈರನ್ ಬ್ಲೂ ಹಾಗೂ ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಎಂಬ ಬಣ್ಣಗಳೊಂದಿಗೂ ದೊರಯುತ್ತದೆ.

ಹೊಸ ಸಿಬಿ125 ಹಾರ್ನೆಟ್ ಮೋಟಾರ್‌ಸೈಕಲ್‌ 123.94 ಸಿಸಿ, 4-ಸ್ಟ್ರೋಕ್ ಪೆಟ್ರೋಲ್ ಎಂಜಿನ್ ಹಾಗೂ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 4.2-ಇಂಚಿನ ಟಿಎಫ್‌ಟಿ ಡಿಸ್‌ಪ್ಲೇ, ಬ್ಲೂಟೂತ್ ಕನೆಕ್ಟಿವಿಟಿ, ಎಂಜಿನ್ ಸ್ಟಾಪ್ ಸ್ವಿಚ್ ಮತ್ತು ಯುಎಸ್‌‍ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.

Article Published On: Saturday, August 2, 2025, 17:43 [IST]
English summary
Honda motorcycle india july sales 2025 no 1 spot in two wheeler market overtaking hero
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+