ಬಡವನು ಬಂಡಿ: Honda QC1 ಇ-ಸ್ಕೂಟರ್‌ಗೆ ಫುಲ್ ಡಿಮ್ಯಾಂಡ್.. ಆದ್ರೆ Activa e ಕೊಳ್ಳಲು ಗ್ರಾಹಕರಿಗೆ ಮನಸಿಲ್ಲ!

ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ, ಇದೇ ವರ್ಷಾರಂಭದಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಕ್ಯೂಸಿ1 ಮತ್ತು ಆಕ್ಟಿವಾ ಇ ಹೆಸರಿನ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತು. ಈ ಮೂಲಕ ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ಮಾರುಕಟ್ಟೆಯನ್ನು ಅಧಿಕೃತವಾಗಿ ಪ್ರವೇಶಿಸಿತು. ಸದ್ಯ 'ಕ್ಯೂಸಿ1' ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟಗೊಳುತ್ತಿದೆ. ಆದರೆ, ಆಕ್ಟಿವಾ ಇ ಖರೀದಿ ಮಾಡಲು ಗ್ರಾಹಕರು ನಿರಾಸಕ್ತಿ ತೋರಿಸುತ್ತಿದ್ದಾರೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಹೋಂಡಾ ಕ್ಯೂಸಿ1 ಹಾಗೂ ಆಕ್ಟಿವಾ ಇ ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನೆ ಹಾಗೂ ಮಾರಾಟ ಪ್ರಕ್ರಿಯೆ ಶುರುವಾಗಿ 6 ತಿಂಗಳು ಕಳೆದಿದೆ. ಈ ವರ್ಷದ ಫೆಬ್ರವರಿಯಿಂದ ಜುಲೈ ತಿಂಗಳವರೆಗೆ ಇವರೆಡು ಮಾಡೆಲ್‌ಗಳ ಒಟ್ಟು 11,168 ಯುನಿಟ್‌ಗಳನ್ನು ತಯಾರಿಸಲಾಗಿದೆ. ಅದೇ ರೀತಿಯಲ್ಲಿ 5,173 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ ಎಂದು 'ಆಟೋಕಾರ್ ಪ್ರೊಫೆಷನಲ್' ವರದಿ ಮಾಡಿದೆ.

Honda QC1 And Activa e 5 173 units sold On February To July 2025 Details

ಈ ಅಂಕಿ ಸಂಖ್ಯೆಯನ್ನು ವಿಶ್ಲೇಷಣೆ ಮಾಡಿದಾಗ, ಹೋಂಡಾ ಕ್ಯೂಸಿ1ಗೆ ಉತ್ತಮವಾದ ಬೇಡಿಕೆ ಪಡೆದುಕೊಂಡಿದೆ. ಸರಿ ಸುಮಾರು 4,252 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಹಾಗೆಯೇ ಹೋಂಡಾ ಆಕ್ಟಿವಾ ಇ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಿದ್ದು, 698 ಯುನಿಟ್‌ಗಳನ್ನು ಮಾತ್ರ ಮಾರಾಟಗೊಳಿಸಲಾಗಿದೆ.

ಹೋಂಡಾ ಕ್ಯೂಸಿ1 (Honda QC1) ವಿಶೇಷತೆಗಳೇನು:

ಈ ಎಲೆಕ್ಟ್ರಿಕ್ ಸ್ಕೂಟರ್ ಅಗ್ಗದ ದರದಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದೆ. ರೂ.90,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಸರಳವಾದ ವಿನ್ಯಾಸವನ್ನು ಹೊಂದಿದೆ. ಪರ್ಲ್ ಸೆರೆನಿಟಿ ಬ್ಲೂ, ಪರ್ಲ್ ಮಿಸ್ಟಿ ವೈಟ್, ಪರ್ಲ್ ಶಾಲೋ ಬ್ಲೂ, ಮ್ಯಾಟ್ ಫಾಗ್ಗಿ ಸಿಲ್ವರ್, ಮೆಟಾಲಿಕ್ ಹಾಗೂ ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ಸಿಗುತ್ತದೆ.

Honda QC1 And Activa e 5 173 units sold On February To July 2025 Details

ಇದು ಬೆಲೆಗೆ ತಕ್ಕಂತೆ ಪವರ್‌ಟ್ರೇನ್‌ನ್ನು ಹೊಂದಿದೆ. 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಭರ್ತಿ ಚಾರ್ಜ್‌ನಲ್ಲಿ 80 ಕಿ.ಮೀವರೆಗೆ ರೇಂಜ್ (ಮೈಲೇಜ್) ನೀಡಬಲ್ಲದು. 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಹೊಂದಿದೆ. ಕೇವಲ 9.7 ಸೆಕೆಂಡುಗಳಲ್ಲಿ 0 ರಿಂದ 40 ಕೆಎಂಪಿಹೆಚ್ ವೇಗವನ್ನು ಪಡೆಯಲಿದೆ.

ನೂತನ ಕ್ಯೂಸಿ1ನಲ್ಲಿರುವ ಬ್ಯಾಟರಿ ಪ್ಯಾಕ್ 4 ಗಂಟೆ 30 ನಿಮಿಷಗಳಲ್ಲಿ 0 ರಿಂದ 80% ಚಾರ್ಜ್ ಆಗುತ್ತದೆ. ಎಲ್‌ಸಿಡಿ ಡಿಸ್‌ಪ್ಲೇ, ಅನಲಾಗ್ ಕೀ, ಯುಎಸ್‌ಬಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಮತ್ತು ಪುಶ್ ಬಟನ್ ಸ್ಟಾರ್ಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಸವಾರರ ರಕ್ಷಣೆಗಾಗಿ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೋಂಡಾ ಆಕ್ಟಿವಾ ಇ (Honda Activa e) ವಿಶೇಷತೆಗಳೇನು:

ಈ ಎಲೆಕ್ಟ್ರಿಕ್ ಸ್ಕೂಟರ್ ರೂ.1.17 ಲಕ್ಷದಿಂದ ರೂ.1.52 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಪರ್ಲ್ ಸೆರೆನಿಟಿ ಬ್ಲೂ, ಪರ್ಲ್ ಮಿಸ್ಟಿ ವೈಟ್, ಪರ್ಲ್ ಶಾಲೋ ಬ್ಲೂ, ಮ್ಯಾಟ್ ಫಾಗ್ಗಿ ಸಿಲ್ವರ್ ಮೆಟಾಲಿಕ್ ಹಾಗೂ ಪರ್ಲ್ ಇಗ್ನಿಯಸ್ ಬ್ಲ್ಯಾಕ್ ಎಂಬ ಬಣ್ಣಗಳ ಆಯ್ಕೆಯಲ್ಲಿಯೂ ದೊರೆಯುತ್ತದೆ.

ಹೊಸ ಆಕ್ಟಿವಾ 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ ಎರಡು ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 102 ಕಿ.ಮೀವರೆಗೆ ರೇಂಜ್ (ಮೈಲೇಜ್) ಕೊಡಬಲ್ಲದು. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ ಮತ್ತು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಒಳಗೊಂಡಂತೆ ವಿವಿಧ ವೈಶಿಷ್ಟ್ಯಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ತನ್ನದಾಗಿಸಿಕೊಂಡಿದೆ.

ಒಟ್ಟಾರೆಯಾಗಿ 'ಕ್ಯೂಸಿ1' ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಖರೀದಿದಾರರಿಗೆ ಸಿಗಲಿದ್ದು, ಇದರಿಂದಾಗಿ ಉತ್ತಮ ಸಂಖ್ಯೆಯಲ್ಲಿಯೇ ಮಾರಾಟವಾಗುತ್ತಿದೆ. ಆದರೆ, ಆಕ್ಟಿವಾ ಇ ಸ್ಕೂಟರ್‌ನ್ನು ಬೆಂಗಳೂರು, ನವದೆಹಲಿ ಹಾಗೂ ಮುಂಬೈ ನಗರಗಳಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಇದು ಬದಲಾಯಿಸಬಹುದಾದ ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಹೀಗಾಗಿ ಇ:ಸ್ವಾಪ್ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಮಾತ್ರವೇ ಚಾರ್ಜ್ ಮಾಡಲು ಸಾಧ್ಯವಾಗಲಿದೆ. ಜೊತೆಗೆ ಹೋಮ್ ಚಾರ್ಜರ್ ಆಯ್ಕೆಯೂ ಇಲ್ಲ. ಈ ರೀತಿಯ ಹಲವು ಕಾರಣಗಳಿಗೆ ಆಕ್ಟಿವಾ ಇ ಮಾರಾಟದಲ್ಲಿ ಹಿನ್ನೆಡೆಯಾಗುತ್ತಿದೆ.

Article Published On: Thursday, August 21, 2025, 16:02 [IST]
English summary
Honda qc1 and activa e 5173 units sold on february to july 2025 details
Read more on honda motorcycle india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+