Honda: ಕಲ್ಲು ಬಂಡೆಯಂತಿರುವ 'ಹೋಂಡಾ ರೆಬೆಲ್ 500' ಬೈಕ್ ಬಿಡುಗಡೆ, ಬೆಲೆ ಎಷ್ಟಿದೆ ಗೊತ್ತಾ?
ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಪ್ರಮುಖ ದ್ವಿಚಕ್ರ ವಾಹನ (Two Wheeler) ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಾಮಾನ್ಯ ಮೋಟಾರ್‌ಸೈಕಲ್‌ಗಳಂತೆ, ಪ್ರೀಮಿಯಂ ಬೈಕ್‌ಗಳನ್ನು ಕೂಡ ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸೋಮವಾರ ಶ್ರೀಮಂತ ಗ್ರಾಹಕರಿಗಾಗಿ ಹೊಚ್ಚ ಹೊಸ 'ರೆಬೆಲ್ 500' ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ಈ ನೂತನ ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
ಹೊಸ ಹೋಂಡಾ ರೆಬೆಲ್ 500 (Honda Rebel 500) ಮೋಟಾರ್‌ಸೈಕಲ್ ಅತ್ಯಂತ ದುಬಾರಿ ಬೆಲೆಯಲ್ಲಿ ಮಾರಾಟಕ್ಕೆ ಬಂದಿದೆ. ಇದು ರೂ.5.12 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ವಿಶೇಷವಾಗಿ ಈ ನೂತನ ಬೈಕ್‌ನ್ನು 'ಬಿಗ್‌ವಿಂಗ್' ಡೀಲರ್‌ಶಿಪ್ ಮೂಲಕ ಬೆಂಗಳೂರು, ಮುಂಬೈ ಮತ್ತು ಗುರುಗ್ರಾಮದಲ್ಲಿ ಮಾತ್ರ ಮಾರಾಟ ಮಾಡಲಾಗುತ್ತದೆ. ಈಗಾಗಲೇ ಬುಕ್ಕಿಂಗ್ ಶುರುವಾಗಿದ್ದು, ಆಸಕ್ತ ಗ್ರಾಹಕರು ಸಮೀಪದ ಶೋರೂಂ ಅಥವಾ ಕಂಪನಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಆರ್ಡರ್ ಮಾಡಬಹುದು.

ನೂತನ ಹೋಂಡಾ ರೆಬೆಲ್ 500 ಕ್ರೂಸರ್ ಬೈಕ್ ಆಗಿದ್ದು, ಹೆಚ್ಚು ಆಕರ್ಷಕವಾದ ವಿನ್ಯಾಸವನ್ನು ಒಳಗೊಂಡಿದೆ. ಸಿಗ್ನೇಚರ್ ರೌಂಡ್ ಹೆಡ್‌ಲೈಟ್‌ನ್ನು ಹೊಂದಿದೆ. ಇದರೊಟ್ಟಿಗೆ ಹೈ-ಮೌಂಟೆಡ್ ಫ್ಯುಯೆಲ್ ಟ್ಯಾಂಕ್ ಹಾಗೂ ಆಲ್-ಎಲ್ಇಡಿ ಲೈಟಿಂಗ್ ಸಿಸ್ಟಮ್‌ನ್ನು ಪಡೆದಿದ್ದು, 'ಮ್ಯಾಟ್ ಗನ್‌ಪೌಡರ್ ಬ್ಲ್ಯಾಕ್ ಮೆಟಾಲಿಕ್' ಎಂಬ ಏಕೈಕ ಬಣ್ಣದೊಂದಿಗೆ ಸಿಗುತ್ತದೆ.
ಈ ಮೋಟಾರ್‌ಸೈಕಲ್ 471 ಸಿಸಿ ಪ್ಯಾರಲಲ್ ಟ್ವಿನ್ ಪೆಟ್ರೋಲ್ ಎಂಜಿನ್‌ನ್ನು ಪಡೆದಿದೆ. ಇದು 8,500 ಆರ್‌ಪಿಎಂನಲ್ಲಿ 46 ಬಿಹೆಚ್‌ಪಿ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 6000 ಆರ್‌ಪಿಎಂನಲ್ಲಿ 43.3 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುವ ಸಾಮರ್ಥ್ಯವನ್ನು ಪಡೆದಿದೆ. 6-ಸ್ಪೀಡ್ ಆಟೋಮೆಟಿಕ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ. 26 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡಬಲ್ಲದು ಎಂದು ಅಂದಾಜಿಸಲಾಗಿದೆ.

ಹೊಸ ಹೋಂಡಾ ರೆಬೆಲ್ 500 ಬೈಕ್ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬಹುಮುಖ್ಯವಾಗಿ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್‌ನ್ನು ಪಡೆದಿದೆ. ಈ ಮೋಟಾರ್‌ಸೈಕಲ್ 191 ಕೆಜಿ ತೂಕವಿದ್ದು, 11.2 ಲೀಟರ್‌ನಷ್ಟು ಫ್ಯುಯೆಲ್ ಟ್ಯಾಂಕ್‌ನ್ನು ಒಳಗೊಂಡಿದೆ. ಅಲಾಯ್ ವೀಲ್‌ಗಳನ್ನು ಹೊಂದಿದ್ದು, ಮುಂದೆ 130/90-16 ಹಾಗೂ ಹಿಂದೆ 150/80-16 ಅಳತೆಯ ಟೈರ್‌ಗಳನ್ನು ಪಡೆದಿದೆ.
ನೂತನ ರೆಬೆಲ್ 500 ಮೋಟಾರ್‌ಸೈಕಲ್ ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್ಸ್ ಮತ್ತು ಹಿಂಭಾಗ (ರೇರ್) ಶೋವಾ ಟ್ವಿನ್ ಶಾಕ್ ಅಬ್ಸಾರ್ಬರ್ಸ್ ಸಸ್ಪೆನ್ಷನ್ ಸೆಟಪ್‌ನ್ನು ಹೊಂದಿದೆ. ಜೊತೆಗೆ ಡುಯಲ್ ಚಾನೆಲ್ ಎಬಿಎಸ್ (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಹಾಗೂ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಇನ್ನು, ಹೊಚ್ಚ ಹೊಸ ಹೋಂಡಾ ರೆಬೆಲ್ 500 ಬೈಕ್‌ನ್ನು ಪರಿಚಯಿಸಿರುವುದು ದೇಶೀಯ ಗ್ರಾಹಕರಿಗೆ ಹೆಚ್ಚಿನ ಸಂತಸ ತರಿಸಿದೆ. ನೂತನ ಮೋಟಾರ್‌ಸೈಕಲ್‌ನ ವಿತರಣೆಯು ಮುಂದಿನ ತಿಂಗಳಿಂದ ಆರಂಭವಾಗಲಿದೆ. ಈ ಮೋಟಾರ್‌ಸೈಕಲ್ ಹೆಚ್ಚು ಆಕರ್ಷಕವಾಗಿರುವ ಹಿನ್ನೆಲೆ, ದೊಡ್ಡ ಸಂಖ್ಯೆಯಲ್ಲಿಯೂ ಮಾರಾಟಗೊಳ್ಳುವ ನಿರೀಕ್ಷೆಯಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications