Honda Activa ಎಲೆಕ್ಟ್ರಿಕ್ ಸ್ಕೂಟರ್‌ನ್ನು ಕೇಳೋರಿಲ್ಲ, ಶೂನ್ಯ ಮಾರಾಟ.. QC1 ಖರೀದಿಗೂ ನಿರಾಸಕ್ತಿ.. ಕಾರಣವೇನು?
ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಇದೇ ಜನವರಿಯಲ್ಲಿ ಹೊಚ್ಚ ಹೊಸ ಕ್ಯೂಸಿ1(QC1) ಮತ್ತು ಆಕ್ಟಿವಾ ಇ (Activa e) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿತ್ತು. ಇವು ಹೆಚ್ಚು ಆಕರ್ಷಕವಾಗಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ದೊರೆಯುತ್ತವೆ. ಅದರ ಹೊರತಾಗಿಯೂ ಈ ಸ್ಕೂಟರ್‌ಗಳ ಮಾರಾಟ ಸಂಖ್ಯೆ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಅದು ಈ 'ಮೇ' ತಿಂಗಳಲ್ಲೂ ಮುಂದುವರಿದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
ಕಳೆದ ತಿಂಗಳು (ಮೇ - 2025) ಹೋಂಡಾ ಕಂಪನಿಯು 'ಆಕ್ಟಿವಾ ಇ' ಸ್ಕೂಟರ್‌ಗಳನ್ನು ಶೂನ್ಯ ಸಂಖ್ಯೆಯಲ್ಲಿ ಮಾರಾಟ ಮಾಡಿದೆ. ಅದೇ ರೀತಿಯಲ್ಲಿ 'ಕ್ಯೂಸಿ1' ಎಲೆಕ್ಟ್ರಿಕ್ ಸ್ಕೂಟರ್‌ನ 676 ಯುನಿಟ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸಿದೆ. ಈ ಬಗ್ಗೆ 'ರಶ್ ಲೈನ್' ವರದಿ ಪ್ರಕಟಿಸಿದೆ.

ಹೋಂಡಾ ಆಕ್ಟಿವಾ ಇ ಮತ್ತು ಕ್ಯೂಸಿ1 ಸ್ಕೂಟರ್‌ಗಳ ಮಾರಾಟ ಸಂಖ್ಯೆ ಇಳಿಮುಖವಾಗಲು ಹಲವು ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಬಹುಮುಖ್ಯವಾಗಿ ಆಕ್ಟಿವಾ ಇ & ಕ್ಯೂಸಿ1 ಬೆಲೆಗೆ ಇತರೆ ಕಂಪನಿಗಳ ಹೆಚ್ಚು ಅತ್ಯಾಧುನಿಕವಾಗಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿವೆ. ಹೆಚ್ಚಿನ ಗ್ರಾಹಕರು ಅವುಗಳತ್ತ ಮುಖ ಮಾಡಿದ್ದಾರೆ.
ಜೊತೆಗೆ ಇವೆರಡು ಇ-ಸ್ಕೂಟರ್‌ಗಳ ಕುರಿತಂತೆ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವಲ್ಲಿಯೂ ಕಂಪನಿಯು ಎಡವಿದೆ. ಅದರಲ್ಲೂ ಕ್ಯೂಸಿ1ಗೆ ಹೋಲಿಕೆ ಮಾಡಿದರೆ, ಆಕ್ಟಿವಾ ಇ ಸ್ವೇಪ್ಏಬಲ್ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಬೆಂಗಳೂರು, ನವದೆಹಲಿ ಹಾಗೂ ಮುಂಬೈನಲ್ಲಿ ಮಾತ್ರ ಖರೀದಿಗೆ ಲಭ್ಯವಿದೆ. ಹೀಗಾಗಿ, ಮಾರಾಟ ಸಂಖ್ಯೆಯು ತೀವ್ರತರದಲ್ಲಿ ಕುಸಿತವಾಗುತ್ತಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಹೋಂಡಾ ಆಕ್ಟಿವಾ ಇ ವಿಶೇಷತೆಗಳೇನು:
ಇದು ರೂ.1.17 ಲಕ್ಷದಿಂದ ರೂ.1.52 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಈ ಸ್ಕೂಟರ್‌ನ್ನು ಬ್ಯಾಟರಿ-ಆಸ್-ಎ-ಸರ್ವಿಸ್ ಯೋಜನೆಯಡಿ ಮಾರಾಟಗೊಳಿಸಲಾಗುತ್ತಿದೆ. ಅಂದರೆ, ಆಕ್ಟಿವಾ ಇ ಸ್ಕೂಟರ್‌ನ ಖಾಲಿಯಾಗಿರುವ ಬ್ಯಾಟರಿ ಪ್ಯಾಕ್‌ನ್ನು ಹೋಂಡಾ ಕಂಪನಿ ಇ:ಸ್ವಾಪ್ ಚಾರ್ಜಿಂಗ್ ಸ್ಟೇಷನ್‌ನಲ್ಲಿ ಬದಲಿಸಿಕೊಳ್ಳುವುದಾಗಿದೆ. ಅದಕ್ಕಾಗಿ ಇಂತಿಷ್ಟು ಶುಲ್ಕ ವಿಧಿಸಲಾಗುತ್ತದೆ. ಸದ್ಯ, ಈ ಚಂದಾದಾರಿಕೆ ಶುಲ್ಕವನ್ನು ಪರಿಷ್ಕರಣೆ ಮಾಡಲಾಗಿದ್ದು, ಮಾಸಿಕ ರೂ.678 ಶುಲ್ಕವನ್ನು ಕಟ್ಟಬೇಕು.
ಈ ಎಲೆಕ್ಟ್ರಿಕ್ ಸ್ಕೂಟರ್ 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಸಾಮರ್ಥ್ಯದ 2 ಬ್ಯಾಟರಿ ಪ್ಯಾಕ್‌ನ್ನು ಪಡೆದಿದೆ. ಪೂರ್ತಿ ಚಾರ್ಜ್‌ನಲ್ಲಿ 102 ಕಿಲೋಮೀಟರ್ ರೇಂಜ್ (ಮೈಲೇಜ್) ನೀಡುತ್ತದೆ. ಟಿಎಫ್‌ಟಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಹೆಚ್ ಸ್ಮಾರ್ಟ್ ಕೀ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪ್ರಯಾಣಿಕರ ರಕ್ಷಣೆಗಾಗಿ ಡಿಸ್ಕ್/ ಡ್ರಮ್ ಬ್ರೇಕ್‌ಗಳನ್ನು ಹೊಂದಿದೆ.
ಹೋಂಡಾ ಕ್ಯೂಸಿ1 (Honda QC1) ಹೇಗಿದೆ:
ಇದು ರೂ.90,000 (ಎಕ್ಸ್-ಶೋರೂಂ) ದರವನ್ನು ಪಡೆದಿದೆ. 1.5 ಕಿಲೋವ್ಯಾಟ್ (ಕೆಡಬ್ಲ್ಯೂಹೆಚ್) ಬ್ಯಾಟರಿ ಪ್ಯಾಕ್‌ನ್ನು ಹೊಂದಿದೆ. ಸಂಪೂರ್ಣ ಚಾರ್ಜ್‌ನಲ್ಲಿ 80 ಕಿಲೋಮೀಟರ್ ಓಡುತ್ತದೆ. 50 ಕೆಎಂಪಿಹೆಚ್ ಟಾಪ್ ಸ್ಪೀಡ್‌ನ್ನು ಒಳಗೊಂಡಿದೆ. ಈ ಸ್ಕೂಟರ್‌ನಲ್ಲಿ ಬಳಕೆ ಮಾಡಿರುವ ಬ್ಯಾಟರಿ ಪ್ಯಾಕ್ 0 ರಿಂದ 80% ಚಾರ್ಜ್ ಆಗುವುದಕ್ಕೆ 4.30 ಗಂಟೆ ತೆಗೆದುಕೊಳ್ಳುತ್ತದೆ.
ನೂತನ ಕ್ಯೂಸಿ1 ಎಲೆಕ್ಟ್ರಿಕ್ ಸ್ಕೂಟರ್ ಎಲ್‌ಸಿಡಿ ಡಿಸ್‌ಪ್ಲೇ, ಅನಲಾಗ್ ಕೀ, 26-ಲೀಟರ್‌ನಷ್ಟು ಸ್ಟೋರೇಜ್ ಸ್ಪೇಸ್, ಸಿಂಗಲ್ - ಪೀಸ್ ಗ್ರಾಬ್ ಹ್ಯಾಂಡಲ್ ಒಳಗೊಂಡಂತೆ ಹಲವು ವೈಶಿಷ್ಟ್ಯಗಳನ್ನು ಪಡೆದಿದೆ. 89.5 ಕೆಜಿ ತೂಕವಿದ್ದು, 704 ಎಂಎಂ ಉದ್ದವಿರುವ ಸೀಟ್ ಹಾಗೂ ಅಲಾಯ್ ವೀಲ್‌ಗಳನ್ನು ಪಡೆದಿದೆ. ಸುರಕ್ಷತೆಯ ದೃಷ್ಟಿಯಿಂದ ಡ್ರಮ್ ಬ್ರೇಕ್‌ಗಳನ್ನು ಒಳಗೊಂಡಿದೆ.


Click it and Unblock the Notifications